Search
  • Follow NativePlanet
Share
» »ಧರ್ಮಸ್ಥಳದಲ್ಲಿರುವ ಪ್ರಸಿದ್ಧವಾದ ಪ್ರವಾಸಿ ತಾಣಗಳಿವು...

ಧರ್ಮಸ್ಥಳದಲ್ಲಿರುವ ಪ್ರಸಿದ್ಧವಾದ ಪ್ರವಾಸಿ ತಾಣಗಳಿವು...

ಧರ್ಮಸ್ಥಳದಲ್ಲಿ ಹಲವಾರು ಪ್ರವಾಸಿ ತಾಣಗಳು ಇವೆ. ಧರ್ಮಸ್ಥಳದಲ್ಲಿ 2 ರಿಂದ 3 ದಿನಗಳ ಕಾಲ ಉಳಿದರೆ ಎಲ್ಲಾ ತಾಣಗಳಿಗೆ ಭೇಟಿ ನೀಡಬಹುದು. ಲೇಖನದ ಮೂಲಕ ಆ ಸುಂದರವಾದ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪಡೆಯೋಣ. ಒಮ್ಮೆ ಧರ್ಮಸ್ಥಳಕ್ಕೆ ಭೇಟಿ ನೀಡಿ

ಧರ್ಮಸ್ಥಳವನ್ನು ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡಲು ಆದ್ಯತೆ ನೀಡಲಾಗುತ್ತದೆ. ಹಲವಾರು ದೇಶ-ವಿದೇಶಗಳಿಂದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಈ ಕ್ಷೇತ್ರವು ಕರ್ನಾಟಕದ ಅತ್ಯಂತ ಪವಿತ್ರವಾದ ತೀರ್ಥಕ್ಷೇತ್ರವಾಗಿದೆ. ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯು ನೆಲೆಸಿದ್ದಾನೆ. ಪವಿತ್ರವಾದ ಈ ಸ್ಥಳಕ್ಕೆ ಫೆಬ್ರವರಿ, ಮಾರ್ಚ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಭೇಟಿ ನೀಡಲು ಅತ್ಯುತ್ತಮವಾದ ಕಾಲಾವಧಿಯಾಗಿದೆ.

ಧರ್ಮಸ್ಥಳದಲ್ಲಿ ಹಲವಾರು ಪ್ರವಾಸಿ ತಾಣಗಳು ಇವೆ. ಧರ್ಮಸ್ಥಳದಲ್ಲಿ 2 ರಿಂದ 3 ದಿನಗಳ ಕಾಲ ಉಳಿದರೆ ಎಲ್ಲಾ ತಾಣಗಳಿಗೆ ಭೇಟಿ ನೀಡಬಹುದು. ಲೇಖನದ ಮೂಲಕ ಆ ಸುಂದರವಾದ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪಡೆಯೋಣ. ಒಮ್ಮೆ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಈ ಎಲ್ಲಾ ಪ್ರವಾಸಿ ತಾಣಕ್ಕೆ ಕೂಡ ಹೋಗಿ ಬನ್ನಿ.

1. ಧರ್ಮಸ್ಥಳ ದೇವಾಲಯ

1. ಧರ್ಮಸ್ಥಳ ದೇವಾಲಯ

PC: B.yathish6

ಧರ್ಮಸ್ಥಳದ ಮುಖ್ಯ ದೇವಾಲಯವು ರತ್ನಗಿರಿ ಬೆಟ್ಟದ ಪಶ್ಚಿಮಕ್ಕೆ ಒಂದು ಕಿ.ಮೀ ಮತ್ತು ಹೊಸ ಬಸ್ ನಿಲ್ದಾಣದಿಂದ ಸುಮಾರು 2 ಕಿ,ಮೀ ದೂರದಲ್ಲಿದೆ. ಈ ದೇವಾಲಯವು ಅತ್ಯಂತ ಪುರಾತನವಾದ ದೇವಾಲಯವಾಗಿದೆ. ಇಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ದಿನನಿತ್ಯ ಸಾವಿರಾರು ಭಕ್ತರು ಈ ತೀರ್ಥಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥನ ದರ್ಶನವನ್ನು ಮಾಡುತ್ತಾರೆ. ಇಲ್ಲಿ ಪಾರ್ವತಿ, ಮಹಾ ಗಣಪತಿ ದೇವತಾ ಮೂರ್ತಿಯನ್ನು ದೇವಾಲಯದ ಗರ್ಭಗುಡಿಯಲ್ಲಿ ಕಾಣಬಹುದಾಗಿದೆ. ಈ ದೇವಾಲಯವು ಕೇರಳದ ಶೈಲಿಗೆ ಹೋಲಿಕೆ ಮಾಡಬಹುದಾಗಿದೆ.

2.ಮಂಜೂಷಾ ಮ್ಯೂಸಿಯಂ

2.ಮಂಜೂಷಾ ಮ್ಯೂಸಿಯಂ

PC: Gowthami k

ಧರ್ಮಸ್ಥಳದ ಸಂಸ್ಕ್ರತಿ ಮತ್ತು ಇತಿಹಾಸವನ್ನು ತಿಳಿದುಕೊಳ್ಳಲು ಮಂಜುನಾಥ ದೇವಾಲಯ ದಕ್ಷಿಣ ಭಾಗದಲ್ಲಿದೆ. ಇಲ್ಲಿ ವಸ್ತು ಸಂಗ್ರಹಾಲವಿದೆ. ಅದರಲ್ಲಿ ಕತ್ತಿಗಳು, ವಿಂಟೇಜ್ ಕ್ಯಾಮೆರಾಗಳು, ಆಭರಣ ವಸ್ತುಗಳು, ಲೋಹದ ಶಿಲ್ಪಗಳು ಮತ್ತು ಮೈಸೂರು ವರ್ಣಚಿತ್ರಗಳಿಂದ ಹಿಡಿದು ಪುರಾತನವಾದ ಸಂಗ್ರಹವನ್ನು ಹೊಂದಿದೆ. ವಸ್ತು ಸಂಗ್ರಹಾಲಯದ ಹೊರಗೆ ದೊಡ್ಡ ದೇವಾಲಯ ರಥಗಳ ಸಂಗ್ರಹವೂ ಸಹ ಇದೆ. ಇದನ್ನು ಕರ್ನಾಟಕದಾದ್ಯಂತ ದೇವಾಲಯಗಳಿಂದ ಸಂಗ್ರಹಿಸಲಾಗುತ್ತದೆ.

3. ಬಹುಬಲಿ ದೇವಾಲಯ

3. ಬಹುಬಲಿ ದೇವಾಲಯ

PC: Abdulla Al Muhairi

ಪಶ್ಚಿಮದಲ್ಲಿ ಬಸ್ ನಿಲ್ದಾಣದಿಂದ 1 ಕಿ.ಮೀ ಮತ್ತು ಪೂರ್ವದಿಂದ ಮಂಜುನಾಥ ದೇವಾಲಯದಿಂದ ಒಂದು ಕಿ.ಮೀ ದೂರದಲ್ಲಿ ರತ್ನಗಿರಿ ಬೆಟ್ಟದ ಮೇಲ್ಭಾಗದಲ್ಲಿ ಬಾಹುಬಲಿ ದೇವಾಲಯವಿದೆ. ಇದು ಬಾಹುಬಲಿಯು ಸುಮಾರು 39 ಅಡಿ ಎತ್ತರದಲ್ಲಿರುವ ವಿಗ್ರಹವಾಗಿದೆ. ಈ ವಿಗ್ರಹವು 1973 ರಲ್ಲಿ ರೆಂಜಾಲಾ ಗೋಪಾಲಕೃಷ್ಣ ಶೆನಾಯ್ ಅವರು ಕೆತ್ತಿದರು. ಬಾಹುಬಲಿ ಜೈನರಿಂದ ತ್ಯಾಗ ಮತ್ತು ನಿಸ್ವಾರ್ಥತೆಯ ಒಂದು ವ್ಯಕ್ತಿತ್ವ ಎಂದು ಗೌರವಿಸಲಾಗುತ್ತದೆ.

4.ರಾಮ ಮಂದಿರ

4.ರಾಮ ಮಂದಿರ

ರಾಮ ಮಂದಿರ ನೇತ್ರವಾತಿ ನದಿ ತೀರದಲ್ಲಿರುವ ಧರ್ಮಸ್ಥಳದ ಹೊರಗೆ ಇದೆ. ಈ ದೇವಾಲಯವು ಬೆಲ್ತಂಗಡಿಗೆ ಹೋಗುವ ಮಾರ್ಗದಲ್ಲಿದೆ. ಇದು ಮಂಜುನಾಥ ದೇವಾಲಯದಿಂದ ಪೂರ್ವಕ್ಕೆ 3.5 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳು ಅಮೃತ ಶಿಲ್ಪಗಳಿಂದ ಪ್ರತಿಷ್ಠಾಪಿಸಲಾಗಿದೆ. ಇದನ್ನು 2003 ರಲ್ಲಿ ನಿರ್ಮಿಸಲಾಗಿದೆ. ಪ್ರತಿ ವರ್ಷ ಇಲ್ಲಿಗೆ ಸಾವಿರಾರು ಧಾರ್ಮಿಕ ಭಕ್ತರು ಭೇಟಿ ನೀಡುತ್ತಾರೆ. ದೇವಾಲಯದ 2ನೇ ಮಹಡಿಗಳಲ್ಲಿ ಆನೇಕ ದೇವತೆಗಳ ವಿಗ್ರಹವನ್ನು ಕಾಣಬಹುದಾಗಿದೆ.

5. ನೇತ್ರಾವತಿ ನದಿ

5. ನೇತ್ರಾವತಿ ನದಿ

ನೇತ್ರಾವತಿ ನದಿ ಒಂದು ಪವಿತ್ರವಾದ ನದಿಯಾಗಿದೆ. ಧರ್ಮಸ್ಥಳದಿಂದ ಕೇವಲ 1.5 ಕಿ.ಮೀ ದೂರದಲ್ಲಿ ಪೂರ್ವ ಭಾಗದಲ್ಲಿ ನೇತ್ರಾವತಿ ನದಿಯ ಅಣೆಕಟ್ಟಿನ ಸ್ಥಳವಾಗಿದೆ. ಪ್ರವಾಸಿಗರು ನೇತ್ರವಾತಿ ನದಿಯ ದಂಡೆಯ ಮೇಲಿರುವ ಪ್ರಕೃತಿ ಆರೈಕೆ ಆಸ್ಪತ್ರೆಗೆ ಭೇಟಿ ನೀಡಬಹುದು. ಈ ಆಸ್ಪತ್ರೆ ಜನರು ವಾಯು, ನೀರು, ಭೂಮಿ, ಬೆಂಕಿ ಮತ್ತು ಈಥರ್ನ ಐದು ಅಂಶಗಳಿಂದ (ಪಂಚ ಭೂತ) ನೈಸರ್ಗಿಕ ಪ್ರಕ್ರಿಯೆಯೊಂದಿಗೆ ಪರಿಗಣಿಸುತ್ತಾರೆ.

6 .ಬ್ಯಾಡಿನ್ಡೆ ಬೆಟ್ಟ

6 .ಬ್ಯಾಡಿನ್ಡೆ ಬೆಟ್ಟ

ಹೊಸ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ 1.5 ಮತ್ತು ಮಂಜುನಾಥ ದೇವಾಲಯದ ಅರ್ಧ ಕಿ.ಮೀ ದೂರದಲ್ಲಿದೆ. ಈ ಬ್ಯಾಡಿನ್ಡೆ ಬೆಟ್ಟವನ್ನು ಅಣ್ಣಪ್ಪ ಬೆಟ್ಟ ಎಂದೂ ಸಹ ಕರೆಯುತ್ತಾರೆ. ಈ ಬೆಟ್ಟವು ನಾಲ್ಕು ದೇವಾಲಯಗಳಿವೆ. ಮುಖ್ಯವಾಗಿ ದೇವಾಲಯವನ್ನು ಭೇಟಿ ನೀಡಿದ ನಂತರ ಸಾಮಾನ್ಯವಾಗಿ ಬೆಟ್ಟವನ್ನು ಭೇಟಿ ಮಾಡಲಾಗುತ್ತದೆ. ಆಶ್ಚರ್ಯ ಏನಪ್ಪ ಎಂದರೆ ದೇವಾಲಯದೊಳಗೆ ಮಕ್ಕಳು ಮತ್ತು ಮಹಿಳೆಯರನ್ನು ಅನುಮತಿ ನೀಡುವುದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X