Search
  • Follow NativePlanet
Share
» »ಅಲೆಪ್ಪಿಗೆ ಹೋದ್ರೆ ಈ ಪವಿತ್ರ ಮತ್ತು ಧಾರ್ಮಿಕ ಸ್ಥಳಗಳಿಗೆ ಹೋಗೋದು ಮರೀಬೇಡಿ!

ಅಲೆಪ್ಪಿಗೆ ಹೋದ್ರೆ ಈ ಪವಿತ್ರ ಮತ್ತು ಧಾರ್ಮಿಕ ಸ್ಥಳಗಳಿಗೆ ಹೋಗೋದು ಮರೀಬೇಡಿ!

PC: Magicwall

ಕೇರಳವು ಒಂದು ಸುಂದರವಾದ ಆಕರ್ಷಣೀಯ ಸ್ಥಳವಾಗಿದ್ದು, ಇದು ಶಾಂತ ಪರಿಸರದಿಂದ ಕೂಡಿದೆ ಮತ್ತು ನೀವು ಇಲ್ಲಿನ ಯಾವ ಜಿಲ್ಲೆಗು ಪ್ರಯಾಣಿಸಿದರೆ ಹಚ್ಚ ಹಸಿರಿನ ಕಾಡುಗಳನ್ನೂ ನೋಡಬಹುದು. ಇದಲ್ಲದೆ ಇಲ್ಲಿ ನೀವು ಕೆಲವು ವಿಶಿಷ್ಟ ಸ್ಥಳಗಳನ್ನೂ ಸಹ ವೀಕ್ಷಿಸಬಹುದು. ಇಲ್ಲಿ ನಾವು ನಿಮಗೆ ಪ್ರಸ್ತುತಪಡಿಸುತಿರುವ ಸ್ಥಳಗಳಲ್ಲಿ ಒಂದಾದ ಅಲೆಪ್ಪಿ, ಇದನ್ನು ಆಲಪ್ಪುಳ ಎಂಬ ಹೆಸರಿನಿಂದಲೂ ಸಹ ಪ್ರಸಿದ್ದಿ ಪಡೆದಿದೆ.

ಇದನ್ನು ಕೇರಳದ "ವೆನೆಷಿಯನ್ ಕ್ಯಾಪಿಟಲ್" ಎಂದೂ ಸಹ ಕರೆಯಲ್ಪಡುತ್ತದೆ, ಏಕೆಂದರೆ ಇಲ್ಲಿ ಕಾಣಸಿಗುವ ಹಿನ್ನೀರು, ಅದ್ಭುತವಾದ ನೀಲಿ ಕೆರೆಗಳು, ಹಲವಾರು ಕಾಲುವೆಗಳು ಮತ್ತು ಮನೋಲ್ಲಾಸಬರಿತ ಬೀಚ್‌ಗಳಿಂದಾಗಲಿ ಇದನ್ನು "ವೆನಿಸ್ ಆಫ್ ದಿ ಈಸ್ಟ್ " ಎಂದು ಕರೆಯಲಾಗುತ್ತದೆ. ಹೌಸ್‌ಬೋಟ್‌ಗಳ ವಿಷಯಕ್ಕೆ ಬಂದರೆ, ಅಲೆಪ್ಪಿ ಮತ್ತು ಸುತ್ತಮುತ್ತಲಿನ ಸ್ಥಳೀಯ ಅಥವಾ ವಿಹಾರ ನೌಕೆಗಳಲ್ಲಿ ನಿಮ್ಮ ನೆಚ್ಚಿನದನ್ನು ಆರಿಸಿಕೊಳ್ಳಬಹುದು.

ಈ ಸ್ಥಳಕ್ಕೆ ಹೇಗೆ ಹೋಗಬಹುದು? ಇದು ಕೊಚ್ಚಿಯಿಂದ 53 ಕಿ.ಮೀ ದೂರದಲ್ಲಿದ್ದು, ನಿಮಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿಗೆ ಹೋಗಲು ನಿಮಗೆ ಅಷ್ಟೇನೂ ತೊಂದರೆ ಆಗುವುದಿಲ್ಲ ಏಕೆಂದರೆ ಸಾರ್ವಜನಿಕ ಸಾರಿಗೆ ಯಾವಾಗಲೂ ಲಭ್ಯವಿರುತ್ತದೆ.

ಈ ಲೇಖನದಲ್ಲಿ, ಅಲ್ಲೆಪ್ಪಿಯಲ್ಲಿನ ಧಾರ್ಮಿಕ ಸ್ಥಳಗಳ ಬಗ್ಗೆ ನಾವು ಗಮನ ಹರಿಸೋಣ . ಇವು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಪ್ರವಾಸಿಗರ ಗಮನ ಸೆಳೆಯುವಲ್ಲಿ ಅಗ್ರ ಸ್ಥಾನದಲ್ಲಿವೆ. ನೀವು ಅಲೆಪ್ಪಿಗೆ ಹೋಗುವ ಪ್ಲಾನ್ ಇದ್ರೆ, ಈ ಸ್ಥಳಗಳನ್ನು ಭೇಟಿ ಮಾಡೋದು ಮರೀಬೇಡಿ.

1.ಸೇಂಟ್ ಮೇರಿಸ್ ಫೊರೆನ್ ಚರ್ಚ್

1.ಸೇಂಟ್ ಮೇರಿಸ್ ಫೊರೆನ್ ಚರ್ಚ್

PC: Sivavkm

ಅಲ್ಲೆಪ್ಪಿಯಲ್ಲಿ ಪ್ರಾರ್ಥನೆಯ ಸ್ತುತಿಗೀತೆಗಳನ್ನು ಹಾಡಲು ಇದು ಅತ್ಯಂತ ಪ್ರಶಸ್ತ ಸ್ಥಳಗಳಲ್ಲಿ ಒಂದಾಗಿದೆ. ಇದು ಕ್ರಿ.ಶ 835 ರಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಇಲ್ಲಿ ನಡೆಯುವ ಕಾರ್ಯಕ್ರಮಗಳು, ಶಿಕ್ಷಣ ವ್ಯವಸ್ಥೆ ,ಕಾಲೇಜುಗಳು ಮತ್ತು ಶುಕ್ರವಾರದ ಪ್ರಾರ್ಥನೆಗಳಿಗೆ ಪ್ರಸಿದ್ಧವಾಗಿದೆ. ನಿಮ್ಮ ಎರಡು ಕೈಗಳನ್ನು ಜೋಡಿಸಿ ಈ ಸ್ಥಳದಲ್ಲಿ ಪ್ರಾರ್ಥನೆ ಮಾಡುವುದು ಅತ್ಯಂತ ಫಲಪ್ರದವೆಂದು ನಂಬಿಕೆ ಇದೆ.

ಚರ್ಚ್ ನಾನಾ ವಿಧಗಳಲ್ಲಿ ತುಂಬ ಸರಳತೆಗೆ ಹೆಸರುವಾಸಿಯಾಗಿದ್ದು ಅವುಗಳಲ್ಲಿ ಒಂದು, ಇದು ಕ್ರಿಶ್ಚಿಯನ್ನರ ಸಂಪ್ರದಾಯದ ಮೇಲೆ ಬೆಳಕು ಚೆಲ್ಲುತ್ತದೆ ಮತ್ತು ಸುಮಾರು 2500 ಕುಟುಂಬಗಳಿಗೆ ಆಶ್ರಯ ನೀಡುತ್ತದೆ. ಇದು ಚಂಗನಾಸ್ಸೆರಿಯ ಆರ್ಕೀಪಾರ್ಚಿಯ ಅತಿದೊಡ್ಡ ಚರ್ಚುಗಳು ಮತ್ತು ಪ್ಯಾರಿಷ್‌ಗಳಲ್ಲಿ ಒಂದಾಗಿದೆ.

ಚರ್ಚ್ ವರ್ಜಿನ್ ಮೇರಿಗೆ ಗೌರವವಾಗಿ, ಸೆಪ್ಟೆಂಬರ್ ತಿಂಗಳ ಮೂರನೇ ಭಾನುವಾರದಂದು, ಪ್ರತಿ ವರ್ಷ ಸೇಂಟ್ ಮೇರಿಸ್ ಹಬ್ಬವನ್ನು ಆಚಾರಿಸುತ್ತಾರೆ. ಇಲ್ಲಿನ ಸಾಮೂಹಿಕ ಹಬ್ಬಗಳಲ್ಲಿ ಅದ್ದೂರಿ ಮೆರವಣಿಗೆ ಹೆಚ್ಚು ಸ್ಮರಣೀಯವಾಗಿದ್ದು ಜನರು ವರ್ಣರಂಜಿತ ಉಡುಪಿನಲ್ಲಿ ಸೇರುತ್ತಾರೆ ಮತ್ತು ಕ್ರಿ.ಶ 1647 ರಿಂದ ಈ ಸಂಪ್ರದಾಯವನ್ನು ನಿಷ್ಠೆಯಿಂದ ಆಚರಿಸಲಾಗುತ್ತಿದೆ.

ನೀವು ದರ್ಸಾನ್ಸ್ ಸಮೂಹಮ್ ಬಗ್ಗೆ ಕೇಳಿದ್ದೀರಾ? ಇದು ಇಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಂಸ್ಥೆ. ಇಲ್ಲಿನ ಜನಸಮೂಹವು ಹಬ್ಬದ ಸಮಯದಲ್ಲಿ ಸೇಂಟ್ ಸೆಬಾಸ್ಟಿಯನ್ ಅವರ ಭವ್ಯವಾದ ಪ್ರತಿಮೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಪಟಾಕಿ ಜೊತೆಗೆ ರೋಮಾಂಚಕ ಬಣ್ಣಗಳು ಹಬ್ಬದ ಮೋಡಿಯನ್ನು ಹೆಚ್ಚು ಮಾಡುತ್ತವೆ. ಬೆರಗುಗೊಳಿಸುವ ಅಲಂಕಾರಗಳಿಂದ ಹಿಡಿದು ಹಬ್ಬದವರೆಗೆ, ಸೇಂಟ್ ಮೇರಿಸ್ ಫೊರೆನ್ ಚರ್ಚ್ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ.

2.ಎಡತುವಾ ಚರ್ಚ್

2.ಎಡತುವಾ ಚರ್ಚ್

PC: Johnchacks

ಈ ಚರ್ಚ್ ಅನ್ನು ಕ್ಯಾಥೊಲಿಕ್ ಚರ್ಚ್ ಆಫ್ ಸೇಂಟ್ ಜಾರ್ಜ್ ಎಂದೂ ಕರೆಯುತ್ತಾರೆ, ಇದು ಕೇರಳದ ಅಲೆಪ್ಪಿ ಜಿಲ್ಲೆಯ ಎಡತುವಾದಲ್ಲಿದೆ. ಇಲ್ಲಿ ನಡೆಯುವ ದೊಡ್ಡ ಹಬ್ಬಗಳನ್ನು ಮತ್ತು ಆಚರಣೆಗಳನ್ನು ಕಣ್ತುಂಬಿಕೊಳ್ಳಲು ಇಚ್ಛಿಸಿದರೆ ನೀವು ಮೆರ್ರಿ ತಿಂಗಳ ಮೇ ನಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದನ್ನು ಮರೆಯಬೇಡಿ. ಇದು ಕ್ರಿಶ್ಚಿಯನ್ ಮತ್ತು ಕ್ರೈಸ್ತೇತರ ಯಾತ್ರಿಕರನ್ನು ಒಳಗೊಂಡಿದೆ. ಈ ಚರ್ಚ್ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಸೇಂಟ್ ಅಲೋಶಿಯಸ್ ಕಾಲೇಜಿಗೆ ಸಮೀಪದಲ್ಲಿದೆ.

ನಿಮಗೆ ಕೃಷಿಯ ಬಗ್ಗೆ ಆಸಕ್ತಿ ಇದೆಯೇ ? ಹಾಗಾದರೆ ನೀವು ಇಲ್ಲಿ ಸಮುದ್ರ ಮಟ್ಟಕ್ಕಿಂತ ಕೆಳಗಿನ ಪ್ರದೇಶದ ಬಳಿ ಇರುವ ಭತ್ತದ ಗದ್ದೆಗಳು ಮತ್ತು ಕೃಷಿ ಬೆಳೆಗಳಿಂದ ತುಂಬಿದ ಭೂಮಿಯನ್ನು ನೋಡಬಹುದು. ಇದರ ಹತ್ತಿರದಲ್ಲಿ ಯಾವೆಲ್ಲ ಸ್ಥಳಗಳನ್ನು ವೀಕ್ಷಿಸಬಹುದು ಎಂಬ ಪ್ರಶ್ನೆ ಬಂದರೆ, ಇಲ್ಲಿಗೆ ಹತ್ತಿರದ ಬೃಹತ್ ದೇವಾಲಕ್ಕೆ ಹೋಗಬಹುದು. ಇಲ್ಲಿನ ಚರ್ಚುಗಳ ಅದ್ಭುತ ಮೂಲಸೌಕರ್ಯಗಳು ನಿಮಗೆ ಮಧ್ಯಕಾಲೀನ ಯುರೋಪನ್ನು ನೆನಪಿಸುತ್ತವೆ. ಯೇಸುಕ್ರಿಸ್ತನ ನಿಷ್ಠಾವಂತ ಅನುಯಾಯಿಯಾದ ಸೇಂಟ್ ಥಾಮಸ್ ಕ್ರಿ.ಶ 1 ನೇ ಶತಮಾನದಲ್ಲಿ ಈ ಚರ್ಚ್ ಅನ್ನು ನಿರ್ಮಿಸಿದ ಕೀರ್ತಿಗೆ ಪಾತ್ರನಾಗಿದ್ದಾನೆ.

ನೀವು ಬಿಡುವು ಮಾಡಿಕೊಂಡು ಏಪ್ರಿಲ್ 27 ರಿಂದ ಮೇ 7 ರವರೆಗೆ ನಡೆಯುವ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಳ್ಳಬಹುದು. ಈ ಸಮಯದಲ್ಲಿ ಸೇಂಟ್ ಜಾರ್ಜ್ ಚಿನ್ನದಿಂದ ಅಲಂಕೃತಗೊಂಡಿರುತ್ತದೆ ಮತ್ತು ಈ ಸಮಯದಲ್ಲಿ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.

3. ಸೇಂಟ್ ಆಂಡ್ರ್ಯೂಸ್ ಬೆಸಿಲಿಕಾ ಆರ್ಥುಂಕಲ್

3. ಸೇಂಟ್ ಆಂಡ್ರ್ಯೂಸ್ ಬೆಸಿಲಿಕಾ ಆರ್ಥುಂಕಲ್

PC: Challiyil Eswaramangalath Vipin

ಅಧಿಕೃತವಾಗಿ ಆರ್ಥುಂಕಲ್ ಸೇಂಟ್ ಆಂಡ್ರ್ಯೂಸ್ ಫೊರೆನ್ ಚರ್ಚ್ ಎಂದು ಕರೆಯಲ್ಪಡುವ ಇದನ್ನು ಮೂಲತಃ 16 ನೇ ಶತಮಾನದಲ್ಲಿ ಪೋರ್ಚುಗೀಸ್ ಮಿಷನರಿಗಳು ನಿರ್ಮಿಸಿದರು. ದೈಹಿಕ ಕಾಯಿಲೆಗಳಿಂದ ನಿಮ್ಮನ್ನು ಗುಣಪಡಿಸುವ ಚರ್ಚ್ ಅನ್ನು ಕಲ್ಪಿಸಿಕೊಳ್ಳಿ. ಅಂತಹ ಸ್ಥಳದಿಂದ ಆಶೀರ್ವಾದ ಪಡೆಯುವುದು ಮತ್ತು ರೋಗಗಳಿಂದ ಮುಕ್ತವಾಗುವುದು ಉತ್ತಮವಲ್ಲವೇ? ಅಂತಹ ಅಧಿಕಾರಗಳನ್ನು ಹೊಂದಿರುವ ಚರ್ಚ್ ಸೇಂಟ್ ಆಂಡ್ರ್ಯೂಸ್ ಬೆಸಿಲಿಕಾ.

ಈ ಚರ್ಚ್ ಸೇಂಟ್ ಸೆಬಾಸ್ಟಿಯನ್ ಅವರ ಪ್ರತಿಮೆಯನ್ನು ಹೊಂದಿದ್ದು ಅದು ಎಲ್ಲಾ ಕಡೆಯಿಂದ ಬಾಣಗಳಿಂದ ಇರಿಯಲಪಟ್ಟಿದ್ದು ರಕ್ತವನ್ನು ತೊಟ್ಟಿಕ್ಕುತಿದೆ. ಏಕೆಂದರೆ . ಇದನ್ನು ಮಿಲನ್‌ನಲ್ಲಿ ಸುಂದರವಾಗಿ ಕೆತ್ತಲಾಗಿದೆ ಮತ್ತು ಬಲಿಪೀಠದ ಹಿಂದೆ ಚರ್ಚ್‌ನ ಬಲಪಂಥೀಯ ಸ್ಥಳವನ್ನು ಆಕ್ರಮಿಸಿಕೊಂಡಿದೆ.

ನೀವು ಅಲೆಪ್ಪೆಯಿಂದ ಸುಮಾರು 22 ಕಿ.ಮೀ ಪ್ರಯಾಣಿಸಿದರೆ ಈ ಚರ್ಚ್‌ಗೆ ಭೇಟಿ ನೀಡಬಹುದು. ಇದು ಆರ್ಥುಂಕಲ್ ಗ್ರಾಮದಲ್ಲಿದೆ ಮತ್ತು ಅಲೆಪ್ಪೆಯ ಮೊದಲ ಬೆಸಿಲಿಕಾ ಸ್ಥಾನದಲ್ಲಿದೆ ಆದರೆ 2010 ರಿಂದ ಈಚೆಗೆ ಕೇರಳದಲ್ಲಿ ಕೇವಲ 7 ನೇ ಸ್ಥಾನದಲ್ಲಿದೆ.

ಆರ್ಥುಕುನಾಲ್ ಪೆರುನ್ನಾಲ್ನ ಹತ್ತು ದಿನಗಳ ಹಬ್ಬದ ಆಚರಣೆಯೇ ಇಲ್ಲಿನ ಮುಖ್ಯ ಆಕರ್ಷಣೆ. ಹಬ್ಬದ ಕೊನೆಯ ದಿನದಂದು ಬೀಚ್‌ನಿಂದ ಚರ್ಚ್‌ಗೆ ತಮ್ಮ ಮೊಣಕಾಲುಗಳ ಮೇಲೆ ತೆವಳುವಂತಹ ಕೆಲವು ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಈ ವಿಶಿಷ್ಟ ಉತ್ಸವದಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಭಕ್ತರು ಇಲ್ಲಿಗೆ ಬರುತ್ತಾರೆ.

ಜನವರಿಯ ಆರಂಭದಲ್ಲಿ, ಈ ಕಡಲತೀರದ ಉತ್ಸವವು ಪ್ರತಿಯೊಬ್ಬರನ್ನು ಒಟ್ಟುಗೂಡಿಸುತ್ತದೆ. ಇಲ್ಲಿಗೆ ಹೋಗಲು ರೈಲು ಮತ್ತು ವಿಮಾನ ಎರಡರಿಂದಲೂ ಸಾಧ್ಯ. ಹತ್ತಿರದ ರೈಲ್ವೆ ನಿಲ್ದಾಣವೆಂದರೆ ಆಲಪ್ಪುಳ ರೈಲ್ವೆ ನಿಲ್ದಾಣ (ಸುಮಾರು 21 ಕಿ.ಮೀ) ಮತ್ತು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 68 ಕಿ.ಮೀ.

4. ಅಂಬಲಪುಳ ದೇವಸ್ಥಾನ

4. ಅಂಬಲಪುಳ ದೇವಸ್ಥಾನ

PC: Vinayaraj

ಈ ದೇವಾಲಯವನ್ನು ದಕ್ಷಿಣದ 'ಗುರುವಾಯೂರ್' ಎಂದು ಪ್ರೀತಿಯಿಂದ ಕರೆಯಲಾಗುತ್ತದೆ ಮತ್ತು ಕೇರಳದ ಜನರಿಗೆ ಅತ್ಯಂತ ಪ್ರಿಯವಾದ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಶ್ರೀಕೃಷ್ಣನಿಗೆ ಅರ್ಪಣೆಯಾಗಿದ್ದು ಕ್ರಿ.ಶ 1614 ರಲ್ಲಿ ಚಂಗನಾಶೇರಿಯಿಂದ ಕೊಂಡೊಯ್ಯಲ್ಪಟ್ಟ ಕೃಷ್ಣ ವಿಗ್ರಹವನ್ನು ಒಳಗೊಂಡಿದೆ ಮತ್ತು ಈ ಕಾರ್ಯಕ್ರಮವನ್ನು ವಿಭಿನ್ನ ಶೈಲಿಯಲ್ಲಿ ಆಚರಿಸಲಾಗುತ್ತದೆ.

ಭಗವಂತನಿಗೆ ಅರ್ಪಿಸುವ ಪಾಲ್ ಪಯಸಮ್ ಸ್ವೀಕರಿಸುವ ಭಕ್ತರು ತಮ್ಮನ್ನು ಅದೃಷ್ಟವಂತರು ಎಂದೇ ಭಾವಿಸುತ್ತಾರೆ ಮತ್ತು ನಂತರ ಅದನ್ನು ತಮ್ಮವರಿಗೆ ಹಂಚುತ್ತಾರೆ. ದೇವಾಲಯದ ಒಳಗೆ ಹೋಗಲು ಪ್ರವೇಶ ಪಡೆಯಲು ನೀವು ಒಂದೇ ಒಂದು ಪೈಸೆಯನ್ನೂ ಸಹ ಪಾವತಿಸಬೇಕಾಗಿಲ್ಲ ಮತ್ತು ಈ ಸ್ಥಳದ ಹಿತವಾದ ಗಾಳಿಯನ್ನು ಉಚಿತವಾಗಿ ಉಸಿರಾಡಬಹುದು.

ಒಳಾಂಗಣವು ಶ್ರೀ ಕೃಷ್ಣನ ಭಾವಚಿತ್ರಗಳು ಮತ್ತು ವಿಷ್ಣುವಿನ ಹಲವಾರು ಅವತಾರಗಳೊಂದಿಗೆ ಬಹಳ ಆಕರ್ಷಕವಾಗಿದೆ. ಇದು ಅಲಪ್ಪುಳದಿಂದ 14 ಕಿ.ಮೀ ದೂರದಲ್ಲಿರುವ ಅಂಬಲಪ್ಪುಳದಲ್ಲಿದೆ. ನೀವು 'ಮಿಜಾವು' ಬಗ್ಗೆ ಕೇಳಿದ್ದೀರಾ? ಇದು ಸಂಗೀತ ವಾದ್ಯವಾಗಿದ್ದು, ದೇವಾಲಯದ ಪ್ರವೇಶದ್ವಾರದಲ್ಲಿ ಸಿಹಿ ಸಂಗೀತವನ್ನು ನೀಡುತ್ತದೆ. ಇಲ್ಲಿನ ವರ್ಣರಂಜಿತ ಪುಟ್ಟ ಮೀನುಗಳಿಗೆ ಆಹಾರವನ್ನು ನೀಡಲು ನೀವು ಬಯಸಿದರೆ ಆಕರ್ಷಕ ಪುಟ್ಟ ಕೊಳವು ನಿಮ್ಮನ್ನು ಆಹ್ವಾನಿಸುತ್ತದೆ.

5. ಮನ್ನರಸಲ ದೇವಸ್ಥಾನ

5. ಮನ್ನರಸಲ ದೇವಸ್ಥಾನ

PC: Sivahari

ಇದು ದೇವಾಲಯವು ಹಾವಿನ ಸಮುದಾಯಕ್ಕೆ ಮೀಸಲಾಗಿದೆ. ಸರ್ಪ ದೇವರು ಅಥವಾ ನಾಗರಾಜನ ಮುಂದೆ ನೀವು ತಲೆ ಬಾಗುತ್ತೀರಿ. ಇತರ ಸರ್ಪ ದೇವರಿಗೆ ಸಂಬಂದಿಸಿದ ದೇವಾಲಯಗಳಂತೆ ಇದು ಕೂಡ ದಟ್ಟ ಕಾಡುಗಳಿಂದ ಸುತ್ತುವರಿದಿದೆ. ದೇವಾಲಯದ ಒಳಾಂಗಣದಲ್ಲಿ ನೀವು ಸಾಕಷ್ಟು ಸಂಖ್ಯೆಯ ಹಾವುಗಳ ವರ್ಣಚಿತ್ರಗಳನ್ನೂ ಕಾಣಬಹುದು.

ಸಂತಾನ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರು ಮಕ್ಕಳ ಬೇಡಿಕೆಗಾಗಿ ಪ್ರಾರ್ಥಿಸಲು ಇಲ್ಲಿಗೆ ಬರುತ್ತಾರೆ ಮತ್ತು ಅವರ ಆಸೆ ಈಡೇರಿದ ನಂತರ ಈ ಶಕ್ತಿಯುತ ನಾಗರಾಜರನ್ನು ಪೂಜಿಸಲು ಮತ್ತು ಕಾಣಿಕೆಯನ್ನು ನೀಡಲು ಬರುತ್ತಾರೆ. ಇದು ತೀರ್ಥಯಾತ್ರೆಯ ಕ್ಷೇತ್ರವೆಂದು ಹೆಸರುವಾಸಿಯಾಗಿದ್ದು, ಪರಶುರಾಮನ ಭಕ್ತಿಗೆ ಮೆಚ್ಚಿ ನಾಗರಾಜನು ಈ ಬಂಜರು ಭೂಮಿಯನ್ನು ಹಚ್ಚ ಹಸುರಿನಿಂದಲೂ ಮತ್ತು ಸಂಪತ್ಭರಿತವಾಗಿಯೂ ಪರಿವರ್ತಿಸಿದ್ದಾನೆ ಎಂಬ ನಂಬಿಕೆ ಇದೆ.

ಈ ಸ್ಥಳಕ್ಕೆ ನವೆಂಬರ್ ಮತ್ತು ಮಾರ್ಚ್ ತಿಂಗಳುಗಳ ನಡುವೆ ಭೇಟಿ ನೀಡಬೇಕು. ಇಲ್ಲಿನ ಹೌಸ್ ಬೋಟ್‌ಗಳು ಮತ್ತು ಸುಂದರವಾದ ವಾತಾವರಣ ಈ ಸ್ಥಳದ ಹೆಮ್ಮೆಯಾಗಿದ್ದು, ಇದು ಮಳೆಗಾಲದ ನಂತರ ಒಂದು ಅದ್ಬುತ ದೃಶ್ಯವಾಗಿ ಪರಿಣಮಿಸುತ್ತದೆ.

6. ಚೆಟ್ಟಿಕುಲಂಗರ ದೇವಿ ದೇವಸ್ಥಾನ

6. ಚೆಟ್ಟಿಕುಲಂಗರ ದೇವಿ ದೇವಸ್ಥಾನ

PC: Hellblazzer

ನೀವು ಶ್ರೀ ಭದರಕಾಳಿ ದೇವತೆಯ ಕಟ್ಟಾ ಅನುಯಾಯಿಗಳೇ? ಹಾಗಿದ್ದರೆ ಇದು ನಿಮಗೆ ಸೂಕ್ತವಾದ ದೇವಾಲಯವಾಗಿದೆ. ಈ ದೇವಿಗೆ ಮಹಾ ಸರಸ್ವತಿ, ಮಹಾ ಲಕ್ಷ್ಮಿ ಹಾಗೂ ಮಹಾ ಕಾಳಿ ಅಥವಾ ದುರ್ಗಾ ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಈ ದೇವಾಲಯವು ಸುಮಾರು 1200 ವರ್ಷಗಳಷ್ಟು ಹಳೆಯದು. ಮಂಗಳವಾರ ಮತ್ತು ಶುಕ್ರವಾರದಂದು ನಡೆಸಲಾಗುವ ವಿಶೇಷ ಪೂಜೆಯಲ್ಲಿ 1001 ದೀಪಗಳನ್ನು ಬೆಳಗಿಸುವ ಮೂಲಕ ಶ್ರೀ ಭದರಕಾಳಿ ದೇವಿಗೆ ಪ್ರತಿ ತಿಂಗಳ ಮೊದಲ ದಿನ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಈ ದೇವಾಲಯಕ್ಕೆ ಭೇಟಿ ನೀಡಿದರೆ ನಿಮ್ಮ ಆಶಯಗಳು ಈಡೇರುತ್ತವೆ ಎಂದು ನಂಬಲಾಗಿದೆ ಮತ್ತು ಇದು ಪ್ರವಾಸಿಗರಿಗೆ ಪ್ರಶಾಂತಯನ್ನು ನೀಡುತ್ತದೆ ಮತ್ತು ಇಲ್ಲಿ ನಡೆಯುವ ತೊಟ್ಟಂ ಪಟ್ಟು, ಸರ್ಪಂ ಪಟ್ಟು, ಪಾಯಸಂ, ಕಡುಂಪಯಸಂ, ತ್ರಿಮದುರಾ ನಿವೇದ್ಯಾ, ಕುಮ್ಕುಮ್ ಅಭಿಷೇಕ ಮತ್ತು ಪುಷ್ಪಾರ್ಚನ ಮುಂತಾದ ಹಲವಾರು ಹಲವು ಆಚರಣೆಗಳಿಗೆ ಸಾಕ್ಷಿಯಾಗಬಹುದು.

ಇಲ್ಲಿ ನಡೆಯುವ ಕೆಲವು ಹಬ್ಬಗಳ ಬಗ್ಗೆ ತಿಳಿಯೋಣ

ಕುಂಭ ಭರಣಿ: ಶಿವರಾತ್ರಿ ಈ ಹಬ್ಬದ ಸಿದ್ಧತೆಗಳ ಆರಂಭವನ್ನು ಸೂಚಿಸುತ್ತದೆ. ಇದು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಆಚರಿಸಲಾಗುತ್ತದೆ ಮತ್ತು ಇದು ಅತ್ಯಂತ ಮಹತ್ವದ ಹಬ್ಬವೆಂದು ಪರಿಗಣಿಸಲಾಗಿದೆ.

ಎಥಿರೆಲ್ಪು ಉಲ್ಸವಂ: ಸಂಜೆ ಸಮಯದಲ್ಲಿ ಪ್ರದರ್ಶಿಸುವ ಶಾಸ್ತ್ರೀಯ ಕಲೆಗಳ ರಾಗಗಳಿಗೆ ನೀವು ಕೈ ಚಪ್ಪಾಳೆ ತಟ್ಟಬಹುದು. ಇದನ್ನು 13 ದಿನಗಳವರೆಗೆ ಆಚರಿಸಲಾಗುತ್ತದೆ ಮತ್ತು ಇದರ ನಂತರ ಕುಂಭ ಭರಣಿ ಹಬ್ಬವು ನಡೆಯುತ್ತದೆ.

ಅಶ್ವತಿ ಉಲ್ಸವಂ: ಈ ಹಬ್ಬದ ಆಚರಣೆಯಿಂದ ಐದು ತಿಂಗಳ ಹಬ್ಬವು ಅಂತಿಮವಾಗಿ ಕೊನೆಗೊಳ್ಳುತ್ತದೆ. ದೇವಿಯು ಹೋಗಿ ತನ್ನ ತಾಯಿಯನ್ನು ಅಪ್ಪಿಕೊಳ್ಳಲು ದೇವಾಲಯವನ್ನು ತ್ಯಜಿಸುತ್ತಾಳೆಂಬ ನಂಬಿಕೆ ಇದೆ. ನಂತರ ಇದಕ್ಕೆ ಸಂಬಂಧಿತ ಆಚರಣೆಗಳನ್ನು ನಡೆಸಲಾಗುತ್ತದೆ.

ಇಲ್ಲಿಗೆ ಹೋಗುವುದು ಹೇಗೆ : ಆಲಪ್ಪುಳ ಮಾವೆಲ್ಲಿಕಾರದಲ್ಲಿರುವ ಚೆಟ್ಟಿಕುಲಂಗರ ದೇವಿ ದೇವಸ್ಥಾನವನ್ನು ತಲುಪಲು ನೀವು ಸ್ಥಳೀಯ ರಿಕ್ಷಾ, ಟ್ಯಾಕ್ಸಿ ಮತ್ತು ಬಸ್ಸುಗಳಲ್ಲಿ ತೆರಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X