Search
  • Follow NativePlanet
Share
» »ಈಶಾನ್ಯ ಭಾರತದ ತಲ್ಲಣ ಗೊಳಿಸುವ ಅರಣ್ಯಗಳು

ಈಶಾನ್ಯ ಭಾರತದ ತಲ್ಲಣ ಗೊಳಿಸುವ ಅರಣ್ಯಗಳು

By Vijay

ಈಶಾನ್ಯ ಭಾರತವು ಭಾರತದ ಪ್ರವಾಸೋದ್ಯಮಕ್ಕೆ ತಮ್ಮದೆ ಆದ ರೀತಿಯಲ್ಲಿ ವಿಶಿಷ್ಟವಾದ ಕೊಡುಗೆಯನ್ನು ನೀಡುತ್ತದೆ. ಈಶಾನ್ಯ ಭಾರತದಲ್ಲಿ ಆವರಿಸಿರುವ ರಾಜ್ಯಗಳು ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ ಎತ್ತರದಲ್ಲಿ ನೆಲೆಸಿರುವುದೂ ಅಲ್ಲದೆ ಹಚ್ಚ ಹಸಿರಿನ ಸಂಪತ್ತಿನಿಂದ ಕಂಗೊಳಿಸುವ ಕಾಡುಗಳು, ಮೋಡಗಳನ್ನು ಚುಂಬಿಸುವಂತಿರುವ ಎತ್ತರದ ಬೆಟ್ಟ ಗುಡ್ಡಗಳು, ತಾಜಾ ಪರಿಸರ, ಕಲ್ಮಶರಹಿತ ವಾತಾವರಣ, ಜುಳು ಜುಳು ಎಂದು ನಾದ ಮಾಡುತ ಹರಿಯುವ ನದಿ, ಕೆರೆ ತೊರೆಗಳನ್ನು ಒಳಗೊಂಡಿರುವುದರಿಂದ ವನ್ಯಜೀವಿ ಸಂಪತ್ತಿಗೂ ಅದ್ಭುತವಾದ ಆಶ್ರಯ ತಾಣವಾಗಿದೆ.

ಗೋಐಬಿಬೊದ ಎಲ್ಲ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ

ಅಂತೆಯೆ ಈಶಾನ್ಯ ಭಾರತದಲ್ಲಿ ಕೆಲ ಸುಂದರ, ಕಣ್ಮನ ಸೆಳೆಯುವ ಹಾಗೂ ವೈವಿಧ್ಯಮಯ ಜೀವ ಸಂಪತ್ತಿನಿಂದ ಕಂಗೊಳಿಸುವ ಸಾಕಷ್ಟು ಅರಣ್ಯಗಳನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಉತ್ತರ ಭಾರತದ ಪ್ರವಾಸಿಗರು ಹಾಗೂ ವಿದೇಶಿಯರು ಈ ಭಾಗದ ಕೆಲವು ಅದ್ಭುತವಾದ ರಾಷ್ಟ್ರೀಯ ಉದ್ಯಾನಗಳಿಗೆ ಭೇಟೀ ನೀಡುತ್ತಲೆ ಇರುತ್ತಾರೆ ಕಾರಣ ಇಲ್ಲಿನ ಪ್ರಕೃತಿ ಸೌಂದರ್ಯ ಒಮ್ಮೆ ಭೇಟಿ ನೀಡಿದರೆ ಮತ್ತೆ ಮತ್ತೆ ಬರುವಂತೆ ಪ್ರೇರೆಪಿಸುತ್ತದೆ ಎಂದರೂ ತಪ್ಪಾಗಲಿಕ್ಕಿಲ್ಲ.

ವಿಶೇಷ ಲೇಖನ : ಭಾರತದ ಹತ್ತು ಅದ್ಭುತ ರೋಮಾಂಚಕ ಸ್ಥಳಗಳು

ಪ್ರಸ್ತುತ ಲೇಖನದ ಮೂಲಕ ಈಶಾನ್ಯ ಭಾರತದ ಕೆಲ ಪ್ರಮುಖ ರಾಷ್ಟ್ರೀಯ ಅಭಯಾರಣ್ಯಗಳು ಹಾಗೂ ಅಲ್ಲಿ ಕಂಡುಬರುವ ವಿಶಿಷ್ಟ ಪ್ರಾಣಿ ಪಕ್ಷಿಗಳ ಕುರಿತು ತಿಳಿಯಿರಿ.

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಹೆಮ್ಮೆಯ ತಾಣಗಳಲ್ಲಿ ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ ಘೇಂಡಾಮೃಗಗಳ ಆಶ್ರಯ ತಾಣವಾಗಿ ಪ್ರಸಿದ್ಧಿಯನ್ನು ಪಡೆದಿದೆ.

ಚಿತ್ರಕೃಪೆ: Rennett Stowe

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಒಂದು ಕೊಂಬಿನ ಘೇಂಡಾಮೃಗಗಳಿಗೆ, ಹುಲಿಗಳಿಗೆ ಹಾಗು ವೈವಿಧ್ಯಮಯವಾದ ಪಕ್ಷಿ ಸಂಪತ್ತಿಗೆ ಖ್ಯಾತಿ ಪಡೆದ ತಾಣ. ಅಲ್ಲದೆ ಇದು ಪ್ರಪಂಚದಲ್ಲೇ ಹೆಚ್ಚಿನ ಪ್ರಮಾಣದ ಹುಲಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರಾಷ್ಟ್ರೀಯ ಉದ್ಯಾನವನವು ಯುನೆಸ್ಕೋದ ವಿಶ್ವಪಾರಂಪರಿಕ ತಾಣದ ಪಟ್ಟಿಗೆ ಸಹ ಸೇರಲ್ಪಟ್ಟಿದೆ.

ಚಿತ್ರಕೃಪೆ: Subharnab Majumdar

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಸುಮಾರು 429.93 ಚ.ಕಿ.ಮೀ ವ್ಯಾಪ್ತಿಯಷ್ಟು ವಿಸ್ತೀರ್ಣವನ್ನು ಹೊಂದಿರುವ ಈ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಗೋಲಘಾಟ್ ಮತ್ತು ನೊವಗಾಂವ್ ಜಿಲ್ಲೆಗಳಲ್ಲಿ ವ್ಯಾಪಿಸಿದೆ.

ಚಿತ್ರಕೃಪೆ: Sankara Subramanian

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಕಾಜಿರಂಗಾದಲ್ಲಿ ಪ್ರವಾಸ ಕೈಗೊಂಡಾಗ ನೀವು ಕೇವಲ ಘೇಂಡಾಮೃಗ ಮತ್ತು ಹುಲಿಗಳನ್ನು ಮಾತ್ರವಲ್ಲದೆ, ಏಶಿಯಾಟಿಕ್ ಆನೆಗಳು, ಏಶಿಯಾಟಿಕ್ ನೀರು ಎಮ್ಮೆಗಳು ಮತ್ತು ಜೌಗು ಪ್ರದೇಶದಲ್ಲಿ ಕಂಡು ಬರುವ ಜಿಂಕೆಗಳನ್ನು ಇಲ್ಲಿ ಬಹುಸಂಖ್ಯೆಯಲ್ಲಿ ನೋಡಬಹುದು. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ವಿಪುಲವಾದ ಪಕ್ಷಿ ಸಂಪತ್ತಿಗೆ ಸಹ ಹೆಸರುವಾಸಿಯಾಗಿದೆ. ಇಲ್ಲಿಗೆ ವಿದೇಶಿ ವಲಸೆ ಹಕ್ಕಿಗಳು ಮತ್ತು ದೇಶಿ ಹಕ್ಕಿಗಳು ಸ್ವಚ್ಛಂಧವಾಗಿ ಹಾರಾಡುವುದನ್ನು ನಾವು ಇಲ್ಲಿ ನೋಡಬಹುದು.

ಚಿತ್ರಕೃಪೆ: Prashant Ram

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ನಮ್ದಫಾ ರಾಷ್ಟ್ರೀಯ ಉದ್ಯಾನ : 1,850 ಚಕಿಮೀ ವಿಸ್ತೀರ್ಣದಲ್ಲಿ ವಿಶಾಲವಾಗಿ ಹರಡಿರುವ ಈ ಭವ್ಯ ಅರಣ್ಯವು ಅರುಣಾಚಲ ಪ್ರದೇಶ ರಾಜ್ಯದಲ್ಲಿದ್ದು, ಅದ್ಭುತವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದೆ.

ಚಿತ್ರಕೃಪೆ: Travelling Slacker

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಪ್ರದೇಶದ ಭೌಗೋಳಿಕತೆಯು ಸಮತಟ್ಟಾದ ಪ್ರದೇಶಗಳಿಂದ ಹಿಡಿದು 4,500 ಮೀ ಗಳಷ್ಟು ಸಮುದ್ರ ಮಟ್ಟದಿಂದ ಎತ್ತರವಿರುವ ಪ್ರದೇಶಗಳವರೆಗೆ ಹರಡಿರುವುದರಿಂದ ವೈವಿಧ್ಯಮಯ ಪ್ರಾಣಿ ಪಕ್ಷಿಗಳ ಸಂಕುಲವನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Prashanthns

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಅಲ್ಲದೆ ಇದು ಒಂದು ಹುಲಿ ಮೀಸಲು ಪ್ರದೇಶವೂ ಸಹ ಆಗಿದ್ದು ಸಾಹಸಿ ಪ್ರವೃತ್ತಿಯ ಪ್ರವಾಸಿಗರಿಗೆ ಅದ್ಭುತವಾದ ಚಾರಣ ಮಾರ್ಗಗಳನ್ನೂ ಸಹ ಒದಗಿಸುತ್ತದೆ. ಹಿಮಚಿರತೆ ಹಾಗೂ ಬಲು ಅಪರೂಪದ ಚಿಟ್ಟೆಗಳನ್ನೂ ಸಹ ಈ ಉದ್ಯಾನವನದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Aparajita Datta

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಆಸ್ಸಾಮಿನ ಬ್ರಹ್ಮಪುತ್ರಾ ನದಿ ತಟದ ದರ್‍ರಾಂಗ್ ಹಾಗೂ ಸೋನಿತ್ಪುರ ಜಿಲ್ಲೆಗಳಲ್ಲಿ ಹರಡಿರುವ ಒರಾಂಗ್ ರಾಷ್ಟ್ರೀಯ ಉದ್ಯಾನವನವು ಭಾರತದ ಒಂದು ಕೊಂಬಿನ ಘೆಂಡಾಮೃಗಗಳ ಉಪಸ್ಥಿತಿಗೆ ಪ್ರಸಿದ್ಧಿ ಪಡೆದಿದೆ. ಇದನ್ನು ಮಿನಿ ಕಾಜೀರಂಗಾ ಎಂತಲೂ ಸಹ ಕರೆಯಲಾಗುತ್ತದೆ. ಇದರ ವಿಸ್ತೀರ್ಣ ಸುಮಾರು 78.81 ಚ.ಕಿ.ಮೀ.

ಚಿತ್ರಕೃಪೆ: Kristof vt

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಯುನೆಸ್ಕೊದಿಂದ ಪ್ರಾಕೃತಿಕ ವಿಶ್ವ ಪಾರಂಪರಿಕ ತಾಣ ಎಂಬ ಖ್ಯಾತಿಗೆ ಪಾತ್ರವಾಗಿರುವ ಮಾನಸ ರಾಷ್ಟ್ರೀಯ ಉದ್ಯಾನವು ಆಸ್ಸಾಮಿನ ಜೈವಿಕ ವಲಯ ಹಾಗೂ ಆನೆ ಮೀಸಲು ಪ್ರದೇಶವೂ ಸಹ ಆಗಿದೆ. ಇಲ್ಲಿ ಹರಿದಿರುವ ಮಾನಸ ನದಿಯಿಂದ ಇದಕ್ಕೆ ಈ ಹೆಸರು ಬಂದಿದೆ.

ಚಿತ್ರಕೃಪೆ: Chandrashekhar

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈ ರಾಷ್ಟ್ರೀಯ ಉದ್ಯಾನವನವು ಗೋಲ್ಡನ್ ಲಂಗೂರ್, ವಿಶಿಷ್ಟ ಡುಬ್ಬವಿರುವ ಆಸ್ಸಾಮಿನ ಆಮೆ ಹಾಗೂ ವಿಶಿಷ್ಟ ಆಸ್ಸಾಮಿ ಕಾಡು ಹಂದಿ ಹೀಗೆ ಕೆಲ ಅಳಿವಿನಂಚಿನಲ್ಲಿರುವ ಅಪರೂಪದ ಜೀವರಾಶಿಗಳಿಗೆ ಆವಾಸ ಸ್ಥಾನವಾಗಿರುವುದು ವಿಶೇಷ. ಚಿತ್ರದಲ್ಲಿರುವುದು ಗೋಲ್ಡನ್ ಲಂಗೂರ್ ಎಂಬ ಕೋತಿ.

ಚಿತ್ರಕೃಪೆ: Pankaj Kaushal

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ವಿಶಿಷ್ಟ ಡುಬ್ಬವಿರುವ ಆಸ್ಸಾಮಿನ ಆಮೆ.

ಚಿತ್ರಕೃಪೆ: Nandini Velho

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಮಾನಸ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬರುವ ಬಲು ಅಪರೂಪದ ಪಿಗ್ಮಿ ಹಾಗ್ ಅಥವಾ ಒಂದು ವಿಶಿಷ್ಟ ಆಸ್ಸಾಮಿ ಹಂದಿ.

ಚಿತ್ರಕೃಪೆ: Joydeep Chakrabarty

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಅಸ್ಸಾಮಿನ ಮರಿಗಾಂವ್ ಜಿಲ್ಲೆಯಲ್ಲಿರುವ ಪೊಬಿತೊರಾ ವನ್ಯಜೀವಿ ಅಭಯಾರಣ್ಯವು ಗುವಾಹಾಟಿಯಿಂದ 50 ಕಿ.ಮೀ ದೂರದಲ್ಲಿದೆ. ಈ ಅಭಯಾರಣ್ಯದ ವಿಶೇಷತೆಯೆಂದರೆ ಇದರ ಒಟ್ಟು 30.8 ಚ.ಕಿ.ಮೀ ವಿಸ್ತೀರ್ಣದಲ್ಲಿ ಸುಮಾರು 16 ಚ.ಕಿ.ಮೀ ಯಷ್ಟು ಪ್ರದೇಶವು ಒಂದು ಕೊಂಬಿನ ಘೆಂಡಾಮೃಗಗಳಿಂದ ಆವೃತವಾಗಿದೆ.

ಚಿತ್ರಕೃಪೆ: Travelling Slacker

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಇಲ್ಲಿ ಪ್ರತಿ ವರ್ಷವು ವಲಸೆ ಹಕ್ಕಿಗಳೂ ಸಹ ಬರುತ್ತವೆ. ಏಷಿಯನ್ ಕಾಡೆಮ್ಮೆಗಳು, ಚಿರತೆಗಳು, ಕಾಡು ಬೆಕ್ಕುಗಳು, ಕರಡಿಗಳು ಹೀಗೆ ಹಲವು ಪ್ರಾಣಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅಕ್ಟೋಬರ್ ನಿಂದ ಏಪ್ರಿಲ್ ಮಧ್ಯದಲ್ಲಿನ ಅವಧಿಯು ಇಲ್ಲಿಗೆ ಭೇಟಿ ನೀಡಲು ಸೂಕ್ತವಾಗಿದೆ.

ಚಿತ್ರಕೃಪೆ: Travelling Slacker

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಸೆಪಾಹಿಜೊಲಾ ವನ್ಯಜೀವಿ ಧಾಮವು ಆಸ್ಸಾಂ ರಾಜ್ಯದ ಮತ್ತೊಂದು ಅಭಯಾರಣ್ಯ. ಇದು ಪ್ರಮುಖವಾಗಿ ಕನ್ನಡಕಧಾರಿ ಕೋತಿಗಳಿಗೆ ಹೆಸರುವಾಸಿಯಾಗಿದೆ. ಈ ಕೋತಿಗಳು ಅಪಾಯದಂಚಿನಲ್ಲಿರುವ ಸುಂದರ ಜೀವಿಗಳಾಗಿವೆ. ಇದರ ಕಣ್ಣುಗಳು ಕನ್ನಡಕ ಧರಿಸಿರುವಂತೆ ರಚಿಸಲ್ಪಟಿರುವುದು ವಿಶೇಷ.

ಚಿತ್ರಕೃಪೆ: Charlesjsharp

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಮಣಿಪುರ ರಾಜ್ಯದ ಬಿಷ್ಣುಪುರದ ಪ್ರವಾಸಿ ತಾಣಗಳಲ್ಲಿ ನಮಗೆ ಅಗ್ರಪಟ್ಟಿಯಲ್ಲಿ ಕಾಣಸಿಗುವುದೆಂದರೆ 'ಕೈಬುಲ್ ಲಾಮ್ಜಾವೋ' ರಾಷ್ತ್ರೀಯ ಉದ್ಯಾನವನ. ವಿಶ್ವದ ಅತ್ಯಂತ ದೊಡ್ಡ ತೇಲುವ ಉದ್ಯಾನವನವೆಂದೇ ಪ್ರಖ್ಯಾತಿ ಪಡೆದಿರುವ ಈ ಉದ್ಯಾನವನವು ಸರೋವರದ ದಕ್ಷಿಣ ಪಾತ್ರದಲ್ಲಿದೆ. ಇದು ತೇಲಲು ಕಾರಣ ಇಲ್ಲಿರುವ ಏಕರೂಪದ ಪರಿಸರ ವ್ಯವಸ್ಥೆ. 'ಫುಮ್ಡಿ'ಗಳೆಂದು ಕರೆಯಲ್ಪಡುವ ತೇಲುವ ಜೌಗು ಸಸ್ಯಗಳೇ ಇದಕ್ಕೆ ಕಾರಣ. ಲೋಕ್ತಾಕ್ ಸರೋವರದ ಅವಿಭಾಜ್ಯ ಅಂಗವಾಗಿರುವ 'ಕೈಬುಲ್ ಲಾಮ್ಜಾವೋ' ಉದ್ಯಾನವನವು ಬಿಷ್ಣುಪುರದ ಹತ್ತಿರದಲ್ಲಿರುವ 'ತಂಗಾ' ಎನ್ನುವ ಪಟ್ಟಣದಲ್ಲಿದೆ. ರಾಷ್ಟ್ರೀಯ ವನದಲ್ಲಿರುವ ಒಂದು ಭಾರಿ ಗಾತ್ರದ ಹೆಬ್ಬಾವು.

ಚಿತ್ರಕೃಪೆ: priyasavy

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಹೂಲೊಂಗಾಪಾರ್ ಗಿಬ್ಬನ್ ವನ್ಯಜೀವಿ ಅಭಯಾರಣ್ಯವು ಭಾರತದಲ್ಲಿ ಹುಲ್ಲಾಕ್ ಗಿಬ್ಬನ್ ಗಳಿರುವ ಏಕೈಕ ವನ್ಯಜೀವಿ ಅಭಯಾರಣ್ಯ. ಹುಲ್ಲಾಕ್ ಗಿಬ್ಬಾನ್ನುಗಳೆಂದರೆ ಒಂದು ಜಾತಿಯ ಅಪರೂಪದ ಕೋತಿಗಳು. ಇವು ಈ ಅಭಯಾರಣ್ಯದಲ್ಲಿ ಮಾತ್ರ ಕಣಲು ಸಿಗುತ್ತವೆ.

ಚಿತ್ರಕೃಪೆ: Madhur Mangal

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

20.98 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ಸಣ್ಣ ಅಭಯಾರಣ್ಯವು ಹಲವಾರು ಪ್ರಾಣಿ ಮತ್ತು ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ಹೊಲ್ಲೊನ್ಗಪರ್ ಗಿಬ್ಬನ್ ವನ್ಯಜೀವಿ ಅಭಯಾರಣ್ಯದಲ್ಲಿ ಪ್ರವಾಸಿಗರು ಬಂಗಾಳದ ಕಾಡುಪಾಪ, ಆನೆ, ಹುಲಿ, ಚಿರತೆ, ಪಂನ್ಗೊಲಿನ್ಸ್, ಹಂದಿ ಬಾಲದ ಕೋತಿ, ಅಸ್ಸಾಮಿ ಕೋತಿ, ತುಂಡು ಬಾಲದ ಕೋತಿ, ಚಿಕ್ಕ ಬಾಲದ ಕೋತಿ ಮತ್ತು ಟೋಪಿ ಮುಸುವಗಳನ್ನು ಕಾಣಬಹುದು. ಪಕ್ಷಿಗಳನ್ನು ವೀಕ್ಷಿಸುವುದು ಇಲ್ಲಿನ ಸಾಮಾನ್ಯ ಚಟುವಟಿಕೆ.

ಚಿತ್ರಕೃಪೆ: Macaca77

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ತೇಜಪುರ್ ನಿಂದ 35 ಕಿ.ಮೀ. ದೂರದಲ್ಲಿರುವ ಮನೆರಿ ರಾಷ್ಟ್ರೀಯ ಉದ್ಯಾನ, ಸೋನಿತಪುರ ಜಿಲ್ಲೆಯಲ್ಲಿದೆ. ಸುಮಾರು 200 ಚದರ ಅಡಿ ಕಿ.ಮೀ. ವ್ಯಾಪಿಸಿರುವ ರಾಷ್ಟ್ರೀಯ ಉದ್ಯಾನದ ಉತ್ತರ ಭಾಗವು ಅರುಣಾಚಲ ಪ್ರದೇಶದ ಪಖುಯಿ ವನ್ಯಜೀವ ಅಭಯಾರಣ್ಯದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.

ಚಿತ್ರಕೃಪೆ: Sankara Subramanian

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಕೆಳ ಹಿಮಾಲಯದ ತಪ್ಪಲಿನಲ್ಲಿರುವ ನಮೆರಿ ರಾಷ್ಟ್ರೀಯ ಉದ್ಯಾನವು ಹಲವಾರು ವಿಧದ ಸಸ್ಯರಾಶಿ ಮತ್ತು ಪ್ರಾಣಿಸಂಕುಲಕ್ಕೆ ಆಶ್ರಯತಾಣ. ಆನೆಗಳು ಬಹುಸಂಖ್ಯೆಯಲ್ಲಿರುವ ಉದ್ಯಾನ ಚಿರತೆಗಳು, ಬೈಸನ್ಸ್, ಕಪ್ಪುಕರಡಿ, ಲಂಗೂರ್ ಗಳಿಗೆ ವಾಸಸ್ಥಾನ. ಹಾರ್ನ್ ಬಿಲ್, ಗೊರವಗಳು, ಬಾತುಕೋಳಿಗಳು, ಕಳ್ಳಿಪೀರಗಳು ಮತ್ತು ಹರಟೆಹಕ್ಕಿಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Vikramjit Kakati

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಈಶಾನ್ಯ ಭಾರತದ ಪ್ರಮುಖ ಕಾಡುಗಳು:

ಬಾಗ್ಮಾರಾ ರಾಷ್ಟ್ರೀಯ ಅರಣ್ಯವು ಮೇಘಾಲಯ ರಾಜ್ಯದ ದಕ್ಷಿಣ ಗ್ಯಾರೊ ಹಿಲ್ಸ್ ಜಿಲ್ಲೆಯಲ್ಲಿದೆ. ಅದ್ಭುತ ಸಸ್ಯರಾಶಿಗಳಿಗೆ ಈ ಅರಣ್ಯವು ಪ್ರಸಿದ್ಧವಾಗಿದೆ. ಇದರ ವಿಶೇಷತೆ ಇಲ್ಲಿ ಕಂಡುಬರುವ ಮಾಂಸಾಹಾರಿ ಸಸ್ಯ. ಅಲ್ಲದೆ ವೈವಿಧ್ಯಮಯ ಜೀವರಾಶಿಗಳನ್ನು ಪ್ರವಾಸಿಗರು ಇಲ್ಲಿ ನೋಡಿ ಆನಂದಿಸಬಹುದು. ಚಿತ್ರದಲ್ಲಿರುವುದು ಪಿಚರ್ ಸಸ್ಯ. ಇದರ ವಿಶೇಷತೆ ಎಂದರೆ ಇದು ಮಾಂಸಾಹಾರಿ ಸಸ್ಯ. ತನ್ನೊಳಗೆ ಮಕರಂದ ಆರಿಸಿ ಬರುವ ದುಂಬಿಗಳನ್ನು ಇಲ್ಲವೆ ಚಿಕ್ಕ ಪುಟ್ಟ ಹಕ್ಕಿಗಳನ್ನು ಇದು ಹಿಡಿದು ಜೀರ್ಣಿಸಿಕೊಳ್ಳುತ್ತದೆ.

ಚಿತ್ರಕೃಪೆ: CCFoodTravel.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X