Search
  • Follow NativePlanet
Share
» »ಈ ಮಂದಿರದಲ್ಲಿ ಹಲವು ವರ್ಷಗಳಿಂದ ಅಖಂಡ ಜ್ಯೋತಿ ಉರಿಯುತ್ತಲೇ ಇದೆ

ಈ ಮಂದಿರದಲ್ಲಿ ಹಲವು ವರ್ಷಗಳಿಂದ ಅಖಂಡ ಜ್ಯೋತಿ ಉರಿಯುತ್ತಲೇ ಇದೆ

ಬಿಂಡ್ ಎನ್ನುವುದು ಮಧ್ಯಪ್ರದೇಶದ ಒಂದು ಪ್ರಾಚೀನ ನಗರವಾಗಿದೆ. ಐತಿಹಾಸಿಕ ತೆಯ ಜೊತೆಗೆ ವಿಭಿನ್ನ ಪ್ರಾಕೃತಿಕ ಸಂಪತ್ತಿಗೂ ಪ್ರಸಿದ್ಧಿ ಹೊಂದಿದೆ. ಇಲ್ಲಿ ಹರಿಯುವ ಚಂಬಲ್‌ ಹಾಗೂ ಸಿಂಧ್ ನದಿಗಳು ಇಲ್ಲಿನ ಮಣ್ಣನ್ನು ಫಲವತ್ತಾಗಿರಿಸುವ ಕೆಲಸವನ್ನು ಮಾಡುತ್ತವೆ. ವನಸ್ಪತಿ ಗಿಡಮೂಲಿಕೆಗಳಿಗೆ ಈ ಸ್ಥಳವು ಬಹಳ ಪ್ರಸಿದ್ಧವಾಗಿದೆ.

ಈ ನಗರವು ತನ್ನ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವಗಳ ಕಾರಣ ಹೆಚ್ಚು ಲೋಕಪ್ರಿಯವಾಗಿದೆ. ಪ್ರವಾಸಿಗರು ಇಲ್ಲಿನ ಮಂದಿರಗಳ ದರ್ಶನ ಪಡೆಯಲು ಆಗಮಿಸುತ್ತಾರೆ.

ಅಟೇರ್‌ ಕೋಟೆ

ಅಟೇರ್‌ ಕೋಟೆ

ಬಿಂಡ್‌ ನ್ನು ಸುತ್ತಾಡುವುದಾದರೆ ಮೊದಲಿಗೆ ಇಲ್ಲಿನ ಐತಿಹಾಸಿಕ ಕೋಟೆಯಿಂದಲೇ ಆರಂಭ ಮಾಡಿ. ಇಲ್ಲಿ ನೀವು ಪ್ರಾಚೀನ ಅಟೋರ್ ಕೋಟೆಯನ್ನು ನೋಡಬಹುದು. ಈ ಕೋಟೆಯನ್ನು 1664-1668ರ ಆಸುಪಾಸಿನಲ್ಲಿ ನಿರ್ಮಿಸಲಾಯಿತು ಎನ್ನಲಾಗುತ್ತದೆ. ಆದರೆ ಈಗ ಇದು ಶೀಥೀಲಾವಸ್ಥೆಯಲ್ಲಿದೆ. ನೀವು ಇತಿಹಾಸದ ಬಗ್ಗೆ ಆಸಕ್ತಿಯುಳ್ಳವರಾದರೆ ಈ ಕೋಟೆಯನ್ನು ಭೇಟಿ ನೀಡಬಹುದು.

ಈ ಕೋಟೆಯ ಸುತ್ತಮುತ್ತಲೂ ಇನ್ನೂ ಅನೇಕ ಸ್ಥಳಗಳು ಕಾಣಸಿಗುತ್ತವೆ. ಹನ್ನೆರಡು ಕಂಬದ ಮಹಲ್, ಹಥಿಪುರ, ರಾಜನ ಅರಮನೆ, ರಾಣಿಯ ಅರಮನೆಯನ್ನೂ ನೋಡಬಹುದು.

ಗೋಹಾಡ್‌ನ ಕೋಟೆ

ಗೋಹಾಡ್‌ನ ಕೋಟೆ

ಅಟೆರ್‌ ಕೋಟೆಯನ್ನು ಹೊರತುಪಡಿಸಿ ಇಲ್ಲಿ ಗೋಹಡ್‌ನ ಕೋಟೆಯನ್ನೂ ನೋಡಬಹುದು. ಗ್ವಾಲಿಯರ್‌ನಿಂದ ಕೇವಲ ೪೫ ಕಿ.ಮೀ ದೂರದಲ್ಲಿ ರುವ ಈ ಕೋಟೆಯು ಇಲ್ಲಿನ ಪ್ರವಾಸಿಗರ ಮಧ್ಯೆ ಬಹಳ ಪ್ರಸಿದ್ಧಿ ಹೊಂದಿದೆ. ಈ ಕೋಟೆಯನ್ನು ೧೫೦೫ರಲ್ಲಿ ಎರಡನೇ ರಾಣಾಸಿಂಗ್‌ ದೇವ್‌ ಮೂಲಕ ನಿರ್ಮಿಸಲಾಯಿತು. ಆದರೆ ಆ ಕೋಟೆಯ ಪೂರ್ಣ ನಿರ್ಮಾಣವನ್ನು ಆತನ ನಂತರದ ಶಾಸನಕಾರರು ನಡೆಸಿದರು. ಈ ಕೋಟೆಯಲ್ಲಿ 11 ಬಾಗಿಲುಗಳಿವೆ. ಪ್ರತಿಯೊಂದು ದ್ವಾರದ ಹೆಸರನ್ನು ಸ್ಥಳೀಯ ಹಳ್ಳಿಗಳ ಹೆಸರನ್ನು ಇಡಲಾಗಿದೆ. ಕೋಟೆಯ ಒಳಗೆ ಅನೇಕ ಮಂಟಪಗಳಿವೆ.

ರೇಣುಕಾ ಮಂದಿರ

ರೇಣುಕಾ ಮಂದಿರ

PC-IamShree

ಐತಿಹಾಸಿಕ ಸ್ಥಳಗಳನ್ನು ಹೊರತುಪಡಿಸಿ ಇಲ್ಲಿ ಧಾರ್ಮಿಕ ಸ್ಥಳಗಳೂ ಇವೆ. ಇಲ್ಲಿ ನೀವು ಮಾತೆ ರೇಣುಕಾ ಮಂದಿರದ ದರ್ಶನವನ್ನೂ ಪಡೆಯಬಹುದು. ವೀರ ಯೋಧ ಪರಶುರಾಮನ ಜನ್ಮಸ್ಥಳದ ರೂಪದಲ್ಲಿ ಈ ಮಂದಿರವು ಪರಶುರಾಮನ ತಾಯಿ ರೇಣೂಕಾ ದೇವಿಗೆ ಸಮರ್ಪಿತವಾಗಿದೆ.

ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ! ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ!

ಜೈನ ಮಂದಿರ

ಜೈನ ಮಂದಿರ

ಹಿಂದೂ ಧಾರ್ಮಿಕ ಸ್ಥಳಗಳ ಜೊತೆಗೆ ಇಲ್ಲಿ ನೀವು ಜೈನ ಮಂದಿರದ ದರ್ಶಣವನ್ನೂ ಪಡೆಯಬಹುದು. ಈ ಮಂದಿರದ ನಿರ್ಮಾಣವನ್ನು ಭಗವಾನ್ ಮಹಾವೀರನ ಯಾತ್ರೆಯ ಖುಷಿಯಲ್ಲಿ ಮಾಡಲಾಗಿತ್ತು. ವಾಸ್ತುಕಲೆಗೆ ಹೆಸರಾದ ಮಂದಿರ ಇದಾಗಿದೆ. ತನ್ನ ಸೌಂದರ್ಯದಿಂದಾಗಿ ಈ ಮಂದಿರವು ಮುಖ್ಯ ಪರ್ಯಾಟನಾ ಸ್ಥಳಗಳಲ್ಲಿ ಸೇರಿಕೊಂಡಿದೆ.

ವನಖಂಡೇಶ್ವರ ಮಂದಿರ

ವನಖಂಡೇಶ್ವರ ಮಂದಿರ

ಬಿಂಡ್‌ನಲ್ಲಿ ನೀವು ಪ್ರಸಿದ್ಧ ವನಖಂಡೇಶ್ವರ ಮಂದಿರದ ದರ್ಶನವನ್ನೂ ಪಡೆಯಬಹುದು. ಶಿವನಿಗೆ ಸಮರ್ಪಿತವಾಗಿರುವ ಈ ಮಂದಿರವು ಭಾರತದ ಪುರಾತನ ಮಂದಿರಗಳಲ್ಲಿ ಒಂದಾಗಿದೆ. 1175ನೇ ಇಸವಿಯಲ್ಲಿ ಪ್ರಥ್ವಿರಾಜ್‌ ಚೌಹಾನ್‌ ಈ ಮಂದಿರವನ್ನು ನಿರ್ಮಿಸಿದನು ಎಂದು ಪುರಾಣಗಳು ತಿಳಿಸುತ್ತವೆ. ಈ ಮಂದಿರವ ವಿಶೇಷತೆ ಏನೆಂದರೆ ಇಲ್ಲೊಂದು ಅಖಂಡ ಜ್ಯೋತಿ ಇದೆ. ಹಲವಾರು ವರ್ಷಗಳಿಂದ ಉರಿಯುತ್ತಲೇ ಇದೆ. ಇಲ್ಲಿ ಪ್ರತಿ ಸೋಮವಾರ ಮಹಾ ಆರತಿಯನ್ನು ಆಯೋಜಿಸಲಾಗುತ್ತದೆ. ಮಹಾ ಆರತಿಯಲ್ಲಿ ಪಾಲ್ಗೊಳ್ಳಲು ಸ್ಥಳೀಯರಿಂದ ಹಿಡಿದು ದೂರದ ಊರಿನಿಂದಲೂ ಜನರು ಆಗಮಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X