Search
  • Follow NativePlanet
Share
» »ಚಿತ್ರದುರ್ಗದ ಚಳ್ಳಕೆರೆಯ ಪ್ರಮುಖ ತಾಣಗಳಿವು

ಚಿತ್ರದುರ್ಗದ ಚಳ್ಳಕೆರೆಯ ಪ್ರಮುಖ ತಾಣಗಳಿವು

ಚಳ್ಳಕೆರೆಯು ಭಾರತದ 'ತೈಲ ನಗರ' ಅಥವಾ "ಎರಡನೆಯ ಮುಂಬೈ" ಎಂದೂ ಕರೆಯಲ್ಪಡುತ್ತದೆ.

ಚಳ್ಳಕೆರೆಯು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಮತ್ತು ಪಟ್ಟಣವಾಗಿದೆ. ಚಳ್ಳಕೆರೆಯು ಸಾಕಷ್ಟು ದೇವಾಲಯಗಳನ್ನು ಹೊಂದಿದೆ. ಚಳ್ಳಕೆರೆಯಲ್ಲಿರುವ ಪ್ರಮುಖ ದೇವಾಲಯಗಳು ಹಾಗು ಅಲ್ಲಿನ ತಾಣಗಳ ಬಗ್ಗೆ ತಿಳಿಯೋಣ.

 ತೈಲ ನಗರ

ತೈಲ ನಗರ

ಚಳ್ಳಕೆರೆಯು ಭಾರತದ 'ತೈಲ ನಗರ' ಅಥವಾ "ಎರಡನೆಯ ಮುಂಬೈ" ಎಂದೂ ಕರೆಯಲ್ಪಡುತ್ತದೆ. ಏಕೆಂದರೆ ಮುಂಬಯಿಯ ನಂತರ ಇದು ಖಾದ್ಯ ತೈಲದ ಎರಡನೆಯ ಅತಿದೊಡ್ಡ ಉತ್ಪಾದಕ / ಪೂರೈಕೆದಾರ ನಗರವಾಗಿದೆ. ಚಳ್ಳಕೆರೆಯಲ್ಲಿ ಸುಮಾರು 60ಕ್ಕೂ ಅಧಿಕ ತೈಲ ಉದ್ಯಮಗಳಿವೆ. ಚಳ್ಳಕೆರೆಯು ಕಂಬಳಿಗೂ ಪ್ರಸಿದ್ಧವಾಗಿದೆ.

ದತ್ತಾವದೂತ ಮಂದಿರ

ದತ್ತಾವದೂತ ಮಂದಿರ

PC: Sri Guru Kanneshwara Swamy Dattavaduta Ashrama
ಪ್ರಸಿದ್ಧ ದತ್ತಾವದೂತ ಮಂದಿರವು ತ್ಯಾಗರಾಜ ನಗರದಲ್ಲಿದೆ ಮತ್ತು ದತ್ತ ಸಂಪ್ರದಾಯದ ಸಾಂಪ್ರದಾಯಿಕ ಆಚರಣೆಗಳನ್ನು ಈ ದೇವಸ್ಥಾನದಲ್ಲಿ ಕಾಣಬಹುದು. ದತ್ತ ಅವತಾರವನ್ನು ಸಂಕೇತಿಸುವ ಮೂರು ಭಾಗಗಳಾಗಿ ವಿಭಾಗಿಸಲ್ಪಟ್ಟ ಒಂದು ಆಡುಂಬರ ಮರವಿದೆ. ಈ ಮರದಲ್ಲಿ ಹಣ್ಣುಗಳು ತುಂಬಿರುತ್ತವೆ. ಓರ್ವ ಶ್ರೇಷ್ಠ ಸಂತ, ಶ್ರೀನಿವಾಸ ದತ್ತ ಯೋಗಿಶ್ವರ್ ಅವರು ಸುಮಾರು 112 ವರ್ಷಗಳ ಕಾಲ ಅವತೂತರಂತೆ ವಾಸಿಸುತ್ತಿದ್ದರು. ಈ ಮಂದಿರದಲ್ಲಿ ನೀವು ಅವರ ಸಮಾಧಿಯನ್ನು ನೋಡಬಹುದು.

ಪವಿತ್ರ ಗಂಗಾ

(ಸಾಂದರ್ಭಿಕ ಚಿತ್ರ)

ದತ್ತ ವಿಗ್ರಹದ ಮುಂದೆ ಪವಿತ್ರವಾದ ಬಾವಿ ಇದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ನೀರಿನ ಮಟ್ಟವು 150 ರಿಂದ 200 ಅಡಿ ಕೆಳಗೆ ಇದ್ದು, ಈ 'ಪವಿತ್ರ ಗಂಗಾ' ಬಾವಿಯು 6 ಅಡಿ ಎತ್ತರದಲ್ಲಿದೆ ಮತ್ತು ವರ್ಷವಿಡೀ ನೀರಿನ ಮಟ್ಟದ ನಿರಂತರವಾಗಿರುತ್ತದೆ. ಈ ದತ್ತ ಮಂದಿರವು ಸಂತರು ಹಾಗೂ ವಿದ್ವಾಂಸರಿಗೆ ಒಂದು ಆಶ್ರಯ ತಾಣವಾಗಿದೆ. ದತ್ತಾತ್ರೇಯನ ಆಶೀರ್ವಾದವನ್ನು ಪಡೆಯಲು ಭಕ್ತರು ಈ ಪವಿತ್ರ ಸ್ಥಳಕ್ಕೆ ಬರುತ್ತಾರೆ.

ಜಗಳೂರಜ್ಜ ದೇವಸ್ಥಾನ

(ಸಾಂದರ್ಭಿಕ ಚಿತ್ರ)

ಜಗಳೂರಜ್ಜ ದೇವಸ್ಥಾನ (ಅಜ್ಜನ ಗುಡಿ) ಅಜ್ಜನ ಕೆರೆಯ ಪಕ್ಕದಲ್ಲಿ ಸುಂದರ ಸ್ಥಳವಾಗಿದೆ. ಸುತ್ತಮುತ್ತಲಿನ ಬಾವಿಗಳಿಗೆ ನೀರಿನ ಮೂಲವಾಗಿದ್ದು, ಚಳ್ಳಕೆರೆಗೆ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ . ಸೋಮವಾರ ವಾರದ ಎರಡನೇ ದಿನ ಇಲ್ಲಿ ದೇವರ ವಿಶೇಷ ಪೂಜೆ ನಡೆಯುತ್ತದೆ. ಕೆಲವು ಜನರು ದೇವರನ್ನು "ಅಜ್ಜಯ್ಯ" ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ಅದು ದೇವರ ಹೆಸರಲ್ಲ. "ಜಗಳೂರಜ್ಜ" ಎಂಬುದು ದೇವರ ಹೆಸರಾಗಿದೆ.

ವೀರಭದ್ರ ಸ್ವಾಮಿ ದೇವಸ್ಥಾನ

ವೀರಭದ್ರ ಸ್ವಾಮಿ ದೇವಸ್ಥಾನ

PC: Suryaprasad5
ಚಳ್ಳಕೆರಮ್ಮ ತಾಯಿಯನ್ನು ವಿರಭದ್ರ ಸ್ವಾಮಿಯ ಸಹೋದರಿ ಎಂದು ಕರೆಯಲಾಗುತ್ತದೆ. ಬಳ್ಳಾರಿ ರಸ್ತೆ ಚಳ್ಳಕೆರೆಯಲ್ಲಿರುವ ವೀರಭದ್ರ ಸ್ವಾಮಿ ದೇವಸ್ಥಾನವು ಚಳ್ಳಕೆರೆ ನಗರದಲ್ಲಿ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಮೇ ತಿಂಗಳಲ್ಲಿ ಇದು ಅದ್ಭುತ ಸಮಯವಾಗಿದೆ. ಗಾಂಧಿನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನ ಇದು ಚಳ್ಳಕೆರೆಯಲ್ಲಿರುವ ನೂರ ಐವತ್ತು ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ವೆಂಕಟೇಶ್ವರ ದೇವಸ್ಥಾನದ ಶಿಲಾ ಮೂರ್ತಿಯನ್ನು ತಿರುಮಲದಿಂದ ತರಲಾಗಿದೆ.

ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ

ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ

PC: Masterzatak
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರವು ರಾಜ್ಯದ್ಯಾಂತ ಮನೆಮಾತಾಗಿರುವ ಮಹಾಕ್ಷೇತ್ರವಾಗಿದೆ. ಚಳ್ಳಕೆರೆ ನಗರದಿಂದ ಸುಮಾರು 16 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರವು ಐತಿಹಾಸಿಕ ಹಿನ್ನೆಲೆಯೂ ಹೊಂದಿದೆ. ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಕಂದಾಯ ಹೋಬಳಿ ಕೇಂದ್ರಸ್ಥಳವಾಗಿದ್ದು, ಈ ಗ್ರಾಮದಲ್ಲಿ ಪ್ರತಿವರ್ಷ ಫಾಲ್ಗುಣ ಮಾಸ ಬಹುಳದ ಚಿತ್ತ ನಕ್ಷತ್ರದಂದು ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ರಥೋತ್ಸವವು ಕರ್ನಾಟಕ ರಾಜ್ಯದಲ್ಲಿ ನಡೆಯುವ ಅತ್ಯಂತ್ಯ ದೊಡ್ಡ ಜಾತ್ರೆಗಳಲ್ಲಿ ಒಂದು.

ಸಾಯಿ ಮಂದಿರ

(ಸಾಂದರ್ಭಿಕ ಚಿತ್ರ)
ಚಳ್ಳಕೆರೆಯಲ್ಲಿ ಅತಿದೊಡ್ಡ ಸಾಯಿ ಮಂದಿರವನ್ನು ನಿರ್ಮಿಸಲಾಗಿದೆ. ಇದು ನಗರ ಕೇಂದ್ರದಿಂದ 2 ಕಿ.ಮೀ ದೂರದಲ್ಲಿ ಪಾವಗಡ ರಸ್ತೆಯಲ್ಲಿದೆ. ಇದು ಹಲವಾರು ಇತರ ದೇವಾಲಯಗಳನ್ನು ಹೊಂದಿದೆ. ಪಾವಗಡ ರಸ್ತೆಯಲ್ಲಿ ಶ್ರೀ ಕಣ್ಣೇಶ್ವರ ದೇವಸ್ಥಾನವೂ ಇದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಚಳ್ಳಕೆರೆ ಬೆಂಗಳೂರು, ಬಳ್ಳಾರಿ, ಪಾವಗಡ, ಮತ್ತು ಚಿತ್ರದುರ್ಗಕ್ಕೆ ರಸ್ತೆ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಚಾಮರಾಜ ನಗರ ಮತ್ತು ಜೆವರ್ಗಿಗಳನ್ನು ಸಂಪರ್ಕಿಸುವ NH 150A ಅನ್ನು ಹೊಸದಾಗಿ ಪರಿಚಯಿಸಲಾಗಿದೆ. ಈ ಹೆದ್ದಾರಿ ಬೆಂಗಳೂರು-ಪುನಾ ಹೆದ್ದಾರಿ ಮೂಲಕ ಹಿರಿಯಾರ್ ಮೂಲಕ ಸಂಪರ್ಕ ಹೊಂದಿದೆ. ಬೆಂಗಳೂರು, ಮಂಗಳೂರು, ಚಿತ್ರದುರ್ಗ, ಬಳ್ಳಾರಿ, ಉತ್ತರ ಕರ್ನಾಟಕ ಮತ್ತು ಇತರ ಪ್ರಮುಖ ನಗರಗಳಿಗೆ ಹಲವು ಬಸ್ ಸಂಪರ್ಕಗಳು ಲಭ್ಯವಿದೆ. ಉತ್ತಮ ರೈಲು ಸಂಪರ್ಕ ವ್ಯವಸ್ಥೆಯೂ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X