Search
  • Follow NativePlanet
Share
» »ಇದು ಯಶೋಧೆ ಬಾಲಕೃಷ್ಣನ ಬಟ್ಟೆಗಳನ್ನು ಒಗೆಯುತ್ತಿದ್ದ ಕುಂಡವಂತೆ

ಇದು ಯಶೋಧೆ ಬಾಲಕೃಷ್ಣನ ಬಟ್ಟೆಗಳನ್ನು ಒಗೆಯುತ್ತಿದ್ದ ಕುಂಡವಂತೆ

ಮಥುರಾದಲ್ಲಿರುವ ಪ್ರಮುಖ ಹೆಗ್ಗುರುತುಗಳಲ್ಲಿ ಇದೂ ಒಂದಾಗಿದೆ. ಸುಂದರವಾದ ಹೂವಿನ ವಿನ್ಯಾಸಗಳು ಮತ್ತು ದೇವತೆಗಳ ಕೆತ್ತನೆಗಳನ್ನು ಹೊಂದಿರುವ ದೇವಸ್ಥಾನಗಳೂ ಇದೆ.

ಮಥುರಾದ ಬಗ್ಗೆ ನೀವು ಕೇಳಿರಲೇ ಬೇಕು. ಮಥುರಾವನ್ನು ಹಿಂದೂಗಳ ಪವಿತ್ರ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ. ಕೃಷ್ಣನ ಜನ್ಮ ಭೂಮಿಯಾದ ಮಥುರಾವು ಉತ್ತರ ಪ್ರದೇಶದಲ್ಲಿದೆ. ಅನೇಕ ಪ್ರಾಚೀನ ಮಂದಿರಗಳಿಗೆ ಈ ಕ್ಷೇತ್ರ ಮನೆಯಾಗಿದೆ. ಇಲ್ಲಿಯ ಹಲವಾರು ತಾಣಗಳು ಅಸಂಖ್ಯಾತ ಭಕ್ತ ಸಮೂಹವನ್ನು ವರ್ಷವಿಡೀ ಆಕರ್ಷಿಸುತ್ತಿದೆ. ಅಂತಹ ತಾಣಗಳಲ್ಲಿ ಪೊಥರಾ ಕುಂಡವೂ ಒಂದು.

ಕೆಂಪು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ

ಕೆಂಪು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ

PC: Shahnoor Habib Munmun
ಪೊಥರಾ ಕುಂಡ ಎಂದರೆ 'ಪವಿತ್ರ ದ್ವಾರ' ಎಂಬರ್ಥ. ಪೊಥರಾ ಕುಂಡವನ್ನು ಹಿಂದೂ ಶಿಲ್ಪಕಲೆಯ ಶೈಲಿಯಲ್ಲಿ ಕೆಂಪು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಈ ಸಂಕೀರ್ಣವನ್ನು ಸುಂದರವಾದ ಮಂದಿರಗಳು ಸುತ್ತವರಿದಿದ್ದು, ಹಿಂದೂ ದೇವಾನುದೇವತೆಗಳಿಗೆ ಸಮರ್ಪಿಸಲಾಗಿದೆ. ಮಥುರಾದಲ್ಲಿರುವ ಪ್ರಮುಖ ಹೆಗ್ಗುರುತುಗಳಲ್ಲಿ ಇದೂ ಒಂದಾಗಿದೆ. ಸುಂದರವಾದ ಹೂವಿನ ವಿನ್ಯಾಸಗಳು ಮತ್ತು ದೇವತೆಗಳ ಕೆತ್ತನೆಗಳನ್ನು ಹೊಂದಿರುವ ದೇವಸ್ಥಾನಗಳೂ ಇದೆ.

ಪೌರಾಣಿಕ ಕಾಲದಲ್ಲಿ ನಿರ್ಮಿಸಲಾಗಿದೆ

ಪೌರಾಣಿಕ ಕಾಲದಲ್ಲಿ ನಿರ್ಮಿಸಲಾಗಿದೆ

PC:Rao'djunior
ಹಿಂದೂಗಳಿಗೆ ಅಪಾರ ಪ್ರಾಮುಖ್ಯತೆ ಹೊಂದಿರುವ ಹಲವು ದೇವಾಲಯಗಳು ಇವೆ ಹಾಗೂ ಕೆಲವು ಉತ್ತಮ ಪ್ರವಾಸಿ ಆಕರ್ಷಣೆಗಳೂ ಮಥುರಾದಲ್ಲಿದೆ. ಮಥುರಾವು ಅನೇಕ ಧಾರ್ಮಿಕ ಸ್ಥಳಗಳು ಮತ್ತು ಪವಿತ್ರ ಸ್ಮಾರಕಗಳು ಶ್ರೀಮಂತವಾಗಿದೆ. ಅಂತಹ ಪ್ರವಾಸಿ ಆಕರ್ಷಣೆಗಳಲ್ಲಿ ಪೊಥರಾ ಕುಂಡ ಕೂಡಾ ಸೇರಿದೆ. ಇವುಗಳನ್ನು ಪೌರಾಣಿಕ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಸಾಕಷ್ಟು ಪೌರಾಣಿಕ ಪ್ರಾಮುಖ್ಯತೆಯನ್ನು ಹೊಂದಿರುವ ಇದು ಮಥುರಾದ ಆಕರ್ಷಣೀಯ ಸ್ಥಳವಾಗಿದೆ.

ಕೃಷ್ಣನ ಬಟ್ಟೆಗಳನ್ನು ಒಗೆಯಲಾಗುತ್ತಿತ್ತು

ಕೃಷ್ಣನ ಬಟ್ಟೆಗಳನ್ನು ಒಗೆಯಲಾಗುತ್ತಿತ್ತು

PC:Raja Ravi Varma
ಮಥುರಾದಲ್ಲಿ ಪೊಥರಾ ಕುಂಡ ನಿಮ್ಮನ್ನು ಐತಿಹಾಸಿಕ ಯುಗಕ್ಕೆ ಕರೆದೊಯ್ಯುತ್ತದೆ. ಕೃಷ್ಣನು ಅಂಬೆಗಾಲಿಡುವವನಾಗಿದ್ದಾಗ ಈ ನಗರದ ಬೀದಿಗಳಲ್ಲಿ ಆಡುತ್ತಿದ್ದನಂತೆ. ಪೊಥರಾ ಕುಂಡದ ಮಹತ್ವವೆಂದರೆ, ಈ ಸ್ಥಳದಲ್ಲಿಯೇ ತಾಯಿ ಯಶೋಧೆ ತನ್ನ ಬಾಲಕೃಷ್ಣನ ಬಟ್ಟೆಗಳನ್ನು ಒಗೆದದ್ದು. ನೈಸರ್ಗಿಕ ಸೌಂದರ್ಯ ಹೊಂದಿರುವ ಈ ಮೆಟ್ಟಿಲುಗಳ ಮೇಲೆ ಯಾತ್ರಾರ್ಥಿಗಳು, ಅರ್ಚಕರು ಕುಳಿತು ತಮ್ಮ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಆದ್ದರಿಂದ ಪೊಥರಾ ಕುಂಡ ಹಿಂದೂಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಪವಿತ್ರ ನೀರು

ಪವಿತ್ರ ನೀರು


ಪೊಥರಾ ಕುಂಡದ ನೀರನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ವಿವಿಧ ಮಂಗಳಕರ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವವರು ಕುಂಡದ ನೀರಿನಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಕೆಂಪು ಗೋಡೆಗಳ ಪ್ರತಿಫಲನ ಮತ್ತು ಕುಂಡದ ನೀರಿನಲ್ಲಿ ಕೆಳಗಿರುವ ರಚನೆಗಳು ಅದ್ಭುತವಾಗಿದೆ.

ಪ್ರವಾಸೋಧ್ಯಮಕ್ಕೆ ಪ್ರೋತ್ಸಾಹ

ಪ್ರವಾಸೋಧ್ಯಮಕ್ಕೆ ಪ್ರೋತ್ಸಾಹ


ದೇಶಾದ್ಯಂತ ಪ್ರವಾಸಿಗರು, ಭಕ್ತರು ಈ ಪವಿತ್ರ ತಾಣವನ್ನು ವೀಕ್ಷಿಸಲು ಭೇಟಿ ನೀಡುತ್ತಿರುತ್ತಾರೆ. ಪೊಥರಾ ಕುಂಡವು ಮಥುರಾದಲ್ಲಿ ಪ್ರವಾಸೋಧ್ಯಮ ಇಲಾಖೆ ಸಂರಕ್ಷಿಸುತ್ತಿರುವ ಕೆಲವೇ ಕೆಲವು ಅದ್ಭುತ ರಚನೆಗಳಲ್ಲಿ ಒಂದಾಗಿದೆ. ಈ ಮೂಲಕ ಪ್ರವಾಸೋಧ್ಯಮವನ್ನು ಪ್ರೋತ್ಸಾಹಿಸುತ್ತಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ


ಬಹುತೇಕ ಉತ್ತರ ಭಾರತದ ನಗರಗಳಂತೆ, ಮಥುರಾ ತಾಪಮಾನವು ಬೇಸಿಗೆಯಲ್ಲಿ ಮತ್ತು ಚಳಿಗಾಲದಲ್ಲಿ ತೀವ್ರವಾಗಿರುತ್ತದೆ. ನವೆಂಬರ್ ಮತ್ತು ಮಾರ್ಚ್ ನಡುವೆ ಹವಾಮಾನವು ಉತ್ತಮವಾಗಿರುತ್ತದೆ. ಅಲ್ಲದೆ ನಗರವನ್ನು ಅನ್ವೇಷಿಸಲು ಸುಲಭವಾಗುತ್ತದೆ. ಮಳೆಗಾಲದಲ್ಲಿ ಮಥುರಾದಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾಗುತ್ತದೆ. ತಂಪಾದ ಮಾರುತಗಳು ಸುತ್ತಮುತ್ತಲಿನ ಆಹ್ಲಾದಕರ ವಾತಾವರಣವನ್ನು ಉಂಟುಮಾಡುತ್ತದೆ. ಕೃಷ್ಣನ ಪ್ರಮುಖ ಹಬ್ಬವಾದ ಕೃಷ್ಣ ಜನ್ಮಾಷ್ಠಮಿಯು ಆಗಸ್ಟ್ / ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಮಥುರಾವು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರಿಂದ ಕೂಡಿರುತ್ತದೆ. ಒಂದು ವೇಳೆ ನೀವು ಮಾರ್ಚ್‌ನಲ್ಲಿ ಮಥುರಾಗೆ ಭೇಟಿ ನೀಡಿದರೆ ಅಲ್ಲಿನ ಕಲರ್‌ಫುಲ್ ಹೋಳಿ ಹಬ್ಬ ಆಚರಣೆಯಲ್ಲಿ ಪಾಲ್ಗೊಳ್ಳ ಬಹುದು.

ವಿಮಾನದ ಮೂಲಕ ತಲುಪುವುದು ಹೇಗೆ?


ಮಥುರಾದಿಂದ ಹತ್ತಿರದ ವಿಮಾನ ನಿಲ್ದಾಣವು ಆಗ್ರಾದ ಖೇರಿಯಾದಲ್ಲಿದೆ. ಇದು ಮಥುರಾ ನಗರದ ಕೇಂದ್ರದಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿದೆ. ಸುಮಾರು ಎಲ್ಲಾ ಪ್ರಮುಖ ಖಾಸಗಿ ಮತ್ತು ಸಾರ್ವಜನಿಕ ವಾಹನಗಳು ಈ ನಗರಕ್ಕೆ ತಮ್ಮ ಸೇವೆಯನ್ನು ಒದಗಿಸುತ್ತವೆ. ಮುಂಬೈ, ಕೊಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಅಹಮದಾಬಾದ್ ನಗರಗಳಿಗೆ ಇದು ಉತ್ತಮ ಸಂಪರ್ಕ ಹೊಂದಿದೆ.

ರೈಲಿನ ಮೂಲಕ ತಲುಪುವುದು ಹೇಗೆ?

ರೈಲಿನ ಮೂಲಕ ತಲುಪುವುದು ಹೇಗೆ?

PC:Vinayaraj
ಮಥುರಾ ಸೆಂಟ್ರಲ್ ಮತ್ತು ಪಶ್ಚಿಮ ರೈಲ್ವೆಗಳ ಮುಖ್ಯ ಮಾರ್ಗಗಳ ಮೇಲೆ ನೆಲೆಗೊಂಡಿದೆ. ಹೀಗಾಗಿ ಮಥುರಾ ಉತ್ತಮ ರೈಲ್ವೆ ಮಾರ್ಗವನ್ನು ನಿರ್ವಹಿಸುತ್ತದೆ, ಹಲವಾರು ಎಕ್ಸ್ಪ್ರೆಸ್‌ಗಳು ಮತ್ತು ಸೂಪರ್ ಫಾಸ್ಟ್ ರೈಲುಗಳು ದೆಹಲಿ, ಆಗ್ರಾ, ಮುಂಬೈ, ಜೈಪುರ, ಗ್ವಾಲಿಯರ್, ಕೊಲ್ಕತ್ತಾ, ಹೈದರಾಬಾದ್, ಚೆನ್ನೈ ಮತ್ತು ಲಕ್ನೋ ಮುಂತಾದ ನಗರಗಳಿಂದ ಉತ್ತರ ಪ್ರದೇಶ ಮತ್ತು ಭಾರತದ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕವನ್ನು ಹೊಂದಿವೆ.

ರಸ್ತೆ ಮೂಲಕ

ಉತ್ತರ ಪ್ರದೇಶದ ಯಮುನಾ ನದಿಯ ಪಶ್ಚಿಮ ತೀರದಲ್ಲಿ ಮಥುರಾ ನಗರವಿದೆ. ಇದು ದೆಹಲಿಯಿಂದ 145 ಕಿ.ಮೀ ದೂರದಲ್ಲಿದೆ. ಮತ್ತು ಆಗ್ರಾದಿಂದ 58 ಕಿ.ಮೀ ದೂರದಲ್ಲಿದೆ. ಮಥುರಾ ಉತ್ತರ ಪ್ರದೇಶ ಮತ್ತು ಭಾರತದ ಎಲ್ಲಾ ಪ್ರಮುಖ ನಗರಗಳೊಂದಿಗೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಂಪರ್ಕ ಹೊಂದಿದೆ. ರಸ್ತೆಯ ಮೂಲಕ ದೆಹಲಿ ಅಥವಾ ಲಖನೌ, ಕಾನ್ಪುರ್, ಆಗ್ರಾ, ದೆಹಲಿ ಮತ್ತು ಜೈಪುರದಿಂದ ನೀವು ಇಲ್ಲಿಗೆ ತಲುಪಬಹುದು.

ಗೋವರ್ಧನ ಪರ್ವತ

ಗೋವರ್ಧನ ಪರ್ವತ

PC:Ekabhishek
ಗೋವರ್ಧನ ಪರ್ವತ ಮಥುರಾದಿಂದ 22 ಕಿ.ಮೀ ದೂರದಲ್ಲಿದೆ. ಭಗವಂತ ಕೃಷ್ಣನ ಪ್ರಕಾರ, ಗೋವರ್ಧನ ಪರ್ವತ ಕೃಷ್ಣನಿಗಿಂತ ಭಿನ್ನವಾಗಿಲ್ಲ ಎಂದು ಪವಿತ್ರ ಭಗವದ್ಗೀತೆಯಲ್ಲಿ ಹೇಳಲಾಗಿದೆ. ಆದ್ದರಿಂದ, ಅವನ ಎಲ್ಲಾ ಆರಾಧಕರು ಬೆಟ್ಟದ ಶುದ್ಧ ಕಲ್ಲುಗಳನ್ನು ಪೂಜಿಸುತ್ತಾರೆ. ಬೆಟ್ಟವು ಮರಳುಗಲ್ಲಿನಿಂದ ಮಾಡಲ್ಪಟ್ಟಿದೆ ಮತ್ತು 38 ಅಡಿ ಸುತ್ತಳತೆಯಿಂದ 80 ಅಡಿ ಎತ್ತರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X