Search
  • Follow NativePlanet
Share
» »ರೈಲ್ವೇ ಪರಂಪರೆಯನ್ನು ಪ್ರದರ್ಶಿಸುವ ಭಾರತದ ಅತ್ಯುತ್ತಮ ರೈಲು ವಸ್ತುಸಂಗ್ರಹಾಲಯಗಳು

ರೈಲ್ವೇ ಪರಂಪರೆಯನ್ನು ಪ್ರದರ್ಶಿಸುವ ಭಾರತದ ಅತ್ಯುತ್ತಮ ರೈಲು ವಸ್ತುಸಂಗ್ರಹಾಲಯಗಳು

ಜಗತ್ತಿನಲ್ಲಿಯ ಅತ್ಯಂತ ವೇಗವಾಗಿ ಬೆಳವಣಿಗೆಯನ್ನು ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಆದುದರಿಂದ, ಇದು ಲಕ್ಷಾಂತರ ಕಿಲೋಮೀಟರ್ ಉದ್ದದ ವಿಸ್ತಾರದಲ್ಲಿರುವ ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ. ಭಾರತದಲ್ಲಿ ರೈಲ್ವೆ ಯ ವಿಷಯಕ್ಕೆ ಬಂದರೆ, ಪ್ರಾರಂಭದಿಂದಲೂ ಯಾವಾಗಲೂ ಯಶಸ್ವಿಯಾಗಿ ನಡೆಯುತ್ತಿರುವಂತಹುದು ಎನ್ನಬಹುದು.

ಆದುದರಿಂದ, ಇಲ್ಲಿ ನಾವು ಭಾರತದ ರೈಲ್ವೇ ಇತಿಹಾಸದ ಪುಟವನ್ನು ಒಮ್ಮೆ ತಿರುವಿ ನೋಡಿದರೆ ಹೇಗೆ? ನೀವೇನಾದರೂ ಹಳೆಯ ಕಲಾತ್ಮಕ ಹಾಗೂ ಸುಂದರವಾದ ವಸ್ತುಗಳ ಮಧ್ಯೆ ನಿಮ್ಮ ಸಮಯವನ್ನು ಕಳೆಯ ಬಯಸುವಿರಾದಲ್ಲಿ, ಈ ಕೆಳಗೆ ಹೇಳಲಾದ ಕೆಲವು ರೈಲ್ವೇ ವಸ್ತು ಸಂಗ್ರಹಾಲಯಗಳ ಕಡೆಗೆ ಒಮ್ಮೆ ಭೇಟಿ ಕೊಡಲು ಮನಸ್ಸು ಮಾಡಿದರೆ ಉತ್ತಮವಾಗಿರುತ್ತದೆ ಎನ್ನುವುದು ನಮ್ಮ ಅಭಿಪ್ರಾಯ. ವಿಂಟೇಜ್ ಲೋಕೋಮೊಟಿವ್ಸ್ (ಸಂಚರಿಸುವ ರೈಲುಗಳು) , ಪುರಾತನ ರೈಲ್ವೇ ಮಾರ್ಗಗಳು ಮತ್ತು ಸೆಟ್ಟಿಂಗ್ ಗಳು ಇತ್ಯಾದಿಗಳನ್ನು ಹೊಂದಿರುವ ಈ ವಸ್ತು ಸಂಗ್ರಹಾಲಯಗಳಿಗೆ ಭೇಟಿ ಕೊಡುವುದು ಸೂಕ್ತವಾದುದಾಗಿದೆ. ಆದ್ದರಿಂದ ಭಾರತದ ರೈಲ್ವೇ ವಸ್ತುಸಂಗ್ರಹಾಲಯಗಳು ಮತ್ತು ರೈಲ್ವೇ ಪರಂಪರೆಯ ಬಗ್ಗೆ ಒಂದು ನೋಟ ಹರಿಸೋಣ.

ರಾಷ್ಟೀಯ ರೈಲು ವಸ್ತುಸಂಗ್ರಹಾಲಯ (ನ್ಯಾಶನಲ್ ರೈಲ್ ಮ್ಯೂಸಿಯಂ) , ನವದೆಹಲಿ

ರಾಷ್ಟೀಯ ರೈಲು ವಸ್ತುಸಂಗ್ರಹಾಲಯ (ನ್ಯಾಶನಲ್ ರೈಲ್ ಮ್ಯೂಸಿಯಂ) , ನವದೆಹಲಿ

ವಸ್ತು ಸಂಗ್ರಹಾಲಯದ ಒಳಗೆ ಒಂದು ಪುಟ್ಟ ರೈಲಿನಲ್ಲಿ ರೈಲ್ವೇ ಹಳಿಗಳ ಮೂಲಕ ವಸ್ತು ಸಂಗ್ರಹಾಲಯದ ಸುತ್ತ ಸವಾರಿ ನಡೆಸುವ ಅನುಭವ ಹೇಗಿರಬಹುದು? ಭಾರತೀಯ ರೈಲ್ವೇ ಪರಂಪರೆಯ ಶ್ರೀಮಂತಿಕೆಯ ಬಗ್ಗೆ ತಿಳಿಯಲು ಮತ್ತು ಅಲ್ಲಿ ಆನಂದಿಸಲು ಲಕ್ಷಾಂತರ ಪ್ರವಾಸಿಗರು ನವ ದೆಹಲಿಯ ರಾಷ್ಟ್ರೀಯ ರೈಲು ವಸ್ತು ಸಂಗ್ರಹಾಲಯಕ್ಕೆ ಭೇಟಿ ಕೊಡುತ್ತಾರೆ. ಆದುದರಿಂದ ಇದು ಭಾರತದಲ್ಲಿಯ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ಕೊಡಲ್ಪಡುವ ರೈಲ್ವೇ ವಸ್ತುಸಂಗ್ರಹಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಲ್ಲದೆ ಇದು ಅತೀ ದೊಡ್ಡ ರೈಲ್ವೇ ಸಂಗ್ರಹಾಲಯಗಳಲ್ಲಿ ಒಂದಾಗಿದ್ದು ಬ್ರಿಟೀಷರ ಯುಗದ ಹಲವಾರು ಕಲಾಕೃತಿಗಳು ಮತ್ತು ಸ್ಮಾರಕಗಳನ್ನು ತನ್ನಲ್ಲಿ ಹೊಂದಿದೆ. ಈ ವಸ್ತು ಸಂಗ್ರಹಾಲಯದ ವಸ್ತು ಪ್ರದರ್ಶನದ ಸಮಯದಲ್ಲಿ ಪ್ರದರ್ಶಿಸಲಾಗುವ ಸುಂದರವಾದ ವಿಷಯಗಳಲ್ಲಿ ಪ್ರಮುಖವಾಗಿ ಪಟಿಯಾಲಾ ಸ್ಟೇಟ್ ಮೋನೋರೈಲ್ ರೈಲುಮಾರ್ಗಗಳು, ಫ಼ೆರಿ ಕ್ವೀನ್, ವಿಶ್ವದ ಅತ್ಯಂತ ಹಳೆಯ ಲೋಕೋಮೋಟಿವ್, ಫೈಯರ್ ಇಂಜಿನ್ ಗಳು, ರೈಲು ಕಾರುಗಳೂ, ಮತ್ತು ಎಲೆಕ್ಟ್ರಿಕ್ ಇಂಜೀನುಗಳು ಇತ್ಯಾದಿಗಳನ್ನು ಒಳಗೊಂಡಿದೆ. ಇಂತಹ ಮನೋರಂಜನೆಯ ಮತ್ತು ವಿನೋದದ ಜಗತ್ತಿನಲ್ಲಿ ನೀವು ಪಾಲ್ಗೊಳ್ಳಲು ಬಯಸುವಿರಾ?

ರೈಲ್ವೇ ಮ್ಯೂಸಿಯಂ,(ವಸ್ತು ಸಂಗ್ರಹಾಲಯ) ಮೈಸೂರು

ರೈಲ್ವೇ ಮ್ಯೂಸಿಯಂ,(ವಸ್ತು ಸಂಗ್ರಹಾಲಯ) ಮೈಸೂರು

ಮೈಸೂರಿನಲ್ಲಿರುವ ರೈಲ್ವೇ ವಸ್ತು ಸಂಗ್ರಹಾಲಯವು ಭಾರತೀಯ ರೈಲ್ವೇಯ ಒಂದು ರೀತಿಯ ವಿಭಿನ್ನ ಹೊರಾಂಗಣ ಸೆಟ್ಟಿಂಗ್ ಎನ್ನಬಹುದಾಗಿದೆ. ಯಾವುದೇ ಸ್ಥಳಕ್ಕೆ ಹೋಗುವ ಬಗ್ಗೆ ಮನಸ್ಸಲ್ಲಿಟ್ಟುಕೊಳ್ಳದೇ ರೈಲ್ವೇ ಫ್ಲಾಟ್ ಫಾರಂ ನಲ್ಲಿ ನಿಲ್ಲುವ ಅನುಭವ ಹೇಗಿರಬಹುದು? ಹೌದು ನೀವು ಮಾನವ ನಿರ್ಮಿತ ಕೃತಕ ಜಗತ್ತನ್ನು ಇಷ್ಟ ಪಡುವವರಾಗಿದ್ದಲ್ಲಿ, ಈ ಸ್ಥಳವು ನಿಮಗೆ ಸೂಕ್ತವಾದುದಾಗಿದ್ದು, ಇಲ್ಲಿ ನಿಮ್ಮ ಅನ್ವೇಷಣೆಗೆ ಯೋಗ್ಯವಾದ ಅನೇಕ ವಿಷಯಗಳಿವೆ.

ಲೈಟ್ ಸಿಗ್ನಲ್‌ಗಳು, ರೈಲುಗಳು, ಇಂಜಿನ್ಗಳು ಮತ್ತು ಟಿಕೆಟ್ ವಿಂಡೋ ಇತ್ಯಾದಿಗಳನ್ನು ಒಳಗೊಂಡ ಮೈಸೂರಿನ ರೈಲ್ವೆ ವಸ್ತುಸಂಗ್ರಹಾಲಯವು ನಿಯಮಿತವಾಗಿ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಕಾಲಕ್ರಮೇಣವಾಗಿ ಇದು ಕುಟುಂಬದೊಂದಿಗೆ ಭೇಟಿಕೊಡಬಹುದಾದ ಒಂದು ತಾಣವಾಗಿ ಮಾರ್ಪಟ್ಟಿದ್ದು, ಇಲ್ಲಿ ಮಕ್ಕಳು ಕೃತಕವಾಗಿ ನಿರ್ಮಿಸಲಾಗಿರುವ ರೈಲುಗಳಲ್ಲಿ ಆಟವಾಡಲು ಅನುಕೂಲ ಮಾಡಲಾಗಿದೆ. ಇಷ್ಟೇ ಅಲ್ಲದೆ ಇಲ್ಲಿ ದಶಕಗಳಷ್ಟು ಹಳೆಯ ಇಂಜೀನುಗಳನ್ನು ಮತ್ತು ಪುಟಾಣಿ ರೈಲುಗಳಲ್ಲಿ ಈ ವಸ್ತು ಸಂಗ್ರಹಾಲಯದ ಆವರಣದಲ್ಲಿ ಸವಾರಿ ಮಾಡಿ ಆನಂದಿಸಬಹುದಾಗಿದೆ.

ರೀಜನಲ್ ರೈಲ್ವೇ ಮ್ಯೂಸಿಯಂ (ಪ್ರಾದೇಶಿಕ ರೈಲ್ವೆ ಮ್ಯೂಸಿಯಂ) ಚೆನ್ನೈ

ರೀಜನಲ್ ರೈಲ್ವೇ ಮ್ಯೂಸಿಯಂ (ಪ್ರಾದೇಶಿಕ ರೈಲ್ವೆ ಮ್ಯೂಸಿಯಂ) ಚೆನ್ನೈ

ಭಾರತೀಯ ರೈಲ್ವೇ ಪರಂಪರೆಯ ಶ್ರೀಮಂತ ಸಂಗ್ರಹವನ್ನು ಹೊಂದಿರುವ ಮತ್ತೊಂದು ವಸ್ತು ಸಂಗ್ರಹಾಲಯವೆಂದರೆ ಅದು ಚೈನ್ನೈ ನ ರೀಜನಲ್(ಪ್ರಾದೇಶಿಕ) ರೈಲ್ವೇ ವಸ್ತು ಸಂಗ್ರಹಾಲಯ. ಇದನ್ನು 2002 ರಲ್ಲಿ ಸ್ಥಾಪಿಸಲಾಗಿದ್ದು, ಇಲ್ಲಿ ಹಳೆಯ ಇಂಜೀನುಗಳು, ಆಧುನಿಕ ರೈಲುಗಳು ಹಳಿಗಳು ಮತ್ತು ಹಲವಾರು ಸ್ಮರಣಿಕೆಗಳ ಅಪಾರ ಸಂಗ್ರಹಗಳನ್ನು ಕಾಣಬಹುದಾಗಿದೆ. ಸುಮಾರು 6 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಅದ್ಭುತ ವಸ್ತುಸಂಗ್ರಹಾಲಯದಲ್ಲಿ ಬ್ರಿಟಿಷರ ಕಾಲದ ಹಲವಾರು ಉಗಿ ಯಂತ್ರಗಳಿವೆ.

ಈ ವಸ್ತು ಸಂಗ್ರಹಾಲಯದ ಒಳಗೆ ಚಲಿಸುವ ಆಟಿಕೆ ರೈಲು ಮಕ್ಕಳಿಗೆ ಪ್ರಮುಖ ಆಕರ್ಷಣೆಯಾಗಿದೆ ಅಲ್ಲದೆ ಇಲ್ಲಿ ಹಲವಾರು ವರ್ಣಚಿತ್ರಗಳನ್ನು ಒಳಗೊಂಡಿರುವ ಆರ್ಟ್ ಗ್ಯಾಲರಿಗಳೂ ಕೂಡಾ ವಯಸ್ಕರನ್ನು ಆಕರ್ಷಿಸುತ್ತದೆ. ಭಾರತದ ಪ್ರಾಚೀನ ವಸ್ತುಗಳು ಮತ್ತು ಶ್ರೀಮಂತಪರಂಪರೆಯ ಮಧ್ಯೆ ಒಂದು ದಿನ ಕಳೆದರೆ ಹೇಗಿರಬಹುದು

ರೈಲ್ವೇ ಹೆರಿಟೇಜ್ ಸೆಂಟರ್, ತಿರುಚಿನಾಪಳ್ಳಿ

ರೈಲ್ವೇ ಹೆರಿಟೇಜ್ ಸೆಂಟರ್, ತಿರುಚಿನಾಪಳ್ಳಿ

2014 ರಲ್ಲಿ ಸ್ಥಾಪನೆಯಾದ ತಿರುಚಿರಾಪಳ್ಳಿಯಲ್ಲಿರುವ ರೈಲ್ವೆ ಹೆರಿಟೇಜ್ ಸೆಂಟರ್ ದೇಶದ ಹೊಸದಾಗಿ ರೂಪುಗೊಂಡ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿದೆ, ಇದು ಅತ್ಯುತ್ತಮ ಭಾರತೀಯ ರೈಲು ಪರಂಪರೆಯನ್ನು ಪ್ರದರ್ಶಿಸುತ್ತದೆ. ಹಳೆಯ ನಕ್ಷೆಗಳು, ದೀಪಗಳು, ಸಿಗ್ನ್ ಲ್ ಗಳು, ಎಂಜಿನ್ ಗಳು, ಮತ್ತು ಅನೇಕ ಕೋಚ್ ಗಳು ಇತ್ಯಾದಿಗಳನ್ನು ಹೊಂದಿದೆ ಈ ರೀತಿಯಾಗಿ ಅಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಅಸಾಧಾರಣ ಸಂಗ್ರಹವನ್ನು ಒದಗಿಸುವುದರಿಂದ ಅದರ ಒಳಾಂಗಣ ಮತ್ತು ಹೊರಾಂಗಣ ಪ್ರದರ್ಶನಗಳನ್ನು ಆನಂದಿಸಬಹುದಾಗಿದೆ.

ರೈಲ್ವೆ ಜಗತ್ತಿನಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕೆಂದಿರುವಿರಾ?ಹಾಗಿದ್ದಲ್ಲಿ ಈ ಸ್ಥಳವು ನಿಮಗೆ ಸೂಕ್ತವಾದುದಾಗಿದೆ. ಇಲ್ಲಿ ಒಂದು ಬದಿಯಲ್ಲಿ ನೀವು ಒಳಾಂಗಣ ಪ್ರದರ್ಶನಗಳ ಸೊಬಗನ್ನು ಸೆರೆಹಿಡಿದರೆ, ಇನ್ನೊಂದು ಬದಿಯಲ್ಲಿ, ಹಳೆಯ ಲೋಕೋಮೋಟಿವ್‌ಗಳ ಸೌಂದರ್ಯವನ್ನು ನೋಡಬಹುದು ಮತ್ತು ಮಿನಿ ರೈಲಿನಲ್ಲಿ ಸವಾರಿ ಅನುಭವಿಸಬಹುದಾಗಿದೆ.

ಜೋಶಿ'ಸ್ ಮ್ಯೂಸಿಯಂ ಆಫ್ ಮಿನಿಯೇಚರ್ ರೈಲ್ವೆ

ಜೋಶಿ'ಸ್ ಮ್ಯೂಸಿಯಂ ಆಫ್ ಮಿನಿಯೇಚರ್ ರೈಲ್ವೆ

ಎಂದಾರರೂ ಮಿನಿಯೇಚರ್ (ಚಿಕ್ಕ ಪ್ರತಿರೂಪ) ಜಗತ್ತಿಗೆ ಹೋಗಿರುವಿರಾ? ಇಲ್ಲವೆಂದಾದಲ್ಲಿ, ಪೂನಾದಲ್ಲಿರುವ ಜೋಶೀ'ಸ್ ಮ್ಯೂಸಿಯಂ ಆಫ್ ಮಿನಿಯೇಚರ್ ರೈಲ್ವೇ ಗೆ ಭೇಟಿ ಕೊಡಲು ಮರೆಯದಿರಿ. ಇಲ್ಲಿ ನೀವು ರೈಲ್ವೇ ಜಗತ್ತಿನ ಸಣ್ಣ ರೈಲ್ವೇ ಜಗತ್ತನ್ನು ನೋಡಬಹುದಾಗಿದೆ ಇಲ್ಲಿ ನಗರದ ಮೂಲಕ ಪ್ರವೇಶಿಸುವಂತಹ ಸಣ್ಣ ಗಾತ್ರದ ರೈಲುಗಳನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಇದು ಕಾಲ್ಪನಿಕ ಸಣ್ಣ ನಗರದ ವಿನ್ಯಾಸವಾಗಿದ್ದು ಇದರ ಮೂಲಕ ರೈಲು ಸಂಚರಿಸುವಂತೆ ಮಾಡಲಾಗಿದೆ.

ಹಲವಾರು ದೀಪದ ಪೋಸ್ಟ್‌ಗಳು, ಬೇಲಿಗಳು, ಕಟ್ಟಡಗಳು, ಫ್ಲೈಓವರ್‌ಗಳು ಮತ್ತು ಸಿಗ್ನಲ್ ಗಳನ್ನು ಹೊಂದಿರುವ ಈ ವಿನ್ಯಾಸವು ಖಂಡಿತವಾಗಿಯೂ ಕಲಾತ್ಮಕತೆಯ ಉತ್ತಮ ಕೆಲಸವಾಗಿದೆ. ಉಗಿ ಯಂತ್ರಗಳಿಂದ ಹಿಡಿದು ಸ್ಕೈ-ರೈಲುಗಳು ಮತ್ತು ಬುಲೆಟ್ ರೈಲುಗಳು ಸುರಂಗಗಳವರೆಗೆ, ರೈಲ್ವೆ ಪ್ರಪಂಚದ ಬಗ್ಗೆ ನೀವು ಯೋಚಿಸುವ ಎಲ್ಲವನ್ನೂ ಇದು ಒಳಗೊಂಡಿದೆ. ಜೋಶಿಯ ಮ್ಯೂಸಿಯಂ ಆಫ್ ಮಿನಿಯೇಚರ್ ರೈಲ್ವೆ ಮಕ್ಕಳಲ್ಲಿ ಅತ್ಯಂತ ಜನಪ್ರಿಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X