Search
  • Follow NativePlanet
Share
» »ಪುಟ್ಟಪರ್ತಿ ಸಾಯಿ ಬಾಬಾನ ಸನ್ನಿಧಿಗೆ ಹೋಗಿದ್ದೀರಾ ?

ಪುಟ್ಟಪರ್ತಿ ಸಾಯಿ ಬಾಬಾನ ಸನ್ನಿಧಿಗೆ ಹೋಗಿದ್ದೀರಾ ?

ಆಧ್ಯಾತ್ಮಿಕ ಹಾಗೂ ಮಾನಸಿಕ ಶಾಂತಿಗೆ ಧಾರ್ಮಿಕ ಯಾತ್ರೆ ಮಾಡೋದು ಬಹಳ ಮುಖ್ಯ. ನಮ್ಮ ದೇಶದಲ್ಲಿರುವ ಸಾಕಷ್ಟು ಧಾರ್ಮಿಕ ಕ್ಷೇತ್ರಗಳಲ್ಲಿ ಪುಟ್ಟಪರ್ತಿಯೂ ಒಂದು. ಪುಟ್ಟಪರ್ತಿ ಸಾಯಿಬಾಬಾ ರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಆಂಧ್ರಪ್ರದೇಶದಲ್ಲಿರುವ ಪುಟ್ಟಪರ್ತಿ ಗೆ ನೀವು ಹೋಗಿದ್ದೀರಾ? ಪುಟ್ಟಪರ್ತಿಯಲ್ಲಿ ಇತರ ಪ್ರವಾಸಿ ತಾಣಗಳು ಯಾವ್ಯಾವಿವೆ ಎನ್ನುವುದನ್ನು ತಿಳಿಯಬೇಕಾದರೆ ಮುಂದೆ ಓದಿ.

ಸಾಯಿ ಕುಲಂವತ್ ಹಾಲ್

ಸಾಯಿ ಕುಲಂವತ್ ಹಾಲ್

PC:Herry Lawford

ಪುಟ್ಟಪರ್ತಿಯು ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಒಂದು ಪುಟ್ಟ ಹಾಗೂ ಸುಂದರವಾದ ನಗರವಾಗಿದೆ. ಇದು ಸಂತ ಸತ್ಯಸಾಯಿಯ ಜೀವನಕ್ಕೆ ಬಹಳ ಸಮೀಪದಲ್ಲಿದೆ. ಹಾಗಾಗಿ ನೀವು ಪುಟ್ಟ ಪರ್ತಿಯ ದರ್ಶನವನ್ನು ಸಾಯಿ ಕುಲವಂತ್ ಹಾಲ್‌ನಿಂದ ಆರಂಭಿಸಬಹುದು. ಇದು ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ಎರಡಂತಸ್ತಿನ ಕಟ್ಟಡವಾಗಿದ್ದು ಧಾರ್ಮಿಕ ಸಹಿಷ್ಣುತೆಯನ್ನು ಪ್ರದರ್ಶಿಸುತ್ತದೆ.

ಲಿಟಲ್ ಇಂಗ್ಲೆಂಡ್‌ಗೆ ಹೋಗಬೇಕಾದ್ರೆ ಪಾಸ್‌ಪೋರ್ಟ್, ವೀಸಾ ಬೇಕಾಗಿಲ್ಲ ಲಿಟಲ್ ಇಂಗ್ಲೆಂಡ್‌ಗೆ ಹೋಗಬೇಕಾದ್ರೆ ಪಾಸ್‌ಪೋರ್ಟ್, ವೀಸಾ ಬೇಕಾಗಿಲ್ಲ

ಚೈತನ್ಯ ಜ್ಯೋತಿ ಮ್ಯೂಸಿಯಂ

ಚೈತನ್ಯ ಜ್ಯೋತಿ ಮ್ಯೂಸಿಯಂ

ಚೈತನ್ಯ ಜ್ಯೋತಿ ಮ್ಯೂಸಿಯಂನ್ನು ೨೦೦೦ ಇಸವಿಯಲ್ಲಿ ನಿರ್ಮಾಣ ಮಾಡಲಾಯಿತು. ಈ ಸಂಗ್ರಹಾಲಯದಲ್ಲಿ ಪುಟ್ಟಪರ್ತಿ ಸಾಯಿಬಾಬಾನಿಗೆ ಸಂಬಂಧಿಸಿ ಎಲ್ಲಾ ಘಟನೆಗಳನ್ನು ಜೀವನ ಚರಿತ್ರೆಯನ್ನು ಕಾಣಬಹುದಾಗಿದೆ. ಬಾಲ್ಯದಿಂದ ಹಿಡಿದು ಎಲ್ಲವನ್ನೂ ಇಲ್ಲಿ ತಿಳಿಯಬಹುದಾಗಿದೆ . ಈ ಮ್ಯೂಸಿಯಂನ ವಾಸ್ತುಶಿಲ್ಪ ಮತ್ತು ವಿನ್ಯಾಸ ಅದ್ಭುತವಾಗಿದ್ದು ಚೀನೀ ಮೇಲ್ಛಾವಣಿಗಳು, ಮೂರಿಶ್ ಸ್ಪಿಯರ್ಸ್, ಗೋಥಿಕ್ ಕಮಾನುಗಳು ಮತ್ತು ಜಪಾನೀಸ್ ಮತ್ತು ಥಾಯ್ ಶೈಲಿಗಳನ್ನು ಸಂಯೋಜಿಸಿ ನಿರ್ಮಿಸಲಾಗಿದೆ.

ಸ್ಪೇಸ್‌ ಥಿಯೇಟರ್

ಸ್ಪೇಸ್‌ ಥಿಯೇಟರ್

ಪುಟ್ಟಪರ್ತಿಯ ಸತ್ಯ ಸಾಯಿ ಸ್ಪೆಸ್‌ ಥೀಯೇಟರ್ ಕೂಡಾ ಒಂದು ಪ್ರಮುಖ ಆಕರ್ಷಣೆಯಾಗಿದೆ. ಈ ಸ್ಫೇಸ್‌ ಥಿಯೇಟರ್‌ನ್ನು 1985ರಲ್ಲಿ ನಿರ್ಮಿಸಲಾಗಿತ್ತು. ಖಗೋಳ ವಿಜ್ಞಾನ, ಭೌತಿಕ ವಿಜ್ಞಾನ, ಗಣಿತಕ್ಕೆ ಸಂಬಂಧಿಸಿದ ವಿಷಯವನ್ನು ವಿಸ್ತರಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿವಾರ ಉಚಿತವಾಗಿ ತಾರಾಮಂಡಲದ ವೀಕ್ಷಣೆಯನ್ನು ಮಾಡಿಸಲಾಗುತ್ತದೆ. ಇದರಿಂದ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಸುಲಭವಾಗಿ ಬ್ರಹ್ಮಾಂಡಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದಾಗಿದೆ.

ವಿಶಾಖಪಟ್ಟಣಂನಲ್ಲಿ ಬರಲಿದೆ ತೇಲುವ ರೆಸ್ಟೋರೆಂಟ್ವಿಶಾಖಪಟ್ಟಣಂನಲ್ಲಿ ಬರಲಿದೆ ತೇಲುವ ರೆಸ್ಟೋರೆಂಟ್

ಚಿತ್ರಾವತಿ ನದಿ

ಚಿತ್ರಾವತಿ ನದಿ

PC: sujatha

ನೀವು ಪುಟ್ಟಪರ್ತಿಯಲ್ಲಿ ಚಿತ್ರಾವತಿ ನದಿಯ ಆನಂದವನ್ನೂ ಪಡೆಯಬಹುದು. ಈ ಪವಿತ್ರ ನದಿಯನ್ನು ಸತ್ಯ ಸಾಯಿ ಬಾಬಾರ ಅನುಯಾಯಿ ನಯಿ ಗಂಗಾ ಎನ್ನಲಾಗುತ್ತದೆ. ಈ ನದಿಯಲ್ಲಿ ಬಾಬಾ ಸ್ನಾನ ಮಾಡುತ್ತಿದ್ದರು. ಹಾಗೂ ಈ ನದಿ ತೀರದಲ್ಲಿ ಕುಳಿತು ಬಾಬಾ ಹಲವಾರು ಚಮತ್ಕಾರಗಳನ್ನು ಮಾಡಿದ್ದರು ಎನ್ನಲಾಗುತ್ತದೆ.

ಹಳ್ಳಿಯ ಮಸೀದಿ

ಹಳ್ಳಿಯ ಮಸೀದಿ

ಇಲ್ಲಿ ನೀವು ಹಳ್ಳಿಯ ಮಸೀದಿಯನ್ನೂ ಕಾಣಬಹುದು. ಇದು ೧೯೭೮ರಲ್ಲಿ ನಿರ್ಮಿಸಲಾಗಿದೆ. ಈ ಮಸೀದಿಯ ನಿರ್ಮಾಣದ ಹಿಂದೆ ಒಂದು ವಿಶೇಷ ಕಥೆ ಇದೆ. ಅದೇನೆಂದರೆ ಈಗ ಮಸೀದಿ ಇರುವ ಜಾಗದಲ್ಲಿ ಹಿಂದೆ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿದ್ದವು. ಈ ಸ್ಥಳದಲ್ಲಿ ಒಂದು ಇಸ್ಲಾಮಿಕ್ ವಾಕ್ಯವನ್ನು ಬರೆದಿರುವ ಪ್ಲೇಟ್ ದೊರಕಿತ್ತು. ಹಾಗಾಗಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು. ಮಸೀದಿ ನಿರ್ಮಾಣದ ನಂತರ ಎಲ್ಲವೂ ಸರಿಯಾಯಿತು ಎನ್ನಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Williampfeifer

ಎಪಿಎಸ್‌ಆರ್‌ಟಿಸಿ ಬಸ್‌ಗಳು ಪುಟ್ಟಪರ್ತಿಗೆ ಹೋಗುತ್ತದೆ. ಅನಂತಪುರದಿಂದ ಪುಟ್ಟಪರ್ತಿ 84 ಕಿ.ಮೀ ದೂರದಲ್ಲಿದ್ದರೆ ಹೈದರಾಬಾದ್‌ನಿಂದ 441 ಕಿ.ಮಿ ದೂರದಲ್ಲಿದೆ. ಬೆಂಗಳೂರಿನಿಂದ 151 ಕಿ.ಮೀ ದೂರದಲ್ಲಿದೆ.
ಇಲ್ಲಿಗೆ ಸಮೀಪವಿರುವ ವಿಮಾನ ನಿಲ್ದಾಣವೆಂದರೆ ಕೆಂಪೇಗೌಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು.
ರೈಲಿನಲ್ಲಿ ಹೋಗುವುದಾದರೆ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಎನ್ನುವ ರೈಲು ನಿಲ್ದಾಣದ ಮೂಲಕ ಪುಟ್ಟಪರ್ತಿ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X