Search
  • Follow NativePlanet
Share
» »ಕಪ್ಪು ಮರಳು ಇರುವ ಮುಂಬೈನ ಈ ಬೀಚ್‌ ನೋಡಿದ್ದೀರಾ

ಕಪ್ಪು ಮರಳು ಇರುವ ಮುಂಬೈನ ಈ ಬೀಚ್‌ ನೋಡಿದ್ದೀರಾ

ರೆವ್ಡಾಂಡಾ ಕಡಲಕಿನಾರೆಯು ರೆವ್ಡಾಂಡಾ ಗ್ರಾಮದಲ್ಲಿದೆ. ಇನ್ನಿತರ ಕಡಲಕಿನಾರೆಗಳಿಗಿಂತ ಬಹಳ ಭಿನ್ನವಾಗಿದೆ. ಕಾರಣ ಇಲ್ಲಿನ ಬೀಚ್‌ನ ಮರಳು ಸ್ವಲ್ಪ ಕಪ್ಪು ಬಣ್ಣದ್ದಾಗಿದ್ದು, ಮುಂಬೈನಂತಹ ನಗರದಲ್ಲಿ ಪ್ರಶಾಂತವಾಗಿ ಕಾಲಕಳೆಯಲು ಉತ್ತಮವಾದ ತಾಣವಾಗಿದೆ.

ರೆವ್ಡಾಂಡಾ ಬೀಚ್

ರೆವ್ಡಾಂಡಾ ಬೀಚ್

PC:Damitr

ರೆವ್ಡಾಂಡಾ ಬೀಚ್ ಭಾರತದ ಅಲಿಬಾಗ್ ಸಮೀಪದ ಹಳ್ಳಿಯಲ್ಲಿದೆ. ಇದು ಅಲಿಬಾಗ್‌ನಿಂದ17 ಕಿ.ಮೀ ಮತ್ತು ಮುಂಬೈನಿಂದ 125 ಕಿ.ಮೀ ದೂರದಲ್ಲಿದೆ. ರೆವ್ಡಾಂಡಾ ಬೀಚ್ ಈ ಪ್ರದೇಶದಲ್ಲಿನ ಅತ್ಯಂತ ಪ್ರತ್ಯೇಕ ಬೀಚ್ ಆಗಿದೆ. ಇಲ್ಲಿನ ಮರಳು ಕಪ್ಪು ಬಣ್ಣದಲ್ಲಿದೆ. ಈ ಬೀಚ್ ರೆವ್ದಾಂಡದ ಜನರ ಅವಿಭಾಜ್ಯ ಅಂಗವಾಗಿದೆ. ದಿನವಿಡೀ ಕೆಲಸ ಮಾಡಿ ಸಂಜೆಯ ಸಮಯದಲ್ಲಿ ವಿಶ್ರಾಂತಿ ಪಡೆಯುವ ಸ್ಥಳಗಳಲ್ಲಿ ಒಂದಾಗಿದೆ.

ದತ್ತಾ ಮಂದಿರ

ದತ್ತಾ ಮಂದಿರ

PC:Rjshinde

ದತ್ತಾ ಮಂದಿರವು ರೆವ್ಡಾಂಡಾ ಚೌಲ್ ಭಾಗದಲ್ಲಿದೆ. ಇದು ಮುಖ್ಯವಾಗಿ ಮಹಾರಾಷ್ಟ್ರ ಜನರಿಂದ ಪೂಜಿಸಲಾಗುತ್ತದೆ. ಈ ದೇವಸ್ಥಾನವು ಬೆಟ್ಟದ ಮೇಲ್ಭಾಗದಲ್ಲಿದ್ದು, ಸುಮಾರು 1500 ಕಡಿದಾದ ಮೆಟ್ಟಿಲುಗಳನ್ನು ಹೊಂದಿದೆ. ರೆವ್ಡಾಂಡಾದ ಸುತ್ತಲಿನ ಪ್ರದೇಶವನ್ನು ದೇವಾಲಯದಿಂದ ನೋಡಬಹುದಾಗಿದೆ. ಈ ದೇವಾಲಯವನ್ನು ಶತ್ರುಗಳ ಮೇಲೆ ಕಣ್ಣಿಡಲು ಶಿವಾಜಿರಾಜ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ದೇವಸ್ಥಾನದಲ್ಲಿ ಉತ್ಸವವು 5 ದಿನಗಳ ಕಾಲ ನಡೆಯುತ್ತದೆ. ಈ ಐದು ದಿನಗಳಲ್ಲಿ ರೆವ್ಡಾಂಡಾದಲ್ಲಿ ಶಾಲೆಗಳೆಲ್ಲಾ ಮುಚ್ಚಿರುತ್ತವೆ.

 ವಿಷಜಂತು ಕಚ್ಚಿದ್ರೆ ಇಲ್ಲಿನ ಬಾವಿಯ ನೀರಿನಿಂದ ಗುಣಮುಖವಾಗುತ್ತಂತೆ! ವಿಷಜಂತು ಕಚ್ಚಿದ್ರೆ ಇಲ್ಲಿನ ಬಾವಿಯ ನೀರಿನಿಂದ ಗುಣಮುಖವಾಗುತ್ತಂತೆ!

ಸುತ್ತಮುತ್ತಲಿನ ಇನ್ನಿತರ ತಾಣಗಳು

ಸುತ್ತಮುತ್ತಲಿನ ಇನ್ನಿತರ ತಾಣಗಳು

ಅಲಿಭಾಗ್‌ನ ಸುತ್ತಮುತ್ತ ಅಡ್ಡಾಡುವುದಕ್ಕೆ ಹಲವಾರು ಕಡಲಕಿನಾರೆಗಳು, ದ್ವೀಪಗಳು, ಮತ್ತು ಪಾರ೦ಪರಿಕ ಕಟ್ಟಡಗಳಿವೆ. ಅಲಿಭಾಗ್ ಕಡಲಕಿನಾರೆ, ಕೊಲಾಬಾ ಕೋಟೆ, ಮತ್ತು ಸೋಮೇಶ್ವರ ದೇವಸ್ಥಾನವಿದೆ. ಸೋಮೇಶ್ವರ ದೇವಸ್ಥಾನವು ಭಗವಾನ್ ಶಿವನಿಗರ್ಪಿತವಾಗಿರುವ ಪ್ರಾಚೀನ ದೇವಸ್ಥಾನವಾಗಿದ್ದು, ತನ್ನ ವಾಸ್ತುಶಿಲ್ಪದ ಸೌ೦ದರ್ಯಕ್ಕೆ ಹೆಸರುವಾಸಿಯಾಗಿದೆ.

ಯಾವಾಗ ಭೇಟಿ ನೀಡುವುದು ಉತ್ತಮ

ಯಾವಾಗ ಭೇಟಿ ನೀಡುವುದು ಉತ್ತಮ

ರೆವ್ಡಾಂಡಾದ ಬೀಚ್‌ಗೆ ಹೋಗಲು ವರ್ಷದ ಎಲ್ಲಾ ದಿನಗಳೂ ಸೂಕ್ತವಾಗಿದೆ. ಪ್ರಶಾಂತವಾದ ಬೀಚ್‌ನಲ್ಲಿ ಆರಾಮವಾಗಿ ಕಾಲಕಳೆಯಬಹುದಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ವಿಮಾನದ ಮೂಲಕ: ವಿಮಾನದ ಮೂಲಕ ಹೋಗುವುದಾದರೆ ಮುಂಬೈ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಟ್ಯಾಕ್ಸಿ ಮೂಲಕ ಅಲ್ಲಿಗೆ ಹೋಗಬಹುದು.

ರೈಲು ನಿಲ್ದಾಣವು : ರೈಲು ನಿಲ್ದಾಣವು ದೇಶದ ಎಲ್ಲಾ ಪ್ರಮುಖ ನಗರಗಳು ಹಾಗೂ ಪಟ್ಟಣಗಳೊ೦ದಿಗೆ ಉತ್ತಮ ಸ೦ಪರ್ಕವನ್ನು ಹೊ೦ದಿದೆ. ಈ ರೈಲ್ವೆ ನಿಲ್ದಾಣದಲ್ಲಿಳಿದ ಬಳಿಕ, ಇಲ್ಲಿ೦ದ ಮೂವತ್ತು ಕಿಲೋಮೀಟರ್ ಗಳಷ್ಟು ದೂರದಲ್ಲಿರುವ ರೆವ್ಡಾಂಡಾಗೆ ತಲುಪಲು ಟ್ಯಾಕ್ಸಿಯೊ೦ದನ್ನು ಇಲ್ಲಿ೦ದಲೇ ಗೊತ್ತುಮಾಡಿಕೊಳ್ಳಬಹುದು.

ರಸ್ತೆಮಾರ್ಗದ ಮೂಲಕ: ರೆವ್ಡಾಂಡಾಗೆ ತೆರಳುವುದಕ್ಕೆ ಅತ್ಯುತ್ತಮವಾದ ಮಾರ್ಗವು ರಸ್ತೆಯ ಮಾರ್ಗವಾಗಿದೆ. ರೆವ್ಡಾಂಡಾವು ರಸ್ತೆಮಾರ್ಗಗಳ ಉತ್ತಮ ಸ೦ಪರ್ಕವನ್ನು ಹೊ೦ದಿದ್ದು, ನಿಯಮಿತ ಬಸ್ಸುಗಳು ಪ್ರಮುಖ ನಗರಗಳಿ೦ದ ರೆವ್ಡಾಂಡಾಗೆ ಸ೦ಚರಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X