Search
  • Follow NativePlanet
Share
» »ಪ್ರಿ ವೆಡ್ಡಿಂಗ್ ಫೋಟೋಶೂಟ್ ‘ಗೆ ಬೆಂಗಳೂರಿನಲ್ಲಿರೋ ಈ ಸ್ಥಳಗಳು ಬೆಸ್ಟ್

ಪ್ರಿ ವೆಡ್ಡಿಂಗ್ ಫೋಟೋಶೂಟ್ ‘ಗೆ ಬೆಂಗಳೂರಿನಲ್ಲಿರೋ ಈ ಸ್ಥಳಗಳು ಬೆಸ್ಟ್

ಈಗೆಲ್ಲಾ ಪ್ರಿ ವೆಡ್ಡಿಂಗ್ ಫೋಟೋಶೂಟ್ ಸಾಮಾನ್ಯವಾಗಿದೆ. ಮೊದಲೆಲ್ಲಾ ಶ್ರೀಮಂತ ವರ್ಗದವರಿಗೆ ಮಾತ್ರ ಸೀಮಿತವಾಗಿದ್ದ ಈ ವೆಡ್ಡಿಂಗ್ ಫೋಟೋಶೂಟ್, ಇತ್ತೀಚಿನ ದಿನಗಳಲ್ಲಿ ಸಾರ್ವತ್ರಿಕವಾಗಿ ಕೈಗೆಟಕುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮದುವೆಗೆ ಕೆಲವೇ ದಿನಗಳು, ವಾರಗಳು ಅಥವಾ ತಿಂಗಳುಗಳ ಇರುವಾಗ ನಡೆಯುತ್ತದೆ. ಇದನ್ನು ಕೆಲವರು ಎಂಗೇಜ್ ಮೆಂಟ್ ಫೋಟೋಶೂಟ್ ಎಂದೂ ಕರೆಯುತ್ತಾರೆ. ಅಂದಹಾಗೆ ಪ್ರಿ ವೆಡ್ಡಿಂಗ್ ಫೋಟೋಗಳನ್ನು ಆಮಂತ್ರಣ ಪತ್ರಿಕೆ ಅಥವಾ ವೆಲ್ ಕಂ ಬೋರ್ಡ್‌ನಲ್ಲಿಯೂ ಬಳಸಬಹುದು.

ನೀವು ಪ್ರಕೃತಿ ಪ್ರಿಯರಾಗಿದ್ದರೆ ಉದ್ಯಾನದಲ್ಲಿ, ಪಾರ್ಟಿ ಮತ್ತು ನಗರ ಜೀವನವನ್ನು ಇಷ್ಟಪಡುತ್ತಿದ್ದರೆ ವರ್ಣರಂಜಿತ ನಿಯಾನ್ ದೀಪಗಳ ಬೆಳಕಿನಡಿಯಲ್ಲಿ ಅಥವಾ ನೈಟ್ ಕ್ಲಬ್‌ನಲ್ಲಿ ಫೋಟೋಗಳನ್ನು ತೆಗೆದುಕೊಳ್ಳಬಹುದು. ನೀವು ಭಾವನಾತ್ಮಕ ವ್ಯಕ್ತಿಗಳಾಗಿದ್ದರೆ ಮೊದಲು ಭೇಟಿಯಾದ ಸ್ಥಳದಲ್ಲಿಯೂ ಫೋಟೋಶೂಟ್ ಮಾಡಿಸಬಹುದು. ಹಾಗಾಗಿ ಇಂದು ಈ ಲೇಖನದಲ್ಲಿ ಮದುವೆಯಾಗುತ್ತಿರುವ ಜೋಡಿಗಳಿಗೆ ಕೆಲವು ಪ್ರಿ ವೆಡ್ಡಿಂಗ್ ಫೋಟೋಶೂಟ್ ಸ್ಥಳಗಳ ಬಗ್ಗೆ ಮಾಹಿತಿ ಕೊಡುತ್ತಿದ್ದೇವೆ. ಬೆಂಗಳೂರಿನಲ್ಲಿರುವ ಈ ಸ್ಥಳಗಳು ಬಹಳ ಸುಂದರವಾಗಿದ್ದು, ನಿಮಗೆ ಈ ಫೋಟೋಶೂಟ್ ಲೈಫ್ ಟೈಮ್ ನೆನಪಿನಲ್ಲಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಲಾಲ್ ಬಾಗ್

ಲಾಲ್ ಬಾಗ್

ಬೆಂಗಳೂರಿನ ಅತ್ಯುತ್ತಮ ಫೋಟೋಶೂಟ್ ಸ್ಥಳಗಳಲ್ಲಿ ಲಾಲ್ ಬಾಗ್ ಕೂಡ ಒಂದಾಗಿದೆ. ಬಣ್ಣ ಬಣ್ಣದ ಹೂವುಗಳು, ಎಲ್ಲಿ ನೋಡಿದರೂ ಹಚ್ಚ ಹಸಿರು ಮತ್ತು ಕೆರೆ ಪ್ರಿ ವೆಡ್ಡಿಂಗ್ ಫೋಟೋಶೂಟ್'ಗೆ ಅದ್ಭುತ ಬ್ಯಾಗ್ರೌಂಡ್ ಆಗಿದೆ. ನೀವು ಮುಂಜಾನೆ ಇಲ್ಲಿಗೆ ಹೋಗಿ, ಈ ಸಮಯದಲ್ಲಿನ ಹವಾಮಾನ ಫೋಟೋಶೂಟ್ ಅದ್ಭುತವಾಗಿ ಬರಲು ಸಹಾಯ ಮಾಡುತ್ತದೆ. ಹಾಗೆಯೇ ಕಡಿಮೆ ಜನಸಂದಣಿ ಇರುತ್ತದೆ. ಯುಟೋಪಿಯನ್ ಪ್ರಿ ವೆಡ್ಡಿಂಗ್ ಫೋಟೋಶೂಟ್'ಗೆ, ಲಾಲ್‌ಬಾಗ್ ಡ್ರೀಂ ಪ್ಲೇಸ್ ಆಗಿದೆ. ನೀವು ನಿಜಕ್ಕೂ ಬೆಂಗಳೂರಿನಲ್ಲಿ ಫೋಟೋಶೂಟ್ ಮಾಡಿಸಲು ಭವ್ಯವಾದ ಹೊರಾಂಗಣ ಸ್ಥಳಗಳನ್ನು ಹುಡುಕುತ್ತಿದ್ದರೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಪ್ರವೇಶ ಶುಲ್ಕ ಉಚಿತ.

ಕಬ್ಬನ್ ಪಾರ್ಕ್

ಕಬ್ಬನ್ ಪಾರ್ಕ್

ಲಾಲ್‌ಬಾಗ್‌ನ ಸಮೀಪವೇ ಕಬ್ಬನ್ ಪಾರ್ಕ್ ಕೂಡ ಬರುತ್ತದೆ. ಬೆಂಗಳೂರಿನ ಸೂಪರ್‌ಹಿಟ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಸ್ಥಳಗಳಲ್ಲಿ ಇದು ಒಂದಾಗಿದೆ. ಇಲ್ಲಿ ಹಸಿರಿಗೆ ಕೊರತೆಯಿಲ್ಲ. ಹಾಗಾಗಿ ಗ್ರೀನರಿ ಬ್ಯಾಗ್ರೌಂಡ್ ಬಯಸುವ ಜೋಡಿಗಳಿಗೆ ಇದು ಅತ್ಯುತ್ತಮ ಸ್ಥಳವಾಗಿದೆ. ಉದ್ಯಾನವನ್ನು ಕೂಡ ಚೆನ್ನಾಗಿ ನಿರ್ವಹಿಸಲಾಗಿದೆ. ಕೆಲವೂ ಶಿಲ್ಪಗಳನ್ನು ಕೂಡ ನಾವಿಲ್ಲಿ ನೋಡಬಹುದು. ಕಡಿಮೆ ಜನಸಂದಣಿ ಇರಬೇಕೆಂದರೆ, ಆಹ್ಲಾದಕರ ವಾತಾವರಣ ಬಯಸುವವರು ಮುಂಜಾನೆ ತೆರಳಿ. ಇಲ್ಲಿ ನೀವು ಸಂಜೆಯ ಸಮಯವೂ ಫೋಟೋಶೂಟ್ ಮಾಡಿಸಬಹುದು. ಇದು ಕರ್ನಾಟಕ ಹೈಕೋರ್ಟ್ ಹಿಂಭಾಗವಿದೆ. ಪ್ರವೇಶ ಶುಲ್ಕ ಉಚಿತವಾಗಿದೆ.

ನಂದಿ ಹಿಲ್ಸ್

ನಂದಿ ಹಿಲ್ಸ್

ಬೆಂಗಳೂರಿನ ಜನಪ್ರಿಯ ಪ್ರೀ ವೆಡ್ಡಿಂಗ್ ಫೋಟೋಶೂಟ್ ಸ್ಥಳಗಳ ಪೈಕಿ ನಂದಿ ಹಿಲ್ಸ್ ಕೂಡ ಒಂದು ಎಂದರೆ ತಪ್ಪಾಗಲಾರದು. ಇಲ್ಲಿ ನಿಮಗೆ ಫೋಟೋಗೆ ಊಹೆಗೆ ನಿಲುಕದಷ್ಟು ಅದ್ಭುತ ಬ್ಯಾಗ್ರೌಂಡ್'ಗಳು ಸಿಗುತ್ತವೆ. ಇಲ್ಲಿ ಎಲ್ಲಿ ನೋಡಿದರೂ ಹಚ್ಚ ಹಸಿರು, ಬೆಟ್ಟಗಳು, ಮೋಡಿಮಾಡುವ ಟಿಪ್ಪುವಿನ ಕೋಟೆ ಮತ್ತು ಭೋಗ ನಂದೀಶ್ವರ ದೇವಾಲಯದಂತಹ ಪುರಾತನ ದೇವಾಲಯಗಳು ಪ್ರೀ ವೆಡ್ಡಿಂಗ್ ಫೋಟೋಶೂಟ್‌'ಗೆ ದಕ್ಷಿಣ ಭಾರತದ ಸ್ಪರ್ಶವನ್ನು ನೀಡುತ್ತದೆ. ಇಲ್ಲಿ ಯಾವಾಗಲೂ ಪ್ರವಾಸಿಗರ ದಂಡೇ ಇರುತ್ತದೆ.

ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳಲ್ಲಿ ಇದು ಕೂಡ ಒಂದಾಗಿರುವುದರಿಂದ ಜನಸಂದಣಿಯನ್ನು ತಪ್ಪಿಸಲು ಮುಂಜಾನೆಯೇ ಫೋಟೋಶೂಟ್ ಮಾಡಿಸುವುದು ಒಳ್ಳೆಯದು. ಸೂರ್ಯೋದಯಕ್ಕೆ ಮೊದಲು ಬೆಟ್ಟದ ಮೇಲೆ ಇರಲು ಸಾಧ್ಯವಾದಷ್ಟು ಪ್ರಯತ್ನಿಸಿ. ನಂದಿ ಹಿಲ್ಸ್ ಬೆಂಗಳೂರು ನಗರದಿಂದ 70 ಕಿ.ಮೀ ದೂರವಿದೆ. ಇಲ್ಲಿ ಕೂಡ ಪ್ರವೇಶ ಶುಲ್ಕ ಉಚಿತ.

ಬೆಂಗಳೂರು-ಕನಕಪುರ ರಸ್ತೆ

ಬೆಂಗಳೂರು-ಕನಕಪುರ ರಸ್ತೆ

ರಸ್ತೆ ಬಳಿ ಫೋಟೋಶೂಟ್ ಮಾಡಿಸಬೇಕೆಂದು ಬಯಸುವವರು ಬೆಂಗಳೂರಿನಲ್ಲಿ ಅತ್ಯುತ್ತಮ ಸ್ಥಳಗಳನ್ನು ಹುಡುಕುತ್ತಿದ್ದರೆ ಸಾಕಷ್ಟು ಹಸಿರಿನಿಂದ ಕೂಡಿದ ಬೆಂಗಳೂರು-ಕನಕಪುರ ರಸ್ತೆ ಆರಿಸಿಕೊಳ್ಳಿ. ಇಲ್ಲಿ ಮುಂಜಾನೆಯ ಸಮಯ ಬಂದರೆ ಪ್ರೀ ವೆಡ್ಡಿಂಗ್ ಫೋಟೋಶೂಟ್‌'ಗೆ ಅತ್ಯಂತ ರೋಮ್ಯಾಂಟಿಕ್ ಸ್ಥಳಗಳಲ್ಲಿ ಒಂದಾಗಿದೆ. ನೀವು ಮುಂಜಾನೆ ಸಮಯದಲ್ಲಿ ಶಾಂತ ವಾತಾವರಣವನ್ನು ನೋಡಬಹುದು. ಅದು ಫೋಟೋ ಫ್ರೇಮ್'ನಲ್ಲಿ ಕೂಡ ಎದ್ದು ಕಾಣುತ್ತದೆ. ಕಡು ಹಸಿರಿನ ಜೊತೆಗೆ, ನೀವು ತಲಘಟ್ಟಪುರ ಕೆರೆ, ಉದ್ಯಾನಗಳು ಮತ್ತು ತುರಹಳ್ಳಿ ಅರಣ್ಯಕ್ಕೂ ಭೇಟಿ ನೀಡಬಹುದು. ಪ್ರವೇಶ ಶುಲ್ಕ ಉಚಿತವಾಗಿದೆ.

ನಗರದ ಹೊರವಲಯ

ನಗರದ ಹೊರವಲಯ

ನಿಮ್ಮ ವಿಶೇಷ ಛಾಯಾಚಿತ್ರಗಳಿಗೆ ಜೀವ ಬರಬೇಕೆಂದರೆ ಬೆಂಗಳೂರಿನಲ್ಲಿರುವ ಜೆ.ಪಿ.ನಗರ ಹೊರವಲಯ ಆಯ್ಕೆ ಮಾಡಿಕೊಳ್ಳಿ. ಇದು ಫೋಟೊಶೂಟ್‌'ಗೆ ಪ್ರಶಾಂತವಾದ ಸ್ಥಳಗಳಲ್ಲಿ ಒಂದಾಗಿದೆ. ಜೆ.ಪಿ.ನಗರ ಹೊರವಲಯದಲ್ಲಿರುವ ಹಸಿರು, ಹಸಿರಿನಿಂದ ಆವೃತವಾದ ಲೇಕ್ ನಿಮ್ಮನ್ನು ಮೋಡಿ ಮಾಡುವುದರಲ್ಲಿ ಸಂಶಯವಿಲ್ಲ. ಫೋಟೋಶೂಟ್‌ಗಾಗಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆ ಇರುವುದರಿಂದ, ನೀವು ಆರಾಮಾಗಿ ಭೇಟಿ ಕೊಟ್ಟು, ಆನಂದಿಸಬಹುದು. ವಿಶೇಷವಾಗಿ ಮುಂಜಾನೆ ಫೋಟೋಶೂಟ್'ಗೆ ಅದ್ಭುತ ಸಮಯ. ಪ್ರವೇಶ ಶುಲ್ಕ ಉಚಿತವಾಗಿದೆ.

ಸಟೋರಿ ಫಾರ್ಮ್‌ಹೌಸ್

ಸಟೋರಿ ಫಾರ್ಮ್‌ಹೌಸ್

ಬೆಂಗಳೂರಿನ ಟಾಪ್ ಫೋಟೋಶೂಟ್ ಸ್ಥಳಗಳಲ್ಲಿ ಸಟೋರಿ ಫಾರ್ಮ್‌ಹೌಸ್ ಕೂಡ ಒಂದಾಗಿದೆ. ಪ್ರಶಾಂತವಾದ ವಾತವರಣ, ಅಂದವಾಗಿರುವ ಉದ್ಯಾನ ಸಟೋರಿಯ ಫಾರ್ಮ್‌ಹೌಸ್ ಅಂದ ಹೆಚ್ಚಿಸಿದೆ. ಪ್ರಕೃತಿಗೆ ಪ್ರಿಯರಿಗೆ ಇದು ಹೇಳಿಮಾಡಿಸಿದ ಜಾಗ. ಇದು ಬೆಂಗಳೂರಿನಲ್ಲಿ ಫೋಟೋಶೂಟ್‌ ಮಾಡಿಸುವವರಿಗೆ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಫೋಟೋ ಕ್ರಿಯೇಟಿವ್ ಆಗಿ ಬರಬೇಕೆಂದರೆ, ಒಳ್ಳೆಯ ಬ್ಯಾಗ್ರೌಂಡ್'ಗೆ ಇದು ಒಳ್ಳೆಯ ಅವಕಾಶವನ್ನು ನೀಡುತ್ತದೆ.

ಇದು ಫಾರ್ಮ್‌ಹೌಸ್ ಆಗಿರುವುದರಿಂದ, ಯಾವುದೇ ಸಮಯದಲ್ಲಿ ಇಲ್ಲಿ ಫೋಟೋಶೂಟ್ ಮಾಡಲು ಉತ್ತಮ ಸಮಯ. ಆದರೂ ಬೆಳಗ್ಗೆ ಮತ್ತು ಸಂಜೆ ಫೋಟೋಗ್ರಫಿಗೆ ಒಳ್ಳೆಯ ಸಮಯ. ಸಟೋರಿ ಫಾರ್ಮ್‌ಹೌಸ್ ಇರುವ ಸ್ಥಳ 100/1, ಎಚ್‌ಎಎಲ್ ವರ್ತೂರು ಮುಖ್ಯ ರಸ್ತೆ, ಸಿದ್ದಾಪುರ, ವೈಟ್‌ಫೀಲ್ಡ್. ಪ್ರವೇಶ ಶುಲ್ಕ ಅನ್ವಯವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X