Search
  • Follow NativePlanet
Share
» »ಮಾನವ ವಿಕಾಸತ್ವದ ಬಗ್ಗೆ ತಿಳಿಯಲು ಕರ್ನಾಟಕದ ಈ ಜನಪ್ರಿಯ ವಸ್ತು ಸಂಗ್ರಹಾಲಯಗಳಿಗೆ ಭೇಟಿ ಕೊಡಿ

ಮಾನವ ವಿಕಾಸತ್ವದ ಬಗ್ಗೆ ತಿಳಿಯಲು ಕರ್ನಾಟಕದ ಈ ಜನಪ್ರಿಯ ವಸ್ತು ಸಂಗ್ರಹಾಲಯಗಳಿಗೆ ಭೇಟಿ ಕೊಡಿ

ಹಳೆ ಕಾಲದ ಬಗ್ಗೆ ನೆನಪಿಸುತ್ತಾ ಅದರತ್ತ ಒಮ್ಮೆ ಸಣ್ಣ ಪಕ್ಷಿನೋಟವನ್ನು ಹರಿಸಿದರೆ ಹೇಗಿರಬಹುದು? ನೀವೇನಾದರೂ ಯಾವಗಲೂ ಇತಿಹಾಸದ ಬಗ್ಗೆ , ಪುರಾತತ್ವ, ರಾಜವಂಶಸ್ಥರ ವೈಭವ, ಇತ್ಯಾದಿಗಳ ಬಗ್ಗೆ ಮಾತಾಡಲು ಅಥವಾ ತಿಳಿದುಕೊಳ್ಳ ಕುತೂಹಲ ಇರುವವರಾಗಿದ್ದಲ್ಲಿ ಹಳೆ ಕಾಲದ ರಾಜ್ಯ ಅಥವಾ ದೇಶಕ್ಕೆ ಸಂಬಂಧಿಸಿದ ವಸ್ತುಗಳನ್ನು ಹೊಂದಿರುವ ಕರ್ನಾಟಕದ ಈ ಕೆಳಗಿನ ಈ ವಸ್ತುಸಂಗ್ರಾಲಯಗಳಿಗೆ ಖಂಡಿತವಾಗಿಯೂ ಭೇಟಿ ಕೊಡುವುದು ಸೂಕ್ತ.

ಶಿಲ್ಪಗಳಿಂದ ಹಿಡಿದು ಶಸ್ತ್ರಾಸ್ತ್ರಗಳು, ಆಭರಣಗಳು ನಾಣ್ಯಗಳು ಮತ್ತು ಶಾಸನಗಳು, ಹಸ್ತಪ್ರತಿಗಳವರೆಗೆ ಕರ್ನಾಟಕದ ಈ ವಸ್ತು ಸಂಗ್ರಹಾಲಯಗಳು ದೇಶದ ಹಿಂದಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ಪ್ರಾಚೀನ ಕಲಾಕೃತಿಗಳಿಗೆ ನೆಲೆಯಾಗಿದೆ. ಇವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಕೆಳಗಿನ ಮಾಹಿತಿಯನ್ನು ಓದಿ.

ಸರಕಾರಿ ವಸ್ತು ಸಂಗ್ರಹಾಲಯ (ಗವರ್ನ್ ಮೆಂಟ್ ಮ್ಯೂಸಿಯಂ) ಬೆಂಗಳೂರು

ಸರಕಾರಿ ವಸ್ತು ಸಂಗ್ರಹಾಲಯ (ಗವರ್ನ್ ಮೆಂಟ್ ಮ್ಯೂಸಿಯಂ) ಬೆಂಗಳೂರು

ದೇಶದ ಅತ್ಯಂತ ಹಳೆಯ ವಸ್ತುಸಂಗ್ರಹಾಲಯಗಳಲ್ಲಿ ಒಂದಾದ ಬೆಂಗಳೂರಿನ ಸರಕಾರಿ ವಸ್ತು ಸಂಗ್ರಹಾಲಯವು ಅತ್ಯಂತ ಹಳೆಯದಾದ ಶಿಲ್ಪಗಳು, ನಾಣ್ಯಗಳು, ಮತ್ತು ಶಾಸನಗಳನ್ನು ಹೊಂದಿವೆ. ಇವು ಖಂಡಿತವಾಗಿಯೂ ಯಾವುದೇ ರತ್ನಕ್ಕಿಂತ ಕಡಿಮೆಯಾದುದಲ್ಲ ಎನ್ನಬಹುದು. ಎಡ್ವರ್ಡ್ ಬಾಲ್ಫೋರ್ ಅವರ ಮಾರ್ಗದರ್ಶನದಲ್ಲಿ 1865 ರಲ್ಲಿ ಸ್ಥಾಪನೆಯಾದ ಇದು ಅತ್ಯಂತ ಅದ್ಭುತವಾದ ವರ್ಣಚಿತ್ರಗಳು, ಮತ್ತು ಹೊಯ್ಸಳ ಮತ್ತು ಗಾಂಧಾರ ಕಾಲದ ಶಿಲ್ಪಗಳನ್ನು ಹೊಂದಿದೆ ಅಲ್ಲದೆ 4000 ವರ್ಷಗಳಿಗಿಂತಲೂ ಹಳೆಯದಾದ ಹಲವಾರು ಅವಶೇಷಗಳನ್ನು ಹೊಂದಿದೆ.

ಈ ವಸ್ತು ಸಂಗ್ರಹಾಲಯದ ಒಳಗೆ ಮಾತ್ರ ನೋಡುವುದಲ್ಲದೆ ಈ ವಸ್ತು ಸಂಗ್ರಹಾಲಯದ ಕಟ್ಟಡದ ಹೊರಭಾಗದಲ್ಲಿಯೂ ಕೂಡ ಅದರ ಪರಿಸರ ಮತ್ತು ವಾಸ್ತುಶಿಲ್ಪಗಳನ್ನು ಅನ್ವೇಷಿಸಬಹುದಾಗಿದೆ. ವೃತ್ತಾಕಾರದ ಕಮಾನುಗಳು ಮತ್ತು ಪ್ಯಾರಪೆಟ್ ಗೋಡೆಗಳನ್ನು ಹೊಂದಿರುವ ಈ ಸೊಗಸಾದ ಮತ್ತು ಭವ್ಯವಾದ ವಸ್ತುಸಂಗ್ರಹಾಲಯವು ಖಂಡಿತವಾಗಿಯೂ ಭೇಟಿಕೊಡಲು ತಪ್ಪಿಸಿಕೊಳ್ಳಲೇ ಬಾರದು ಎನ್ನುವಂತಹುದಾಗಿದೆ.

ರೈಲ್ವೇ ಮ್ಯೂಸಿಯಂ(ವಸ್ತುಸಂಗ್ರಹಾಲಯ). ಮೈಸೂರು

ರೈಲ್ವೇ ಮ್ಯೂಸಿಯಂ(ವಸ್ತುಸಂಗ್ರಹಾಲಯ). ಮೈಸೂರು

ನೀವು ನಿಮ್ಮ ಸಮಯವನ್ನು ರೈಲು ಸಂಚಾರ ಮಾಡದೇ ಇರುವ ಹಳಿಗಳಲ್ಲಿ ಕಳೆಯಬೇಕೆಂದಿದ್ದು ಮತ್ತು ಸಂಚಾರಕ್ಕೆ ಸಂಬಂಧಿತ ಸಮಗ್ರ ಸಂಗ್ರಹವನ್ನು ನೋಡಬೇಕೆಂದಿರುವಿರಾದಲ್ಲಿ ನಿಮಗಿದೋ ಸೂಕ್ತವಾದ ಸ್ಥಳವೊಂದಿದೆ ಅದೇ ಮೈಸೂರು ರೈಲ್ವೇ ಮ್ಯೂಸಿಯಂ. ರೈಲುಗಳು , ಎಂಜೀನುಗಳು, ಸಿಗ್ನಲ್ ಗಳು ಮತ್ತು ದೀಪಗಳು ಮುಂತಾದುವುಗಳ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಇಲ್ಲಿ ಕಾಣಬಹುದಾಗಿದೆ. ರೈಲ್ವೇ ಮ್ಯೂಸಿಯಂ ಮಕ್ಕಳಲ್ಲಿ ಅತ್ಯಂತ ಜನಪ್ರಿಯವಾಗಿದೆ ಏಕೆಂದರೆ ಈ ಮ್ಯೂಸಿಯಂ ಆವರಣದ ಒಳಗೆ ಚಲಿಸುವ ಮಿನಿ ರೈಲಿನ ವ್ಯವಸ್ಥೆ ಇದ್ದು ಇದರಲ್ಲಿ ಸವಾರಿ ಮಾಡುವ ಅವಕಾಶವಿದೆ.

ಆಸ್ಟಿನ್ ರೈಲು ಕಾರಿನಿಂದ ಹಿಡಿದು ಟಿಕೆಟ್ ಕಿಟಕಿ ಮತ್ತು 1963 ಮಾದರಿಯಿಂದ ಹಿಡಿದು ರಾಯಲ್ ಬೋಗಿಗಳವರೆಗೆ, ಈ ರೈಲ್ವೆ ವಸ್ತುಸಂಗ್ರಹಾಲಯವು ತನ್ನ ಪ್ರವಾಸಿಗರಿಗೆ ಸಂತೋಷ ಪಡಿಸುವ ಎಲ್ಲವನ್ನೂ ಹೊಂದಿದೆ. ಈ ವಸ್ತು ಸಂಗ್ರಹಾಲಯದ ಆವರಣದಲ್ಲಿಯ ಬ್ಯಾಟರಿ ರೈಲಿನಲ್ಲಿ ಸವಾರಿ ಮಾಡುವುದು ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಆನಂದಿಸುವ ಅನುಭವ ಹೇಗಿರಬಹುದು?

ಪುರಾತತ್ವ ವಸ್ತು ಸಂಗ್ರಹಾಲಯ, (ಆರ್ಕಿಯೊಲಾಜಿಕಲ್ ಮ್ಯೂಸಿಯಂ) ಹಂಪಿ

ಪುರಾತತ್ವ ವಸ್ತು ಸಂಗ್ರಹಾಲಯ, (ಆರ್ಕಿಯೊಲಾಜಿಕಲ್ ಮ್ಯೂಸಿಯಂ) ಹಂಪಿ

ಭಾರತದ ಅತ್ಯಂತ ಪ್ರಸಿದ್ದ ಪುರಾತತ್ವ ವಸ್ತು ಸಂಗ್ರಹಾಲಯಗಳಲ್ಲಿ ಹಂಪೆಯ ಈ ವಸ್ತು ಸಂಗ್ರಹಾಲಯವೂ ಒಂದಾಗಿದ್ದು ಇದರಲ್ಲಿ ಹಲವಾರು , ಶತಮಾನಗಳಷ್ಟು ಹಳೆಯ ಪ್ರಾಚೀನ ಕಲಾಕೃತಿಗಳು, ವಿಗ್ರಹಗಳಿಂದ ಹಿಡಿದು ಹಳೆಯ ಪ್ರತಿಮೆಗಳು, ಮತ್ತು ಶಸ್ರ್ತಾಸ್ತ್ರಗಳು , ಉಪಕರಣಗಳುಮುಂತಾದುವುಗಳನ್ನು ಹಂಪಿಯ ಈ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದಾಗಿದೆ. ಅಲ್ಲದೆ ಇದು ಐತಿಹಾಸಿಕ ಜಾಗದಲ್ಲಿ ನೆಲೆಸಿದ್ದರಿಂದ, ಈ ಪುರಾತತ್ವ ವಸ್ತು ಸಂಗ್ರಹಾಲಯದಿಂದ ಅತ್ಯುನ್ನತ ಸಂಗ್ರಹಗಳನ್ನು ಇಲ್ಲಿ ನಿರೀಕ್ಷಿಸಬಹುದಾಗಿದೆ.

ಪುರಾತನ ಕಾಲದ ಸುಂದರವಾದ ವಸ್ತುಗಳು ಮತ್ತು ವಾಸ್ತುಶಿಲ್ಪದ ಅದ್ಬುತಗಳನ್ನು ಇಷ್ಟಪಡುವವರಿಗೆ ಹಂಪೆಯ ಈ ವಸ್ತು ಸಂಗ್ರಹಾಲಯವು ಖಂಡಿತವಾಗಿಯೂ ಭೇಟಿ ಕೊಡುವುದು ಮತ್ತು ಅಲ್ಲಿಯ ಸುಂದರವಾದ ವಸ್ತುಗಳನ್ನು ವೀಕ್ಷಿಸುವುದು ಒಂದು ಸುಂದರವಾದ ಅನುಭವೆನ್ನಬಹುದು. ಪ್ರತಿ ಪ್ರವಾಸಿಗರ ಗಮನವನ್ನು ಸೆಳೆಯುವ ಪ್ರಮುಖ ವಿಷಯಗಳಲ್ಲಿ ಸತಿ ಕಲ್ಲುಗಳು, ಗಾರೆ ಪ್ರತಿಮೆಗಳು, ಉತ್ಖನನ ಛಾಯಾಚಿತ್ರಗಳು ಮತ್ತು ಇತಿಹಾಸಪೂರ್ವ ಯುಗದ ಹಲವಾರು ಪ್ರಾಚೀನ ವಸ್ತುಗಳು ಮುಖ್ಯವಾದವುಗಳು.

ಜಗನ್ಮೋಹನ ಅರಮನೆ ಮತ್ತು ಆರ್ಟ್ ಗ್ಯಾಲರಿ , ಮೈಸೂರು

ಜಗನ್ಮೋಹನ ಅರಮನೆ ಮತ್ತು ಆರ್ಟ್ ಗ್ಯಾಲರಿ , ಮೈಸೂರು

1861 ರಲ್ಲಿ ನಿರ್ಮಿತವಾದ ಜಗನ್ಮೋಹನ ಅರಮನೆಯನ್ನು ಮೊದಲು ಒಡೆಯರ್ ರಾಜವಂಶಸ್ಥರು ಉಪಯೋಗಿಸುತ್ತಿದ್ದರು ತದನಂತರ ಅಂದರೆ 1915ರ ನಂತರದಿಂದ ಇದನ್ನು ಆರ್ಟ್ ಗ್ಯಾಲರಿಯಾಗಿ ಪರಿವರ್ತನೆ ಮಾಡಲಾಯಿತು. ಈ ಅರಮನೆಯು ಅತ್ಯಂತ ಅದ್ಭುತವಾದ ವರ್ಣಚಿತ್ರ ಕಲಾ ನೈಪುಣ್ಯತೆಗಳಿಗೆ, ಶಿಲ್ಪಗಳು ಮತ್ತು ಪ್ರಾಚೀನ ಕಲಾಕೃತಿಗಳಿಗೆ ನೆಲೆಯಾಗಿದೆ್.

ಇಲ್ಲಿ ಮೊಘಲರ ವರ್ಣಚಿತ್ರಗಳಿಂದ ಹಿಡಿದು ಹಿಂದೂ ಮಹಾಕಾವ್ಯಗಳ ವರ್ಣಚಿತ್ರಗಳವರೆಗೆ ಮತ್ತು ಯುದ್ದ ಸಲಕರಣೆಗಳು ಮತ್ತು ಕೆಲವು ಪ್ರಾಚೀನ ಅಪರೂಪದ ವಸ್ತುಗಳಾದ ನಾಣ್ಯಗಳು, ಹಿತ್ತಾಳೆಯ ಉಡುಗೆಗಳು, ಇತ್ಯಾದಿಗಳನ್ನು ಇಲ್ಲಿ ನೋಡಬಹುದಾಗಿದೆ. ಇತಿಹಾಸಪ್ರಿಯ ಮತ್ತು ರಾಷ್ಟೀಯ ಗ್ಯಾಲರಿಗಳನ್ನುಅವುಗಳ ಅದ್ಭುತ ವಾಸ್ತುಶಿಲ್ಪ ರಚನೆಯ ಕುರಿತಾದ ಅನ್ವೇಷಣೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದಂತಹ ಎಲ್ಲಾ ವಿಷಯಗಳನ್ನೂ ಹೊಂದಿರುವ ಈ ಜಗನ್ಮೋಹನ ಆರ್ಟ್ ಗ್ಯಾಲರಿಯು ಇಲ್ಲಿಗೆ ಭೇಟಿ ಕೊಡಲು ಪ್ರೇರೇಪಿಸುವುದರಲ್ಲಿ ಸಂಶಯವೇ ಇಲ್ಲ. ಇಷ್ಟೇ ಅಲ್ಲದೆ ಈ ಸುಂದರವಾದ ಅರಮನೆಯು ತನ್ನ ಸುತ್ತಲೂ ವರ್ಣರಂಜಿತ ತೋಟಗಳಿಂದ ಆವೃತವಾಗಿದೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಂಗೀತ ಉತ್ಸವಗಳನ್ನು ಆಯೋಜಿಸುವ ಸಭಾಂಗಣವನ್ನೂ ಹೊಂದಿದೆ.

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ, ಬೆಂಗಳೂರು

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ, ಬೆಂಗಳೂರು

ಕಬ್ಬನ್ ಪಾರ್ಕ ಆವರಣದ ಒಳಗೆ ನೆಲೆಸಿರುವ ಈ ವಸ್ತು ಸಂಗ್ರಹಾಲಯವು ಅತ್ಯಂತ ಹೆಚ್ಚು ಭೇಟಿ ಕೊಡಲ್ಪಡುವ ವಸ್ತುಸಂಗ್ರಹಾಲಯಗಳಲ್ಲಿ ಒಂದೆನಿಸಿದೆ. ಇದನ್ನು 1962 ರಲ್ಲಿ ನಿರ್ಮಿಸಲಾಗಿದ್ದು, ವಿದ್ಯುಚ್ಚಕ್ತಿಯ ವಿಷಯಗಳನ್ನೊಳಗೊಂಡ ಈ ವಿಜ್ಞಾನ ವಸ್ತು ಸಂಗ್ರಹಾಲಯವನ್ನು ಜವಾಹರ್ ಲಾಲ್ ನೆಹರೂ ಅವರು ಉದ್ಘಾಟಿಸಿದರು ಮತ್ತು ನಂತರ ಇದಕ್ಕೆ ಭಾರತ ರತ್ನ ಸರ್ ವಿಶ್ವೇಶ್ವರಯ್ಯ ಅವರ ಹೆಸರಿಡಲಾಯಿತು. ಈ ವಿಭಿನ್ನವಾದ ವಿಜ್ಞಾನ ವಸ್ತು ಸಂಗ್ರಹಾಲಯವು ದೇಶದಲ್ಲಿ ತನ್ನದೇ ಆದ ಒಂದು ಪ್ರಾಮುಖ್ಯತೆಯನ್ನು ಹೊಂದಿದ್ದು ಇಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಪ್ರಯೋಗಗಳು ಮತ್ತು ಎಂಜಿನ್ ಗಳನ್ನು ತನ್ನಲ್ಲಿ ಹೊಂದಿದೆ.

ಉಗಿ ಯಂತ್ರದಿಂದ ಹಿಡಿದು ಮೊಟ್ಟಮೊದಲ ವಿಮಾನ ಮತ್ತು ಅಣೆಕಟ್ಟಿನ ಪ್ರತಿಕೃತಿಗಳು ಸ್ಮಾರಕ ಯಂತ್ರಗಳವರೆಗೆ, ಇದು ವಿಜ್ಞಾನ ಪ್ರಿಯರು ಮತ್ತು ಮಕ್ಕಳನ್ನು ಆಕರ್ಷಿಸುವ ಎಲ್ಲವನ್ನೂ ತನ್ನಲ್ಲಿ ಹೊಂದಿದೆ . ಹಾಗಾದರೆ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಭೇಟಿ ನೀಡಿದರೆ ಹೇಗಿರಬಹುದು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X