Search
  • Follow NativePlanet
Share
» »ಬೆಂಗಳೂರಿನಿಂದ ಮೈಸೂರಿಗೆ ಒಂದು ರೋಮಾಂಚನಕಾರಿ ಪ್ರವಾಸ

ಬೆಂಗಳೂರಿನಿಂದ ಮೈಸೂರಿಗೆ ಒಂದು ರೋಮಾಂಚನಕಾರಿ ಪ್ರವಾಸ

By Manjula Balaraj Tantry

Jim Ankan Deka

ರಸ್ತೆ ಮೂಲಕ ಪ್ರಯಾಣ ಮಾಡುವುದೆಂದರೆ ಅದಕ್ಕೆ ತನ್ನದೇ ಆದ ಒಂದು ಸೊಬಗಿದೆ ಎನ್ನುವುದನ್ನು ನಾವು ಅಲ್ಲಗಳೆಯುವಂತಿಲ್ಲ ಡ್ರೈವಿಂಗ್ ನ ಉಲ್ಲಾಸವು ರಸ್ತೆಯ ಮೂಲಕ ಪ್ರಯಾಣ ಮಾಡುವಾಗ ಸಿಗುವ ಅನೇಕ ಅಚ್ಚರಿಗಳು ಸಾಹಸ ಪ್ರಿಯರಿಗೆ ಬೇಕಾದ ಸ್ಥಳಗಳು ಮತ್ತು ಅನುಭವಿ ಪ್ರಯಾಣಿಕರ ಡ್ರೈವಿಂಗ್ ಮಾಡುವ ಉತ್ಸಾಹವನ್ನು ಇಮ್ಮಡಿಗೊಳಿಸುತ್ತವೆ. ಅವರೇ ಹೇಳುವಂತೆ ಇದು ಸ್ಥಳಗಳಲ್ಲಿ ಮಾತ್ರವಲ್ಲದೆ ಇಡೀ ಪ್ರಯಾಣದಲ್ಲಿಯೂ ತಮ್ಮನ್ನು ಮೋಡಿಗೊಳಿಸುವಲ್ಲಿ ಸಹಾಯ ಮಾಡುತ್ತದೆ.

1. 150 ಕಿ.ಮೀ ದೂರ

1. 150 ಕಿ.ಮೀ ದೂರ

ಪರಸ್ಪರ ಸುಮಾರು 150 ಕಿ.ಮೀ ದೂರದಲ್ಲಿದೆ. ಎರಡು ಬಿಂದುಗಳ ನಡುವಿನ ಪ್ರಯಾಣವು ಕೆಲವು ಪಟ್ಟಣಗಳು, ದೇವಾಲಯಗಳು, ಪಾಕಪದ್ಧತಿಗಳು ಮತ್ತು ದೃಶ್ಯಗಳನ್ನು ರಾಜ್ಯದಲ್ಲಿಯ ಅತ್ಯುತ್ತಮವಾದುದನ್ನು ಪ್ರತಿಬಿಂಬಿಸುತ್ತದೆ. ಎರಡು ನಗರಗಳ ನಡುವೆ ರಾಜ್ಯ ಹೆದ್ದಾರಿ 17 (ರಾಜ್ಯ ಹೆ-17) ಈ ಮಾರ್ಗಗಳನ್ನು 2003ರಲ್ಲಿ ಉದ್ಘಾಟಿಸಲಾಯಿತು ಈ ಮಾರ್ಗವು ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ಮುಂತಾದ ಸ್ಥಳಗಳ ಮೂಲಕ ಹಾದುಹೋಗುತ್ತದೆ.
ಈ ಮಾರ್ಗವು ಸುಸಜ್ಜಿತವಾಗಿ ನಿರ್ವಹಿಸಲ್ಪಟ್ಟಿದ್ದು ಈ ಮಾರ್ಗದಲ್ಲಿ ಸಿಗುವ ಹಳ್ಳಿಗಳು ಕಲೆ ಸಂಸ್ಕೃತಿ, ಸಂಪ್ರದಾಯ ಮತ್ತು ಆಹಾರ ಪದ್ದತಿಗಳನ್ನೊಳಗೊಂಡಿದ್ದು ಇಂತಹ ಹಳ್ಳಿಗಳನ್ನು ಅನ್ವೇಷಿಸುತ್ತಾ ನಿಮ್ಮನ್ನು ಅದರ ಅಭಿಮಾನಿಯನ್ನಾಗಿಸುವುದರಲ್ಲಿ ಸಂಶಯವೇ ಇಲ್ಲ. ಜೊತೆಗೆ ಗ್ರಾಮೀಣ ಭಾರತದ ಕಲೆ, ಸಂಸ್ಕೃತಿ, ಸಂಪ್ರದಾಯದ ಪರಿಚಯವನ್ನೂ ಮಾಡಿಸುತ್ತದೆ.

2. ಬಿಡಿದಿಯಲ್ಲಿ ಮೋಜುಮಸ್ತಿ

2. ಬಿಡಿದಿಯಲ್ಲಿ ಮೋಜುಮಸ್ತಿ

ಬೆಂಗಳೂರಿನಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ ಸಿಗುವ ಪ್ರಮುಖ ಪಟ್ಟಣವೆಂದರೆ ಅದು ಬಿಡದಿ. ಕೈಗಾರಿಕಾ ಪಟ್ಟಣವಾಗಿರುವ ಬಿಡದಿಯಲ್ಲಿ ಟೊಯೋಟ ಮುಂತಾದ ಪ್ರಮುಖ ಫ್ಯಾಕ್ಟರಿಗಳಿವೆ, ಜೊತೆಗೆ ಇಲ್ಲಿ ಇರುವ ಇನ್ನೋವೇಟಿವ್ ಫಿಲಂ ಸಿಟಿ ಕೂಡಾ ಅಷ್ಟೇ ಹೆಸರುವಾಸಿಯಾಗಿದೆ.
ವಿವಿಧ ಆಯಾಮಗಳಿಂದ ಮೋಜುಮಸ್ತಿನ ತಾಣವಾಗಿರುವ ಬಿಡದಿಯಲ್ಲಿ, ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಇಲ್ಲಿ ಅತ್ಯುತ್ತಮವಾಗಿ ಕಾಲಕಳೆಯಬಹುದು. ಇಲ್ಲಿರುವ ಥೀಂ ಪಾರ್ಕಿನಲ್ಲಿ ಊಹಿಸಲೂ ಅಸಾಧ್ಯವಾದ ಡೈನಾಸಾರ್ ವರ್ಲ್ಡ್, ಮೇಣದ ಮ್ಯೂಸಿಯಂ, ಚಿಕಾಣಿ ನಗರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಎಲ್ಲದಕ್ಕೂ ಅನುಕೂಲ ಮತ್ತು ನಮ್ಮ ಆಯ್ಕೆಯ ಊಟತಿಂಡಿಯ ವ್ಯವಸ್ಥೆ ಇಲ್ಲಿ ಸಿಗುವುದರಿಂದ, ಥ್ರಿಲ್ ಮತ್ತು ಸಾಹಸಕ್ಕೆ ಬಿಡದಿ ಹೇಳಿ ಮಾಡಿಸಿದ ಪಟ್ಟಣದಂತಿದೆ.

3. ರಾಮನಗರದಲ್ಲಿಯ ಸಂತೋಷ ಕೊಡುವ ವಿಷಯಗಳು

3. ರಾಮನಗರದಲ್ಲಿಯ ಸಂತೋಷ ಕೊಡುವ ವಿಷಯಗಳು

ದಾರಿಯಲ್ಲಿ ಪ್ರಯಾಣಿಸುವಾಗ ಸಿಗುವ ಮತ್ತೊಂದು ಪಟ್ಟಣವೆಂದರೆ ಅದು ರಾಮನಗರ. ಇದೊಂದು ಭೌಗೋಳಿಕ ಮಹತ್ವವುಳ್ಲ ಸ್ಥಳವಾಗಿದ್ದು ಕ್ಲೋಸ್ ಪೆಟ್ ಗ್ರಾನೈಟ್ ಗಳು ಮತ್ತು ಮತ್ತು ಈ ನಗರವು ಕಲ್ಲಿನ ಬಂಡೆಗಳಿಗೆ ಹೆಸರುವಾಸಿಯಾಗಿದೆ. ಇದರಿಂದಾಗಿ ಈ ಜಾಗವು ಟ್ರಕ್ಕಿಂಗ್ ಮಾಡುವವರಿಗೆ ಮತ್ತು ಗುಡ್ಡಹತ್ತುವ ಹವ್ಯಾಸಿಗಳಿಗೆ ಒಂದು ಅಚ್ಚುಮೆಚ್ಚಿನ ಸ್ಥಳವೆನಿಸಿದೆ. ಈ ಪಟ್ಟಣವು ರೇಷ್ಮೇ ನಗರವೆಂದೂ ಕೂಡಾ ಹೆಸರುವಾಸಿಯಾಗಿದೆ. ರಾಮನಗರವು ರೇಷ್ಮೇ ಕೃಷಿಯಲ್ಲಿ ಅಭಿವೃದ್ದಿ ಹೊಂದುತ್ತಿದ್ದು ಇಲ್ಲಿಯ ರೇಷ್ಮೇ ನೂಲುಗಳು ಏಷ್ಯಾ ಖಂಡದಲ್ಲಿಯೇ ಉತ್ತಮ ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ತಯಾರಿಸಿದ ರೇಷ್ಮೆ, ಜಗತ್ತಿನ ಪ್ರಸಿದ್ಧ ಮೈಸೂರು ರೇಷ್ಮೆ ಸೀರೆಗಳಿಗೆ ಕಚ್ಚಾ ವಸ್ತುವಾಗಿದೆ.
ರಾಮನಗರದಿಂದ 10 ಕಿ.ಮೀ ದೂರದಲ್ಲಿರುವ ಕಣ್ವ ಜಲಾಶಯ ಮತ್ತೊಂದು ಪ್ರವಾಸಿ ಕೇಂದ್ರವಾಗಿದೆ. ಇಲ್ಲಿಯ ಸೊಂಪಾದ ಹಸಿರುಮಯ ಪರಿಸರ ಪ್ರದೇಶವು ವಿಶಾಲ ಸಂಖ್ಯೆಯಲ್ಲಿ ವೈವಿಧ್ಯಮಯವಾದ ಏವಿಯನ್ ಪ್ರಬೇಧಗಳು ಮತ್ತು ಸುಮಾರು 3 ಕಿ.ಮೀ ನಷ್ಟು ದೂರದಲ್ಲಿರುವ ಪುರುಷೋತ್ತಮ ತೀರ್ಥ ಗವಿ ಗುಹಾಂತರ ದೇವಾಲಯವು ಪ್ರವಾಸಿಗರನ್ನು ಸೆಳೆಯುವ ಪ್ರಮುಖವಾದ ಸ್ಥಳಗಳಾಗಿವೆ.

4. ಕಲೆ ಕರಕುಶಲತೆ ಚನ್ನಪಟ್ಟಣ

4. ಕಲೆ ಕರಕುಶಲತೆ ಚನ್ನಪಟ್ಟಣ

Pratheep P S

ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಚನ್ನಪಟ್ಟಣವು ಗೊಂಬೆಗಳ ನಗರವೆಂದೇ ಕರೆಯಲ್ಪಡುತ್ತದೆ.ನೀವು ಸ್ಥಳೀಯ ಕಲೆ ಮತ್ತು ಕರಕುಶಲತೆಯನ್ನು ಇಷ್ಟಪಡುವವರಾಗಿದ್ದಲ್ಲಿ, ಈ ನಗರವನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಈ ನಗರವು ಹೊಳೆಯುವ ಬಣ್ಣಗಳಿಂದ ತಯಾರಿಸಲ್ಪಟ್ಟ ಮರದಿಂದ ತಯಾರು ಮಾಡಲಾಗುವ ಗೊಂಬೆಗಳಿಗೆ ಹೆಸರುವಾಸಿಯಾಗಿದೆ ಇದಕ್ಕೆ ಹಿಂದಿನಿಂದಲೂ ಅಂದರೆ ಟಿಪ್ಪುಸುಲ್ತಾನನ ಆಳ್ವಿಕೆ ಕಾಲದಿಂದಲೂ ಈ ನಗರದಲ್ಲಿ ತಯಾರಿಸುವ ಗೊಂಬೆಗಳಿಗೆ ಇತಿಹಾಸವಿದೆ.
ಚನ್ನಪಟ್ಟಣದಲ್ಲಿ ತಯಾರಿಸಲಾಗುವ ಗೊಂಬೆಗಳು ಕರಕುಶಲತೆಯಿಂದ ಮಾಡಿದವುಗಳಾಗಿವೆ.ಈ ಗೊಂಬೆಗಳನ್ನು ಮೂಲತ: ವಾಗಿ ದಂತದಿಂದ ತಯಾರು ಮಾಡಲಾಗುತ್ತದೆ ಅಲ್ಲದೆ ಈಗ ಈ ಗೊಂಬೆಗಳನ್ನು ಕೆಲವು ವಿಧಗಳಿಂದ ಮಾಡಲಾಗುತ್ತದೆ ಅವುಗಳಲ್ಲಿ ಮರದಿಂದ ಮಾಡಲಾಗುವ ಗೊಂಬೆಗಳಿಗೆ ತೇಗ, ರೋಸ್, ಪೈನ್ ಮತ್ತು ಸಿಡಾರ್ ಮರಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಈಗ ಈ ಕರಕುಶಲತೆಯು ಕ್ರಮೇಣ ಮಾಸುತ್ತಾ ಬಂದಿದೆ. ಈ ಕರಕುಶಲ ಕರ್ಮಿಗಳ ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮದಿಂದ ಮನ್ನಣೆ ನೀಡಲಾಗುತ್ತಿದೆ.

5. ಕೊಕ್ಕರೆಬೆಳ್ಳೂರು

5. ಕೊಕ್ಕರೆಬೆಳ್ಳೂರು

Koshy Koshy

ಕನ್ನಡದಲ್ಲಿ "ಕೊಕ್ಕರೆ " ಎಂದು ಕರೆಯಲ್ಪಡುವ ಬಣ್ಣ ಬಣ್ಣದ ಕೊಕ್ಕರೆಗಳ ಹೆಸರಿನಿಂದ ಕರೆಯಲ್ಪಡುವ ಕೊಕ್ಕರೆಬೆಳ್ಳೂರು ಎಂಬ ಸಣ್ಣ ಹಳ್ಳಿಯು ರಾಜ್ಯದ ಮದ್ದೂರು ತಾಲೂಕಿನಲ್ಲಿದೆ. ಈ ವಿಭಿನ್ನ ಹಳ್ಳಿಯು 21 ವಿಭಿನ್ನ ಜಾತಿಯ ವರ್ಣಮಯವಾದ ಕೊಕ್ಕರೆಗಳು ಮಾತ್ರವಲ್ಲದೆ ಸ್ಪಾಟ್ ಬಿ ಪೆಲಿಕನ್ ಗಳ ಸಂತಾನೋತ್ಪತ್ತಿಯ ತಾಣವೂ ಇದಾಗಿದ್ದು ಇಲ್ಲಿ ಅನೇಕ ತಳಿಗಳನ್ನು ಹಳ್ಳಿಗಳಲ್ಲಿ ಆರಾಮವಾಗಿ ತಿರುಗಾಡುವುದನ್ನು ಕಾಣಲು ಸಿಗುತ್ತದೆ.

ಈ ಪಕ್ಷಿಗಳು ನವೆಂಬರ್ ನಿಂದ ಫೆಬ್ರವರಿ ತಿಂಗಳುಗಳಲ್ಲಿ ಹೇರಳವಾಗಿ ಕಾಣಸಿಗುತ್ತವೆ ಮತ್ತು ಸ್ಥಳೀಯರೊಂದಿಗೆ ನಿಜವಾಗಿಯೂ ಬೆರೆಯುತ್ತವೆ. ಮುಖ್ಯ ಹೆದ್ದಾರಿಯಿಂದ 12 ಕಿ.ಮೀ ದೂರದಲ್ಲಿದೆ, ನೀವು ಪ್ರಕೃತಿಯ ಅಭಿಮಾನಿ ಮತ್ತು ಅದರ ಅದ್ಭುತಗಳನ್ನು ಪ್ರೀತಿಸುವವರಾಗಿದ್ದರೆ ಇಲ್ಲಿಗೆ ಭೇಟಿ ಕೊಡಲು ತಪ್ಪಿಸಿಕೊಳ್ಳಲೇ ಬಾರದು.

6. ಮದ್ದೂರು, ಮಂಡ್ಯ ಮತ್ತು ಮೇಲುಕೋಟೆ

6. ಮದ್ದೂರು, ಮಂಡ್ಯ ಮತ್ತು ಮೇಲುಕೋಟೆ

Philanthropist 1

ಹೆದ್ದಾರಿಯಲ್ಲಿ ಹಾದು ಹೋಗುತ್ತಿದ್ದಂತೆಯೆ ನಂತರದ ನಿಲುಗಡೆ ಮದ್ದೂರು. ನೀವು ಇಲ್ಲಿ ಪ್ರಯಾಣಕ್ಕೆ ವಿರಾಮ ತೆಗೆದುಕೊಳ್ಳಬಹುದು ಮತ್ತು ಈರುಳ್ಳಿ ಮತ್ತು ಅಕ್ಕಿಹಿಟ್ಟಿನಿಂದ ತಯಾರಿಸಲಾದ ಇಲ್ಲಿಯ ಹೆಸರುವಾಸಿಯಾದ ಮದ್ದೂರು ವಡೆಯನ್ನು ಸವಿಯಬಹುದು. ಕರ್ನಾಟಕದ ಒಂದು ವಿಭಿನ್ನ ರುಚಿಯೆನಿಸಲ್ಪಡುವ ಈ ಉಪಹಾರವು ಚಹಾ ಅಥವಾ ಕಾಫಿಯ ಜೊತೆಗೆ ಸೇವಿಸಬಹುದಾದ ಒಂದು ರುಚಿಕರವಾದ ತಿನಿಸಾಗಿದೆ.

ನೀವು ಮದ್ದೂರು ಮತ್ತು ಮಂಡ್ಯ ನಗರಕ್ಕೆ ತಲುಪಿದ ಕೂಡಲೇ ನೀವು ಮೇಲುಕೋಟೆಯ ಕಡೆಗೆ ನಿಮ್ಮ ಪ್ರಯಾಣವನ್ನು ತೆಗೆದುಕೊಳ್ಳಬಹುದಾಗಿದೆ. ಇದು ಮಂಡ್ಯದಿಂದ ಉತ್ತರಕ್ಕೆ 36ಕಿ.ಮೀ ಅಂತರದಲ್ಲಿದೆ. ಮೇಲು ಕೋಟೆಯು ಹೆಸರಾಂತ ಚೆಲುವನಾರಾಯಣ ಸ್ವಾಮಿ ದೇವರಿಗೆ ಅರ್ಪಿತವಾದ ದೇವಾಲಯ ಮತ್ತು ಯೋಗ ನರಸಿಂಹ ದೇವಾಲಯಗಳನ್ನು ಹೊಂದಿದೆ.

ಈ ದೇವಾಲಯವು ಬೆಟ್ಟದ ಮೇಲೆ ನೆಲೆಸಿದೆ ಮತ್ತು ಈ ಪಟ್ಟಣವು ರಾಜ್ಯದಲ್ಲಿಯೇ ಅತ್ಯಂತ ಪವಿತ್ರವಾದು ಸ್ಥಳಗಳಲ್ಲೊಂದು ಎಂದು ಪರಿಗಣಿಸಲ್ಪಡುತ್ತದೆ. ದೇವಾಲಯದಲ್ಲಿ ಕೈಗೊಳ್ಳಲಾಗುವ ವಾರ್ಷಿಕ ಉತ್ಸವವಾದ ವೈರಮುಡಿ ಬ್ರಹ್ಮೋತ್ಸವವು ಪ್ರತೀ ವರ್ಷ ಸಾವಿರಾರು ಜನ ಭಕ್ತರನ್ನು ಆಕರ್ಷಿಸುತ್ತದೆ.

7. ಶ್ರೀರಂಗಪಟ್ಟಣ ಮತ್ತು ರಂಗನತಿಟ್ಟು

7. ಶ್ರೀರಂಗಪಟ್ಟಣ ಮತ್ತು ರಂಗನತಿಟ್ಟು

K R Ramesh

ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ಕೇವಲ 15 ಕಿ.ಮಿ ಅಂತರದಲ್ಲಿರುವ ನಗರವೇ ಶ್ರೀರಂಗಪಟ್ಟಣ. ಇತಿಹಾಸದ ಪುಟಗಳನ್ನು ತನ್ನಲ್ಲಿ ಹೊಂದಿರುವ ಈ ಸ್ಥಳವು ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನೂ ಕೂಡಾ ತನ್ನಲ್ಲಿ ಹೊಂದಿದೆ. ಈ ನಗರದಲ್ಲಿ ನೋಡಬೇಕಾದುದು ಬಹಳಷ್ಟಿವೆ. ವಿಷ್ಣುವಿನ ಭಕ್ತರ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ರಂಗನಾಥ ದೇವಾಲಯವೂ ಇಲ್ಲಿದೆ. ಈ ಪಟ್ಟಣವು ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನನ ಆಳ್ವಿಕೆಗೆ ಸಂಬಂಧಿಸಿದ ಮಹತ್ವವನ್ನು ಈ ನಗರವು ಖಂಡಿತವಾಗಿಯೂ ಹೊಂದಿದೆ ಏಕೆಂದರೆ ಆ ಕಾಲದ ಮೈಸೂರು ರಾಜ್ಯದ ರಾಜಧಾನಿಯಾ ಶ್ರೀರಂಗಪಟ್ಟಣವು ಪರಿಗಣಿಸಲ್ಪಟ್ಟಿತ್ತು.
ಪಟ್ಟಣವು 1784ರಲ್ಲಿ ಟಿಪ್ಪುವಿನಿಂದ ನಿರ್ಮಿಸಲ್ಪಟ್ಟ ದರಿಯಾ ದೌಲತ್ ಬಾಗ್ ಮತ್ತು ಟಿಪ್ಪುವಿನ ಸುಲ್ತಾನ್ ಅವಶೇಷಗಳನ್ನು ಹೊಂದಿರುವ ವಿಸ್ತಾರವಾದ ಸಮಾಧಿಯ ಗುಂಬಾಜ್ ಅನ್ನು ಹೊಂದಿದೆ. ಶ್ರೀರಂಗಪಟ್ಟಣದ ಕೋಟೆಗೆ ಭೇಟಿ ಕೊಡಿ ಇಲ್ಲಿ ಯುರೋಪಿಯನ್ನರು ಮತ್ತು ಬ್ರಿಟೀಷರೊಂದಿಗೆ ಟಿಪ್ಪು ಸುಲ್ತಾನನ ಯುದ್ದಕ್ಕೆ ಸಂಬಂಧಿಸಿದ ಬ್ರಿಟಿಷ್ ಇತಿಹಾಸ ಮತ್ತು ಗ್ಯಾರಿಸನ್ ನ ಸ್ಮಶಾನ ಮತ್ತು ಬೈಲಿ ಡಂಜಿಗನ್ ನ ಇತಿಹಾಸದ ಕೆಲವು ತುಣುಕುಗಳನ್ನು ಕಾಣಬಹುದಾಗಿದೆ. ಇಲ್ಲಿಂದ ಸುಮಾರು 7 ಕಿ.ಮೀ. ದೂರ ಪ್ರಯಾಣಿಸಿದರೆ ರಂಗನತಿಟ್ಟು ಎಂಬ ಪ್ರಸಿದ್ಧ ಪಕ್ಷಿಧಾಮವನ್ನು ಭೇಟಿ ನೀಡಬಹುದು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X