Search
  • Follow NativePlanet
Share
» »ದೇವಾಲಯಗಳ ತವರು ಇದು...ಕೈ ಮುಗಿದು ಒಳಗೆ ಬನ್ನಿ...

ದೇವಾಲಯಗಳ ತವರು ಇದು...ಕೈ ಮುಗಿದು ಒಳಗೆ ಬನ್ನಿ...

ವಾಣಿಜ್ಯ ಬೆಳೆಗೆ ಹೆಸರಾದ ಗದಗ ಹಿಂದೆ ಧಾರವಾಡ ಜಿಲ್ಲೆಯ ಒಂದು ಭಾಗವಾಗಿತ್ತು. ಈಗ ಅದೊಂದು ಜಿಲ್ಲೆ ಎಂದು ಗುರುತಿಸಿಕೊಂಡಿದೆ. ಚಾಟ್ಸ್ ತಿನಿಸುಗಳಿಗೆ ಹೆಸರಾದ ಈ ಜಿಲ್ಲೆ ಪ್ರವಾಸ ತಾಣಗಳ ವಿಚಾರದಲ್ಲೂ ತನ್ನದೇ ಆದ ಹಿರಿಮೆಯನ್ನು ಪಡೆದಿದೆ.

By Divya pandit

ಕುಮಾರವ್ಯಾಸ, ಪಂಪ, ಲಕ್ಷ್ಮೀಶ, ಆಲೂರು ವೆಂಕಟ ರಾಯರು, ಚೆನ್ನವೀರ ಕಣವಿಯವರು ಜನಿಸಿದ ಪುಣ್ಯ ಭೂಮಿ ಗದಗ. ವಾಣಿಜ್ಯ ಬೆಳೆಗೆ ಹೆಸರಾದ ಈ ಜಿಲ್ಲೆ ಕೆಲವು ವರ್ಷಗಳ ಹಿಂದೆ ಧಾರವಾಡ ಜಿಲ್ಲೆಯ ಒಂದು ಭಾಗವಾಗಿತ್ತು. ಈಗ ಅದೊಂದು ಜಿಲ್ಲೆ ಎಂದು ಗುರುತಿಸಿಕೊಂಡಿದೆ. ಸರಸ್ವತಿ ದೇವಸ್ಥಾನ, ಗದಗ್

ಮಸಾಲೆ, ಬಜ್ಜಿ ಹಾಗೂ ಚಾಟ್ಸ್ ತಿನಿಸುಗಳಿಗೆ ಹೆಸರಾದ ಈ ಜಿಲ್ಲೆ ಪ್ರವಾಸ ತಾಣಗಳಿಗೂ ತನ್ನದೇ ಆದ ಹಿರಿಮೆಯನ್ನು ಪಡೆದಿದೆ. ಸುಂದರ ಪ್ರಕೃತಿ ಸೌಂದರ್ಯದ ಒಡಲಲ್ಲಿ ಇರುವ ದೇಗುಲಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ....

ದಂಬಾಲ ದೇಗುಲ

ದಂಬಾಲ ದೇಗುಲ

ಗದಗದಿಂದ 20 ಕಿ.ಮೀ. ದೂರದಲ್ಲಿರುವ ಈ ದೇಗುಲ ದಂಬಾಲ ಎನ್ನುವ ಊರಿನಲ್ಲಿದೆ. ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾದ ಈ ದೇವಾಲಯದಲ್ಲಿ ಈಶ್ವರನ ಆರಾಧನೆ ಮಾಡಲಾಗುತ್ತದೆ. ಈ ದೇವಾಲಯದ ಬಾಗಿಲು ಹಾಗೂ ಮೆಟ್ಟಿಲು ವಿಶೇಷ ಕೆತ್ತನೆಯಿಂದ ಕೂಡಿವೆ. ಅಲ್ಲದೆ ದೇಗುಲಗಳ ಕಂಬಗಳು ಕಲ್ಲಿನ ಕಂಬಗಳಾಗಿದ್ದು, ಇವುಗಳ ಮೇಲೆ ದೇವರ ಚಿತ್ರಗಳು ಮೂಡಿ ಬಂದಿವೆ.
Image Courtersywikimedia.org

ತ್ರಿಕುಟೇಶ್ವರ ದೇಗುಲ

ತ್ರಿಕುಟೇಶ್ವರ ದೇಗುಲ

12ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಿಸಿರುವ ಈ ದೇವಾಲಯದಲ್ಲಿ ಶಿವನ ಆರಾಧನೆ ಮಾಡಲಾಗುತ್ತದೆ. ಈ ದೇಗುಲದ ಸಮೀಪ ಚಿಕ್ಕ ಚಿಕ್ಕ ದೇಗುಲವಿದೆ. ಈ ದೇವಾಲಯದ ನಿರ್ಮಾಣದ ಯೋಜನೆಯನ್ನು ಅಮರ ಶಿಲ್ಪಿ ಜಕಣಚಾರಿ ನೀಡಿದ್ದರು. ಇಲ್ಲಿ ಸರಸ್ವತಿ, ಗಾಯಿತ್ರಿ ದೇವಿಯ ಮೂರ್ತಿ ಇರುವುದನ್ನು ಕಾಣಬಹುದು. Image courtesy - wikipedia.org

ವೀರ ನಾರಾಯಣ ದೇಗುಲ

ವೀರ ನಾರಾಯಣ ದೇಗುಲ

ಈ ದೇವಾಲಯವನ್ನು ಹೊಯ್ಸಳ ದೊರೆ ಬಿತ್ತಿದೇವನ ಗುರುಗಳಾದ ರಾಮಾನುಚಾರ್ಯರ ಸಲಹೆಯ ಮೇರೆಗೆ ನಿರ್ಮಿಸಲಾಗಿದೆ. ಪಂಚನಾರಾಯಣ ದೇಗುಲದಲ್ಲಿ ಇದೂ ಒಂದು ಎಂದು ಗುರುತಿಸಲಾಗುತ್ತದೆ. ಚಾಲುಕ್ಯ ಹೊಯ್ಸಳ ಹಾಗೂ ವಿಜಯನಗರ ಅರಸರ ಶೈಲಿಯಲ್ಲಿ ಈ ದೇಗುಲದ ವಾಸ್ತುಶಿಲ್ಪಗಳು ರೂಪಗೊಂಡಿವೆ. ಗರುಡಗಂಬ, ರಂಗ ಮಂಟಪ ಹೊಂದಿರುವ ಈ ದೇಗುಲದ ಗೋಡೆಯ ಮೇಲೆ ಕಲ್ಲಿನಲ್ಲಿ ಕೆತ್ತಲಾದ ಹಲವಾರು ದೇವರ ಬಿತ್ತಿಗಳಿವೆ. Image courtesy-wikimedia.org

ಕಾಶಿ ವಿಶ್ವೇಶ್ವರ

ಕಾಶಿ ವಿಶ್ವೇಶ್ವರ

ಕಲ್ಲಿನಲ್ಲೇ ನಿರ್ಮಿಸಲಾದ ಈ ದೇಗುಲ ಲಕ್ಕುಂಡಿಯಲ್ಲಿದೆ. ಈಶ್ವರನನ್ನು ಪೂಜಿಸಲಾಗುವ ಈ ದೇವಸ್ಥಾನದಲ್ಲಿ ಸೂರ್ಯನಾರಾಯಣ ದೇವರ ಚಿಕ್ಕ ದೇವಾಲಯ ಇರುವುದೇ ವಿಶೇಷ. ಲಕ್ಕುಂಡಿ ಮ್ಯೂಸಿಯಂ
ಲಕ್ಕುಂಡಿಯ ಈ ಮ್ಯೂಸಿಯಂಅಲ್ಲಿ ರಾಜರಕಾಲದ ಚಿನ್ನದ ನಾಣ್ಯಗಳು, ಕಲಾಕೃತಿಗಳು, ಪುರಾತನ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
Image courtesy-wikipedia.org

Read more about: gadag
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X