Search
  • Follow NativePlanet
Share
» »ಆಗ್ರಾದಲ್ಲಿರುವ ಈ ಕೆಂಪು ತಾಜ್‌ಮಹಲ್ ನೋಡಿದ್ದೀರಾ? ಯಾರಿದನ್ನು ಕಟ್ಟಿಸಿದ್ದು ?

ಆಗ್ರಾದಲ್ಲಿರುವ ಈ ಕೆಂಪು ತಾಜ್‌ಮಹಲ್ ನೋಡಿದ್ದೀರಾ? ಯಾರಿದನ್ನು ಕಟ್ಟಿಸಿದ್ದು ?

ಆಗ್ರಾದಲ್ಲಿರುವ ತಾಜ್‌ಮಹಲ್ ಯಾರಿಗೆ ತಾನೇ ಗೊತ್ತಿಲ್ಲ. ತಾಜ್ ಮಹಲ್ ಭಾರತದಲ್ಲಿ ಅತಿ ಹೆಚ್ಚು ಸಂದರ್ಶಿತ ಸ್ಮಾರಕವಾಗಿದೆ ಮತ್ತು ಪ್ರತಿವರ್ಷವೂ ಪ್ರವಾಸಿಗರು ಲಕ್ಷಾಂತರ ಮಂದಿ ಭೇಟಿ ನೀಡುತ್ತಿರುತ್ತಾರೆ. ಇದು ಪ್ರಪಂಚದ ಅದ್ಭುತಗಳಲ್ಲಿ ಒಂದಾಗಿದೆ.

ಆಗ್ರಾ

ಆಗ್ರಾ

PC: Yann Forget

ಆಗ್ರಾದಲ್ಲಿರುವ ತಾಜ್‌ಮಹಲ್ ಯಾರಿಗೆ ತಾನೇ ಗೊತ್ತಿಲ್ಲ. ತಾಜ್ ಮಹಲ್ ಭಾರತದಲ್ಲಿ ಅತಿ ಹೆಚ್ಚು ಸಂದರ್ಶಿತ ಸ್ಮಾರಕವಾಗಿದೆ ಮತ್ತು ಪ್ರತಿವರ್ಷವೂ ಪ್ರವಾಸಿಗರು ಲಕ್ಷಾಂತರ ಮಂದಿ ಭೇಟಿ ನೀಡುತ್ತಿರುತ್ತಾರೆ. ಇದು ಪ್ರಪಂಚದ ಅದ್ಭುತಗಳಲ್ಲಿ ಒಂದಾಗಿದೆ.

ಇನ್ನೊಂದು ತಾಜ್‌ಮಹಲ್

ಇನ್ನೊಂದು ತಾಜ್‌ಮಹಲ್

PC:DeepanjanGhosh

ಈಗ ನಾವು ತಾಜ್ ಮಹಲ್ ಬಗ್ಗೆ ಯಾಕೆ ಹೇಳ್ತಿದ್ದೇವೆ ಎಂದರೆ ನೀವು ತಾಜ್‌ಮಹಲ್‌ನ್ನು ಸಾಮಾನ್ಯವಾಗಿ ನೋಡಿರುತ್ತೀರಾ, ಆದ್ರೆ ಆಗ್ರಾದಲ್ಲಿ ಮತ್ತೊಂದು ತಾಜ್ ಮಹಲ್ ಇದೆ ಎನ್ನುವುದು ನಿಮಗೆ ಗೊತ್ತಾ?

ರೆಡ್ ತಾಜ್‌ಮಹಲ್

ರೆಡ್ ತಾಜ್‌ಮಹಲ್

PC: Shriom Gautam

ಆಗ್ರಾದಲ್ಲಿರುವ ಇನ್ನೊಂದು ತಾಜ್‌ಮಹಲ್ ಜಾನ್ ಹೆಸ್ಸಿಂಗ್ ಗೋರಿ. ಇದನ್ನು ರೆಡ್ ತಾಜ್‌ಮಹಲ್ ಎಂದು ಕರೆಯಲಾಗುತ್ತದೆ. ೧೯ ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಯಿತು. ಇದು ತಾಜ್‌ಮಹಲ್‌ನ್ನೇ ಹೋಲುತ್ತದೆ.

ಜಾನ್ ಹೆಸ್ಸಿಂಗ್ ಯಾರು?

ಜಾನ್ ಹೆಸ್ಸಿಂಗ್ ಯಾರು?

ಜಾನ್ ಹೆಸ್ಸಿಂಗ್ ಸೈನ್ಯದ ಅಧಿಕಾರಿಯಾಗಿದ್ದು, ಹೈದರಾಬಾದಿನ ನಿಜಾಮರ ವಿರುದ್ಧ ಮರಾಠ ಆಡಳಿತಗಾರರಿಗಾಗಿ ಕೆಲಸ ಮಾಡಿದ್ದರು.1803 ರಲ್ಲಿ ಅವರ ಮರಣಾನಂತರ, ಅವನ ಹೆಂಡತಿ ಅಲೈಸ್ ಈ ಅದ್ಭುತವಾದ ಸಮಾಧಿಯನ್ನು ನಿರ್ಮಿಸಿದಳು.

ಪದ್ರೆಟೋಲಾ

ಪದ್ರೆಟೋಲಾ

PC: DeepanjanGhosh

ಈ ಕೆಂಪು ತಾಜ್ ಮಹಲ್ ಪದ್ರೆಟೋಲಾ ಎಂಬ ಸ್ಮಶಾನದಲ್ಲಿದೆ. ಎತ್ತರದ ವೇದಿಕೆಯಲ್ಲಿ ಕೆಂಪು ಮರಳುಗಲ್ಲಿನಿಂದ ಕಟ್ಟಲ್ಪಟ್ಟಿದೆ, ಜಾನ್ ಹೆಸ್ಸಿಂಗ್ ಸಮಾಧಿ ಭಾರತೀಯ ಇತಿಹಾಸದ ಹಲವು ಅಧ್ಯಾಯಗಳನ್ನು ತಿಳಿಸುತ್ತದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಆಗ್ರಾವು ಹವಾಮಾನದ ತೀವ್ರ ಪ್ರವೃತ್ತಿಯನ್ನು ಅನುಭವಿಸುತ್ತದೆ, ಹೀಗಾಗಿ ಬೇಸಿಗೆ ಕಾಲದಲ್ಲಿ ಅದರ ಬಿಸಿ ವಾತಾವರಣದ ಕಾರಣದಿಂದಾಗಿ ಇದು ಆದ್ಯತೆಯ ತಾಣವಲ್ಲ. ಹವಾಮಾನವು ತಂಪಾಗಿರುತ್ತದೆ ಮತ್ತು ಆಹ್ಲಾದಕರವಾಗಿರುತ್ತದೆ ಅಕ್ಟೋಬರ್ ನಿಂದ ಫೆಬ್ರವರಿ ಕೊನೆಯವರೆಗೆ ಉತ್ತಮ ಸಮಯ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ವಿಮಾನ: ವಿಮಾನದ ಮೂಲಕ ನೀವು ಆಗ್ರಾ ಏರ್‌ಪೋರ್ಟ್ ತಲುಪಿ ನಂತರ ಅಲ್ಲಿಂದ ಟ್ಯಾಕ್ಸಿ ಮೂಲಕ ಕೆಂಪು ತಾಜ್‌ಮಹಲ್‌ನ್ನು ತಲುಪಬಹುದು.
ರೈಲು: ರೈಲಿನ ಮೂಲಕ ಹೋಗುವುದಾದರೆ ಆಗ್ರಾ ರೈಲು ನಿಲ್ದಾಣದ ಮೂಲಕ ಸುಲಭವಾಗಿ ತಲುಪಬಹುದು.
ರಸ್ತೆ: ಆಗ್ರಾ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ದೇಶದ ದೊಡ್ಡ ದೊಡ್ಡ ನಗರಗಳಿಂದ ಅಲ್ಲಿಗೆ ಬಸ್ ವ್ಯವಸ್ಥೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X