Search
  • Follow NativePlanet
Share
» »ಭಾರತದ ಈ ತಾಣಗಳಲ್ಲಿ ಭಾರತೀಯರಿಗೆ ಪ್ರವೇಶವಿಲ್ಲ!

ಭಾರತದ ಈ ತಾಣಗಳಲ್ಲಿ ಭಾರತೀಯರಿಗೆ ಪ್ರವೇಶವಿಲ್ಲ!

ಭಾರತದಲ್ಲಿ ಪ್ರವಾಸೋದ್ಯಮದಲ್ಲಿ ಹಲವಾರು ಸ್ಥಳಗಳಿವೆ. ನಾವು ಸ್ನೇಹಿತರು, ಸಂಬಂಧಿಕರ ಜೊತೆಗೆ ಪ್ರಯಾಣಿಸುತ್ತೇವೆ. ಪ್ರವಾಸಕ್ಕೆ ತೆರಳುತ್ತೇವೆ. ಅಲ್ಲಿನ ಸುಮಧುರ ಅನುಭವವನ್ನು ನಮ್ಮ ನೆನಪಿನ ಬುತ್ತಿಯಲ್ಲಿಟ್ಟುಕೊಳ್ಳುತ್ತೇವೆ. ಭಾರತದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಒಂದೊಂದು ತಾಣವು ಒಂದೊಂದು ಅನುಭವವನ್ನು ನೀಡುತ್ತದೆ.

ಭಾರತದಲ್ಲಿ ಕೆಲವು ಸ್ಥಳಗಳಿವೆ. ಅಲ್ಲಿ ಭಾರತೀಯರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶವಿದೆ. ಭಾರತೀಯರಿಗೆ ಮಾತ್ರ ಪ್ರವೇಶ ನಿಷೇಧಿಸಲಾಗಿದೆ. ಹಾಗಾದ್ರೆ ಆ ಸ್ಥಳಗಳು ಯಾವುವು ಅನ್ನೋದನ್ನು ನಾವು ನೋಡೋಣ.

ಫ್ರೀ ಕ್ಯಾಶುಯಲ್ ಕೆಫೆ, ಕೊಸೊಲ್

ಫ್ರೀ ಕ್ಯಾಶುಯಲ್ ಕೆಫೆ, ಕೊಸೊಲ್

ಭಾರತೀಯರಿಗೆ ಪ್ರವೇಶ ಕಲ್ಪಿಸದ ತಾಣದಲ್ಲಿ ಮೊದಲಿಗೆ ಬರೋದು ಫ್ರೀ ಕ್ಯಾಶುಯಲ್ ಕೆಫೆ. ಇದು ಸಂಪೂರ್ಣವಾಗಿ ವಿದೇಶಿ ಕೆಫೆ ಆಗಿದೆ. ಸ್ಥಳೀಯ ಗ್ರಾಹಕರಿಗೆ ಅನುಮತಿಸಲಾಗುವುದಿಲ್ಲ. ಇಲ್ಲಿ ವಿದೇಶೀಯರಲ್ಲಿ ಇಸ್ರೇಲಿಗರೇ ಹೆಚ್ಚು.

ಫ್ರೀ ಕ್ಯಾಶುಯಲ್ ಕೆಫೆ, ಕೊಸೊಲ್

ಫ್ರೀ ಕ್ಯಾಶುಯಲ್ ಕೆಫೆ, ಕೊಸೊಲ್

ಯಾವುದೇ ಭಾರತೀಯ ನಾಗರಿಕರಿಗೆ ಇಲ್ಲಿ ಪ್ರವೇಶಿಸಲು ಅವಕಾಶವಿಲ್ಲ. ಒಂದು ವೇಳೆ ತಾವು ತಿನ್ನುವಾಗ ಪಕ್ಕದಲ್ಲಿ ಭಾರತೀಯರಿದ್ದರೆ ಅವರು ಮುಜುಗರ ಪಡುತ್ತಾರೆ. ಹಾಗಾಗಿ ಭಾರತೀಯರಿಗೆ ಅಲ್ಲಿ ನೋ ಎಂಟ್ರಿ.

ಬೆಂಗಳೂರಿನ ಈ ಮಿಲಿಟರಿ ಹೋಟೆಲ್‌ಗಳಲ್ಲಿ ತಲೆಮಾಂಸ, ಖೀಮಾ ಸವಿಯಲೇ ಬೇಕುಬೆಂಗಳೂರಿನ ಈ ಮಿಲಿಟರಿ ಹೋಟೆಲ್‌ಗಳಲ್ಲಿ ತಲೆಮಾಂಸ, ಖೀಮಾ ಸವಿಯಲೇ ಬೇಕು

 ಚೆನ್ನೈನ ರೆಸಾರ್ಟ್

ಚೆನ್ನೈನ ರೆಸಾರ್ಟ್

ಚೆನ್ನೈಯಲ್ಲಿರುವ ಓರ್ವ ನವಾಬರ ಪುರಾತನ ಬಂಗಲೆಯನ್ನು ಈಗ ಹೋಟೆಲನ್ನಾಗಿ ಮಾರ್ಪಡಿಸಲಾಗಿದ್ದು ಪ್ರವೇಶವನ್ನು ಕೇವಲ ವಿದೇಶೀಯರಿಗೆ ಮೀಸಲಿಡಲಾಗಿದೆ. ಈ ಹೋಟೆಲಿನಲ್ಲಿ ವಾಸ್ತವ್ಯ ಹೂಡಲು ವಿದೇಶೀ ಪಾಸ್ ಪೋರ್ಟ್ ಹೊಂದಿರುವುದು ಅಗತ್ಯವಾಗಿದೆ.

ಗೋವಾದ ವಿದೇಶಿಯರಿಗೆ ಮಾತ್ರ ಬೀಚ್

ಗೋವಾದ ವಿದೇಶಿಯರಿಗೆ ಮಾತ್ರ ಬೀಚ್

ಸಾಮಾನ್ಯವಾಗಿ ಎಲ್ಲಾ ಬೀಚ್‌ಗಳಲ್ಲಿ ವಿದೇಸಿಯರು ಸ್ನಾನಮಾಡುತ್ತಾರೆ. ಆದರೆ ಗೋವಾಕ್ಕೆ ಬರುವಷ್ಟು ವಿದೇಶಿಗರು ಬೇರೆಲ್ಲೂ ಬರೋದಿಲ್ಲ ಏಕೆಂದರೆ ಈ ತೀರಗಳನ್ನು ಕೆಲವು ಖಾಸಗಿ ಸಂಸ್ಥೆಗಳು ವಹಿಸಿಕೊಂಡಿದ್ದು ಇಲ್ಲಿ ಭಾರತೀಯರಿಗೆ ಪ್ರವೇಶವೇ ಇಲ್ಲ.

ಗುಲ್ಬರ್ಗಾದಲ್ಲಿದ್ದಾಳಂತೆ ಜಮ್ಮುವಿನ ವೈಷ್ಣೋದೇವಿಗುಲ್ಬರ್ಗಾದಲ್ಲಿದ್ದಾಳಂತೆ ಜಮ್ಮುವಿನ ವೈಷ್ಣೋದೇವಿ

ಗೋವಾದ ವಿದೇಶಿಯರಿಗೆ ಮಾತ್ರ ಬೀಚ್

ಗೋವಾದ ವಿದೇಶಿಯರಿಗೆ ಮಾತ್ರ ಬೀಚ್

ಗೋವಾದ ಬೀಚ್‌ವೊಂದರಲ್ಲಿ ಭಾರತೀಯರಿಗೆ ಪ್ರವೇಶವಿಲ್ಲ. ಇದಕ್ಕೇನು ಕಾರಣ ಏನೆಂದರೆ ಬೀಚ್‌ನಲ್ಲಿ ಸೂರ್ಯಸ್ನಾನ ಮಾಡುವ ವಿದೇಶೀಯರನ್ನು ದಿಟ್ಟಿಸಿ ನೋಡುವ ಭಾರತೀಯರ ಪರಿ ಅವರಿಗೆ ಇಷ್ಟವಾಗುವುದಿಲ್ಲವಂತೆ. ಅಂದರೆ ಭಾರತೀಯರು ಬಿಟ್ಟು ಬೇರೆ ಯಾವ ದೇಶದವರಾದರೂ ಅಲ್ಲಿ ಹೋಗಬಹುದು.

ಯುನೊ - ಇನ್ , ಬೆಂಗಳೂರು

ಯುನೊ - ಇನ್ , ಬೆಂಗಳೂರು

2012ರಲ್ಲಿ ಜಪಾನಿನ ನಿಪ್ಪಾನ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಸಹಯೋಗದೊಂದಿಗೆ ಯೂನೋ-ಇನ್ ಎಂಬ ಹೋಟೆಲೊಂದನ್ನು ಕೇವಲ ಜಪಾನೀಯರಿಗಾಗಿ ತೆರೆಯಲ್ಪಟ್ಟಿತು. ಬೆಂಗಳೂರಿಗೆ ಇತರ ರಾಷ್ಟ್ರಗಳ ಜನತೆಯೊಂದಿಗೇ ಜಪಾನಿನ ಪ್ರಮುಖ ಸಂಸ್ಥೆಗಳೂ ಕಾಲಿಟ್ಟವು. ಈ ಸಂಸ್ಥೆಗಳ ಪ್ರಮುಖರಿಗಾಗಿಯೇ ಈ ಹೋಟೆಲ್ ಮುಡಿಪಾಗಿದ್ದು ಇಲ್ಲಿ ಭಾರತೀಯರಿಗೆ ಪ್ರವೇಶವಿಲ್ಲ ಎಂದು ಸ್ಪಷ್ಟವಾಗಿಯೇ ಪ್ರಕಟಿಸಲಾಗಿತ್ತು.

ಯುನೊ - ಇನ್ , ಬೆಂಗಳೂರು

ಯುನೊ - ಇನ್ , ಬೆಂಗಳೂರು

2014ರಲ್ಲಿ ಹೋಟೆಲಿಗೆ ಪ್ರವೇಶಿಸಲು ಯತ್ನಿಸಿದ ಭಾರತೀಯರನ್ನು ತಡೆದ ಸಿಬ್ಬಂದಿ ನಡುವೆ ಗಲಾಟೆ ನಡೆದು ಬೆಂಗಳೂರು ಮಹಾನಗರ ಪಾಲಿಕೆ ಈ ಹೋಟೆಲಿನ ಸದಸ್ಯತ್ವವನ್ನು ರದ್ದುಪಡಿಸಿತು. ಭಾರತೀಯ ಸಂವಿಧಾನದಲ್ಲಿ ರಾಷ್ಟ್ರೀಯತೆ, ಬಣ್ಣ, ಜಾತಿಯ ಕಾರಣ ಸಾರ್ವಜನಿಕ ಸ್ಥಳದಲ್ಲಿ ಪ್ರವೇಶ ನಿರಾಕರಿಸುವಂತಿಲ್ಲ ಎಂಬ ವಿಧಿಯನ್ನೇ ನಗರಪಾಲಿಕೆ ತಿಳಿಸಿತ್ತು.

ಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರುಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರು

ಪಾಂಡಿಚೇರಿ ವಿದೇಶಿಯರಿಗೆ ಮಾತ್ರ ಬೀಚ್

ಪಾಂಡಿಚೇರಿ ವಿದೇಶಿಯರಿಗೆ ಮಾತ್ರ ಬೀಚ್

ಇಲ್ಲಿನ ಕಡಲ ಕಿನಾರೆಯು ಸನ್‌ ಬಾತ್‌ ಮಾಡಲು ಹೇಳಿ ಮಾಡಿಸಿದ ಸ್ಥಳಗಳಾಗಿವೆ. ಈ ಸ್ಥಳಗಳನ್ನು ಗುರುತಿಸಿ ಕೇವಲ ವಿದೇಶೀಯರಿಗಾಗಿ ಮುಡಿಪಾಗಿರಿಸಲಾಗಿದೆ. ಈ ಬೀಚುಗಳಲ್ಲಿಯೂ "ಭಾರತೀಯರಿಗೆ ಪ್ರವೇಶವಿಲ್ಲ"!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X