Search
  • Follow NativePlanet
Share
» »ನೀವು ಕೆಲಸ ಬಿಟ್ಟ ಮೇಲೆ ಇಂತಹ ಪ್ರದೇಶಗಳಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳಿ

ನೀವು ಕೆಲಸ ಬಿಟ್ಟ ಮೇಲೆ ಇಂತಹ ಪ್ರದೇಶಗಳಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳಿ

ಭಾರತವು ಸುಂದರವಾದ ಮತ್ತು ಅದ್ಭುತವಾದ ಸ್ಥಳಗಳನ್ನೊಳಗೊಂಡಿದ್ದು ವರ್ಷದ ಯಾವುದೇ ಸಮಯದಲ್ಲೂ ಇಲ್ಲಿಗೆ ಭೇಟಿ ಕೊಡಬಹುದಾಗಿದೆ. ಕೆಲಸವನ್ನು ಬಿಟ್ಟು ನಿಮ್ಮ ಜೀವನದಲ್ಲಿ ಒಂದು ದೊಡ್ಡ ಪರಿವರ್ತನೆ ಯಾಗಿದ್ದರೆ ಮತ್ತು ನೀವು ಒಂದು ವಿಶ್ರಾಂತಿ ಬಯಸುತ್ತಿ

By Manjula Balaraj Tantry

ಭಾರತವು ಸುಂದರವಾದ ಮತ್ತು ಅದ್ಭುತವಾದ ಸ್ಥಳಗಳನ್ನೊಳಗೊಂಡಿದ್ದು ವರ್ಷದ ಯಾವುದೇ ಸಮಯದಲ್ಲೂ ಇಲ್ಲಿಗೆ ಭೇಟಿ ಕೊಡಬಹುದಾಗಿದೆ. ಕೆಲಸವನ್ನು ಬಿಟ್ಟು ನಿಮ್ಮ ಜೀವನದಲ್ಲಿ ಒಂದು ದೊಡ್ಡ ಪರಿವರ್ತನೆ ಯಾಗಿದ್ದರೆ ಮತ್ತು ನೀವು ಒಂದು ವಿಶ್ರಾಂತಿ ಬಯಸುತ್ತಿದ್ದಲ್ಲಿ ಈ ಲೇಖನವನ್ನು ಓದಿ . ನೀವು ವಿಶ್ರಾಂತಿ ಪಡೆಯಬಹುದಾದ ಹಾಗೂ ನಿಮಗೆ ಸೂಕ್ತವಾದ ಭಾರತದ ಅದ್ಬುತವಾದ ಸ್ಥಳಗಳ ಬಗ್ಗೆ ಈ ಲೇಖನವು ಮಾಹಿತಿ ನೀಡುತ್ತದೆ.

ಕೆಲಸವನ್ನು ಬಿಡುವುದು ಜೀವನದ ಒಂದು ಪ್ರಮುಖ ನಿರ್ಧಾರವಾಗಿದ್ದು ಅದರಲ್ಲೂ ನೀವು ಬಹಳ ವರ್ಷಗಳಿಂದ ಕೆಲಸಕ್ಕೆ ಹೋದವರಾಗಿದ್ದಲ್ಲಿ ಆ ಜೀವನಕ್ಕೆ ಹೊಂದಿಕೊಂಡಿರುವಿರಿ. ನಿಮಗೆ ಬೇಕೋ ಬೇಡವೋ ಸ್ವಲ್ಪ ದಿನಗಳಲ್ಲೆ ಆ ಜೀವನವನ್ನು ತುಂಬಾ ಸ್ಮರಿಸುವಿರಿ. ನೀವು ಕೆಲಸ ಮಾಡುವುದರಲ್ಲೇ ನಿಮ್ಮ ಜೀವನವನ್ನು ಕಳೆದಿದ್ದಲ್ಲಿ ಮತ್ತು ಅದಕ್ಕೆ ಒಗ್ಗಿಕೊಂಡವರಾಗಿದ್ದಲ್ಲಿ ಖಂಡಿತವಾಗಿಯು ನಿಮಗೆ ಒಂದು ವಿಶ್ರಾಂತಿಯ ಅಗತ್ಯವಿದೆ !

ಅದೃಷ್ಟವಶಾತ್ ಭಾರತವು ಒಂದು ಸುಂದರವಾದ ಮತ್ತು ಅದ್ಬುತಗಳನ್ನೊಳಗೊಂಡ ದೇಶವಾಗಿದ್ದು ಇದರ ನೈಸರ್ಗಿಕ ಸೌಂದರ್ಯತೆ ನಿಮಗೆ ಬೇಕಾಗುವ ವಿಶ್ರಾಂತಿಯನ್ನು ನೀಡುವುದು ಮಾತ್ರವಲ್ಲದೆ ನಿಮ್ಮನ್ನು ಪ್ರಕೃತಿಯ ಸನಿಹಕ್ಕೆ ಕೊಂಡೊಯ್ಯುತ್ತದೆ.

ಭಾರತದ ದೂರದ ಪ್ರದೇಶಗಳಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳಲು ಸಾಧ್ಯವಾಗುವಂತಹ ಅನೇಕ ಸ್ಥಳಗಳಿವೆ ಯಾವ ಸ್ಥಳಗಳಿಗೆ ಹೋಗುವುದಾಗಿ ಹೊರಡುವ ಮೊದಲು ಒಮ್ಮೆ ಯೋಚನೆ ಮಾಡಿ. ಇಲ್ಲಿ ನಿಮಗೆ ಸಹಾಯವಾಗುವಂತಹ ಪ್ರಮುಖವಾದ 6 ಸ್ಥಳಗಳ ಪಟ್ಟಿಯಿದೆ.

ಪಾಂಡಿಚೇರಿ ತಮಿಳು ನಾಡು

ಪಾಂಡಿಚೇರಿ ತಮಿಳು ನಾಡು

ಪಾಂಡಿಚೇರಿಯು ಒಂದು ಅರೋವಿಲ್ ನ ನೆಲೆಯಾಗಿದ್ದು ಇದೊಂದು ಪ್ರಾಯೋಗಿಕ ಪಟ್ಟಣವಾಗಿದೆ ಇದು ಅಂತರಾಷ್ಟ್ರೀಯ ಸಮುದಾಯವನ್ನು ಹೊಂದಿದೆ ಇದು ಶಾಂತಿ ಮತ್ತು ದೈವಿಕ ಪ್ರಜ್ಞೆಯ ಕೆಲಸಗಳನ್ನು ಮಾಡುತ್ತದೆ. ಜಗತ್ತಿನಾದ್ಯಂತದ ಜನರು ಇಲ್ಲಿ ತಮ್ಮನ್ನು ತಾವು ಕಂಡುಕೊಳ್ಳಲು ಮತ್ತು ಆಧ್ಯಾತ್ಮಿಕತೆಯನ್ನು ಗಳಿಸಿಕೊಳ್ಳಲು ಅರೋವಿಲ್ ಗೆ ಭೇಟಿ ಕೊಡುತ್ತಾರೆ. ಅರೊವಿಲ್ ಗೆ ಭೇಟಿಕೊಡಿ ಅಥವಾ ಇಲ್ಲಿಯ ಪ್ಯಾರಡೈಸ್ ಬೀಚ್ ನಂತಹ ಮನಮೋಹಕ ಬೀಚ್ ಗೆ ಭೇಟಿಕೊಡಿ. ಇಲ್ಲಿಯ ಕಡಲತೀರದಲ್ಲಿರುವ ಉತ್ತಮವಾದ ರೆಸ್ಟೋರೆಂಟ್ ಗಳಲ್ಲಿ ಒಂದು ಗ್ಲಾಸ್ ವೈನ್ ಅನ್ನು ಸವಿಯಿರಿ.


PC: Official Site


ತೋಶ್, ಹಿಮಾಚಲ ಪ್ರದೇಶ

ತೋಶ್, ಹಿಮಾಚಲ ಪ್ರದೇಶ

ಈ ಸುಂದರವಾದ ಹಳ್ಳಿಯು ಹಿಮಾಚಲ ಪ್ರದೇಶದ ಒಂದು ದೂರದ ಪ್ರದೇಶದಲ್ಲಿರುವುದಾಗಿದೆ ಇದು ಪಾರ್ವತಿ ಕಣಿವೆಯಲ್ಲಿರುವ ಕಸೋಲ್ ಗೆ ಸಮೀಪದಲ್ಲಿದೆ. ಇದು ಎತ್ತರವಾದ ಮತ್ತು ಬೆರಗುಗೊಳಿಸುವಂತಹ ಹಿಮದಿಂದ ಆವೃತ್ತವಾದ ಪರ್ವತಗಳಿಂದ ಆವೃತವಾಗಿದೆ. ತೋಶ್ ಪ್ರದೇಶದ ಪ್ರಕೃತಿ ತಾಯಿಯ ಸೌಂದರ್ಯತೆಯು ನಿಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತದೆ.

ಇಲ್ಲಿಯ ಸಸ್ಯ ಸಂಪತ್ತುಗಳ ಬಗ್ಗೆ ಹೇಳಬೇಕೆಂದರೆ ನೀಲಿ ಗಸಗಸೆ ಹುಲ್ಲುಗಾವಲುಗಳು, ಪ್ರಿಮುಲಾಗಳು, ಬಟರ್ ಕಪ್ ಗಳು ಇಡೀ ನಗರದ ತುಂಬಾ ಹರಡಿವೆ. ಇಲ್ಲಿಯ ಜನರ ಆತಿಥ್ಯವನ್ನು ಸ್ವೀಕರಿಸಿ ಹೇಳಬೇಕೆಂದರೆ ಹಿಮಾಚಲ ಪ್ರದೇಶವು ತನ್ನಲ್ಲಿಯ ಜನರು ಮತ್ತು ಅಲ್ಲಿಯ ನೈಸರ್ಗಿಕ ಸೌಂದರ್ಯತೆಗೆ ಹೆಸರುವಾಸಿಯಾಗಿದೆ.

PC: Alok Kumar

ಲಡಾಖ್ , ಜಮ್ಮು ಮತ್ತು ಕಾಶ್ಮೀರ

ಲಡಾಖ್ , ಜಮ್ಮು ಮತ್ತು ಕಾಶ್ಮೀರ

ಲಡಾಖ್ ನಲ್ಲಿ ಪರ್ವತ ಬೈಕಿಂಗ್, ಚಾರಣ, ಕ್ಯಾಂಪಿಂಗ್ ಮತ್ತು ಹೆಚ್ಚಿನ ಸಾಹಸ ಚಟುವಟಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮನ್ನು ನೀವು ಸಿದ್ದಮಾಡಿಕೊಳ್ಳಿ. ಲಡಾಖ್ ಮತ್ತು ಅದರ ಕಠಿಣ ಭೂಪ್ರದೇಶವು ಜೀವನಕ್ಕೆ ಹೊಸ ದೃಷ್ಟಿಕೋನವನ್ನು ನೀಡುವ ಶಕ್ತಿಯನ್ನು ಹೊಂದಿದೆ.

ಸುಂದರವಾದ ಪ್ಯಾಂಗೋಂಗ್ ಸರೋವರದಲ್ಲಿ ಕ್ಯಾಂಪ್, ಲಡಾಖ್ ತಲುಪಲು ಮಣಿ ನಿಂದ ರೋಹಟಂಗ್ ಪಾಸ್ ಮೂಲಕ ಬೈಕ್ ಸವಾರಿ, ಇವೆಲ್ಲದರ ಮೂಲಕ ಮತ್ತು ಜಮ್ಮು ಮತ್ತು ಕಾಶ್ಮೀರದ ಶೀತ ಮರುಭೂಮಿಯ ಪ್ರದೇಶದ ಅದ್ಭುತ ಸೌಂದರ್ಯವನ್ನು ಪ್ರಶಂಸಿಸಬಹುದು.

PC: suketdedhia

ಗೋಕರ್ಣ, ಕರ್ನಾಟಕ

ಗೋಕರ್ಣ, ಕರ್ನಾಟಕ

ಗೋಕರ್ಣವು ಕರ್ನಾಟಕದ ಕರಾವಳಿಯ ಒಂದು ಸುಂದರವಾದ ಪಟ್ಟಣವಾಗಿದ್ದು ಇದು ಇತ್ತೀಚಿನ ದಿನಗಳಲ್ಲಿ ವಿದೇಶೀ ಪ್ರವಾಸಿಗರಿಂದಲೂ ಹೆಚ್ಚು ಆಕರ್ಷಣೆಗೊಳಗಾದ ಕಾರಣದಿಂದಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದ ನಗರವೆನಿಸಿದೆ. ಇಲ್ಲಿಯ ಪ್ರಶಾಂತತೆ, ಸುಂದರವಾದ ಬೀಚ್ ಗಳು ಹಲವರನ್ನು ತನ್ನೆಡೆಗೆ ಸೆಳೆಯುತ್ತದೆ ಮತ್ತು ಈಗ ನಿಮಗೆ ಯಾವಾಗ ಬೇಕೆಂದರೆ ಆವಾಗ ಹೋಗಬಹುದಾದ ಒಂದು ಪ್ರವಾಸಿ ತಾಣವಾಗಿದೆ.

ಓಂ ಬೀಚ್, ಗೋಕರ್ಣ ಬೀಚ್, ಕುಡ್ಲೆ ಬೀಚ್ ಇತ್ಯಾದಿಗಳು ನೀವು ಗೋಕರ್ಣದಲ್ಲಿ ಭೇಟಿ ಕೊಡಲೇ ಬೇಕಾದವುಗಳಾಗಿವೆ. ಅಲ್ಲದೆ ಇಲ್ಲಿಯ ದೇವಾಲಯಗಳಿಂದಾಗಿ ಇಲ್ಲಿಯ ಭೇಟಿಯು ಒಂದು ಧಾರ್ಮಿಕ ಯಾತ್ರೆಯನ್ನೂ ಕೈಗೊಳ್ಳಬ

PC: Unknown

ಅಲೆಪ್ಪಿ, ಕೇರಳ

ಅಲೆಪ್ಪಿ, ಕೇರಳ

ಇದು ಬೆರಗುಗೊಳಿಸುವ ಹಿನ್ನೀರಿನ ತಾಣಗಳಿಗೆ ಪ್ರಸಿದ್ದಿಯಾಗಿದೆ. ಅಲೆಪ್ಪಿ, ಅದ್ಭುತವಾದ ಮತ್ತು ಅತ್ಯಂತ ಜನಪ್ರಿಯವಾದ ತಾಣವಾಗಿದೆ. ಸ್ವಚ್ಚವಾದ ಮರಳಿನಿಂದ ಕೂಡಿದ ಅಲೆಪ್ಪಿ ಬೀಚ್ ಸುಂದರವಾದ ಪಾಮ್ ಮರಗಳನ್ನೊಳಗೊಂಡಿದೆ. ಇದೊಂದು ಸುಂದರವಾದ ಮತ್ತು ಆಶ್ಚರ್ಯಕರವಾದ ಅನುಭವವನ್ನು ನೀಡುವ ತಾಣವಾಗಿದ್ದು ನಿಮ್ಮ ಸುದೀರ್ಘ ಅವಧಿಯ ಕೆಲಸದೊತ್ತಡದಿಂದ ನಿಮಗೆ ವಿಶ್ರಾಂತಿ ನೀಡುವಲ್ಲಿ ಸಹಕಾರಿಯಾಗುತ್ತದೆ.

ದೋಣಿಮನೆಗಳಲ್ಲಿ ಹಿನ್ನೀರುಗಳಲ್ಲಿ ತಿರುಗಾಡಿ ಮತ್ತು ಕೇರಳದ ಈ ಚಿತ್ರಸದೃಶ ಪಟ್ಟಣದಲ್ಲಿ ಪಕ್ಷಿ ವೀಕ್ಷಣೆಗಾಗಿ ಪಾಲ್ಗೊಳ್ಳಿ.

PC: Sarath Kuchi

ಬಿರ್ , ಹಿಮಾಚಲ ಪ್ರದೇಶ

ಬಿರ್ , ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದ ವಿಶಾಲವಾದ ರಾಜ್ಯದಲ್ಲಿ ಬಿರ್ ಒಂದು ಸಣ್ಣ ಪಟ್ಟಣವಾಗಿದ್ದು, ವಿಶ್ವದ ಅತ್ಯುತ್ತಮ ಪ್ಯಾರಾಗ್ಲೈಡಿಂಗ್ ತಾಣಗಳಲ್ಲಿ ಒಂದಾಗಿದೆ. ನಿಸ್ಸಂಶಯವಾಗಿ ಭಾರತದ ಅತ್ಯುತ್ತಮ, ಪ್ರದೇಶವಾದ ಬಿರ್ 8530 ಅಡಿಯ ಒಂದು ಭಯಂಕರ ಎತ್ತರದಲ್ಲಿ ಇದೆ.

ಬಿರ್ ಹಾರಾಡುವ ಸ್ಥಳವಾದರೆ ಬಿಲ್ಲಿಂಗ್ ಕೆಳಗೆ ಇಳಿಯುವ ಸ್ಥಳವಾಗಿದೆ. ಬಿರ್ ನಲ್ಲಿ ಪ್ಯಾರಾಗ್ಲೈಡಿಂಗ್ ಪ್ರಯತ್ನಿಸುವುದನ್ನು ಮರೆಯದಿರಿ ಮತ್ತು ನಯನ ಮನೋಹರವಾದ ವಿಸ್ಟಾಗಳನ್ನು, ಪಕ್ಷಿ ವೀಕ್ಷಣೆ ನೋಡಿ ಆನಂದಿಸಿ ಮತ್ತು ನಿಮ್ಮನ್ನು ನೀವು ಈ ಸುಂದರವಾದ ಬಿರ್ ನ ಪ್ರಕೃತಿಯಲ್ಲಿ ಕಂಡುಕೊಳ್ಳಿ.


PC: Dieter_G

ರಿಷಿಕೇಶ, ಉತ್ತರಾಖಂಡ

ರಿಷಿಕೇಶ, ಉತ್ತರಾಖಂಡ

ಉತ್ತರಾಖಂಡ್ ನಲ್ಲಿರುವ ದೇವಾಲಯಗಳ ಪಟ್ಟಣವಾದ ರಿಷಿಕೇಶವು ದಿ ಬೀಟಲ್ಸ್ ಮತ್ತು ಜಾನ್ ಲೆನ್ನನ್ ನಂತಹ ಕಲಾವಿದರು ಆಧ್ಯಾತ್ಮಿಕತೆಯನ್ನು ಪಡೆಯಲು ರಿಷಿಕೇಶಕ್ಕೆ ಬರುವುದನ್ನು ಪ್ರಾರಂಭಿಸಿದಾಗಿನಿಂದ ವಿಶ್ವಾದ್ಯಂತ ಗುರುತಿಸಲ್ಪಟ್ಟಿದೆ. ಈಗ ಕಾಣದಿದ್ದರೂ ಮುಂಚೆ ರಿಷಿಕೇಶದಲ್ಲಿ ಬಿಟಲ್ ನ ಆಶ್ರಮವೂ ಇತ್ತು.

ರಿಷಿಕೇಶಕ್ಕೆ ಭೇಟಿಯ ಸಂದರ್ಭದಲ್ಲಿ ನಿಮ್ಮನ್ನು ನೀವು ದೇವಾಲಯಗಳಿಗೆ ಭೇಟಿಕೊಡುವುದರ ಮೂಲಕ ಆಧ್ಯಾತ್ಮಿಕತೆಯ ಕಡೆಗೂ ಸಂಪರ್ಕಹೊಂದಬಹುದು ಅಥವಾ ಉತ್ತರಾಖಂಡದ ನೈಸರ್ಗಿಕ ಸೌಂದರ್ಯ ಸವಿಯುವಲ್ಲಿ ಒಬ್ಬರಾಗಿ.

PC: Unknown

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X