Search
  • Follow NativePlanet
Share
» »ಊಟಿಯಲ್ಲಿ ನೀವು ಈ ಪ್ರದೇಶವನ್ನು ಖಂಡಿತವಾಗಿ ನೋಡಿರುವುದಿಲ್ಲ... ಹಾಗಾದರೆ ಆ ಸ್ಥಳಗಳು ಯಾವುವು?

ಊಟಿಯಲ್ಲಿ ನೀವು ಈ ಪ್ರದೇಶವನ್ನು ಖಂಡಿತವಾಗಿ ನೋಡಿರುವುದಿಲ್ಲ... ಹಾಗಾದರೆ ಆ ಸ್ಥಳಗಳು ಯಾವುವು?

ಊಟಿ..ಬೇಸಿಗೆಯ ಸಮಯದಲ್ಲಿ ಅನೇಕ ಮಂದಿ ಭೇಟಿ ನೀಡುವ ಪ್ರಮುಖವಾದ ಪ್ರವಾಸಿ ಕೇಂದ್ರ. ದಕ್ಷಿಣಾದಿ ರಾಜ್ಯಗಳ ಪೈಕಿ ಅತ್ಯಧಿಕವಾಗಿ ಪ್ರವಾಸಿಗರು ತೆರಳುವ ಪ್ರವಾಸಿ ಕೇಂದ್ರವಾಗಿ ಊಟಿಯು ಹೆಸರುವಾಸಿಯಾಗಿದೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ಣಾರೆ

By Sowmyabhai

ಊಟಿ..ಬೇಸಿಗೆಯ ಸಮಯದಲ್ಲಿ ಅನೇಕ ಮಂದಿ ಭೇಟಿ ನೀಡುವ ಪ್ರಮುಖವಾದ ಪ್ರವಾಸಿ ಕೇಂದ್ರ. ದಕ್ಷಿಣಾದಿ ರಾಜ್ಯಗಳ ಪೈಕಿ ಅತ್ಯಧಿಕವಾಗಿ ಪ್ರವಾಸಿಗರು ತೆರಳುವ ಪ್ರವಾಸಿ ಕೇಂದ್ರವಾಗಿ ಊಟಿಯು ಹೆಸರುವಾಸಿಯಾಗಿದೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ಣಾರೆ ಸವಿಯಲು ವಿದೇಶಿಗರು ಕೂಡ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಭೇಟಿ ನೀಡುತ್ತಾರೆ.

ಇಲ್ಲಿನ ತಂಪಾದ ವಾತಾವರಣದಿಂದಾಗಿ ಈ ಹಿಲ್ ಸ್ಟೇಷನ್ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಆದರೆ ಅನೇಕ ಮಂದಿ ಊಟಿ ಎಂದಾಕ್ಷಾಣ ಬೊಟಾನಿಕಲ್ ಗಾರ್ಡನ್, ಸರಸ್ಸಿನ ಬೋಟಿನ ಪ್ರಯಾಣ, ಟಿ ಮ್ಯೂಸಿಯಂನಂತಹದು ಮಾತ್ರವೇ ನೋಡಿ ಹಿಂದಿರುಗುತ್ತಾರೆ. ಆದರೆ ಊಟಿಯ ಜೊತೆ ಸುತ್ತ-ಮುತ್ತವಿರುವ ಇನ್ನು ಸುಂದರವಾದ ಪ್ರದೇಶಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲದೇ ಇರಬಹುದು. ಅವುಗಳಲ್ಲಿ ಮದುಮಲೈ, ವ್ಯಾಕ್ಸ್ ಮ್ಯೂಸಿಯಂನಂತಹ ಅನೇಕ ಸ್ಥಳಗಳು ಇವೆ. ಅವುಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆಯೋಣ.

1.ಪೈಕಾರ್

1.ಪೈಕಾರ್

ಸಮಯ...ವಾರದಲ್ಲಿ ಎಲ್ಲಾ ದಿನಗಳಲ್ಲಿಯೂ ಪ್ರವೇಶವಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6:30 ರವರೆಗೆ.

ಕ್ಯಾಮೆರಾವನ್ನು ತೆಗೆದುಕೊಂಡು ಹೋಗಲು ಅನುಮತಿ ಇದೆ.

ಬೋಟಿಂಗ್...ಆಯ್ದುಕೊಂಡ ಬೋಟನ್ನು ಅನುಸರಿಸಿ ಗಂಟೆಗೆ ರೂ. 750 ರಿಂದ ಪ್ರಾರಂಭ.

ವಾಟರ್ ಫಾಲ್ಸ್‍ಗೆ ಪ್ರವೇಶ ಶುಲ್ಕ...ಒಬ್ಬರಿಗೆ ರೂ.10

ಸಮೀಪವಿರುವ ಸುಂದರ ಪ್ರವಾಸಿ ತಾಣಗಳು ಮಧುಮಲೈ, ಬೈಸನ್ ವ್ಯಾಲಿ

ಪೈಕಾರ್ ಎಂಬುದು ಒಂದು ಗ್ರಾಮ, ಚಿಕ್ಕದಾದ ಸರೋವರ. ಇದು ಊಟಿಯಿಂದ ಕೇವಲ 19 ಕಿ.ಮೀ ದೂರದಲ್ಲಿರುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯವು ಮನಸ್ಸನ್ನು ಮೈಮರಿಸುತ್ತದೆ ಎಂದರೆ ಅತಿಶಯೋಕ್ತಿಯಾಗದು. ಈ ಪೈಕಾರ್ ಸರೋವರದಲ್ಲಿ ಬೋಟ್ ಹೌಸ್ ಪ್ರಯಾಣವು ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವವನ್ನು ಉಂಟು ಮಾಡುವಂತಹದು.

2.ಮದುಮಲೈ

2.ಮದುಮಲೈ

ವ್ಯಾನ್, ಎಲಿಫೆಂಟ್ ಸಫಾರಿ...ಬೆಳಗ್ಗೆ 6:30 ಗಂಟೆಯಿಂದ ಸಂಜೆ 6 ಗಂಟೆಯವರೆಗೆ.

ಪಾವತಿ ಶುಲ್ಕ...ವ್ಯಾನ್ ಸಫಾರಿ ಒಬ್ಬರಿಗೆ ರೂ.50, ಎಲಿಫೆಂಟ್ ಸಫಾರಿ ಒಬ್ಬರಿಗೆ ರೂ.100

ಪ್ರವೇಶ ಶುಲ್ಕ ಉಚಿತ

ಕ್ಯಾಮೆರಾ ಶುಲ್ಕ..ಸ್ಟಿಲ್ ಕ್ಯಾಮೆರಾ ರೂ.50, ವಿಡಿಯೋ ರೂ.250

ಸಮೀಪದಲ್ಲಿ ನೋಡಬೇಕಾಗಿರುವ ಸ್ಥಳ..ಪೈನ್ ಫಾರೆಸ್ಟ್, ಪೈಕಾರ್

ಊಟಿಯಿಂದ ಸುಮಾರು 46 ಕಿ.ಮೀ ದೂರದಲ್ಲಿದೆ.

ಮದುಮಲೈ ಎಂಬುದು ಎಲಿಫೆಂಟ್, ಟೈಗರ್ ರಿಜರ್ವ್ ಫಾರೆಸ್ಟ್. ಫೆಬ್ರವರಿಯಿಂದ ಮೇ ತಿಂಗಳವರೆಗೆ ಹಾಗು ಸೆಪ್ಟೆಂಬರ್‍ನಿಂದ ಅಕ್ಟೋಬರ್‍ನವರೆಗೆ ಈ ಪ್ರದೇಶವನ್ನು ಭೇಟಿಗಾಗಿ ಬಹಳ ಅನುಕೂಲಕರವಾಗಿರುತ್ತದೆ. ಸರ್ಕಾರಿ ವಾಹನಗಳನ್ನು ಹೊರತು ಖಾಸಗಿ ವಾಹನಗಳಿಗೆ ಈ ಅಭಯಾರಣ್ಯದ ಒಳಗೆ ಅನುಮತಿ ನೀಡುವುದಿಲ್ಲ.

3.ದೊಡ್ಡ ಬೆಟ್ಟ

3.ದೊಡ್ಡ ಬೆಟ್ಟ

ಸಮಯ....ವಾರದಲ್ಲಿ ಎಲ್ಲಾ ದಿನಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ.

ಪ್ರವೇಶ ಶುಲ್ಕ...ದೊಡ್ಡವರಿಗೆ ರೂ.10, ಚಿಕ್ಕ ಮಕ್ಕಳಿಗೆ ಉಚಿತ.

ಕ್ಯಾಮೆರಾ ಫಿಜ್‍ಗಳು...ರೂ.10, ವಿಡಿಯೋ ರೂ.50.

ಸಮೀಪವಿರುವ ಪ್ರವಾಸಿ ಪ್ರದೇಶಗಳು...ಟಿ ಮ್ಯೂಸಿಯಂ, ಬೋಟಾನಿಕಲ್ ಗಾರ್ಡನ್, ರೋಜ್ ಗಾರ್ಡನ್, ಊಟಿ ಲೇಕ್.

ಊಟಿ ಬಸ್ ನಿಲ್ದಾಣದಿಂದ ಕೇವಲ 10 ಕಿ.ಮೀ ದೂರದಲ್ಲಿದೆ.

ಪ್ರಕೃತಿ ಆರಾಧಕರು ಈ ಪ್ರದೇಶಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ. ಅಲ್ಲಿಂದ ಊಟಿ ಸೌಂದರ್ಯವನ್ನು ಕಾಣುವುದು ಅತ್ಯಂತ ಸುಂದರವಾಗಿರುತ್ತದೆ. ಎತ್ತರವಾದ ಪರ್ವತ ಶಿಖರಗಳು, ಟಿ ಎಸ್ಟೆಟ್ಸ್ ಇವೆಲ್ಲಾ ನೋಡುತ್ತಾ ಸಮಯವನ್ನು ಕಳೆಯಬಹುದು.

4.ವ್ಯಾಕ್ಸ್ ಮ್ಯೂಸಿಯಂ

4.ವ್ಯಾಕ್ಸ್ ಮ್ಯೂಸಿಯಂ

ಪ್ರವೇಶ ಸಮಯ.. ಬೆಳ್ಳಗ್ಗೆ 9 ಗಂಟೆಯಿಂ ಸಂಜೆ 8 ಗಂಟೆಯವರೆಗೆ

ಪ್ರವೇಶ ಶುಲ್ಕ... ದೊಡ್ಡವರಿಗೆ ಒಬ್ಬರಿಗೆ ರೂ.30, ಮಕ್ಕಳೊಬ್ಬರಿಗೆ ರೂ.20

ಕ್ಯಾಮೆರಾ ಶುಲ್ಕ....ರೂ.50, ವಿಡಿಯೋ ರೂ.100

ಸಮೀಪ ನೋಡಬೇಕಾಗಿರುವ ಪ್ರದೇಶಗಳು..ದೊಡ್ಡ ಬೆಟ್ಟ, ಬೋಟಾನಿಕಲ್ ಗಾರ್ಡ್‍ನ್, ರೋಜ್ ಗಾರ್ಡನ್, ಟಿ ಮ್ಯೂಸಿಯಂ, ಥಂಡರ್ ವರ್ಡ್.

ಊಟಿ ಬಸ್ ನಿಲ್ದಾಣದಿಂದ ಕೇವಲ 2 ಕಿ.ಮೀ ದೂರದಲ್ಲಿದೆ.

ಭಾರತೀಯ ಸಂಸ್ಕøತಿ ಸಂಪ್ರದಾಯಕ್ಕೆ ಕನ್ನಡಿ ಇಡುವ ಎಷ್ಟೊ ವಸ್ತುಗಳು ಈ ವ್ಯಾಕ್ಸ್ ಮ್ಯೂಸಿಯಂನಲ್ಲಿ ಕಾಣಬಹುದು. ಮುಖ್ಯವಾಗಿ ಭಾರತೀಯ ಚರಿತ್ರೆಯಲ್ಲಿ ದೊಡ್ಡ ಕೀರ್ತಿಯನ್ನು ಪಡೆದಿರುವ ಎಷ್ಟೊ ಮಂದಿ ವ್ಯಕ್ತಿಗಳ ವಿಗ್ರಹಗಳನ್ನು ಈ ವ್ಯಾಕ್ಸ್ ಮ್ಯೂಸಿಯಂನಲ್ಲಿ ಕಾಣಬಹುದು. ದೊಡ್ಡವರಿಗಿಂತ ಚಿಕ್ಕವರು ಈ ಮ್ಯೂಸಿಯಂನಲ್ಲಿ ಹೆಚ್ಚು ಎಂಜಾಯ್ ಮಾಡುತ್ತಾರೆ.

5.ಹಿಡನ್ ವ್ಯಾಲಿ

5.ಹಿಡನ್ ವ್ಯಾಲಿ

ಸಮಯ..ವಾರದಲ್ಲಿ ಎಲ್ಲಾ ದಿನಗಳು ಬೆಳಗ್ಗೆಯಿಂದ ಸಂಜೆಯವರೆಗೆ

ಶುಲ್ಕ...ಯಾವುದೇ ಶುಲ್ಕವಿಲ್ಲ

ಸಮೀಪದಲ್ಲಿ ನೋಡಬೇಕಾಗಿರುವ ಪ್ರದೇಶಗಳು...ಎಂ.ಆರ್.ಸಿ ಪಾಯಿಂಟ್, ವಿಲಿಂಗ್ ಟನ್ ಲೇಕ್, ಸಿಂಮ್ಸ್ ಪಾರ್ಕ್, ಟಿ ಮ್ಯೂಸಿಯಂ

ಈ ಹಿಡನ್ ವ್ಯಾಲಿ ಸಮೀಪಕ್ಕೆ ಸೇರಿಕೊಳ್ಳಲು ಸ್ವಲ್ಪ ದೂರ ಟ್ರೆಕ್ಕಿಂಗ್ ಮಾಡಬೇಕಾಗುತ್ತದೆ. ಹಾಗಾಗಿಯೇ ಅನೇಕ ಮಂದಿ ಪ್ರವಾಸಿಗರು ಈ ಪ್ರದೇಶವನ್ನು ನೋಡಿದರೆ ಮಾತ್ರವೇ ಊಟಿಯ ಸಂಪೂರ್ಣ ಪ್ರವಾಸವಾಗುತ್ತದೆ ಎಂದು ನಂಬಲಾಗಿದೆ. ಆದರೆ ಸುತ್ತಲೂ ಇರುವ ಪ್ರಕೃತಿ ಸೌಂದರ್ಯವನ್ನು ಕಾಣುತ್ತಿದ್ದರೆ ಸ್ವರ್ಗವೇ ನಮ್ಮ ಕಣ್ಣ ಮುಂದೆ ಇದೆ ಎಂಬ ರೀತಿಯಲ್ಲಿ ಅನುಭವವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X