Search
  • Follow NativePlanet
Share
» »ಈ ನೀರಿನಲ್ಲಿ ಮುಳುಗಿದರೆ ನಿತ್ಯವು ಯವ್ವನವಾಗಿರಬಹುದಂತೆ....

ಈ ನೀರಿನಲ್ಲಿ ಮುಳುಗಿದರೆ ನಿತ್ಯವು ಯವ್ವನವಾಗಿರಬಹುದಂತೆ....

By Sowmyabhai

ಶಿವಸ್ವರೂಪನಾದ ವೈದ್ಯನಾಥೇಶ್ವರ, ವಿಷ್ಣುಮೂರ್ತಿ ಸ್ವರೂಪವಾದ ಚೆನ್ನಕೇಶವಸ್ವಾಮಿ ನಿಲಯವಾದ ಪುಷ್ಪಗಿರಿ ಹರಿಹರ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಿದೆ. ಅದ್ಭುತ ಶಿಲ್ಪ ಸೌಂದರ್ಯದಿಂದ ಅಪರೂಪವಾದ ಕಟ್ಟಡಗಳಿಂದ ಈ ಕ್ಷೇತ್ರ ಕಂಗೊಳಿಸುತ್ತಿದೆ. ಅಂದಿನ ರಾಜವಂಶವನ್ನು ಅಭಿವೃದ್ಧಿ ಮಾಡುವ ಸಲುವಾಗಿ ಜನಮೇಜಯನು ಮಾಡಿದ ಸರ್ಪಯಾಗವು ಪಾಪ ಪರಿಹಾರಕ್ಕಾಗಿ ಶುಕ ಮಹರ್ಷಿ ಅದೇಶದ ಮೇಲೆ ಪುಷ್ಪಗಿರಿ ಬೆಟ್ಟದ ಮೇಲೆ ಈ ದೇವಾಲಯವನ್ನು ನಿರ್ಮಾಣ ಮಾಡಿದನು ಎಂದು ಚರಿತ್ರೆಯ ಮೂಲಕ ತಿಳಿದುಬರುತ್ತದೆ. ಚೋಳರು, ಪಲ್ಲವರು, ಕೃಷ್ಣದೇವರಾಯ ರಾಜ ವಂಶಿಕರು ನಂತರದ ಕಾಲದಲ್ಲಿ ದೇವಾಲಯವನ್ನು ಅಭಿವೃದ್ಧಿ ಮಾಡಿದರು ಎಂದು ಚರಿತ್ರೆಕಾರರ ಮೂಲಕ ತಿಳಿದು ಬರುತ್ತದೆ.

ಇಲ್ಲಿನ ಒಂದು ನದಿಯಲ್ಲಿ ಸ್ನಾನ ಮಾಡಿದರೆ ಸದಾ ಯವ್ವನವಾಗಿರಬಹುದಂತೆ. ಇದಕ್ಕೆ ಒಂದು ಪುರಾಣ ಕಥೆ ಕೂಡ ಇದೆ. ಆ ಕಥೆ ಏನು? ಎಂಬ ಹಲವಾರು ಪ್ರಶ್ನೆಗೆ ಉತ್ತರ ತಿಳಿಯೋಣ.

1.ಎಲ್ಲಿದೆ?

1.ಎಲ್ಲಿದೆ?

ಪುಷ್ಪಗಿರಿ, ವೈ.ಎಸ್.ಆರ್ ಜಿಲ್ಲೆಯಲ್ಲಿದೆ. ದಕ್ಷಿಣ ಕಾಶಿಯಾಗಿ ಪ್ರಸಿದ್ಧ ಹೊಂದಿದ ಪುಷ್ಪಗಿರಿ ಕಡಪದಿಂದ 16 ಕಿ.ಮೀ ದೂರದಲ್ಲಿದೆ. ಆದಿ ಶಂಕರರು ಪೂಜಿಸಿದ ಚಂದ್ರಮೌಳೀಶ್ವರ ಲಿಂಗ ಇಲ್ಲಿದೆ. ಇಲ್ಲಿ ವಿದ್ಯಾರಣ್ಯಸ್ವಾಮಿ ಶ್ರೀ ಚಕ್ರವನ್ನು ಪ್ರತಿಷ್ಟಾಪಿಸಿದ್ದಾರೆ.

2.ಪೆನ್ನಾ ನದಿ

2.ಪೆನ್ನಾ ನದಿ

ಕಡಪದಿಂದ ಕರ್ನೂಲಿಗೆ ಹೋಗುವ ಮಾರ್ಗದಲ್ಲಿ ಚೆನ್ನೂರು ಸಮೀಪದಲ್ಲಿ ಎಡ ಭಾಗದ ಒಂದು ದಾರಿ ಇದೆ. ಆ ಮಾರ್ಗದಲ್ಲಿ ಪುಷ್ಪಗಿರಿ ಬರುತ್ತದೆ. ಈ ಕ್ಷೇತ್ರವು ಒಂದು ಬೆಟ್ಟದ ಮೇಲಿದೆ. ಕೆಳಗೆ ಪುಪ್ಪಗಿರಿ ಗ್ರಾಮವಿದೆ. ಗ್ರಾಮಕ್ಕೆ ಹಾಗು ಕ್ಷೇತ್ರಕ್ಕೆ ಮಧ್ಯೆ ಪೆನ್ನಾ ನದಿ ಪ್ರವಹಿಸುತ್ತದೆ.

3.ಮಧ್ಯ ಕೈಲಾಸ

3.ಮಧ್ಯ ಕೈಲಾಸ

ಶೈವರಿಗೆ ಹಾಗು ವೈಷ್ಣವರಿಗೂ ಕೂಡ ಪುಷ್ಪಗಿರಿ ಪ್ರಮುಖವಾದ ಪುಣ್ಯಕ್ಷೇತ್ರವಾಗಿದೆ. ವೈಷ್ಣವರು ಇದನ್ನು "ಮಧ್ಯೆ ಆಹೋಬಿಲಂ" ಎಂದು, ಶೈವರು ಇದನ್ನು "ಮಧ್ಯ ಕೈಲಾಸ" ಎಂದು ಹೇಳುತ್ತಾರೆ. ಆಂಧ್ರ ಪ್ರದೇಶದಲ್ಲಿ ಇದೊಂದೇ ಶಂಕರಾಚಾರ್ಯ ಮಠ. ಈ ಪ್ರದೇಶದಲ್ಲಿ ಕಾಂಪಲ್ಲೆ ಎಂಬ ಗ್ರಾಮವಿದೆ.

4.ಅಮರತ್ವ

4.ಅಮರತ್ವ

ಒಂದು ಬಾರಿ ಪುರಾಣವನ್ನು ಕಿದುಕಿದರೆ ಗರುತ್ಮಂತನು ಇಂದ್ರನ ಅಮೃತವನ್ನು ತೆಗೆದುಕೊಂಡು ಬರುತ್ತಿರುತ್ತಾನೆ. ಆಗ ಇಂದ್ರನು ಅಡ್ಡ ಬರುತ್ತಾನೆ. ಅವರಿಬ್ಬರ ಮಧ್ಯೆಯು ಒಂದು ಹೋರಾಟ ನಡೆಯುತ್ತದೆ. ಆ ಸಮಯದಲ್ಲಿ ಅಮೃತದ ಕೆಲವು ಚುಕ್ಕೆಗಳು ಕಾಂಪಲ್ಲೆ ಸಮೀಪದಲ್ಲಿನ ನದಿಯಲ್ಲಿ ಬೀಳುತ್ತದೆ. ಅಂದಿನಿಂದ ಆ ನದಿ ತೀರದಲ್ಲಿ ಮುಳುಗುವವರಿಗೆ ನಿತ್ಯ ಯವ್ವನದಿಂದ ಇರುತ್ತಾರಂತೆ. ಹಾಗೆಯೇ ಅಮರತ್ವವು ಸಿದ್ಧಿಯಾಗುತ್ತದೆಯಂತೆ.

5.ಪಂಚನದಿ ಕ್ಷೇತ್ರ

5.ಪಂಚನದಿ ಕ್ಷೇತ್ರ

ದೇವತೆಗಳು ಭಯದಿಂದ ಶಿವನ ಆಶ್ರಯವನ್ನು ಪಡೆಯುತ್ತಾರೆ. ಶಿವನು ವಾಯು ದೇವನಿಗೆ ಆಜ್ಞಾಪಿಸುತ್ತಾನೆ. ವಾಯುವು ಕೈಲಾಸ ಪರ್ವತದಿಂದ ಒಂದು ಎಲೆಯನ್ನು ತೆಗೆದು ಆ ನದಿಯಲ್ಲಿ ಹಾಕುತ್ತಾನೆ. ಅದು ನದಿಯ ಪುಷ್ಪದಂತೆ ತೇಲುತ್ತಾ ಇರುತ್ತದೆ. ಅದೇ ಪುಷ್ಪಗಿರಿಯಾಯಿತು. ಪುಪ್ಪಗಿರಿ ಸಮೀಪದಲ್ಲಿ ಪಾಪಘ್ನಿ, ಕುಮುದ್ವತಿ, ವಲ್ಕಲ, ಮಾಂಡವಿ ನದಿಗಳು ಪೆನ್ನಾದಲ್ಲಿ ಲೀನವಾಗುತ್ತದೆ. ಹಾಗಾಗಿಯೇ ಪುಷ್ಪಗಿರಿ ಪಂಚನದಿ ಕ್ಷೇತ್ರ ಎಂದು ಕರೆಯುತ್ತಾರೆ.

6.ಅಪರೂಪ ಕಟ್ಟಡಗಳು

6.ಅಪರೂಪ ಕಟ್ಟಡಗಳು

ಶಿವ ಸ್ವರೂಪವಾದ ವೈದ್ಯನಾಥೇಶ್ವರನು, ವಿಷ್ಣು ಸ್ವರೂಪವಾದ ಚೆನ್ನಕೇಶವಸ್ವಾಮಿ ದೇವಾಲಯವಾದ ಪುಷ್ಪಗಿರಿ ಹರಿಹರ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಿದೆ. ಅದ್ಭುತವಾದ ಶಿಲ್ಪ ಸೌಂದರ್ಯದಿಂದ ಅಪರೂಪ ಕಟ್ಟಡದಿಂದ ಈ ಕ್ಷೇತ್ರ ಕಂಗೊಳಿಸುತ್ತಿರುತ್ತದೆ. ಪರೀಕ್ಷಿತ್ತು ವಂಶವನ್ನು ನಿರ್ವಿರ್ಯಂ ಮಾಡುವ ಸಲುವಾಗಿ ಜನಮೇಜನು ಮಾಡಿದ ಸರ್ಪಯಾಗವು ಪಾಪ ಪರಿಹಾರಕ್ಕಾಗಿ ಶುಕ ಮಹರ್ಷಿ ಅದೇಶದ ಮೇಲೆ ಪುಷ್ಪಗಿರಿ ಬೆಟ್ಟದ ಮೇಲೆ ಈ ದೇವಾಲಯವನ್ನು ನಿರ್ಮಾಣ ಮಾಡಿದನು ಎಂದು ಚರಿತ್ರೆಯ ಮೂಲಕ ತಿಳಿದುಬರುತ್ತದೆ.

7.ಬ್ರಹ್ಮೋತ್ಸವಗಳು

7.ಬ್ರಹ್ಮೋತ್ಸವಗಳು

ಪವಿತ್ರವಾದ ಪಿನಾಕಿನಿ ನದಿ ತೀರದಲ್ಲಿ ನೆಲೆಸಿದ ದಕ್ಷಿಣ ಕಾಶಿಯಾಗಿ ಹೆಸರುವಾಸಿಯಾದ ಪವಿತ್ರವಾದ ಪುಣ್ಯಕ್ಷೇತ್ರ ಪುಷ್ಪಗಿರಿಯಲ್ಲಿ ಏಪ್ರಿಲ್ 15 ರಿಂದ ಬ್ರಹ್ಮೋತ್ಸವಗಳು ನಡೆಯುತ್ತವೆ. ಶ್ರೀ ಲಕ್ಷ್ಮೀ ಚೆನ್ನಕೇಶವಸ್ವಾಮಿ, ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ವಾರ್ಷಿಕವಾಗಿ ಬ್ರಹ್ಮೋತ್ಸವಗಳು 24 ರವರೆಗೆ ವೈಭವವಾಗಿ ನಡೆಸುತ್ತಾರೆ.

8.ಬೆಟ್ಟದ ಮೇಲೆ ಆವರಣವಿದೆ

8.ಬೆಟ್ಟದ ಮೇಲೆ ಆವರಣವಿದೆ

ಬೆಟ್ಟದ ಮೇಲೆ ಒಂದೇ ಆವರಣದಲ್ಲಿ ಚೆನ್ನಕೇಶವ ದೇವಾಲಯ, ಸಂತಾನ ಮಲ್ಲೇಶ್ವರಾಲಯವಿದೆ. ಈ ಆವರಣದಲ್ಲಿ ಉಮಾ ಮಹೇಶ್ವರ, ರಾಜ್ಯಲಕ್ಷ್ಮೀ, ರುದ್ರಪಾದ, ಯೋಗಾಂಜನೇಯ, ಸಾಕ್ಷಿ ಮಲ್ಲೇಶ್ವರ ಸ್ವಾಮಿ ದೇವಾಲಯಗಳನ್ನು ಕೂಡ ದರ್ಶನ ಮಾಡಿಕೊಳ್ಳಬಹುದು. ಪುಪ್ಪಗಿರಿಯಲ್ಲಿನ ಪಾಪವಿನಾಶ, ಡುಂಡಿ ವಿನಾಯಕ, ಪುಪ್ಪನಾಥೇಶ್ವರ, ಕಮಲಸಂಭೇಶ್ವರ, ದುರ್ಗಾಂಭ ದೇವಾಲಯಗಳಿವೆ.

9.ತ್ರಿಕೋಟೇಶ್ವರ

9.ತ್ರಿಕೋಟೇಶ್ವರ

ರುದ್ರ ಪಾದ, ವಿಷ್ಣು ಪಾದ ಈ ಬೆಟ್ಟದ ಮೇಲೆಯೇ ಇದೆ. ಪುಷ್ಪಗಿರಿಯ ಕೆಳಗೆ ವೈದ್ಯನಾಥೇಶ್ವರ, ತ್ರಿಕುಟೇಶ್ವರ, ಭೀಮಲಿಂಗೇಶ್ವರ, ಕಾಮಾಕ್ಷಿ ದೇವಿ ದೇವಾಲಯಗಳು ಇವೆ, ವೈದ್ಯ ನಾಥೇಶ್ವರ, ಭೀಮೇಶ್ವರ, ತ್ರಿಕೂಟೇಶ್ವರ ಇಲ್ಲಿ ನೆಲೆಸಿದ್ದಾರೆ. ವೈದ್ಯ ನಾಥೇಶ್ವರ ದೇವಾಲಯವು ಶ್ರೀ ಕಾಮಾಕ್ಷಿ ಮಂದಿರ ಕೂಡ ಇದೆ.

10.ಭಕ್ತರು

10.ಭಕ್ತರು

ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಜಗದ್ಗುರು ಆದಿಶಂಕರಾಚಾರ್ಯರ ಸ್ವಹಸ್ತದಿಂದ ಪ್ರತಿಷ್ಟಾಪಿಸಿದ ಈ ಚಕ್ರವನ್ನು ದರ್ಶಿಸಿಕೊಳ್ಳುವುದು ಭಕ್ತರು ತಮ್ಮ ಭಾಗ್ಯ ಎಂದು ಭಾವಿಸುತ್ತಾರೆ.

11.ಶಿಲ್ಪ ಸೌಂದರ್ಯ

11.ಶಿಲ್ಪ ಸೌಂದರ್ಯ

ಪುಷ್ಪಗಿರಿಯಲ್ಲಿನ ಶಿಲ್ಪಕಲಾ ಸಂಪತ್ತಿಗೆ ಮತ್ತೊಂದು ಹೆಸರು. ದೇವಾಲಯದ ಹೊರಗೆ ಗೋಡೆಯ ಮೇಲೆ ಶಿಲ್ಪಗಳನ್ನು ನೋಡಬಹುದು. ಅಲ್ಲಿ ಸಾಲಾಗಿ ಕೆತ್ತಲಾಗಿರುವ ಆನೆಗಳು, ವೀರರ ಚಿತ್ರಗಳು ಅತ್ಯಂತ ರಮಣೀಯವಾಗಿವೆ. ಭಾರತದ ರಾಮಾಯಣದಲ್ಲಿ ಮುಖ್ಯವಾದ ಘಟನೆಗಳನ್ನು ಕೂಡ ಇಲ್ಲಿ ಚಿತ್ರೀಕರಿಸಿದ್ದಾರೆ.

12.ಪುಪ್ಪಗಿರಿಗೆ ಸೇರಿಕೊಳ್ಳುವ ಮಾರ್ಗಗಳು

12.ಪುಪ್ಪಗಿರಿಗೆ ಸೇರಿಕೊಳ್ಳುವ ಮಾರ್ಗಗಳು

ಪುಷ್ಪಗಿರಿಗೆ ಸೇರಿಕೊಳ್ಳುವುದಕ್ಕೆ ಮೂರು ಮಾರ್ಗಗಳಿವೆ.

ಕಡಪದಿಂದ ಚೆನ್ನೂರು ಮಾರ್ಗದಲ್ಲಿ ಉಪ್ಪರಾಪಲ್ಲಿ ಮುಖಾಂತರ ಬೆಟ್ಟಕ್ಕೆ ಸೇರಿಕೊಳ್ಳಬಹುದು. ಖಾಜಿಪೇಟೆಯಿಂದ ವಯಾ ಚಿಂತಲಪತ್ತೂರು ಮೇಲೆ ಭಕ್ತರು ಹೆಚ್ಚಾಗಿ ಬರುವ ಸಲುವಾಗಿ ವಾಹಾನಗಳು ಹೆಚ್ಚಾಗಿ ತಿರುಗುತ್ತಾ ಇರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X