Search
  • Follow NativePlanet
Share
» »ಚಿಕ್ಕಬಳ್ಳಾಪರದ ಪ್ರವಾಸಿ ಸ್ಥಳಗಳು ಇವು...

ಚಿಕ್ಕಬಳ್ಳಾಪರದ ಪ್ರವಾಸಿ ಸ್ಥಳಗಳು ಇವು...

ಚಿಕ್ಕಬಳ್ಳಾಪುರದಲ್ಲಿ ಪ್ರವಾಸಿ ಆಕರ್ಷಣೆಗೇನು ಕಡಿಮೆ ಇಲ್ಲ. ಈ ಸುಂದರವಾದ ಸ್ಥಳದಲ್ಲಿ ಪ್ರಸಿದ್ಧವಾದ ಪ್ರವಾಸಿ ತಾಣಗಳಿದ್ದು, ಹಲವಾರು ರಾಜ್ಯಗಳಿಂದ ಭೇಟಿ ನೀಡುತ್ತಿರುತ್ತಾರೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕೇವಲ 58 ಕಿ.ಮೀ ದೂರದಲ್ಲಿದೆ

ಚಿಕ್ಕಬಳ್ಳಾಪುರದಲ್ಲಿ ಪ್ರವಾಸಿ ಆಕರ್ಷಣೆಗೇನು ಕಡಿಮೆ ಇಲ್ಲ. ಈ ಸುಂದರವಾದ ಸ್ಥಳದಲ್ಲಿ ಪ್ರಸಿದ್ಧವಾದ ಪ್ರವಾಸಿ ತಾಣಗಳಿದ್ದು, ಹಲವಾರು ರಾಜ್ಯಗಳಿಂದ ಭೇಟಿ ನೀಡುತ್ತಿರುತ್ತಾರೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕೇವಲ 58 ಕಿ.ಮೀ ದೂರದಲ್ಲಿದೆ. ವಾರಾಂತ್ಯದ ಸಮಯದಲ್ಲಿ ಹೆಚ್ಚು ಜನರು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುತ್ತಾರೆ. ಹಲವಾರು ಪ್ರವಾಸಿಗರಿಗೆ ಚಿಕ್ಕಬಳ್ಳಾಪುರದಲ್ಲಿ ಅತ್ಯಂತ ಪ್ರಸಿದ್ಧವಾದುದು ಎಂದರೆ ಅದು ನಂದಿ ಬೆಟ್ಟ ಒಂದೇ ಎಂದು ಭಾವಿಸಿದ್ದಾರೆ. ಹಾಗಾಗಿಯೇ ನಂದಿ ಬೆಟ್ಟಕ್ಕೆ ಮಾತ್ರ ಭೇಟಿ ನೀಡಿ ಇನ್ನು ಯಾವ ಸ್ಥಳಕ್ಕೂ ಸಹ ಭೇಟಿ ನೀಡುವುದಿಲ್ಲ.

ಚಿಕ್ಕಬಳ್ಳಾಪುರದ ಅಸು-ಪಾಸಿನಲ್ಲಿ ಆನೇಕ ಪ್ರವಾಸಿ ಆಕರ್ಷಣೆಗಳು ಇವೆ. ಅವು ಯಾವುವು? ಎಂಬುದರ ಬಗ್ಗೆ ಲೇಖನದ ಮೂಲಕ ತಿಳಿದು ಒಮ್ಮೆ ಭೇಟಿ ನೀಡಿ ಬನ್ನಿ.

ವಿವೇಕಾನಂದ ಫಾಲ್ಸ್

ವಿವೇಕಾನಂದ ಫಾಲ್ಸ್

ಈ ಸುಂದರವಾದ ವಿವೇಕಾಂನಂದ ಫಾಲ್ಸ್ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ. ನಗರದಿಂದ ಸುಮಾರು 13 ಕಿ. ಮೀ ದೂರದಲ್ಲಿರುವ ಈ ಅದ್ಭುತವಾದ ಸ್ಥಳಕ್ಕೆ ಕೆಥಾನಹಳ್ಳಿಯ ಮೂಲಕ ಸಾಗಬೇಕು. ಅಲ್ಲಿಂದ 1 ಕಿ. ಮೀ ದೂರ ನಡೆದುಕೊಂಡೇ ಹೋಗಬೇಕು. ಈ ಜಲಪಾತದ ಬಳಿ ಪ್ರಶಾಂತತೆಯ ಜೊತೆ ಜೊತೆಗೆ ನೀರಿನ ಝಳು ಝಳು ಹರಿಯುವಿಕೆಯನ್ನು ಆನಂದಿಸಬಹುದಾಗಿದೆ.

ರಂಗನಾಥ ಸ್ವಾಮಿ ದೇವಾಲಯ

ರಂಗನಾಥ ಸ್ವಾಮಿ ದೇವಾಲಯ

ರಂಗನಾಥ ಸ್ವಾಮಿ ದೇವಾಲಯ ಅಥವಾ ರಂಗಸ್ಥಳವು ಗೌರಿಬಿದನೂರಿನ ಹಳ್ಳಿಗೆ ಚಿಕ್ಕಬಳ್ಳಾಪುರದ ಕೆಳಗಿನ ಮಾರ್ಗವಾಗಿ ಕೇವಲ 5 ಕಿ.ಮೀ ದೂರದಲ್ಲಿದೆ. ಈ ದೇವಾಲಯದಲ್ಲಿ ಮಹಾವಿಷ್ಣುವು ನೆಲೆಸಿದ್ದಾನೆ. ಅದ್ಭುತವಾದ ಪ್ರತಿಮೆಗಳು, ಕೆತ್ತನೆಗಳಿಂದ ದೇವಾಲಯವು ಕಂಗೊಳಿಸುತ್ತಿದೆ. ಕಪ್ಪು ಕಲ್ಲಿನ ಮೇಲೆ ವಿಜಯನಗರ ಬಗ್ಗೆ ಕೆತ್ತನೆಗಳನ್ನು ಇಲ್ಲಿ ಕಾಣಬಹುದಾಗಿದೆ.

Jim Ankan Deka

ಕೈವಾರ

ಕೈವಾರ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿರುವ ಕರ್ನಾಟಕದ ಒಂದು ಸಣ್ಣ ಪಟ್ಟಣವಾದ ಕೈವಾರ ಕರ್ನಾಟಕದ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಈ ಸ್ಥಳವು ವಿಶೇಷವಾಗಿ ಐತಿಹಾಸಿಕ ಮಹತ್ವವನ್ನು ಹೊಂದಿದೆ.

ಮಹಾಭಾರತದ ಪ್ರಕಾರ ಪಾಂಡವರ ವನವಾಸದ ಸಮಯದಲ್ಲಿ ಈ ಸ್ಥಳದಲ್ಲಿಯೇ ಸ್ವಲ್ಪ ಕಾಲ ಇದ್ದರು ಎಂದು ಸ್ಥಳ ಪುರಾಣವು ತಿಳಿಸುತ್ತದೆ. ಪಾಂಡವರಲ್ಲಿನ ಭೀಮನು ಬಕಾಸುರನನ್ನು ಈ ಸ್ಥಳದಲ್ಲಿಯೇ ಕೊಂದನು ಎಂದು ಹೇಳಲಾಗುತ್ತದೆ. ಚಿಕ್ಕಬಳ್ಳಾಪುರದಿಂದ ಕೈವಾರಕ್ಕೆ 25 ಕಿ.ಮೀ ದೂರದಲ್ಲಿದೆ.

Saileshkiran

ಭೋಗನಂದೀಶ್ವರ ದೇವಾಲಯ

ಭೋಗನಂದೀಶ್ವರ ದೇವಾಲಯ

ಭೋಗನಂದೀಶ್ವರ ದೇವಾಲಯಕ್ಕೆ ಸುಮಾರು ಚಿಕ್ಕಬಳ್ಳಾಪುರದಿಂದ 21 ಕಿ.ಮೀ ದೂರದಲ್ಲಿದೆ. ದ್ರಾವಿಡ ಶೈಲಿಯಲ್ಲಿ ಬಾನಾ ರಾಜವಂಶದ ರತ್ನವಲ್ಲಿ ಎಂಬ ರಾಣಿ
ನಿರ್ಮಾಣ ಮಾಡಿದರು. ಈ ದೇವಾಲಯವು ತನ್ನ ಪ್ರಾಚೀನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ನಂದಿ ಗ್ರಾಮದಲ್ಲಿದೆ ಮತ್ತು ಇದು ಇತಿಹಾಸ ಮತ್ತು ವಾಸ್ತುಶಿಲ್ಪದ ಪ್ರೇಮಿಗಳಿಗೆ ಒಳ್ಳೆಯ ಸ್ಥಳವಾಗಿದೆ.

Bikashrd

ಇದು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಭೋಗ ನಂದೀಶ್ವರ ದೇವಾಲಯಇದು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಭೋಗ ನಂದೀಶ್ವರ ದೇವಾಲಯ

ನಂದಿ ಬೆಟ್ಟ

ನಂದಿ ಬೆಟ್ಟ

ನಂದಿ ಬೆಟ್ಟವು ರಾಜ್ಯ ಹೆದ್ದಾರಿಯಿಂದ ಚಿಕ್ಕಬಳ್ಳಾಪುರಕ್ಕೆ 10 ಕಿ.ಮೀ ದೂರದಲ್ಲಿದೆ. ಬೆಟ್ಟದ ಸುತ್ತಲೂ ಸುಂದರವಾದ ಸೌಂದರ್ಯವನ್ನು ವೀಕ್ಷಿಸಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಪ್ರವಾಸಿಗರು ಟಿಪ್ಪು ಸುಲ್ತಾನ್ ನಿರ್ಮಾಸಿದ ಕೋಟೆಯ ಕಾರಣದಿಂದ ನಂದಿದುರ್ಗ ಕೋಟೆ ಪ್ರಸಿದ್ಧವಾಗಿದೆ. ಇಲ್ಲಿ ದೇವಾಲಯಗಳು, ಟಿಪ್ಪು ಸುಲ್ತಾನ್ ಅರಮನೆಗಳು, ಟಿಪ್ಪು ಡ್ರಾಪ್, ಸುಂದರವಾದ ಪ್ರಕೃತಿ ದೃಶ್ಯವನ್ನು ಕಾಣಬಹುದು. ಪ್ರಕೃತಿಯ ಮಡಿಲಲ್ಲಿ ಕೆಲವು ಸಮಯಗಳ ಕಾಲ ಇರಲು ಬಯುಸುವವರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

PC: Koshy Koshy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X