Search
  • Follow NativePlanet
Share
» »ಹೈದ್ರಾಬಾದ್‍ನ ಸಮೀಪದಲ್ಲಿರುವ ಟ್ರೆಕ್ಕಿಂಗ್ ಪ್ರದೇಶಗಳು

ಹೈದ್ರಾಬಾದ್‍ನ ಸಮೀಪದಲ್ಲಿರುವ ಟ್ರೆಕ್ಕಿಂಗ್ ಪ್ರದೇಶಗಳು

ಹೈದ್ರಾಬಾದ್ ಇಂದು ತೆಲಂಗಾಣದ ರಾಜಧಾನಿಯಾಗಿದೆ. ಟ್ರೆಕ್ಕಿಂಗ್ ಎಂದರೆ ಎಲ್ಲರಿಗೂಸಹಜವಾಗಿಯೇ ಇಷ್ಟ. ಕರ್ನಾಟಕದಲ್ಲಿಯೇ ಅಲ್ಲದೇ ಹೈದ್ರಾಬಾದ್‍ನಲ್ಲಿಯೂ ಕೂಡ ಅನೇಕಟ್ರೆಕ್ಕಿಂಗ್ ಪ್ರದೇಶಗಳಿವೆ. ಹೈದ್ರಾಬಾದ್‍ನಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳು ಇ

By Sowmyabhai

ಹೈದ್ರಾಬಾದ್ ಇಂದು ತೆಲಂಗಾಣದ ರಾಜಧಾನಿಯಾಗಿದೆ. ಟ್ರೆಕ್ಕಿಂಗ್ ಎಂದರೆ ಎಲ್ಲರಿಗೂ ಸಹಜವಾಗಿಯೇ ಇಷ್ಟ. ಕರ್ನಾಟಕದಲ್ಲಿಯೇ ಅಲ್ಲದೇ ಹೈದ್ರಾಬಾದ್‍ನಲ್ಲಿಯೂ ಕೂಡ ಅನೇಕ ಟ್ರೆಕ್ಕಿಂಗ್ ಪ್ರದೇಶಗಳಿವೆ. ಹೈದ್ರಾಬಾದ್‍ನಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳು ಇವೆ. ಅವುಗಳಲ್ಲಿ ಯುವ ಜನತೆಗೆ ಅಚ್ಚು ಮೆಚ್ಚು ಆಗುವಂತಹ ಅನೇಕ ಟ್ರೆಕ್ಕಿಂಗ್ ಪ್ರದೇಶಗಳ ಕುರಿತು ಲೇಖನದಲ್ಲಿ ತಿಳಿಯೋಣ.

ಅನೇಕ ಮಂದಿಗೆ ಟ್ರೆಕ್ಕಿಂಗ್ ಎಂದರೆ ಅತ್ಯಂತ ಆಸಕ್ತಿಕರವಾದ ಚಟುವಟಿಕೆ. ಸುಂದರವಾದ ಬೆಟ್ಟಗಳನ್ನು ಏರುತ್ತಾ ತಮ್ಮ ಸುಖಮಯವಾದ ಸಮಯವನ್ನು ಕಳೆಯುತ್ತಾರೆ. ನಮ್ಮ ಭಾರತದಲ್ಲಾದರೆ ಕರ್ನಾಟಕದಲ್ಲಿನ ಬೆಂಗಳೂರು, ಹಿಮಾಚಲ ಪ್ರದೇಶ, ಲಡಖ್, ಉತ್ತರಾಖಂಡದಂತಹ ಎತ್ತರವಾದ ಪ್ರದೇಶಗಳಿಗೆ ತೆರಳಿ ಯುವಜನತೆ ಟ್ರೆಕ್ಕಿಂಗ್ ಅಸ್ವಾಧಿಸುತ್ತಿರುತ್ತಾರೆ.

ಹಾಗಾದರೆ ಬನ್ನಿ ಹೈದ್ರಾಬಾದ್‍ನ ಸುಂದರವಾದ ಟ್ರೆಕ್ಕಿಂಗ್ ಪ್ರದೇಶಗಳು ಯಾವುವು ಅವುಗಳು ಎಲ್ಲಿವೆ? ಎಂಬುದನ್ನು ಸಂಕ್ಷೀಪ್ತವಾಗಿ ಲೇಖನದ ಮೂಲಕ ಮಾಹಿತಿಯನ್ನು ಪಡೆಯೊಣ.

1.ಭವನಗಿರಿ ಕೋಟೆ

1.ಭವನಗಿರಿ ಕೋಟೆ

PC:: Nikhilb239

ಭುವನಗಿರಿ ಕೋಟೆ ನಲ್ಗೊಂಡ ಜಿಲ್ಲೆಯಲ್ಲಿದೆ. ಇದನ್ನು ವಿಕ್ರನಮಾದಿತ್ಯ ರಾಜನ ಕೊಂಡ (ಬೆಟ್ಟ)ದ ಮೇಲೆ ಏಕಶಿಲಾ ಕಲ್ಲಿನ ಗುಟ್ಟದ ಮೇಲೆ ನಿರ್ಮಾಣ ಮಾಡಿದರು. ಟ್ರೆಕ್ಕಿಂಗ್‍ನ ಮೂಲಕ ಬೆಟ್ಟದ ಮೇಲಿನ ಭಾಗಗಕ್ಕೆ ಸೇರಿಕೊಳ್ಳಬಹುದು. ಅಲ್ಲಿ ಅಂತಃಪುರಗಳು, ನಂದಿ ವಿಗ್ರಹಗಳು, ಆಂಜನೇಯ ಶಿಲ್ಪಗಳು, ಸುರಂಗಗಳನ್ನು ಕಾಣಬಹುದು. ಸಮೀಪದಲ್ಲಿಯೇ ಯಾದಗಿರಿ ಗುಟ್ಟ ಕೂಡ ದರ್ಶಿಸಿಕೊಳ್ಳಬಹುದು.

ಹೈದ್ರಾಬಾದ್‍ನಿಂದ ದೂರ: 54 ಕಿ.ಮೀ

ಏರುವುದು: ಸುಲಭ

2.ಅನಂತಗಿರಿ ಹಿಲ್ಸ್

2.ಅನಂತಗಿರಿ ಹಿಲ್ಸ್

PC:: cishoreTM

ಅನಂತಗಿರಿ ಬೆಟ್ಟವು ವಿಕಾರಾಬಾದ್‍ನಲ್ಲಿದೆ. ಮೂಗು ಮುಚ್ಚಿಕೊಳ್ಳುವ ಮೂಸಿ ನದಿ ಜನ್ಮಸ್ಥಾನವು ಇದೆ. ಇಸು ಅರಣ್ಯ ಪ್ರದೇಶದಲ್ಲಿರುವುದರಿಂದ ಸುತ್ತಮುತ್ತವಿರುವ ಹಚ್ಚ-ಹಸಿರಿನ ಬೆಟ್ಟಗಳು ಪ್ರವಾಸಿಗರಿಗೆ ಆಹ್ಲಾದವನ್ನು ಉಂಟು ಮಾಡುತ್ತದೆ.ಅನಂತಗಿರಿ ಹಿಲ್ಸ್‍ನ ಬಗ್ಗೆ ಮತ್ತಷ್ಟು ಮಾಹಿತಿ

ಹೈದ್ರಾಬಾದ್‍ನಿಂದ ದೂರ: 79 ಕಿ.ಮೀ
ಏರುವುದು: ಅಷ್ಟು ಸುಲಭವಾದುದು ಅಲ್ಲ.

3.ಮೆದಕ್ ಫೋರ್ಟ್

3.ಮೆದಕ್ ಫೋರ್ಟ್

PC::Varshabhargavi

ಮೆದಕ್ ಫೋರ್ಟ್ ಮೆದಕ್ ಪಟ್ಟಣಕ್ಕೆ ಸಮೀಪದಲ್ಲಿಯೇ ಇದೆ. ಆಕ್ರಮಣಕಾರರಿಂದ ನಗರವನ್ನು ರಕ್ಷಿಸುವ ಸಲುವಾಗಿ ಕಾಕತೀಯರ ರಾಜರು ನಿರ್ಮಾಣ ಮಾಡಿರುವ ಪ್ರಹರಿ ಮೆದಕ್ ಕೋಟೆ. ಕೋಟೆಯ ಮೇಲಿನ ಭಾಗವು ಸುಂದರವಾದ ದೃಶ್ಯಗಳ ಜೊತೆಗೆ, ನಗರದ ಅಪೂರ್ವ ಸೌಂದರ್ಯವನ್ನು ಕೂಡ ಕಾಣಬಹುದು.

ಹೈದ್ರಾಬಾದ್‍ನಿಂದ ದೂರ: 95 ಕಿ.ಮೀ
ಮೇಲೆ ಏರುವುದು: ಸುಲಭ

4.ಘುನಪೂರ್ ಕೋಟೆ ಖಿಲ್ಲಾ

4.ಘುನಪೂರ್ ಕೋಟೆ ಖಿಲ್ಲಾ

PC::Pruthvi34

ಘುನಪೂರ್ ಕೋಟೆ ಮಹೆಬೂಬ್ ನಗರ ಜಿಲ್ಲೆಯಲ್ಲಿದೆ. "ಗೊನ" ವಂಶಕ್ಕೆ ಸೇರಿದ ಗಣಪರೆಡ್ಡಿ 2 ಎತ್ತರವಾದ ಗುಡ್ಡಗಳನ್ನು ಕೂಡಿಸುತ್ತಾ ಒಂದು ಅದ್ಭುತವಾದ ಕೋಟೆಯನ್ನು ನಿರ್ಮಾಣ ಮಾಡಿದನು. ಈ ಕೋಟೆಯಲ್ಲಿ ಟ್ರೆಕ್ಕಿಂಗ್ ಮಾಡುತ್ತಾ ತಿರುಗುವುದು ಒಂದು ಸುಂದರವಾದ ಅನುಭೂತಿಯನ್ನು ಉಂಟು ಮಾಡುತ್ತದೆ.

ಹೈದ್ರಾಬಾದ್‍ನಿಂದ ದೂರ: 109 ಕಿ.ಮೀ
ಮೇಲೆ ಏರುವುದು: ಸ್ವಲ್ಪ ಕಷ್ಟವೆಂದೇ ಹೇಳಬಹುದು.

5.ಕೊಯಲ್ ಕೊಂಡ ಫೋರ್ಟ್

5.ಕೊಯಲ್ ಕೊಂಡ ಫೋರ್ಟ್

PC::cishoreTM

ಈ ಕೋಟೆಯು ಮೆಹಬೂಬ್ ನಗರ ಜಿಲ್ಲೆಯಲ್ಲಿದೆ. ಕೋಟೆಯ ಮೇಲಿನ ಭಾಗಕ್ಕೆ ಸೇರಿಕೊಳ್ಳವುದಕ್ಕೆ ಮೆಟ್ಟಿಲುಗಳು ಇವೆ. ಮಣ್ಣು ಅಥವಾ ಇತರ ಯಾವುದನ್ನು ಬಳಕೆ ಮಾಡಿದೆ ನಿರ್ಮಾಣ ಮಾಡಿರುವುದು ಈ ಕೋಟೆಯ ವಿಶೇಷ ಎಂದೇ ಹೇಳಬಹುದು. ಕೋಟೆಯ ಮೇಲಿನ ಭಾಗದಲ್ಲಿ ದೇವಾಲಯಗಳು, ಅಂತಃಪುರಗಳು, ಮಹಲ್ಸ್‍ಗಳನ್ನು ಕಾಣಬಹುದು.

ಹೈದ್ರಾಬಾದ್‍ನಿಂದ ದೂರ: 120 ಕಿ.ಮೀ
ಮೇಲೆ ಏರುವುದು: ಸುಲಭ

6.ಗಾಯತ್ರಿ ಜಲಪಾತ

6.ಗಾಯತ್ರಿ ಜಲಪಾತ

ಗಾಯತ್ರಿ ಜಲಪಾತ ಆದಿಲಾಬಾದ್ ಜಿಲ್ಲೆಯಲ್ಲಿದೆ. ಈ ಜಲಪಾತದ ಮತ್ತೊಂದು ಹೆಸರು ಏನೆಂದರೆ ಗಾಡಿದ ಜಲಪಾತ ಮತ್ತು ಮೊಕ್ಕುಡು ಗುಂಡಂ. ಜಲಪಾತದ ಪರಿಸರವು ನಿಮ್ಮನ್ನು ಸ್ವರ್ಗ ಲೋಕಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಅನುಮಾನವೇ ಇಲ್ಲ. ಹೈದ್ರಾಬಾದ್‍ನ ಸುಂದರವಾದ ಪ್ರವಾಸಿ ಸ್ಥಳಗಳಲ್ಲಿ ಇದು ಕೂಡ ಒಂದು ಎಂದೇ ಹೇಳಬಹುದು.

ಹೈದ್ರಾಬಾದ್‍ನಿಂದ ದೂರ: 207 ಕಿ.ಮೀ

7.ಕನಕೈ ಜಲಪಾತ

7.ಕನಕೈ ಜಲಪಾತ

ಆದಿಲಾಬಾದ್ ಜಿಲ್ಲೆಯಲ್ಲಿರುವ ಮತ್ತೊಂದು ಸುಂದರವಾದ ಟ್ರೆಕ್ಕಿಂಗ್ ಸ್ಥಳವೇ ಕನಕೈ ಜಲಪಾತ. ಕಲ್ಲಿನ ಗುಡ್ಡಗಳನ್ನು ದಾಟುತ್ತಾ ಬರುವ ನೀರಿನ ಪ್ರವಾಹವನ್ನು ದೊಡ್ಡದಾದ ಒಂದು ತೀರದಲ್ಲಿ ಸೇರುತ್ತದೆ. ಪ್ರವಾಸಿಗರಿಗೆ ಈ ಸುಂದರವಾದ ದೃಶ್ಯವು ಆಕರ್ಷಿಸುತ್ತದೆ. ಈ ಜಲಪಾತಕ್ಕೆ ಇರುವ ಮತ್ತೊಂದು ಹೆಸರು ಏನೆಂದರೆ ಬಂದ್ರೆವ್ ಜಲಪಾತ.

ಹೈದ್ರಾಬಾದ್‍ನಿಂದ ದೂರ: ಸುಮಾರು 282 ಕಿ.ಮೀ ದೂರದಲ್ಲಿದೆ.

8.ಕೌಲಾಸ್ ಕೋಟೆ

8.ಕೌಲಾಸ್ ಕೋಟೆ

PC::andhra amitabh gopi

ಕೌಲಾಸ್ ಕೋಟೆ ನಿಜಾಮಾಬಾದ್ ಜಿಲ್ಲೆಯಲ್ಲಿದೆ. ಸುತ್ತಲೂ ಅರಣ್ಯ, ಕೆಳಗೆ ನದಿ ಇರುವುದರಿಂದ ಇಲ್ಲಿನ ಪ್ರಾಕೃತಿಕ ದೃಶ್ಯವು ಅಮೆಜಾನ್ ಅರಣ್ಯವನ್ನು ನೆನಪಿಸುತ್ತದೆ. ಕೋಟೆಯ ಒಳಗೆ ಮಂದಿರಗಳು, ದರ್ಗಾಗಳು, ಮಹಲ್ಸ್ ಇವೆ.

ಹೈದ್ರಾಬಾದ್‍ನಿಂದ ಸುಮಾರು 169 ಕಿ.ಮೀ ದೂರದಲ್ಲಿದೆ.

ಮೇಲೆ ಏರುವುದು : ಸುಲಭ

9.ಅಹೊಬಿಲಂ

9.ಅಹೊಬಿಲಂ

PC:: Gopal Venkatesan

ಅಹೊಬಿಲಂ ಕರ್ನೂಲು ಜಿಲ್ಲೆಯಲ್ಲಿದೆ. ಹೈದ್ರಾಬಾದ್‍ನ ಟ್ರೆಕ್ಕಿಂಗ್ ಪ್ರೇಮಿಗಳಿಗೆ ಅಹೊಬಿಲಂ ಒಂದು ಸ್ಥಾವರ ಎಂದೇ ಹೇಳಬಹುದು. ಇಲ್ಲಿ ದೇವರ ದರ್ಶನದ ಜೊತೆ ಜೊತೆಗೆ ಸುಂದರವಾದ ಪ್ರಾಕೃತಿಕ ದೃಶ್ಯಗಳನ್ನು ಕಾಣಬಹುದು. ಇಲ್ಲಿ ಸುಂದರವಾದ ಜಲಪಾತಗಳು, ಸುತ್ತ ನಲ್ಲಮಲ ಅರಣ್ಯದ ಪ್ರದೇಶಗಳೇ ಮುಖ್ಯವಾದ ಆಕರ್ಷಣೆಗಳಾಗಿವೆ.

ಹೈದ್ರಾಬಾದ್‍ನಿಂದ ಸುಮಾರು 351 ಕಿ.ಮೀ ದೂರದಲ್ಲಿದೆ.

ಟ್ರೆಕ್ಕಿಂಗ್ : ಅತ್ಯಂತ ಕಷ್ಟಕರವಾದುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X