Search
  • Follow NativePlanet
Share
» »ರಾಯ್‌ಸೇನ್‌ ಕೋಟೆಯನ್ನೊಮ್ಮೆ ಹತ್ತಿ ನೋಡಿ

ರಾಯ್‌ಸೇನ್‌ ಕೋಟೆಯನ್ನೊಮ್ಮೆ ಹತ್ತಿ ನೋಡಿ

ರಾಯಸೇನ್ ನಗರದ ಮೂಲೆ ಮೂಲೆಯಲ್ಲೂ ನಿಮಗೆ ಇತಿಹಾಸದ ನೆರಳು ಕಾಣ ಸಿಗುತ್ತದೆ.

ರಾಯಸೇನ್‍ವು ಮಧ್ಯಪ್ರದೇಶದ ಅನೇಕ ಸಣ್ಣ ನಗರಗಳ ಪೈಕಿ ಒಂದು. ಆದರೆ ತನ್ನ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಗಳ ಕಾರಣಗಳಿಂದಾಗಿ ಒಂದು ಪ್ರಮುಖ ಸ್ಥಳವಾಗಿ ಹೆಸರುವಾಸಿಯಾಗಿದೆ. ಇದು ರಾಯ ಸೇನ್ ಜಿಲ್ಲೆಯಲ್ಲಿದ್ದು ಮುಖ್ಯ ಆಡಳಿತ ಕೇಂದ್ರ ಕಚೇರಿ ಆಗಿದೆ.

ರಾಯಸೇನ್ ಇತಿಹಾಸ

ರಾಯಸೇನ್ ಇತಿಹಾಸ

PC: Vijay Tiwari09
ರಾಯಸೇನ್ ನಗರದ ಮೂಲೆ ಮೂಲೆಯಲ್ಲೂ ನಿಮಗೆ ಇತಿಹಾಸದ ನೆರಳು ಕಾಣ ಸಿಗುತ್ತದೆ. ಕ್ರಿ.ಪೂ 1200 ಶತಮಾನಗಳಷ್ಟು ಹಿಂದಯೇ ಇಲ್ಲಿ ರಾಯಸೇನ್ ಕೋಟೆಯನ್ನು ನಿರ್ಮಿಸಲಾಗಿತ್ತು. ಅಂದಿನಿಂದ ಈ ನಗರಕ್ಕೆ ರಾಯಸೇನ್ ಎಂಬ ಹೆಸರೇ ಅಂಟಿಕೊಂಡಿದೆ. 15 ಶತಮಾನದವರೆಗೂ ರಾಯಸೇನ್‍ವನ್ನು ಅನೇಕ ಆಡಳಿತಗಾರರು ಆಳಿದರು. ಆದರೆ 1543 ರಲ್ಲಿ ಇದನ್ನು ಶೇರಷಹ ಸೂರಿಯು ಪುರಣಮಾಯಿಯಿಂದ ಗೆದ್ದುಕೊಂಡು ಅನೇಕ ವರ್ಷಗಳ ಕಾಲ ಆಳಿದನು. ನಂತರ 1760 ರಲ್ಲಿ ಭೂಪಾಲದ ಮೂರನೇ ನವಾಬನಾದ ಫಿಯಾಜ ಮೊಹಮ್ಮದ ಖಾನನು ರಾಯಸೇನ್‍ವನ್ನು ಆಕ್ರಮಿಸಿದನು. ಅಂದಿನಿಂದ ಈ ಸಣ್ಣ ನಗರವು ಭೂಪಾಲ ಸಂಸ್ಥಾನದ ಒಂದು ಭಾಗವಾಯಿತು.

ರಾಯಸೇನ್ ಹೆಸರು ಬಂದಿದ್ದು ಹೇಗೆ?

ರಾಯಸೇನ್ ಹೆಸರು ಬಂದಿದ್ದು ಹೇಗೆ?

PC: Vijay Tiwari09
ಬೆಟ್ಟದ ಮೇಲಿರುವ ರಾಯಸೇನ್ ಕೋಟೆಯಿಂದಾಗಿ ಇದಕ್ಕೆ ರಾಯಸೇನ್ ಎಂಬ ಹೆಸರು ಬಂದಿದೆ. ರಾಯಸೇನ್‍ವನ್ನು ಮೊದಲು ರಾಜವಾಸಿನಿ ಅಥವಾ ರಾಜಸಾಯನ ಎಂದು ಕರೆಯಲಾಗುತ್ತಿತ್ತು. ಇದರ ಅರ್ಥ ರಾಜ ಮನೆತನದ ನಿವಾಸ ಅಥವಾ ವಾಸ ಸ್ಥಳ ಎಂದು.

ಅನೇಕ ಪುಣ್ಯಕ್ಷೇತ್ರಗಳಿವೆ

ಅನೇಕ ಪುಣ್ಯಕ್ಷೇತ್ರಗಳಿವೆ

PC: Vijay Tiwari09
ಭಾರತ ದೇಶವು ಸ್ವತಂತ್ರವಾದ ನಂತರ, 1956 ರಲ್ಲಿ ರಾಯಸೇನ್‍ವು ಭೂಪಾಲ ರಾಜ್ಯದ ಅವಿಭಾಜ್ಯ ಅಂಗವಾಯಿತು. ನಂತರ ನವಂಬರ 1, 1956 ರಂದು ಮಧ್ಯ ಪ್ರದೇಶದಲ್ಲಿ ವಿಲೀನವಾಯಿತು. ರಾಯಸೇನ್‍ದಲ್ಲಿ ನೋಡಬೇಕಾದ ಸ್ಥಳಗಳು ರಾಯಸೇನ್‍ದಲ್ಲಿ ಅನೇಕ ದೇವಾಲಯಗಳು ಮತ್ತು ಪುಣ್ಯಕ್ಷೇತ್ರಗಳಿವೆ.

ನಾಗರಿಕರು ಸೌಹಾರ್ದ ಮನೋಭಾವದವರು

ನಾಗರಿಕರು ಸೌಹಾರ್ದ ಮನೋಭಾವದವರು

PC: Vijay Tiwari09
ಮಧ್ಯಪ್ರದೇಶದ ಸಣ್ಣ ನಗರ ಜಿಲ್ಲೆ ಆಗಿರುವ ಇದು ತನ್ನದೇ ಆದ ಐತಿಹಾಸಿಕ ಮತ್ತು ಧಾರ್ಮಿಕತೆಯ ಮಹತ್ವವನ್ನು ಹೊಂದಿದೆ. ಇಲ್ಲಿ ನೀವು ರಾಷ್ಟ್ರೀ ಯ ಭಾವೈಕ್ಯತೆಯನ್ನು ಕಾಣುತ್ತೀರಿ. ಏಕೆಂದರೆ ರಾಯಸೇನ್‍ದಲ್ಲಿ ದೇವಾಲಯಗಳನ್ನು ಮತ್ತು ಮಸೀದಿಗಳನ್ನು ಒಂದೇ ಸ್ಥಳದಲ್ಲಿ ಕಾಣುತ್ತೀರಿ. ಇಲ್ಲಿರುವ ನಾಗರಿಕರು ಸೌಹಾರ್ದ ಮನೋಭಾವದವರಾಗಿದ್ದು ಎಲ್ಲ ಧರ್ಮಗಳಿಗೂ ಸಮನಾದ ಗೌರವವನ್ನು ತೋರಿಸುತ್ತಾರೆ. ಹಜರತ್ ಪೀರ್ ಫತೆ ಉಲ್ಲಾಹ ಷಾ ಬಾಬಾ ಪುಣ್ಯ ಸ್ಥಳ ಇದಕ್ಕೆ ಸಾಕ್ಷಿಯಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Vijay Tiwari09
ರಾಯಸೇನ್ ಕೋಟೆಯು ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ. ರಾಯಸೇನ್ ನಗರಕ್ಕೆ ಭೇಟಿ ಕೊಡುವುದು ರಾಯಸೇನ್ ನಗರಕ್ಕೆ ಅಕ್ಟೋಬರ್ ಮತ್ತು ನವಂಬರ್ ತಿಂಗಳ ರಜಾದಿನಗಳಲ್ಲಿ ಭೇಟಿ ಕೊಡುವುದು ಒಳ್ಳೆಯದು. ಏಕೆಂದರೆ ಈ ಸಮಯದಲ್ಲಿ ಇಲ್ಲಿನ ಹವಾಮಾನವು ಅಹ್ಲಾದಕತೆಯಿಂದ ಕೂಡಿರುತ್ತದೆ. ರಾಯಸೇನ್‍ವನ್ನು ನೀವು ವಿಮಾನ, ರೇಲ್ವೆ ಮತ್ತು ಬಸ್ಸುಗಳ ಮೂಲಕ ತಲುಪಬಹುದು. ಭೋಪಾಲದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳು ರಾಯಸೇನಕ್ಕೆ ಹತ್ತಿರದಲ್ಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X