Search
  • Follow NativePlanet
Share
» »200 ರೂ.ಗೆ ಕೊಡೈಕೆನಾಲ್‌ನಲ್ಲಿ ವಸತಿ, 20ರೂ.ಗೆ ಚಿಕನ್ ಫ್ರೈ

200 ರೂ.ಗೆ ಕೊಡೈಕೆನಾಲ್‌ನಲ್ಲಿ ವಸತಿ, 20ರೂ.ಗೆ ಚಿಕನ್ ಫ್ರೈ

ಪ್ರವಾಸ ಹೋಗುವುದೆಂದರೆ ಎಲ್ಲರಿಗೂ ಬಹಳ ಖುಷಿಯಾಗುತ್ತದೆ. ಆದರೆ ಪ್ರವಾಸೋದ್ಯಮವು ಬಹಳ ದುಬಾರಿಯಾಗಿದೆ. ಅನೇಕ ಜನರು ಹೊಸ ಸ್ಥಳಗಳನ್ನು ನೋಡಲು ಬಯಸುತ್ತಾರೆ. ಹೇಗಾದರೂ ಹಣ ಹೊಂದಾಣಿಸಿ ಯಾವುದಾದರೂ ಸ್ಥಳಕ್ಕೆ ಹೋಗುವ ಯೋಜನೆ ಹಾಕುತ್ತಾರೆ ಆದರೆ ನಮ್ಮ ದೇಶದಲ್ಲೇ ಬಹಳಷ್ಟು ಕಡಿಮೆ ಬಜೆಟ್‌ನ ಪ್ರವಾಸಿ ತಾಣಗಳಿವೆ. ನೀವು ಕಡಿಮೆ ಬಜೆಟ್ ಮೂಲಕ ಭಾರತದಲ್ಲಿ ಹೊಸ ಸ್ಥಳಗಳನ್ನು ನೋಡಬಹುದು. ನಿಮಗಾಗಿ ಬಜೆಟ್ ಪ್ರವಾಸೋದ್ಯಮ ತಾಣಗಳನ್ನುಇಲ್ಲಿ ನೀಡಿದ್ದೇವೆ .

ಕಸೌಲ್

ಕಸೌಲ್

PC: youtube

ಹಿಮಾಚಲ ಪ್ರದೇಶದ ಅತ್ಯಂತ ಆಕರ್ಷಕವಾದ ಪ್ರವಾಸಿ ತಾಣಗಳಲ್ಲೊಂದಾದ ಕಸೌಲ್ ಹಿಮಾಲಯ ರಾಜ್ಯವೆಂದು ಖ್ಯಾತಿ ಪಡೆದಿದೆ. ರಾಜ್ಯ ಸಾರಿಗೆ ನಿಗಮದಿಂದ ಸಾಗಿಸಲ್ಪಟ್ಟ ಬಸ್ನಲ್ಲಿ ಪ್ರಯಾಣಿಸುವಾಗ, ಕಡಿಮೆ ಬೆಲೆಯಲ್ಲಿ ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬಹುದು.

ಈ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತತ್ತೆ

ಕೊಡೈಕೆನಾಲ್‌

ಕೊಡೈಕೆನಾಲ್‌

PC: youtube

ಕೊಡೈಕೆನಾಲ್‌ನಲ್ಲಿ ಬೀದಿ ಆಹಾರ ತುಂಬಾ ರುಚಿಯಾಗಿರುತ್ತದೆ ಮತ್ತು ಕಡಿಮೆ ಬೆಲೆಗೆ ಸಿಗುತ್ತದೆ. ೨೦ ರೂ.ಗೆ ಚಿಕನ್ ಫ್ರೈ ಸಿಗುತ್ತದೆ. ನೀವು ತಂಗಲು ರೂಮ್‌ನ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿ ಕನಿಷ್ಟ 200ರೂ. ಪಾವತಿಸುವುದರ ಮೂಲಕ ಇಡೀ ದಿನ ಉಳಿಯಬಹುದು. ಸರಕಾರಿ ವಾಹನಗಳಲ್ಲಿ ಪ್ರಯಾಣಿಸುವುದು ದಿನಕ್ಕೆ 100 ರೂಕ್ಕಿಂತಲೂ ಹೆಚ್ಚಾಗೋದಿಲ್ಲ.

ಗೋವಾ

ಗೋವಾ

PC: youtube

ಗೋವಾದಲ್ಲಿನ ಹೆಚ್ಚಿನ ಬೀಚ್‌ಗಳು ಉಚಿತ ಪ್ರವೇಶವನ್ನು ಹೊಂದಿವೆ. ಅಲ್ಲದೆ ಬಿಯರ್ ತುಂಬಾ ಕಡಿಮೆ ಬೆಲೆಗೆ ದೊರೆಯುತ್ತದೆ. ನೀವು ಬಿಯರ್ ಜೊತೆಗೆ ತಿಂಡಿಗಳನ್ನೂ ಪಡೆಯಬಹುದು. ಆದರೆ ಗೋವಾದಲ್ಲಿ ವಸತಿ ಸೌಕರ್ಯಗಳು ಮಾತ್ರ ಸ್ವಲ್ಪ ದುಬಾರಿಯಾಗಿವೆ.

ಅನಂತಗಿರಿ ಪರ್ವತದಲ್ಲಿರುವ ಬೊರ್ರಾ ಗುಹೆಗಳನ್ನು ಯಾವತ್ತಾದ್ರೂ ನೋಡಿದ್ದೀರಾ?

ಅಲಪ್ಪಿ

ಅಲಪ್ಪಿ

PC: youtube

ಅಲಪ್ಪಿ ಬ್ಯಾಕ್‌ ವಾಟರ್‌ನಲ್ಲಿ ಬೋಟ್‌ನಲ್ಲಿ ಒಂದು ರಾತ್ರಿ ಉಳಿಯಲು ನೀವು ಕನಿಷ್ಠ 3,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆದರೆ ನೀವು ಒಂದು ಚೌಕಾಶಿ ವೈಶಿಷ್ಟ್ಯವನ್ನು ಹೊಂದಿದ್ದರೆ, 100 ರೂ. ಗೂ ಸಹ ಇವೆ.

ಊಟಿ

ಊಟಿ

PC: youtube

ಊಟಿಯಲ್ಲಿ ಪ್ರಯಾಣಿಸಲು ಹೆಚ್ಚು ಹಣ ವ್ಯಯ ಮಾಡುವ ಅಗತ್ಯ ಇಲ್ಲ. ಬದಲಾಗಿ ಇಲ್ಲಿ ಕೇವಲ ೧೦ ರೂ. ಕೊಟ್ಟರೆ ರೈಲಿನಲ್ಲಿ ಪ್ರಯಾಣಿಸುತ್ತಾ ಊಟಿಯ ಅಂದವನ್ನು ಕಣ್ತುಂಬಿಸಿಕೊಳ್ಳಬಹುದು. ಊಟಿಯಲ್ಲಿ ಚಾಕೊಲೇಟ್‌ಗಳು ತುಂಬಾ ಕಡಿಮೆ ಬೆಲೆಗೆ ಸಿಗುತ್ತವೆ. 100 ರೂ. ಕೊಟ್ಟರೆ ಊಟಿಯ ಹೋಮ್‌ಮೇಡ್ ಚಾಕೋಲೆಟ್‌ಗಳು ಸಿಗುತ್ತವೆ.

ಇಟಾನಗರ್

ಇಟಾನಗರ್

PC: youtube

ಈಶಾನ್ಯ ರಾಜ್ಯಗಳಲ್ಲಿ ಕಡಿಮೆ ವೆಚ್ಚದಲ್ಲಿ ಪ್ರವಾಸ ಕೈಗೊಳ್ಳಲು ಬಯಸುವವರು ಇಟಾನಗರ್ ಕಡೆಗೆ ಹೋಗುತ್ತಾರೆ. ಇಲ್ಲಿ ತಂಗಲು ಮನೆಗಳು ಲಭ್ಯವಿದೆ. ಈ ಮನೆ ಮಳಿಗೆಗಳು ರೂ 70 ರಿಂದ ಆರಂಭವಾಗುತ್ತವೆ. ಇದಲ್ಲದೆ, ಬಾಡಿಗೆದಾರರು ಕೂಡಾ ಬಹಳ ಶಿಷ್ಟರಾಗಿದ್ದಾರೆ.

ವಜ್ರೇಶ್ವರಿ ದೇವಿಯ ಸನ್ನಿಧಾನದ ನೀರಿನಲ್ಲಿ ಸ್ನಾನ ಮಾಡಿದ್ರೆ ಚರ್ಮರೋಗ ಗುಣವಾಗುತ್ತಂತೆ

ಡಾರ್ಜಿಲಿಂಗ್‌

ಡಾರ್ಜಿಲಿಂಗ್‌

PC: youtube

ಡಾರ್ಜಿಲಿಂಗ್‌ನಲ್ಲಿ ಹೋಟೆಲುಗಳು, ವಸತಿಗೃಹಗಳು ಮತ್ತು ಹೋಮ್ ಸ್ಟೇಗಳು ಸೇರಿವೆ. ಅದು ದುಬಾರಿ ಏನಲ್ಲ. ಬರೀ 100 ರೂ.ಗೆ ಹೋಟೆಲ್‌ನಲ್ಲಿ ತಂಗಬಹುದು. ಇನ್ನೂ ಇಲ್ಲಿ ವಿಶ್ವದ ಅತ್ಯಂತ ಪ್ರಸಿದ್ಧವಾದ ಡಾರ್ಜಿಲಿಂಗ್ ಚಹಾ ಬರೀ 10ರೂ.ಗೆ ಸಿಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X