Search
  • Follow NativePlanet
Share
» »ಇಲ್ಲಿ ಪ್ರತಿಯೊಬ್ಬರು ಮೈ ಮೇಲೆ ರಾಮನಾಮ ಹಚ್ಚೆ ಹಾಕಿಸಿಕೊಳ್ಳಲೇ ಬೇಕು... ಏನಿದರ ಹಿಂದಿನ ಗುಟ್ಟು?

ಇಲ್ಲಿ ಪ್ರತಿಯೊಬ್ಬರು ಮೈ ಮೇಲೆ ರಾಮನಾಮ ಹಚ್ಚೆ ಹಾಕಿಸಿಕೊಳ್ಳಲೇ ಬೇಕು... ಏನಿದರ ಹಿಂದಿನ ಗುಟ್ಟು?

By Rajatha

ರಾಮನ ನಿಜವಾದ ಭಕ್ತರು

ಭಾರತ ದೇಶದಲ್ಲಿ ಹಿಂದೂ ಧರ್ಮದ ಜನರು ದೇವರ ಮೇಲೆ ತಮಗಿರುವ ತಮ್ಮ ಭಕ್ತಿ, ಭಾವವನ್ನು ಹಲವು ಪ್ರಕಾರಗಳಲ್ಲಿ ವ್ಯಕ್ತಪಡಿಸುತ್ತಾರೆ. ಬಹುತೇಕರು ಮಂದಿರಗಳಿಗೆ ಹೋಗಿ ಭಕ್ತಿಯಿಂದ ದೇವರ ಪೂಜೆ ಮಾಡಿದರೆ, ಇನ್ನೂ ಕೆಲವರು ಧ್ಯಾನವನ್ನೇ ಸಾಧನವಾಗಿಟ್ಟು ಈಶ್ವರನನ್ನು ತಲುಪುವ ಮಾರ್ಗವನ್ನು ಅನುಸರಿಸುತ್ತಾರೆ. ಆದರೆ ಇಂದು ನಾವು ಹೇಳಲು ಹೊರಟಿರುವ ಪ್ರದೇಶದ ಜನರ ಭಕ್ತಿ ಇದೆಲ್ಲದಕ್ಕಿಂತಲೂ ಮಿಗಿಲಾಗಿದ್ದು. ಇಲ್ಲಿನ ಜನರ ಭಕ್ತಿಯನ್ನು ತೋರ್ಪಡಿಸುವಪರಿಯೇ ಬೇರೆ. ಇವರು ತಮ್ಮ ದೇಹವನ್ನೇ ಮಂದಿರವನ್ನಾಗಿಸಿದ್ದಾರೆ.

ಇದರ ಹಿಂದಿರುವ ಕಥೆ

ಇದರ ಹಿಂದಿರುವ ಕಥೆ

ರಾಮ್‌ನಾಮಿ ಸಮಾಜದ ಜನರು ತಮ್ಮ ಶರೀರದಲ್ಲೆಲ್ಲಾ ರಾಮನಾಮದ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅದಕ್ಕೂ ಒಂದು ಕಾರಣವಿದೆ. ರಾಮ ನಾಮ ಹಚ್ಚೆಹಾಕಿಸುವ ಅಭ್ಯಾಸ ಬಹಳ ಹಿಂದಿನಿಂದಲೂ ಇದೆ. ಇದರ ಹಿಂದೆ ಸಾಮಾಜಿಕ ಕಥೆ ಇದೆ.ಹಿಂದೆ ಇಲ್ಲಿ ಮೇಲ್ಜಾತಿಯವರು ರಾಮ್‌ನಾಮಿ ಸಮಾಜದ ಜನರಿಗೆ ಮಂದಿರದ ಒಳಗೆ ಪ್ರವೇಶವನ್ನು ನಿಷೇಧಿಸಿದ್ದರಂತೆ. ಇದನ್ನು ವಿರೋಧಿಸಲು ಈ ಸಮಾಜದ ಜನರು ತಮ್ಮ ಇಡೀ ಶರೀರದ ಮೇಲೆ ರಾಮನಾಮದ ಹಚ್ಚೆ ಹಾಕಿಸಿಕೊಂಡರು. ಆ ನಂತರದಿಂದ ಇದು ಸಂಪ್ರದಾಯವಾಗಿ ಬಿಟ್ಟಿದೆ.

ರಾಮನಾಮಿಯರ ಗುರುತು

ರಾಮನಾಮಿಯರ ಗುರುತು

ರಾಮನಾಮವನ್ನು ಹಚ್ಚೆ ಹಾಕಿಕೊಳ್ಳುವುದರಲ್ಲೂ ವಿವಿಧ ವಿಧಗಳಿವೆ. ದೇಹದ ಪ್ರತಿಯೊಂದು ಭಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುವವರನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಶರೀರದ ಯಾವುದಾದರೂ ಒಂದು ಭಾಗದಲ್ಲಿ ರಾಮನಾಮ ಹಚ್ಚೆಹಾಕಿಸಿಕೊಳ್ಳುವುದರಿಂದ ಅವರನ್ನು ರಾಮ್‌ನಾಮಿ ಎನ್ನುತ್ತಾರೆ. ಅದೇ ಹಣೆ ಮೇಲೆ ರಾಮ ನಾಮ ಹಚ್ಚೆ ಹಾಕಿಸಿಕೊಳ್ಳುವುದರಿಂದ ಅವರನ್ನು ಶಿರೋಮಣಿ ಎನ್ನುತ್ತಾರೆ. ಇನ್ನೂ ಇಡೀ ಹಣೆಯ ಮೇಲೆ ರಾಮನಾಮ ಹಾಕಿಸಿಕೊಳ್ಳುವುದರಿಂದ ಅವರನ್ನು ಸರ್ವಾಂಗ ರಾಮ್‌ನಾಮಿ ಎನ್ನುತ್ತಾರೆ. ಇನ್ನು ದೇಹವೆಲ್ಲಾ ರಾಮನಾಮ ಹಚ್ಚೆ ಹಾಕಿಸಿಕೊಳ್ಳುವುದರಿಂದ ನಖ್‌ಶಿಖ್ ರಾಮ್‌ನಾಮಿ ಎನ್ನುತ್ತಾರೆ.

ಸಮಾಜದ ನಿಯಮ

ಸಮಾಜದ ನಿಯಮ

ರಾಮ್‌ನಾಮಿ ಸಮಾಜ ತನ್ನದೇ ಆದ ನಿಯಮವನ್ನು ಮಾಡಿದೆ. ಅದೇನೆಂದರೆ ಈ ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಶರೀರದಲ್ಲಿ ರಾಮನಾಮ ಹಚ್ಚೆ ಹಾಕಿಸಿಕೊಳ್ಳಲೇ ಬೇಕು. ರಾಮನಾಮವನ್ನು ಹಾಕಿಸಿಕೊಳ್ಳುವ ವ್ಯಕ್ತಿ ಮದ್ಯ ಸೇವಿಸಲೇ ಬಾರದು. ಪ್ರತಿದಿನ ರಾಮನಾಮ ಜಪ ಮಾಡಬೇಕು. ಎದೆ ಮೇಲೆ ರಾಮನಾಮ ಬರೆಯುವುದು ಮುಖ್ಯ. ಇಲ್ಲಿಯ ಜನರು ನಮಸ್ತೆಯ ಬದಲು ರಾಮ್ ರಾಮ್ ಹೇಳುವುದನ್ನು ಇಷ್ಟಪಡುತ್ತಾರೆ.

ಹೋಗುವುದು ಹೇಗೆ?

ಹೋಗುವುದು ಹೇಗೆ?

ರಾಮ್‌ನಾಮಿ ಸಮಾಜ ಚಿತ್ತೀಸ್‌ಗಡದ ರಾಯ್‌ಪುರ ಜಿಲ್ಲೆಯ ಜಮ್‌ಗಹನ್ ಹಳ್ಳಿಯಲ್ಲಿದೆ. ಇದು ಬಹಳ ಹಿಂದುಳಿದ ಇಲಾಖೆಯಾಗಿದೆ. ಈ ಹಳ್ಳಿಯು ಬಿಲಯ್‌ಗಡ್ ತಹ್ಸಿಲೆಹೆ ಸೇರಿದ್ದು. ಇಲ್ಲಿಯವರೆಗೆ ತಲುಪಲು ನೀವು ರಾಯ್‌ಪುರದಿಂದ ಬಿಲಯ್‌ಗಡ್ ಬಂದೇ ಬರಬೇಕು. ರಾಯ್‌ಪುರ್ ಒಂದು ದೊಡ್ಡ ಪ್ರದೇಶವಾಗಿದ್ದು, ರಾಜ್ಯದ ರಾಜಧಾನಿಯೂ ಆಗಿದೆ. ಇಲ್ಲಿ ನೀವೂ ರೈಲು, ವಿಮಾನಗಳ ಮೂಲಕವೂ ಪ್ರಯಾಣಿಸಬಹುದು. ರಾಯ್‌ಪುರ್ ರೈಲ್ವೆ ಸ್ಟೇಶನ್ ಅಥವಾ ಏರ್‌ಪೋರ್ಟ್‌ಗೆ ನೀವು ರಾಯ್‌ಪುರ ಜಂಕ್ಷನ್‌ನ ಸಹಾಯ ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X