Search
  • Follow NativePlanet
Share
» »ಭಾರತದ ಅತ್ಯುತ್ತಮ 10 ಮಸೀದಿಗಳು

ಭಾರತದ ಅತ್ಯುತ್ತಮ 10 ಮಸೀದಿಗಳು

By Vijay

ರಮ್ಜಾನ್ ಎನ್ನುವುದು ಮುಸ್ಲಿಮರ ಪಾಲಿಗೆ ಒಂದು ಪವಿತ್ರ ಆಚರಣೆಯಾಗಿದೆ. ಇದು ಮೂಲತಃ ಇಸ್ಲಾಮಿಕ್ ಕ್ಯಾಲೆಂಡರಿನ ಪ್ರಕಾರ ಒಂಭತ್ತನೆ ತಿಂಗಳಿನಲ್ಲಿ ಚಂದ್ರ ಕಾಣುವ ದಿನದ ಹಿಂದಿನ ಒಂದು ತಿಂಗಳಿನ ಕಾಲ ಸತತವಾಗಿ ದಿನದ ಸಮಯ ಕಠಿಣ ಉಪವಾಸ ಮಾಡುತ್ತ ಆಚರಿಸಲಾಗುತ್ತದೆ.

ಉಪವಾಸದ ಸಮಯವನ್ನು ಸಾಮಾನ್ಯವಾಗಿ ರೋಜಾಗಳೆಂದು ಕರೆಯುತ್ತಾರೆ ಹಾಗೂ ದಿನದಲ್ಲಿ ಸೂರ್ಯೋದಯದ ನಂತರದಿಂದ ಹಿಡಿದು ಸೂರ್ಯಾಸ್ತವಾಗುವವರೆಗೆ ಒಂದು ಹನಿ ನೀರನ್ನೂ ಸಹ ಸೇವಿಸದೆ ಉಪವಾಸ ಮಾಡಲಾಗುತ್ತದೆ. ನಂತರ ಚಂದಿರ ಕಾಣುವ ದಿನದಂದು ಇದನ್ನು ಅಂತ್ಯಗೊಳಿಸಿ ಮುಸ್ಲಿಮರು ತಮ್ಮ ಬಂಧುಗಳೊಂದಿಗೆ ಸೇರಿ ಭ್ರಾತೃತ್ವ ಮೆರೆಯುತ್ತಾರೆ. ಒಬ್ಬರಿಗೊಬ್ಬರು "ಮುಬಾರಕ್" ಶುಭವಾಗಲೆಂದು ಹಾರೈಸುತ್ತಾರೆ.

ರಮ್ಜಾನ್ ಕೊನೆಯ ದಿನದಂದು ಎಲ್ಲ ಮಸೀದಿಗಳು ತುಂಬಿ ತುಳುಕುತ್ತವೆ. ಎಲ್ಲ ಮುಸ್ಲಿಮ್ ಬಾಂಧವರು ದೇವರಿಗೆ ಪ್ರಾರ್ಥನೆ ಸಲ್ಲಿಸಲು ಸಜ್ಜಾಗಿರುತ್ತಾನೆ. ಹಾಗಾದರೆ ಭಾರತದಲ್ಲಿ ಕಂಡುಬರುವ ವಿಶಾಲ ಹಾಗೂ ಅದ್ಭುತವಾದ ಹತ್ತು ಮಸೀದಿಗಳು ಯಾವುವೆಂಬುದರ ಕುರಿತು ಈ ಲೇಖನದ ಮುಲಕ ತಿಳಿಯಿರಿ.

ಭಾರತದ ಹತ್ತು ಮಸೀದಿಗಳು:

ಭಾರತದ ಹತ್ತು ಮಸೀದಿಗಳು:

ಜಾಮಾ ಮಸೀದಿ, ನವದೆಹಲಿ : ಭಾರತದಲ್ಲಿ ಅತಿ ದೊಡ್ಡದಾದ ಮಸೀದಿ ಇದಾಗಿದೆ. ಏಕ ಕಾಲದಲ್ಲಿ 25000 ಗಳಷ್ಟು ಸಂಖ್ಯೆಯಲ್ಲಿ ಇಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಬಹುದು. ಮುಘಲ್ ಇತಿಹಾಸ ಹಾಗೂ ಅದ್ಭುತ ವಾಸ್ತುಕಲೆಯಿಂದಾಗಿಯೂ ಇದು ಗಮನ ಸೆಳೆಯುತ್ತದೆ.

ಚಿತ್ರಕೃಪೆ: Muhammad Mahdi Karim

ಭಾರತದ ಹತ್ತು ಮಸೀದಿಗಳು:

ಭಾರತದ ಹತ್ತು ಮಸೀದಿಗಳು:

ದರ್ಗಾ ಶರೀಫ್, ಅಜ್ಮೇರ್ : ರಾಜಸ್ಥಾನದಲ್ಲೆ ಅತಿ ಹೆಸರುವಾಸಿಯಾದ ಖ್ವಾಜಾ ಮೋಯಿನ್ - ಉದ್ - ದಿನ್ - ಚಿಶ್ತಿರವರ ದರ್ಗಾ ಶರೀಫ್ ಗೆ ಪ್ರತಿನಿತ್ಯ ಯಾವ ಭೇದ ಭಾವಗಳಿಲ್ಲದ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ ಹಾಗೂ ಚಾದರ್ ಗಳನ್ನು ಅರ್ಪಿಸುತ್ತಾರೆ. ರಾಜಸ್ಥಾನದ ಅಜ್ಮೇರ್ ನಗರದಲ್ಲಿ ಈ ಕ್ಷೇತ್ರವಿದೆ.

ಚಿತ್ರಕೃಪೆ: Shaane Khan

ಭಾರತದ ಹತ್ತು ಮಸೀದಿಗಳು:

ಭಾರತದ ಹತ್ತು ಮಸೀದಿಗಳು:

ಬಾರಾ ಇಮಾಂಬರಾ, ಲಖನೌ : ಉತ್ತರ ಪ್ರದೇಶ ರಾಜ್ಯದಲ್ಲಿರುವ ಲಖನೌ ಒಂದು ದೊಡ್ಡ ಪಟ್ಟಣ ಮುಘಲ್ ಸಂಸ್ಕೃತಿಯನ್ನು ಬಲು ಹತ್ತಿರದಿಂದ ಕಾಣಬೇಕೆಂದರೆ ಲಖನೌಗೊಮ್ಮೆ ಭೇಟಿ ನೀಡಲೇಬೇಕು. ಸಾಕಷ್ಟು ಅತಿಹಾಸಿಕ ಆಕರ್ಷಣೆಗಳಿರುವ ಲಖನೌನಲ್ಲಿರುವ ಬಾರಾ ಇಮಾಂಬರಾ ಮಸೀದಿಯು ದೇಶದಲ್ಲೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Varun Shiv Kapur

ಭಾರತದ ಹತ್ತು ಮಸೀದಿಗಳು:

ಭಾರತದ ಹತ್ತು ಮಸೀದಿಗಳು:

ತಾಜ್ ಉಲ್ ಮಸ್ಜೀದ್, ಭೋಪಾಳ : ಮಧ್ಯ ಪ್ರದೇಶದ ರಾಜಧಾನಿ ನಗರ ಭೋಪಾಳಿನಲ್ಲಿರುವ ಈ ಮಸೀದಿಯು ಜಗತ್ತಿನ ಅತಿ ದೊಡ್ಡ ಮಸೀದಿಗಳ ಪೈಕಿ ಒಂದಾಗಿದೆ. ತನ್ನ ಸುಂದರವಾದ ವಾಸ್ತು ಶಿಲ್ಪ, ಮನಸೆಳೆವ ವಿನ್ಯಾಸ ಹಾಗೂ ಆಕರ್ಷಕ ಗುಮ್ಮಟಗಳಿಂದ ಭೇಟಿ ನೀಡಲೇಬೇಕಾದ ಆಕರ್ಷಣೆಯಾಗಿದೆ.

ಚಿತ್ರಕೃಪೆ: Abhishek727

ಭಾರತದ ಹತ್ತು ಮಸೀದಿಗಳು:

ಭಾರತದ ಹತ್ತು ಮಸೀದಿಗಳು:

ಹಜ್ರತ್ಬಲ್, ಶ್ರೀನಗರ : ಭಾರತದ ಸುಂದರ ಪ್ರವಾಸಿ ಸ್ಥಳಗಳಲ್ಲೊಂದಾದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶ್ರೀನಗರದಲ್ಲಿದೆ ಈ ಸುಂದರ ಮಸೀದಿ. ಇದರ ಹಿರಿಮೆ ಎಂದರೆ ಇಲ್ಲಿ ಪ್ರವಾದಿ ಮೊಹಮ್ಮದರ ಒಂದು ಎಳೆ ಕೂದಲಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Hardikmodi

ಭಾರತದ ಹತ್ತು ಮಸೀದಿಗಳು:

ಭಾರತದ ಹತ್ತು ಮಸೀದಿಗಳು:

ಜಾಮಾ ಮಸ್ಜೀದ್, ಫತೇಪುರ್ ಸಿಕ್ರಿ : ಉತ್ತರ ಪ್ರದೇಶದ ಆಗ್ರಾ ನಗರದ ಬಳಿ ಇರುವ ಫತೇಪುರ್ ಸಿಕ್ರಿ ಒಂದು ಐತಿಹಾಸಿಕ ಪ್ರವಾಸಿ ಸ್ಥಳ. ಇಲ್ಲಿರುವ ಜಾಮಾ ಮಸ್ಜೀದ್ ಅಥವಾ ಮಸೀದಿಯು ನೋಡಲೇಬೇಕಾದ ವಾಸ್ತುಶೈಲಿ ಹೊಂದಿರುವ ಅದ್ಭುತ ರಚನೆಯಾಗಿದೆ.

ಚಿತ್ರಕೃಪೆ: Diego Delso

ಭಾರತದ ಹತ್ತು ಮಸೀದಿಗಳು:

ಭಾರತದ ಹತ್ತು ಮಸೀದಿಗಳು:

ಜಮಾಲಿ ಕಮಾಲಿ, ದೆಹಲಿ, ದೆಹಲಿಯ ಮೆಹ್ರೌಲಿ ಎಂಬಲ್ಲಿರುವ ಈ ಮಸೀದಿಯು ಮುಘಲ್ ವಾಸ್ತುಶೈಲಿಯ ಹೂರಣ ಎನ್ನಲಾಗುತ್ತದೆ. ವಾಸ್ತು ಶಸ್ತ್ರಜ್ಞರು ಸೇರಿದಂತೆ ಇತಿಹಾಸ ಪ್ರೀಯರು ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Nvvchar

ಭಾರತದ ಹತ್ತು ಮಸೀದಿಗಳು:

ಭಾರತದ ಹತ್ತು ಮಸೀದಿಗಳು:

ಆಧಿ ದಿನ್ ಕಾ ಜೋಪ್ರಾ : ರಾಜಸ್ಥಾನದ ಅಜ್ಮೇರ್ ನಲ್ಲಿ ಕಾಣಬಹುದಾದ ಮತ್ತೊಂದು ಐತಿಹಾಸಿಕ ಸ್ಮಾರಕವಿದು. ಒಂದೊಮ್ಮೆ ಸಂಸ್ಕೃತ ಶಿಕ್ಷಣ ಸಂಸ್ಥೆಯಾಗಿದ್ದ ಇದನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ. ಇದರ ಇತಿಹಾಸವು ಹನ್ನೆರಡನೆಯ ಶತಮಾನಕ್ಕೆ ಕರೆದೊಯ್ಯುತ್ತದೆ.

ಚಿತ್ರಕೃಪೆ: Billyakhtar

ಭಾರತದ ಹತ್ತು ಮಸೀದಿಗಳು:

ಭಾರತದ ಹತ್ತು ಮಸೀದಿಗಳು:

ಮೆಕ್ಕಾ ಮಸ್ಜೀದ್, ಹೈದರಾಬಾದ್ : ತೆಲಂಗಾಣ ರಾಜಧಾನಿ ನಗರ ಹೈದರಾಬಾದ್ ನಗರದಲ್ಲಿದೆ ಈ ಭವ್ಯ ಮಸೀದಿ. ಕುತುಬ್ ಶಾಹಿಯ ಆಡಳಿತ ಸಮಯದಲ್ಲಿ ನಿರ್ಮಿಸಲಾಗಿರುವ ಈ ಮಸೀದಿಗೆ ಬಳಸಲಾದ ಇಟ್ಟಿಗೆಗಳ ಮಣ್ಣನ್ನು ಸೌದಿ ಅರೇಬಿಯಾದ ಮೆಕ್ಕಾದಿಂದಲೆ ತಂದು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

ಚಿತ್ರಕೃಪೆ: Sandeep shrivastava102

ಭಾರತದ ಹತ್ತು ಮಸೀದಿಗಳು:

ಭಾರತದ ಹತ್ತು ಮಸೀದಿಗಳು:

ನಗೀನಾ ಮಸ್ಜೀದ್, ಆಗ್ರಾ : ಶಹಜಹಾನ್ ನಿಂದ ಹದಿನೇಳನೆಯ ಶತಮಾನದಲ್ಲಿ ನಿರ್ಮಿಸಲಾದ ಈ ಮಸೀದಿಯು ಸರಳವಾದ ವಾಸ್ತುಶೈಲಿಯನ್ನು ಹೊಂದಿದ್ದರೂ ಅದರಲ್ಲಿ ಬಳಸಲಾದ ಶುಭ್ರ ಶ್ವೇತ ವರ್ಣದ ಅಮೃತ ಶಿಲೆಗಳಿಂದ ಇದು ಎದ್ದು ಕಾಣುತ್ತದೆ.

ಚಿತ್ರಕೃಪೆ: China Crisis

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X