Search
  • Follow NativePlanet
Share
» »ಅದ್ಭುತವಾದ ರಾವಣನ ದೇವಾಲಯಗಳು

ಅದ್ಭುತವಾದ ರಾವಣನ ದೇವಾಲಯಗಳು

ನಮ್ಮ ಭಾರತ ದೇಶದಲ್ಲಿ ಕೇವಲ ದೇವರಿಗೆ ಅಲ್ಲ ಎಲ್ಲಾ ವಸ್ತುಗಳನ್ನು, ಅಸುರರನ್ನು ದೈವ ಸಮಾನವೆಂದೂ ಆರಾಧಿಸುತ್ತೇವೆ. ಅವುಗಳಲ್ಲಿ ರಾವಣನ ದೇವಾಲಯವು ಒಂದು. ರಾವಣನು ಒಂದು ಒಳ್ಳೆಯ ವ್ಯಕ್ತಿತ್ವ ಹೊಂದಿದ್ದ ರಾಜನೇ ಆಗಿದ್ದ. ಆತನನ್ನು ಕೂಡ ಆರಾಧಿಸುವವ

ನಮ್ಮ ಭಾರತ ದೇಶದಲ್ಲಿ ಕೇವಲ ದೇವರಿಗೆ ಅಲ್ಲ ಎಲ್ಲಾ ವಸ್ತುಗಳನ್ನು, ಅಸುರರನ್ನು ದೈವ ಸಮಾನವೆಂದೂ ಆರಾಧಿಸುತ್ತೇವೆ. ಅವುಗಳಲ್ಲಿ ರಾವಣನ ದೇವಾಲಯವು ಒಂದು. ರಾವಣನು ಒಂದು ಒಳ್ಳೆಯ ವ್ಯಕ್ತಿತ್ವ ಹೊಂದಿದ್ದ ರಾಜನೇ ಆಗಿದ್ದ. ಆತನನ್ನು ಕೂಡ ಆರಾಧಿಸುವವರು ಅನೇಕ ಮಂದಿ ಭಕ್ತರು ಇದ್ದಾರೆ. ರಾವಣನ ಒಳ್ಳೆಯ ಗುಣಗಳ ಬಗ್ಗೆ ಪುರಾಣಗಳಲ್ಲಿ ಅನೇಕ ಉಲ್ಲೇಖಗಳಿವೆ. ಲಂಕಾಧೀಶನಾದ ರಾವಣನಿಗೆ ಮುಡಿಪಾದ ಕೆಲವು ಅತಿ ಅಪರೂಪದ ದೇವಾಲಯಗಳು ಇವೆ.

ರಾವಣಸುರನು ಮಹಾ ಜ್ಞಾನಿ, ಅಪ್ರತಿಮ ಶಿವಭಕ್ತ, ತ್ರಿಕಾಲ ಸಂಧ್ಯಾವಂದನೆ ಮಾಡುವವನು ಹೀಗೆ ಅತನ್ನು ಬಣ್ಣಿಸಲಾಗುತ್ತದೆ. ನಿಮಗೆಲ್ಲಾ ಗೊತ್ತಿರುವ ವಿಚಾರದಂತೆ ರಾವಣನು ಒಬ್ಬ ಮಹಾನ್ ತಪಸ್ವಿ. ಅತ್ಯಂತ ಕಠಿಣ ತಪಸ್ಸಿನಿಂದ ಶಿವನ ಆತ್ಮಲಿಂಗ ಪಡೆದವನು. ಇಂತಹ ವಿಚಾರಗಳಲ್ಲಿ ರಾವಣ ಅಸುರನಾದರೂ ಯಾವ ಶುರರಿಗೂ ಕಡಿಮೆಯಲ್ಲ. ಆತನ ಒಳ್ಳೇಯ ಸ್ವಭಾವಕ್ಕೆ ಗೌರವ ಸೂಚಕವಾಗಿ ಈ ದೇವಾಲಯಗಳಿವೆ.

ಅದ್ಭುತವಾದ ರಾವಣನ ದೇವಾಲಯಗಳು

ಅದ್ಭುತವಾದ ರಾವಣನ ದೇವಾಲಯಗಳು

ಉತ್ತರ ಪ್ರದೇಶದ ಗ್ರೇಟರ್ ನೋಯಿಡಾದಲ್ಲಿರುವ ಬಿಸ್ರಾಖ್ ಎಂಬ ಗ್ರಾಮದಲ್ಲಿ ರಾವಣನಿಗೆ ಮುಡಿಪಾದ ಮಂದಿರವಿದೆ. ನಿಮಗೆ ಗೊತ್ತ? ಒಂದು ಸ್ಥಳ ಪುರಾಣದ ಪ್ರಕಾರ ರಾವಣನ ಜನ್ಮ ಸ್ಥಳ ಎಂದು ನಂಬಲಾಗಿದೆ. ಇಲ್ಲಿ ಸುಮಾರು 42 ಅಡಿ ಉದ್ದದ ಶಿವಲಿಂಗ ಹಾಗು 5.5 ಅಡಿ ಎತ್ತರದ ರಾವಣನ ವಿಗ್ರಹ ಹೊಂದಿರುವ ದೇವಾಲಯವನ್ನು ಇಲ್ಲಿ ಕಾಣಬಹುದಾಗಿದೆ.

Dhammika Heenpella

ಅದ್ಭುತವಾದ ರಾವಣನ ದೇವಾಲಯಗಳು

ಅದ್ಭುತವಾದ ರಾವಣನ ದೇವಾಲಯಗಳು

ರಾವಣನ ಮತ್ತೊಂದು ದೇವಾಲಯವೆಂದರೆ ಅದು ಆಂಧ್ರ ಪ್ರದೇಶದಲ್ಲಿನ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಕರಾವಳಿ ಪಟ್ಟಣದ ಕಾಕಿನಾಡದಲ್ಲಿ ರಾವಣನ ದೇವಾಲಯವಿದೆ. ಈ ದೇವಾಲಯದ ಪ್ರಾಂಗಣದಲ್ಲಿ ರಾವಣನು 10 ತಲೆಗಳನ್ನು ಹೊಂದಿದೆ. ಇದು ಎಲ್ಲರನ್ನು ಆಕರ್ಷಿಸುತ್ತದೆ. ಇಲ್ಲಿ ಮುಖ್ಯವಾಗಿ ಶಿವ ಹಾಗು ರಾವಣನನ್ನು ಪೂಜಿಸಲಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಗ್ರಾಮದ ಬೆಸ್ತರು ರಾವಣನ ಪರಮ ಭಕ್ತರಾಗಿದ್ದಾರೆ.


Ravi jrf

ಅದ್ಭುತವಾದ ರಾವಣನ ದೇವಾಲಯಗಳು

ಅದ್ಭುತವಾದ ರಾವಣನ ದೇವಾಲಯಗಳು

ಉತ್ತರ ಪ್ರದೇಶದ ಕಾನಪುರದಲ್ಲಿ ರಾವಣನ ದೇವಾಲಯವಿದೆ ಅದನ್ನು ದಶಾನನ ರಾವಣ ದೇವಾಲಯ ಎಂದೇ ಕರೆಯುತ್ತಾರೆ. ಇದು ನಗರದ ಶಿವಾಲಾ ಪ್ರದೇಶದಲ್ಲಿರುವ ಶಿವನ ದೇವಾಲಯದ ಪಕ್ಕದಲ್ಲಿಯೇ ಈ ರಾವಣನಿಗೆ ಮುಡಿಪಾದ ದೇವಾಲಯವಿದ್ದು, ವರ್ಷಕ್ಕೊಮ್ಮೆ ದಸರಾ ಸಂದರ್ಭದಲ್ಲಿ ಮಾತ್ರ ರಾವಣನ ದೇವಾಲಯವನ್ನು ತೆರೆಯಲಾಗುತ್ತದೆ. ಸಕಲ ವೇದ ಶಾಸ್ತ್ರಗಳಲ್ಲಿ ಪಾರಂಗತನಾಗಿದ್ದ ರಾವಣನಿಗೆ ಗೌರರ್ವಾಥಕ್ಕೆ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

Kesavan Muthuvel

ಅದ್ಭುತವಾದ ರಾವಣನ ದೇವಾಲಯಗಳು

ಅದ್ಭುತವಾದ ರಾವಣನ ದೇವಾಲಯಗಳು

ಮಧ್ಯ ಪ್ರದೇಶದ ವಿದೀಶಾ ಜಿಲ್ಲೆಯ ಒಂದು ಗ್ರಾಮದಲ್ಲಿ ರಾವಣನಿಗೆ ಮುಡಿಪಾದ ದೇವಾಲಯವಿದೆ. ಇಲ್ಲಿ 10 ಅಡಿಗಳಷ್ಟು ಎತ್ತರದ ರಾವಣನ ವಿಗ್ರಹವನ್ನು ಇಲ್ಲಿ ಕಾಣಬಹುದು. ವಿಚಿತ್ರ ಏನೆಂದರೆ ಇಲ್ಲಿ ರಾವಣನು ಮಲಗಿರುವ ಭಂಗಿಯಲ್ಲಿರುವುದನ್ನು ಕಾಣಬಹುದು. ಗ್ರಾಮದ ಜನರು ಶ್ರದ್ಧೆ-ಭಕ್ತಿಗಳಿಂದ "ರಾವಣ ಬಾಬಾ ನಮಃ" ಎಂದು ಆತನನ್ನು ಪೂಜಿಸುತ್ತಾರೆ.

Redtigerxyz

ಅದ್ಭುತವಾದ ರಾವಣನ ದೇವಾಲಯಗಳು

ಅದ್ಭುತವಾದ ರಾವಣನ ದೇವಾಲಯಗಳು

ಹಿಮಾಲಯ ಪ್ರದೇಶದ ಕಾಂಗ್ರಾ ಜಿಲ್ಲೆಯ ಪಾಲಂಪುರದಿಂದ ಕೇವಲ 16 ಕಿ.ಮೀ ದೂರದಲ್ಲಿರುವ ಬೈಜನಾಥ ದೇವಾಲಯವು ರಾವಣನ ಕುರಿತು ವಿಶಿಷ್ಟವಾದ ಹಿನ್ನೆಲೆಯನ್ನು ಹೊಂದಿದೆ. ಕಠಿಣ ತಪಸ್ಸು ಮಾಡಿ ಶಿವನ ಆತ್ಮಲಿಂಗವನ್ನು ಪಡೆದು ಮರುಳುವಾಗ ದನಗಾಹಿ ಯುವಕನಿಗೆ ಪ್ರಕೃತಿಯ ಕರೆಗೆ ಓಗೊಟ್ಟು ನೀಡಿದ. ಆ ಯುವಕ ಭಾರ ತಾಳಲಾರದೆ ಆ ಆತ್ಮಲಿಂಗವನ್ನು ಅಲ್ಲಿಯೇ ಇಟ್ಟ. ಇದೇ ಆತ್ಮಲಿಂಗವು ಇಂದು ಭೈಜನಾಥ ದೇವಾಲಯದಲ್ಲಿರುವ ಶಿವಲಿಂಗ ಎಂದು ನಂಬಲಾಗಿದೆ.

Rakeshkdogra

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X