Search
  • Follow NativePlanet
Share
» »ಚರ್ಮರೋಗ ನಿವಾರಣೆಗೆ ಎಲ್ಲಾ ಧರ್ಮದವರು ಇಲ್ಲಿನ ದೇವಿಗೆ ಹಾಲು ಅರ್ಪಿಸ್ತಾರಂತೆ

ಚರ್ಮರೋಗ ನಿವಾರಣೆಗೆ ಎಲ್ಲಾ ಧರ್ಮದವರು ಇಲ್ಲಿನ ದೇವಿಗೆ ಹಾಲು ಅರ್ಪಿಸ್ತಾರಂತೆ

ರಾಜಸ್ಥಾನವೆಂದರೆ ಬರೀ ಜೈಸಲ್ಮೇರ್, ಬಿಕರ್ನರ್, ಉದೈಪುರ್, ಜೈಪುರ್, ಅಜ್ಮೀರ್ ಮುಂತಾದವುಗಳನ್ನು ಸುತ್ತಾಡುವುದು ಮಾತ್ರವಲ್ಲ. ಅಲ್ಲಿನ ವಸ್ತು ಸಂಗ್ರಹಾಲಯಗಳಲ್ಲಿ ಇರಿಸಲಾಗಿರುವ ಪ್ರಾಚೀನ ಕಲಾಕೃತಿಗಳ ಮೇಲೆ ಕಣ್ಣು ಹಾಯಿಸಬೇಕಾಗುತ್ತದೆ. ರಾಜಸ್ಥಾನದ ಇತಿಹಾಸ ತಿಳಿಯಬೇಕಾದರೆ ಇಲ್ಲಿನ ಹನುಮಾನ್‌ಘಡ್ ನ್ನೂ ಭೇಟಿ ನೀಡಬೇಕು. ಹನುಮಾನ್‌ಘಡ್ ಒಂದು ವಿಶೇಷ ಸ್ಥಳವಾಗಿದ್ದು ಇಲ್ಲಿ ಎಲ್ಲಾ ಧರ್ಮದವರಿಗೂ ಭೇಟಿಗೆ ಅವಕಾಶವಿದೆ. ನೀವು ಮುಂದೆಂದಾದರೂ ರಾಜಸ್ಥಾನಕ್ಕೆ ಭೇಟಿ ನೀಡಿದರೆ ಈ ಕಡಿಮೆ ಅನ್ವೇಷಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿ.

ಭದ್ರಕಾಳಿ ಮಠ

ಭದ್ರಕಾಳಿ ಮಠ

PC:Caravish

ಹನುಮಾನ್‌ಘಡ್‌ನಲ್ಲಿ ಗಗ್ಗರ್‌ ನದಿ ತೀರದಲ್ಲಿ ಬಿಕನೇರ್‌ನ ರಾಜ ರಾಮ್‌ ಸಿಂಗ್ ಈ ದೇವಾಲಯವನ್ನು ನಿರ್ಮಿಸಿದನು. ದೇಶದ ಅತ್ಯಂತ ಹಳೆಯ ಕಾಳಿ ಮಂದಿರಗಳಲ್ಲಿ ಒಂದಾಗಿರುವ ಈ ದೇವಾಲಯವು ರಾಜಸ್ಥಾನ ಹಾಗೂ ಹರಿಯಾಣ, ಪಂಜಾಬ್‌ನ ಭಕ್ತರನ್ನೂ ತನ್ನತ್ತ ಆಕರ್ಷಿಸುತ್ತಿದೆ. ನವರಾತ್ರಿ ಸಂದರ್ಭದಲ್ಲಿ ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

ಕಾಲಿಬಂಗನ್ ಮ್ಯೂಸಿಯಂ

ಕಾಲಿಬಂಗನ್ ಮ್ಯೂಸಿಯಂ

PC: Mohitnarayanan

ಇದು ಪಿಲಿಬಾಂಗಾ ತಹಶೀಲ್‌ನಲ್ಲಿ ಸೂರತ್‌ಘಡ್ ಮತ್ತು ಹನುಮಾನ್‌ಘಡ್ ನಡುವೆ ನೆಲೆಗೊಂಡಿರುವ ಒಂದು ಐತಿಹಾಸಿಕ ತಾಣವಾಗಿದ್ದು, ರಾಜಸ್ಥಾನದಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಈ ಜಾಗದಲ್ಲಿ 1961-69ರ ನಡುವೆ ನೆಲಹಾಸು, ಮರದ ಹುಬ್ಬು, ಬೆಂಕಿಯ ಬಲಿಪೀಠಗಳು, ಒಂಟೆಗಳ ಮೂಳೆಗಳು, ನಾಣ್ಯಗಳು, ಆಭರಣಗಳು ಮತ್ತು ಇನ್ನಿತರ ವಸ್ತುಗಳನ್ನು ಪತ್ತೆ ಮಾಡಲಾಯಿತು. ಈ ಪುರಾತನ ಖಜಾನೆಗಳನ್ನು ಕಾಲಿಬಂಗನ್ ಮ್ಯೂಸಿಯಂ ಮತ್ತು ನವದೆಹಲಿಯ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿದೆ.

 ಶಿಲಾ ಮಾತಾ ದೇವಸ್ಥಾನ

ಶಿಲಾ ಮಾತಾ ದೇವಸ್ಥಾನ

ಹನುಮಾನ್‌ಘಡ್‌ದಲ್ಲಿರುವ ಶಿಲಾ ಮಾತಾ ಅಥವಾ ಶಿಲಾ ಮಾತಾ ದೇವಸ್ಥಾನವು ಎಲ್ಲಾ ಧರ್ಮಗಳ, ಜಾತಿಗಳ, ಮತಗಳ ಮತ್ತು ಪಂಗಡಗಳ ಭಕ್ತರನ್ನು ಸ್ವಾಗತಿಸುತ್ತದೆ. ವಿಶೇಷವಾಗಿ ಚರ್ಮ ಸಂಬಂಧಿ ರೋಗ ಇರುವ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಹಾಲು ಹಾಗೂ ನೀರನ್ನು ಅರ್ಪಿಸುತ್ತಾರೆ. ಹಿಂದೂಗಳು ಹಾಗೂ ಸಿಖ್‌ರು ದೇವತೆಯನ್ನು ಶಿಲಾ ಮಾತಾ ಎಂದು ಕರೆದರೆ, ಮುಸ್ಲಿಂರು ಶಿಲಾ ಪೀರ್ ಎಂದು ಕರೆಯುತ್ತಾರೆ. ಪ್ರತಿ ಗುರುವಾರ ಈ ದೇವಸ್ಥಾನದಲ್ಲಿ ವಿಶೇಷತೆ ಇರುತ್ತದೆ.

ಭಟನರ್ ಕೋಟೆ

ಭಟನರ್ ಕೋಟೆ

PC:Nishantsrivastava

ಭಟನರ್ ಕೋಟೆಗೆ ಭೇಟಿ ನೀಡದೆಯೇ ಹನುಮಾನ್‌ಘಡ್‌ ಪ್ರವಾಸ ಪೂರ್ಣಗೊಳ್ಳೊದಿಲ್ಲ. ಹನುಮಾನ್‌ಘಡ್‌ನ ಮಧ್ಯದಲ್ಲಿರುವ ಈ ಕೋಟೆಯು 1,700 ವರ್ಷ ಹಳೆಯದಾಗಿದೆ. ಇದನ್ನು ಬೈಕನೆರ್‌ನ ಮಹಾರಾಜ ಸೂರತ್ ಸಿಂಗ್ ರಾಥೋರ್ ಗೆದ್ದಿದ್ದು.

ಗುರುದ್ವಾರ

ಗುರುದ್ವಾರ

PC:Dikshit Kumar

ಸಿಖ್‌ರ ಧಾರ್ಮಿಕ ಕ್ಷೇತ್ರವಾಗಿದೆ. ಇದನ್ನು 18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ.
ಪ್ರತಿ ಅಮಾವಾಸ್ಯೆಯಂದು ಗುರುದ್ವಾರವು ತನ್ನ ಭಕ್ತರಿಗೆ ಹಾಗೂ ಪ್ರವಾಸಿಗರಿಗಾಗಿ ಜೋಡು ಮೇಳವನ್ನು ಆಯೋಜಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X