Search
  • Follow NativePlanet
Share
» »ಡೆಹ್ರಾಡೂನ್‌ನ ಕಳ್ಳರ ಗುಹೆಯ ಸೌಂದರ್ಯ ನೋಡಿದ್ರೆ ಮೈ ಮರೆಯುತ್ತೀರಾ

ಡೆಹ್ರಾಡೂನ್‌ನ ಕಳ್ಳರ ಗುಹೆಯ ಸೌಂದರ್ಯ ನೋಡಿದ್ರೆ ಮೈ ಮರೆಯುತ್ತೀರಾ

ರಾಬರ್ಸ್‌ ಗುಹೆ ಅಂದರೆ ಕಳ್ಳರ ಗುಹೆ. ಇದನ್ನು ಸ್ಥಳೀಯರು ಗುಚುಪಾನಿ ಎಂದು ಕರೆಯುತ್ತಾರೆ. ಈ ನದಿ ಗುಹೆಯು ಹಿಮಾಲಯದಲ್ಲಿ ರಚನೆಯಾಗಿದೆ, ಇದು ಭಾರತದ ಉತ್ತರಖಂಡ ರಾಜ್ಯದ ಡೆಹ್ರಾಡೂನ್ ನಗರದಿಂದ ಸುಮಾರು 8 ಕಿ.ಮೀ ದೂರದಲ್ಲಿದೆ.

ನೈಸರ್ಗಿಕ ಗುಹೆ

ನೈಸರ್ಗಿಕ ಗುಹೆ

PC: Rajatkantib

ಈ ಗುಹೆ ಸುಮಾರು 600 ಮೀಟರ್ ಉದ್ದವಾಗಿದೆ, ಎರಡು ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ. ಈ ಗುಹೆಯು ಸುಮಾರು 10 ಮೀಟರ್‌ಗಳಷ್ಟು ಎತ್ತರವನ್ನು ಹೊಂದಿದೆ. ಕೇಂದ್ರ ಭಾಗದಲ್ಲಿ ಕೋಟೆ ಗೋಡೆಯ ರಚನೆ ಇದೆ, ಅದು ಈಗ ಮುರಿದಿದೆ. ಇದು ಡೂನ್ ಕಣಿವೆಯ ಡೆಹ್ರಾ ಪ್ರಸ್ಥಭೂಮಿಯಲ್ಲಿನ ಒಂದು ಸಂಘಟಿತ ಸುಣ್ಣದಕಲ್ಲು ಪ್ರದೇಶದಲ್ಲಿ ರೂಪುಗೊಂಡ ಅತ್ಯಂತ ಕಿರಿದಾದ ಗಾರ್ಜ್ ಅನ್ನು ಒಳಗೊಂಡಿದೆ.

ಕೊಲ್ಲೂರು ಮೂಕಾಂಬಿಕೆ: ಇಲ್ಲಿ ಕೈ ಮುಗಿದರೆ ಸಾವಿರ ದೇವಸ್ಥಾನಕ್ಕೆ ಕೈ ಮುಗಿದಂತೆಕೊಲ್ಲೂರು ಮೂಕಾಂಬಿಕೆ: ಇಲ್ಲಿ ಕೈ ಮುಗಿದರೆ ಸಾವಿರ ದೇವಸ್ಥಾನಕ್ಕೆ ಕೈ ಮುಗಿದಂತೆ

ಪ್ರವಾಸಿ ತಾಣ

ಪ್ರವಾಸಿ ತಾಣ

PC: Alokprasad

ಇದು ಗುಹೆಯೊಳಗೆ ನದಿಗಳು ಹರಿಯುವ ನೈಸರ್ಗಿಕ ಗುಹೆ ರಚನೆಯಾಗಿದೆ. ಈ ಸ್ಥಳವು ಒಂದು ಜನಪ್ರಿಯ ಪ್ರವಾಸಿ ತಾಣವಾಗಿದ್ದು ಈಗ ಅದನ್ನು ಉತ್ತರಾಖಂಡ್ ರಾಜ್ಯವು ನಿರ್ವಹಿಸುತ್ತದೆ. ಸ್ಥಳೀಯ ಬಸ್ ಸೇವೆಗಳು ಅನರ್ವಾಲಾ ವಿಲೇಜ್ ವರೆಗೆ ಲಭ್ಯವಿವೆ, ಅಲ್ಲಿಂದ ಇದು ಒಂದು ಕಿಲೋಮೀಟರ್‌ವರೆಗೆ ಚಾರಣ ಕೈಗೊಳ್ಳಬೇಕಿದೆ....

ಸಾಹಸ ಪ್ರೀಯರಿಗೆ ಸೂಕ್ತ

ಸಾಹಸ ಪ್ರೀಯರಿಗೆ ಸೂಕ್ತ

PC: Aditya6521

ಗುಹೆಯ ಮಧ್ಯದಿಂದ ಹರಿಯುವ ನದಿ ನೀರನ್ನು ಹೊಂದಿರುವ ಈ ನೈಸರ್ಗಿಕ ತಾಣಕ್ಕೆ ಸಾಹಸ ಪ್ರೀಯರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಇದನ್ನು ಶಿವನ ಮನೆ ಎಂದೂ ನಂಬಲಾಗುತ್ತದೆ. ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಸಮಯ.

ಇಲ್ಲಿಗೆ ಹೋದ್ರೆ ಈ ಮೂರು ನಕ್ಷತ್ರದವರು ಕೋಟ್ಯಾಧೀಶರಾಗ್ತಾರಂತೆಇಲ್ಲಿಗೆ ಹೋದ್ರೆ ಈ ಮೂರು ನಕ್ಷತ್ರದವರು ಕೋಟ್ಯಾಧೀಶರಾಗ್ತಾರಂತೆ

ತಣ್ಣೀರಿನ ಬುಗ್ಗೆ

ತಣ್ಣೀರಿನ ಬುಗ್ಗೆ

PC: Nandanautiyal

ಈ ಗುಹೆಯು ಭೂಗತದಲ್ಲಿ ತಣ್ಣೀರಿನ ಬುಗ್ಗೆಗಳನ್ನು ಹೊಂದಿದೆ, ಇದು ಬೇಸಿಗೆಯಲ್ಲಿ ಅತಿಯಾದ ಬೇಸಿಗೆಯ ಮಧ್ಯಾಹ್ನದ ತಾಪಮಾನವನ್ನು ತಣ್ಣಗಾಗಲು ಸಹಾಯ ಮಾಡುತ್ತದೆ. ಇದು ಉತ್ತರಾಖಂಡದ ನೈಸರ್ಗಿಕ ಸೌಂದರ್ಯದ ನಡುವೆ ಪರಿಪೂರ್ಣ ಪಿಕ್ನಿಕ್ ತಾಣವಾಗಿದೆ. ಇಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು.

ಹೆಸರು ಬಂದಿದ್ದು ಹೇಗೆ?

ಹೆಸರು ಬಂದಿದ್ದು ಹೇಗೆ?

PC: Shivanjan

ಕಳ್ಳರು ತಾವು ಕದ್ದಂತಹ ಸರಕುಗಳನ್ನು ಈ ಗುಹೆಯಲ್ಲಿ ಬಚ್ಚಿಟ್ಟಿದ್ದರು. ಇದನ್ನು ಬ್ರಿಟಿಷರು ಕಂಡುಹಿಡಿದ ನಂತರ ಈ ಗುಹೆಗೆ ರಾಬರ್ಸ್‌ ಕೇವ್ ಅಂದರೆ ಕಳ್ಳರ ಗುಹೆ ಎನ್ನುವ ಹೆಸರು ಬಂದಿತು ಎನ್ನಲಾಗುತ್ತದೆ. ಈ ಗುಹೆಯ ಸುತ್ತಲೂ ಅಂಗಡಿಗಳು ಕಾಣಸಿಗುತ್ತವೆ, ಇಲ್ಲಿ ಸುಂದರವಾದ ರುಚಿಕರವಾದ ತಿಂಡಿಗಳನ್ನು ಆನಂದಿಸಬಹುದು.

ಗಂಗಾವತಿಯಲ್ಲಿರುವ ಆನೆಗುಂಡಿಯೇ ರಾಮಾಯಣದ ಕಿಷ್ಕಿಂದ ಅನ್ನೋದು ಗೊತ್ತಾ?<br /> ಗಂಗಾವತಿಯಲ್ಲಿರುವ ಆನೆಗುಂಡಿಯೇ ರಾಮಾಯಣದ ಕಿಷ್ಕಿಂದ ಅನ್ನೋದು ಗೊತ್ತಾ?

ಪಿಕ್ನಿಕ್ ತಾಣ

ಪಿಕ್ನಿಕ್ ತಾಣ

PC: Rajamit2312

ರಾಬರ್ಸ್‌ ಗುಹೆಯು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪಿಕ್ನಿಕ್ ಹೋಗಲು ಸೂಕ್ತ ಸ್ಥಳವಾಗಿದೆ. 600 ಮೀಟರ್ ಉದ್ದದ ಗುಹೆಯೊಳಗೆ ನಿಮ್ಮ ಪ್ರೀತಿಪಾತ್ರರ ಜೊತೆ ಈ ಪ್ರದೇಶವನ್ನು ಅನ್ವೇಷಿಸಬಹುದು, ನೀವು ಪಿಕ್ನಿಕ್‌ಗಾಗಿ ಗುಹೆಯ ಬಳಿ ಜಲಪಾತಕ್ಕೆ ಹೋಗಬಹುದು.

ಇತರ ತಾಣಗಳು

ಇತರ ತಾಣಗಳು

PC: Alokprasad

ಇಲ್ಲಿ ನೀವು ಟಿಬೇಟಿಯನ್ ಬೌದ್ಧ ದೇವಾಲಯ, ತಕ್ಪೇಶ್ವರ ದೇವಸ್ಥಾನ, ರಾಮಕೃಷ್ಣ ಆಶ್ರಮ ದೇವಸ್ಥಾನ ಮತ್ತು ಡೆಹ್ರಾಡೂನ್ ಝೂಗಳನ್ನು ಭೇಟಿ ಮಾಡಬಹುದು; ಇವು ರಾಬರ್ಸ್‌ ಗುಹೆಯಿಂದ ಕೇವಲ 2 ರಿಂದ 4 ಕಿಲೋಮೀಟರ್ ದೂರವಿದೆ.

ಕೃಷ್ಣನಿಗೆ ತನ್ನ ತಲೆಯನ್ನೇ ಕಾಣಿಕೆಯಿತ್ತ ಈ ವೀರ ಯಾರು, ಆತನ ದೇವಾಲಯ ಎಲ್ಲಿದೆ ಗೊತ್ತಾ?ಕೃಷ್ಣನಿಗೆ ತನ್ನ ತಲೆಯನ್ನೇ ಕಾಣಿಕೆಯಿತ್ತ ಈ ವೀರ ಯಾರು, ಆತನ ದೇವಾಲಯ ಎಲ್ಲಿದೆ ಗೊತ್ತಾ?

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Harshsharma01

ರಾಬರ್ ಗುಹೆಯು ಡೆಹ್ರಾಡೂನ್ ನಗರದಿಂದ 8 ಕಿ.ಮೀ ದೂರದಲ್ಲಿದೆ. ವಿಜಯಪುರ ತನಕ ಬಸ್ ತೆಗೆದುಕೊಳ್ಳಲು ನಂತರ ೧ ಕಿ.ಮೀ ಚಾರಣ ಕೈಗೊಳ್ಳಬೇಕು. ರಾಬರ್ಸ್‌ ಕೇವ್‌ಗೆ ಡೆಹ್ರಾಡೂನ್ ರೈಲು ನಿಲ್ದಾಣ ಸಮೀಪದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X