Search
  • Follow NativePlanet
Share
» »ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿ ಪುನ್ನೂರು ಎಂಬ ಗ್ರಾಮವಿದೆ. ಪುನ್ನೂರು ಎಂಬ ಪದವು ಪುನ್ನ ಹಾಗೂ ಊರು ಎಂಬ ಎರಡು ಪದಗಳು ಸೇರಿ ಬಂದಿದೆ. ಪುನ್ನ ಎಂದರೆ ಬಂಗಾರ ಎಂದು, ಊರು ಎಂದರೆ ಗ್ರಾಮವೆಂದು

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿ ಪುನ್ನೂರು ಎಂಬ ಗ್ರಾಮವಿದೆ. ಪುನ್ನೂರು ಎಂಬ ಪದವು ಪುನ್ನ ಹಾಗೂ ಊರು ಎಂಬ ಎರಡು ಪದಗಳು ಸೇರಿ ಬಂದಿದೆ. ಪುನ್ನ ಎಂದರೆ ಬಂಗಾರ ಎಂದು, ಊರು ಎಂದರೆ ಗ್ರಾಮವೆಂದು ಅರ್ಥ. ಹಾಗಾಗಿಯೇ ಈ ಗ್ರಾಮವನ್ನು ಸ್ವರ್ಣ ಪೂರಿ ಗ್ರಾಮ ಹಾಗೂ ಬಂಗಾರ ಗ್ರಾಮ ಎಂದು ಕೂಡ ಕರೆಯುತ್ತಾರೆ.

ಒಬ್ಬ ಸಾಧಾರಣ ಭಕ್ತನಿಗಾಗಿ ಶ್ರೀಮನ್ನಾರಾಯಣನು ಕಾಶಿಯಿಂದ ಇಲ್ಲಿಗೆ ಬಂದನು ಎಂದು ಹೇಳುತ್ತಾರೆ. ಹಾಗೇ ಭೂಮಿಗೆ ಬಂದ ಸ್ವಾಮಿಯು ತನ್ನ ಭಕ್ತನಿಗೆ ವಿವಾಹವನ್ನು ಮಾಡಿದನು ಎಂದು ಒಂದು ಸ್ಥಳ ಪುರಾಣವಿದೆ.

ಆದ್ದರಿಂದಲೇ ಇಲ್ಲಿನ ಭವ ನಾರಾಯಣನನ್ನು ಸಾಕ್ಷೀ ಭವ ನಾರಾಯಣ ಎಂದು ಕರೆಯುತ್ತಾರೆ. ಈ ವಿಶಿಷ್ಟವಾದ ದೇವಾಲಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೇಟಿವ್ ಪ್ಲಾನೆಟ್ ನ ಮೂಲಕ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

 1. ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

1. ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

PC:YOUTUBE

ಪೂರ್ವದಲ್ಲಿ ಪುನ್ನೂರಿನಲ್ಲಿ ಕೇಶವಯ್ಯ ಎಂಬ ವ್ಯಕ್ತಿಯು ಇದ್ದನಂತೆ. ಆತನಿಗೆ ಸಂತಾನವಿರಲಿಲ್ಲವಂತೆ. ಸಂತಾನಕ್ಕಾಗಿ ಅನೇಕ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದನು. ಆ ಯಾತ್ರೆಗಳಲ್ಲಿ ತನ್ನ ಕುಟುಂಬ ಸಭ್ಯರೊಂದಿಗೆ ಅತ್ತೆಯ ಮಗ (ಅಳಿಯ, ಗೋವಿಂದ) ನನ್ನು ಕೂಡ ಕರೆದುಕೊಂಡು ಹೋಗುತ್ತಿದ್ದನಂತೆ. ಈ ಕ್ರಮದಲ್ಲಿ ಕಾಶಿಯನ್ನು ಸಂದರ್ಶಿಸಿ ನಾರಾಯಣನ ದೇವಾಲಯಕ್ಕೆ ಭೇಟಿ ನೀಡಿ ತನಗೆ ಸಂತಾನವಾಗಬೇಕು ಎಂದು ಬೇಡಿಕೊಂಡನಂತೆ.

2. ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

2. ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

PC:YOUTUBE

ಸಮಯದಲ್ಲಿ ಅಲ್ಲಿಯೇ ಇದ್ದ ಗೋವಿಂದನು, ಈ ಬಾರಿ ಖಂಡಿತವಾಗಿಯೂ ನಿನಗೆ ಹೆಣ್ಣು ಮಗು ಜನನವಾಗುತ್ತದೆ ಎಂದು ತಿಳಿಸಿದನು. ಹಾಗೆಯೇ ನಡೆದರೆ ತನಗೆ ನೀಡಿ ವಿವಾಹ ಮಾಡಬೇಕು ಎಂದು ಕೇಳಿಕೊಂಡನು. ಇದಕ್ಕೆ ಕೇಶವಯ್ಯನ ಮರುಮಾತನಾಡದೆ ಒಪ್ಪಿಕೊಂಡನು. ಈ ಘಟನೆ ನಡೆದು ಕೆಲವು ತಿಂಗಳ ನಂತರ ಕೇಶವಯ್ಯ ದಂಪತಿಗಳಿಗೆ ಹೆಣ್ಣು ಮಗುವಿನ ಜನನವಾಯಿತು. ಆಕೆಗೆ ಲಕ್ಷ್ಮಿ ಎಂದು ಹೆಸರನ್ನು ಇಟ್ಟರು. ಲಕ್ಷ್ಮಿಯು ಮದುವೆ ವಯಸ್ಸಿಗೆ ಬಂದಿದ್ದಳು.

3. ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

3. ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

PC:YOUTUBE

ಬೆನ್ನು ಬಾಗಿದ ಗೋವಿಂದನಿಗೆ ನೀಡಿ ವಿವಾಹ ಮಾಡಲು ಕೇಶವಯ್ಯ ಹಿಂದೇಟು ಹಾಕಿದ್ದನು. ಇದರಿಂದಾಗಿ ನೊಂದುಕೊಂಡ ಗೋವಿಂದನು ಕಾಶಿಯಲ್ಲಿನ ನಾರಾಯಣನ ದೇವಾಲಯಕ್ಕೆ ತೆರಳಿ ತನಗೆ ಆದ ಅನ್ಯಾಯದ ಬಗ್ಗೆ ದೇವರಿಗೆ ತಿಳಿಸಿ ನೊಂದುಕೊಂಡನು. ನಿನ್ನ ಮುಂದೆ ತನಗೆ ಮಗಳನ್ನು ನೀಡಿ ವಿವಾಹ ಮಾಡಿ ಕೊಡುತ್ತೇನೆ ಎಂದು ಹೇಳಿದನು ಅಲ್ಲವೇ? ಎಂದು ನಾರಾಯಣನನ್ನು ಪ್ರಶ್ನಿಸುತ್ತಾನೆ. ಈಗ ನೀನೇ ಬಂದು ಹೇಗಾದರೂ ಮಾಡಿ ತನ್ನ ಮಾವನ ಮಗಳ ಜೊತೆ ವಿವಾಹ ಮಾಡಿಸಬೇಕು ಎಂದು ಬೇಡಿಕೊಳ್ಳುತ್ತಾನೆ.

 4. ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

4. ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

PC:YOUTUBE

ಹೀಗಾಗಿ ನಾರಾಯಣನು ಗೋವಿಂದನ ಜೊತೆ ಪುನ್ನೂರಿಗೆ ಬಂದು, ತನ್ನ ದೇವಾಲಯದಲ್ಲಿ ನಡೆದ ಎಲ್ಲಾ ಘಟನೆಗಳನ್ನು ತಿಳಿಸಿ ಗೋವಿಂದ ಲಕ್ಷ್ಮಿಯೊಂದಿಗೆ ವಿವಾಹವಾಗುವಂತೆ ಮಾಡುತ್ತಾನೆ ಎಂಬುದು ಅಲ್ಲಿನ ಸ್ಥಳಪುರಾಣ. ಇನ್ನು ಇಲ್ಲಿನ ಸ್ವಾಮಿಯು ಸಾಕ್ಷಿ ಭಾವ ನಾರಾಯಣ ಎಂಬ ಹೆಸರಿನಿಂದ ಕರೆಸಿಕೊಂಡು ಇಲ್ಲಿಯೇ ನೆಲೆಸುತ್ತಾನೆ. ಈ ರೀತಿ ನೆಲೆಸಿದ ಸ್ವಾಮಿಯನ್ನು ವಿವಾಹದ ಸಮಸ್ಯೆಯಿಂದ ಬಳಲುತ್ತಿರುವವರು ದರ್ಶಿಸಿದರೆ ತಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ಭಕ್ತರು ನಂಬುತ್ತಾರೆ.

 5. ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

5. ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

PC:YOUTUBE

ಆದುದರಿಂದಲೇ ಅನೇಕ ಪ್ರದೇಶಗಳಿಂದ ಭಕ್ತರು ಈ ಭವ ನಾರಾಯಣನ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯದ ಪ್ರಾಂಗಣದಲ್ಲಿ ವಿಶಾಲಾಕ್ಷಿ ಸಮೇತ ವಿಶ್ವೇಶ್ವರನು, ಚೆನ್ನಕೇಶವ ಸ್ವಾಮಿ, ಲಕ್ಷ್ಮಿ ನರಸಿಂಹ ಸ್ವಾಮಿ, ವಿನಾಯಕನ ಹಾಗೂ ಹನುಮಂತನ ಉಪ ದೇವಾಲಯಗಳಿವೆ. ಪ್ರತಿವರ್ಷದ ವೈಶಾಖ ಮಾಸದಲ್ಲಿ ಸ್ವಾಮಿಗೆ ಅತ್ಯಂತ ವಿಜೃಂಭಣೆಯಿಂದ ಉತ್ಸವವನ್ನು ಆಚರಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X