Search
  • Follow NativePlanet
Share
» »ಇಂತಹ ಅದ್ಭುತ ಪರ್ವತ ಪ್ರವಾಸವನ್ನು ನೀವು ಕನಸಿನಲ್ಲೂ ಕಂಡಿರಲಿಕ್ಕಿಲ್ಲ

ಇಂತಹ ಅದ್ಭುತ ಪರ್ವತ ಪ್ರವಾಸವನ್ನು ನೀವು ಕನಸಿನಲ್ಲೂ ಕಂಡಿರಲಿಕ್ಕಿಲ್ಲ

ಮಹಾರಾಷ್ಟ್ರದ ಸಹ್ಯಾದ್ರಿ ವ್ಯಾಪ್ತಿಯಲ್ಲಿ ನೆಲೆಸಿರುವ ಅಂಬಾ ನದಿಯ ದಂಡೆಯಲ್ಲಿರುವ ದುರ್ಶೇಟ್ ಒಂದು ಚಿಕ್ಕ ಹಳ್ಳಿಯಾಗಿದೆ. ಮುಂಬೈ ಮತ್ತು ಪುಣೆಗೆ ಸಮೀಪದಲ್ಲಿರುವುದರಿಂದ ಜನರಿಗೆ ಒಂದು ಉತ್ತಮ ವಾರಾಂತ್ಯದ ತಾಣವಾಗಿದೆ. ಇದು ಪಾಲಿ ಮತ್ತು ಮಹಾದ್‌ ಎರಡು ಗಣೇಶ ದೇವಾಲಯಗಳ ನಡುವೆ ನೆಲೆಗೊಂಡಿದೆ ಮತ್ತು ಇದು ಖೊಪೊಲಿ ಹಳ್ಳಿಯ ಬಳಿಯ ಹೆದ್ದಾರಿಯ ಪಕ್ಕದಲ್ಲಿದೆ.

ಪಾಲಿಕೋಟೆ

ಪಾಲಿಕೋಟೆ

PC : Aditya Patawari

ದುರ್ಶೇಟ್ ನಿಂದ ಕೆಲವು ಕಿ.ಮೀ ದೂರದಲ್ಲಿರುವ ಎರಡು ಪರ್ವತ ಕೋಟೆಗಳು ಸರಸ್‌ಘಡ್ ಮತ್ತು ಸುಧಗಡ್. ಈ ಕೋಟೆಗಳು ಶಿವಾಜಿ ಮಹಾರಾಜ್ ಆಳ್ವಿಕೆಯಲ್ಲಿ ನ ಕೋಟೆಗಳಾಗಿವೆ. ಇದು ಐತಿಹಾಸಿಕ ಮಹತ್ವವನ್ನು ಹೊರತುಪಡಿಸಿ, ಚಾರಣಿಗರ ಮತ್ತು ಸಾಹಸಿ ಉತ್ಸಾಹಿಗಳ ನಡುವೆ ಬಹಳ ಜನಪ್ರಿಯವಾಗಿದೆ.

ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ !ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ !

ಟ್ರಕ್ಕಿಂಗ್

ಟ್ರಕ್ಕಿಂಗ್

ಸರಸ್‌ಘಡ್ ಮತ್ತು ಸುಧಗಡ್ ಪರ್ವತದ ಕೋಟೆಗಳು ಐತಿಹಾಸಿಕ ಮಹತ್ವದ ಸ್ಥಳಗಳಾಗಿವೆ. ಇದು ಟ್ರಕ್ಕಿಂಗ್‌ಗೆ ಪ್ರಸಿದ್ಧಿ ಹೊಂದಿದೆ. ಅಲ್ಲಿ ಕೆಲವು ಟ್ರಕ್ಕಿಂಗ್ ಹೈಕಿಂಗ್ ಗುಂಪುಗಳು ವಾರಾಂತ್ಯದಲ್ಲಿ ಟ್ರಕ್ಕಿಂಗ್‌ನ್ನು ಆಯೋಜಿಸುತ್ತಾ ಇರುತ್ತವೆ.

ಪಾಲಿ ವಿನಾಯಕ ದೇವಸ್ಥಾನ

ಪಾಲಿ ವಿನಾಯಕ ದೇವಸ್ಥಾನ

ಪಾಲಿ ಶ್ರೀ ಬಲ್ಲಲೇಶ್ವರ ದೇವಸ್ಥಾನ ಮತ್ತು ಮಹಾದ್ ಶ್ರೀ ವರಾದ ವಿನಾಯಕ ದೇವಸ್ಥಾನವು ದುರ್ಶೆಟ್ ಗ್ರಾಮದ ಎರಡೂ ಬದಿಯಲ್ಲಿ ಇವೆ. ಈ ಗಣೇಶ ದೇವಾಲಯಗಳೆರಡೂ ಅತ್ಯಂತ ಪೂಜ್ಯವಾಗಿದ್ದು, ಸುತ್ತಲಿನ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ.

ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?

ನೈಟ್ ಸಫಾರಿ

ನೈಟ್ ಸಫಾರಿ

PC : Ankur P

ನೀವು ದುರ್ಶೆಟ್‌ನಲ್ಲಿರುವಾಗ ನೈಟ್ ಸಫಾರಿ ಮಾಡಲೇಬೇಕು - ಸ್ವಲ್ಪ ನಕ್ಷತ್ರಗಳೊಂದಿಗೆ ಪ್ರಕಾಶಿತವಾದ ಗಾಢ ನೀಲಿ ಆಕಾಶ, ಕಾಡಿನ ಕೀಟಗಳ ಶಬ್ಧಗಳು, ಗೂಬೆಗಳು ಮತ್ತು ತೋಳಗಳು ಸೇರಿರುವ ಕಾಡುಗಳಲ್ಲಿ ರಾತ್ರಿ ಹೊತ್ತು ಸಫಾರಿ ಮಾಡುವುದು ನಿಜಕ್ಕೂ ರೋಮಾಂಚನಕಾಯಿಯಾಗಿರುತ್ತದೆ.

ಉದ್ದಾರ್ ಬಿಸಿನೀರಿನ ಬುಗ್ಗೆಗಳು

ಉದ್ದಾರ್ ಬಿಸಿನೀರಿನ ಬುಗ್ಗೆಗಳು

PC : Samy293

ಉದ್ದಾರ್ ಬಿಸಿನೀರಿನ ಬುಗ್ಗೆಗಳು ಸಲ್ಫರ್‌ನಿಂದ ಕೂಡಿದ್ದು ಚರ್ಮದ ಕಾಯಿಲೆಗಳನ್ನು ತೊಡೆದುಹಾಕಲು ಇದು ಪ್ರಯೋಜನಕಾರಿಯಾಗಿದೆ. ಇದು ಉದ್ದರ್ ಗ್ರಾಮದ ಪಾಲಿ ಗಣೇಶ ದೇವಸ್ಥಾನದಿಂದ ಒಂದು ಕಿಲೋಮೀಟರ್ ದೂರದಲ್ಲಿದೆ. ಹಾಗಾಗಿ ಸಾಕಷ್ಟು ಜನರು ಇಲ್ಲಿಗೆ ಬಂದು ಈ ಬಿಸಿ ನೀರಿನ ಬುಗ್ಗೆಯಲ್ಲಿ ಸ್ನಾನ ಮಾಡುತ್ತಾರೆ.

ಜಲಕ್ರೀಡೆಗಳು

ಜಲಕ್ರೀಡೆಗಳು

PC : Sunidhirajput

ದುರ್ಶೆಟ್ ಸಮೀಪವಿರುವ ಕುಂಡಲಿಕ ನದಿಯು ನದಿ ದಾಟುವ, ನದಿ ರಾಫ್ಟಿಂಗ್ ಮುಂತಾದ ವಿವಿಧ ನೀರಿನ ಚಟುವಟಿಕೆಗಳನ್ನು ಒದಗಿಸುತ್ತದೆ.

ದುರ್ಶೆಟ್ ಫಾರೆಸ್ಟ್ ಲಾಡ್ಜ್

ದುರ್ಶೆಟ್ ಫಾರೆಸ್ಟ್ ಲಾಡ್ಜ್

ದುರ್ಶೆಟ್ ಫಾರೆಸ್ಟ್ ಲಾಡ್ಜ್ ಈ ಅಂಬಾ ನದಿ ತೀರದಲ್ಲಿರುವ ಒಂದು ಸುಂದರವಾದ ರೆಸಾರ್ಟ್ ಆಗಿದೆ. ಈ ಸುಂದರ ವಸತಿಗೃಹವು 35 ಎಕರೆ ನೈಸರ್ಗಿಕ ಅರಣ್ಯವನ್ನು ಭವ್ಯವಾದ ತೇಗದ ಮರ, ಅರಣ್ಯ ಮರಗಳನ್ನು ಒಳಗೊಂಡಿದೆ. ಈ ಸ್ಥಳವು ಟ್ರಕ್ಕಿಂಗ್, ವನ್ಯಜೀವಿ ಮತ್ತು ಹಕ್ಕಿ ವೀಕ್ಷಕರಿಗೆ ಸ್ವರ್ಗವಾಗಿದೆ. ನೈಸರ್ಗಿಕ ಜಲಪಾತವು ಮುಂಗಾರಿನಲ್ಲಿ ಕಣ್ಣುಗಳಿಗೆ ಹಬ್ಬವನ್ನು ನೀಡುತ್ತದೆ.

10 ಸಾವಿರ ಎಕರೆಯಲ್ಲಿರುವ ಭಾರತದ ಈ ಕಣಿವೆಯ ಬಗ್ಗೆ ಗೊತ್ತಾ?10 ಸಾವಿರ ಎಕರೆಯಲ್ಲಿರುವ ಭಾರತದ ಈ ಕಣಿವೆಯ ಬಗ್ಗೆ ಗೊತ್ತಾ?

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳು ಮತ್ತು ಸೆಪ್ಟೆಂಬರ್ ನಿಂದ ಡಿಸೆಂಬರ್ ತಿಂಗಳುಗಳು ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತವಾದ ತಿಂಗಳುಗಳಾಗಿವೆ. ಮಾನ್ಸೂನ್ ಸಮಯದಲ್ಲಿ, ನೀವು ನೈಸರ್ಗಿಕ ಜಲಪಾತವನ್ನು ವೀಕ್ಷಿಸಬಹುದು. ವರ್ಷದ ಈ ಕಾಲದಲ್ಲಿ ಈ ಪ್ರದೇಶವು ವಾತಾವರಣದಲ್ಲಿ ಅತ್ಯಂತ ಆಹ್ಲಾದಕರವಾಗಿರುತ್ತದೆ ಮತ್ತು ಹೆಚ್ಚಾಗಿ ತಂಪಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X