Search
  • Follow NativePlanet
Share
» »ಕುದುರೆಮುಖದಲ್ಲಿ ಇದೆಲ್ಲಾ ಪ್ರಸಿದ್ಧಿ ತಾಣಗಳು....

ಕುದುರೆಮುಖದಲ್ಲಿ ಇದೆಲ್ಲಾ ಪ್ರಸಿದ್ಧಿ ತಾಣಗಳು....

ಕುದುರೆಮುಖವು ಕರ್ನಾಟಕದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಪರ್ವತ ಶ್ರೇಣಿಯನ್ನು ಹೊಂದಿದೆ. ಪರ್ವತದ ಬಳಿ ಇರುವ ಒಂದು ಸಣ್ಣ ಗಿರಿಧಾಮ ಅತ್ಯಂತ ಅಕರಷಣಿವಾಗಿದೆ. ಕುದುರೆಮುಖ ಎಂಬ ಹೆಸರು ಅಕ್ಷರಶಃ 'ಕುದುರೆ-ಮುಖ' ಎಂದಾಗುತ್ತದೆ. ಈ ಹೆಸರು ಬರಲು ಮುಖ್ಯವಾದ ಕಾರಣವೇನೆಂದರೆ, ಕುದುರೆಯ ಮುಖವನ್ನು ಹೋಲುವ ಪರ್ವತದ ಒಂದು ನಿರ್ದಿಷ್ಟ ದೃಶ್ಯವನ್ನು ಇಲ್ಲಿ ಕಣ್ಣುತುಂಬಿಕೊಳ್ಳಬಹುದು. ಕುದುರೆಮುಖವು ಕರ್ನಾಟಕದ ಎರಡನೆಯ ಅತ್ಯುನ್ನತ ಶಿಖರವಾಗಿದೆ. ಇಲ್ಲಿ‌ ಅನೇಕ‌ ಪ್ರಸಿದ್ದ ಪ್ರವಾಸಿ‌ತಾಣಗಳಿದ್ದು, ಒಮ್ಮೆ ಅದ್ಭುತವಾದ ತಾಣಕ್ಕೆ ಒಮ್ಮೆ ಭೇಟಿ ನೀಡಿ‌ ಬನ್ನಿ. ಕುದುರೆಮುಖದ ಹತ್ತಿರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು. ಇದು 99 ಕಿಲೋಮೀಟರ್ ದೂರದಲ್ಲಿದೆ.

ಹಾಗಾದರೆ ಈ ಲೇಖನದ‌ ಮೂಲಕ ಕುದುರೆ ಮುಖದ‌ ಪ್ರಸಿದ್ಧ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯನ್ನು ಪಡೆಯಿರಿ.

1.ಕುದುರೆಮುಖ ಪೀಕ್ ಟ್ರೆಕ್

1.ಕುದುರೆಮುಖ ಪೀಕ್ ಟ್ರೆಕ್

PC:Ramesh Desai

ಕುದುರೆಮುಖಕ್ಕೆ ಭೇಟಿ ನೀಡಿದರೆ ತಪ್ಪದೇ ಕುದುರೆ ಪೀಕ್ ಟ್ರೆಕ್ ಕೈಗೊಳ್ಳಲೇಬೇಕು. ಈ ಸುಂದರವಾದ ತಾಣವು ಸಮುದ್ರ ಮಟ್ಟದಿಂದ ಸುಮಾರು 1894 ಮೀಟರ್ ಎತ್ತರದಲ್ಲಿದೆ. ಇಲ್ಲಿ ಸುಂದರವಾದ ಪರ್ವತ ಮಾರ್ಗಗಳು ಮತ್ತು ವೈವಿಧ್ಯಮಯ ಹೂವುಗಳ ಸ್ವರ್ಗವಾಗಿದೆ. ಅರೇಬಿಯನ್ ಸಮುದ್ರದ ಮೇಲಿರುವ ಆಕಾಶ ಹಾಗು ಮೋಡಗಳ ನೋಟವು ಪ್ರತಿಯೊಬ್ಬ ಪ್ರವಾಸಿಗನಿಗೆ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ. ಇಲ್ಲಿ ಮುಖ್ಯವಾಗಿ ಅದ್ಭುತವಾದ ಭೂದೃಶ್ಯಗಳು, ಬಿದಿರಿನ ಪೊದೆಗಳು, ದಟ್ಟವಾದ ಕಾಡುಗಳು, ಹರಿಯುವ ಜಲಪಾತಗಳು ಆಹಾ ಮನೋಹರವಾಗಿರುತ್ತದೆ. ಪ್ರಾಕೃತಿಕ ಸೌಂದರ್ಯದ ಜೊತೆಜೊತೆಗೆ ಸಸ್ಯ ಹಾಗು ಪ್ರಾಣಿ ಸಂಪತ್ತನ್ನು ಕೂಡ ಹೊಂದಿದೆ.

2.ಕುದುರೆಮುಖ ನ್ಯಾಷನಲ್ ಪಾರ್ಕ್

2.ಕುದುರೆಮುಖ ನ್ಯಾಷನಲ್ ಪಾರ್ಕ್

PC: Satya swami kiran bandi

ಪರ್ವತಗಳ ಮಧ್ಯೆ ಇರುವ ಈ ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ಕೂಡ ಹೊಂದಿದೆ. ತನ್ನದೇ ಆದ ಸೌಂದರ್ಯಕ್ಕೆ ಈ ಪಾರ್ಕ್ ಹೆಸರುವಾಸಿಯಾಗಿದೆ. 1987 ರಲ್ಲಿ ಈ ರಾಷ್ಟ್ರೀಯ ಉದ್ಯಾನವನವನ್ನು ಸ್ಥಾಪಿಸಲಾಗಿದೆ. ಸುಮಾರು 600 ಕಿ.ಮೀ ಚದರ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಈ ತಾಣವು ಅತ್ಯುತ್ತಮವಾದ ಸಂರಕ್ಷಿಸಲ್ಪಟ್ಟ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ. ನೈಸರ್ಗಿಕ ಸೌಂದರ್ಯವನ್ನು ಹೊಂದಿದ್ದು. ಎತ್ತರವಾದ ಗಿರಿಶಿಖರಗಳಿಂದ ಈ ತಾಣವು ಕಂಗೊಳಿಸುತ್ತಿದೆ. ಇಲ್ಲಿ ಟ್ರೆಕ್ಕಿಂಗ್ ಕೂಡ ಮಾಡಬಹುದು. ಒಂದು ನಿರ್ದಿಷ್ಟವಾದ ಬದಿಯಲ್ಲಿ ಕುದುರೆಯ ಮುಖವನ್ನು ಇಲ್ಲಿನ ಶಿಖರವು ಹೋಲುತ್ತದೆ.

3.ಲಕ್ಯ ಅಣೆಕಟ್ಟು

3.ಲಕ್ಯ ಅಣೆಕಟ್ಟು

PC:Glany Saldanha

ಲಕ್ಯ ಅಣೆಕಟ್ಟುವಿನಿಂದ ಕುದುರೆಮುಖದ ಅವಲೋಕನವನ್ನು ಕಣ್ಣುತುಂಬಿಕೊಳ್ಳಬಹುದು. ಭದ್ರಾ ನದಿಯ ಉಪನದಿಯಾದ ಲಕ್ಯಾದಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 100 ಮೀಟರ್ ಎತ್ತರದಲ್ಲಿದೆ. ಇದೊಂದು ಸುಂದರವಾದ ತಾಣವಾಗಿದೆ. ಇಲ್ಲಿ ಗಂಗಾ ಮೂಲ, ಕಳಸ, ಹನುಮಾನ್ ಗುಂಡಿ ಫಾಲ್ಸ್, ಟ್ರೆಕ್ಕಿಂಗ್ ಮುಂತಾದ ಪ್ರವಾಸಿ ಸ್ಥಳಗಳಿವೆ.

4.ಹೊರನಾಡು

4.ಹೊರನಾಡು

PC:Gnanapiti

ಕುದುರೆಮುಖದಿಂದ ಹೊರನಾಡಿಗೆ ಸುಮಾರು 17 ಕಿ.ಮೀ ದೂರದಲ್ಲಿದೆ. ಹೊರನಾಡು ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯವು, ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನ ಭದ್ರಾ ನದಿಯ ದಂಡೆಯ ಸುಂದರ ಪರಿಸರದಲ್ಲಿದೆ. ಸುತ್ತಮುತ್ತಲೂ ದಟ್ಟ ಕಾಡುಗಳಿಂದ ಮತ್ತು ಹಚ್ಚ ಹಸರಿನಿಂದ ಸುತ್ತುವರೆದಿದೆ. ಈ ದೇವಾಲಯದಲ್ಲಿ ದೇವತೆಯಾದ ದೇವಿ ಅನ್ನಪೂರ್ಣೇಶ್ವರಿಯು ಶ್ರೀಚಕ್ರ, ಚಕ್ರ, ಶಂಖ ಮತ್ತು ದೇವಿ ಗಾಯತ್ರಿಯನ್ನು ತನ್ನ ನಾಲ್ಕು ಹಸ್ತಗಳಲ್ಲಿ ಹಿಡಿದಿರುವ ಸುಂದರ ಬಂಗಾರದ ಮೂರ್ತಿಯನ್ನು ಕಾಣಬಹುದು.ಹಲವು ಶತಮಾನಗಳ ಹಿಂದೆ ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿಯ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಈ ದೇವಾಲಯದಲ್ಲಿ ಸ್ಥಾಪಿಸಿದರು ಎಂಬ ಪ್ರತೀತಿ ಇದೆ.

5.ಕಳಸ, ಕುದುರೆಮುಖ

5.ಕಳಸ, ಕುದುರೆಮುಖ

PC:YOUTUBE

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ದೇವಾಲಯವು ಅತ್ಯುತ್ತಮವಾದ ಪ್ರವಾಸಿ ತಾಣಗಳನ್ನು ಹೊಂದಿದೆ. ಈ ಸುಂದರವಾದ ನಗರವು ಭದ್ರಾ ನದಿಯ ತೀರದಲ್ಲಿದೆ. ಈ ಸುಂದರವಾದ ನಗರವು ಭದ್ರಾ ನದಿಯ ತೀರದಲ್ಲಿದೆ. ಈ ಪ್ರದೇಶವು ಸಂಪೂರ್ಣವಾಗಿ ಮಳೆಯಿಂಸ ಅವೃತ್ತವಾಗಿದೆ. ಇಲ್ಲಿ ಉತ್ತಮವಾದ ಕಾಫಿ ಮತ್ತು ಇತರ ಗಿಡಮೂಲಿಕೆಗಳನ್ನು ಉತ್ಪದಿಸುತ್ತಾರೆ. ಇಲ್ಲಿ ಕಳಸ ದೇವತೆಯಾದ ಭಗವತಿ ದೇವಾಲಯ ಮತ್ತು ಗುಹೆಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X