Search
  • Follow NativePlanet
Share
» »ದಾವಣಗೆರೆಯಲ್ಲಿ ಬೆಣ್ಣೆದೋಸೆ ಮಾತ್ರವಲ್ಲ ಇನ್ನೆನೆಲ್ಲಾ ಫೇಮಸ್ ನೋಡಿ

ದಾವಣಗೆರೆಯಲ್ಲಿ ಬೆಣ್ಣೆದೋಸೆ ಮಾತ್ರವಲ್ಲ ಇನ್ನೆನೆಲ್ಲಾ ಫೇಮಸ್ ನೋಡಿ

ದಾವಣಗೆರೆ ಎಂದ ತಕ್ಷಣ ನೆನಪಾಗೋದೇ ಬೆಣ್ಣೆದೋಸೆ. ಯಾಕೆಂದರೆ ದಾವಣಗೆರೆ ಬೆಣ್ಣೆ ದೋಸೆಗೆ ಫೇಮಸ್. ಈ ಬೆಣ್ಣೆ ದೋಸೆಯನ್ನು ಹೊರತುಪಡಿಸಿ ದಾವಣಗೆರೆಯಲ್ಲಿ ಇನ್ನೇನೆಲ್ಲಾ ಇದೆ ಅನ್ನೋದನ್ನು ತಿಳಿಯೋಣ. ದಾವಣಗೆರೆಯು ಕರ್ನಾಟಕದ ಒಂದು ಪ್ರಮುಖ ಜಿಲ್ಲೆಯಾಗಿದ್ದು, ಪ್ರವಾಸಿ ಕೇಂದ್ರವಾಗಲು ಕಾರಣವೇನು ಅನ್ನೋದನ್ನು ನೋಡೋಣ.

 ಭೌಗೋಳಿಕ ಹಿನ್ನೆಲೆ

ಭೌಗೋಳಿಕ ಹಿನ್ನೆಲೆ

PC:Suchitmore

ದಾವಣಗೆರೆಯಲ್ಲಿ ಇರುವವರಿಗೆ ಅಲ್ಲಿನ ವಿಶೇಷತೆ ಏನು ಅನ್ನೋದು ಚೆನ್ನಾಗಿ ತಿಳಿದಿದೆ. ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದಾವಣಗೆರೆಯು ಒಂದು ದೊಡ್ಡ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ತನ್ನ ಭೌಗೋಳಿಕ ಹಿನ್ನೆಲೆಯಿಂದಾಗಿಯೂ ದಾವಣಗೆರೆ ಪ್ರವಾಸಿಗರ ನಡುವೆ ಬಹಳ ಪ್ರಸಿದ್ಧವಾಗಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣನ ನಗರಿಯಲ್ಲಿ ಆಚರಿಸಿದ್ರೆ ಹೇಗೆ? ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣನ ನಗರಿಯಲ್ಲಿ ಆಚರಿಸಿದ್ರೆ ಹೇಗೆ?

ಕುಂದುವಾಡ ಕೆರೆ

ಕುಂದುವಾಡ ಕೆರೆ

ದಾವಣಗೆರೆ ಪ್ರವಾಸವನ್ನು ನೀವು ಇಲ್ಲಿನ ಕುಂದುವಾಡ ಕರೆಯಿಂದ ಪ್ರಾರಂಭಿಸಬಹುದು. ಇದೊಂದು ಪಿಕ್ನಿಕ್ ಸ್ಪಾಟ್ ಆಗಿದ್ದು, ಪೂಣೆ, ಬೆಂಗಳೂರು ಎನ್‌ಹೆಚ್-4 ಬೈಪಾಸ್‌ ರಸ್ತೆಯಿಂದ ಅದು ಸಾಗುತ್ತದೆ. ವಾರಾಂತ್ಯದಲ್ಲಿ ಇಲ್ಲಿ ಪ್ರವಾಸಿಗರ ದಂಡೇ ಇರುತ್ತದೆ. ಇಲ್ಲಿ ಒಂದು ಕೆರೆ ಇದೆ. ಈ ಕೆರೆಯು ಈ ಸ್ಥಳವನ್ನು ಇನ್ನಷ್ಟು ಸುಂದರವಾಗಿಸುತ್ತದೆ. . ಇಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ದೃಶ್ಯ ಬಹಳ ಸುಂದರವಾಗಿ ಕಾಣಿಸುತ್ತದೆ. ಸುಮಾರು ೨೫೩ ಎಕರೆಯಲ್ಲಿ ಇರುವ ಈ ಕೆರೆಯನ್ನು ಜಲಸಂರಕ್ಷಣೆಗೂ ಬಳಸಲಾಗುತ್ತದೆ.

 ಶಿವನ ಮಂದಿರ

ಶಿವನ ಮಂದಿರ

ದಾವಣಗೆರೆ ಇಲ್ಲಿನ ಧಾರ್ಮಿಕ ಸ್ಥಳಗಳಿಗೂ ಬಹಳ ಪ್ರಸಿದ್ಧವಾಗಿದೆ. ಇಲ್ಲಿನ ಪ್ರಸಿದ್ಧ ಶಿವ ಮಂದಿರವನ್ನು ಭೇಟಿ ನೀಡಬಹುದು. ಈ ಮೂಲಕ ಶಿವನ ದರ್ಶನವೂ ಆಗುತ್ತದೆ. ಈ ದೇವಾಲಯವಯ ಬಗಲಿ ಹಳ್ಳಿಯಲ್ಲಿದೆ. ಇದು ಹರಪ್ಪನಹಳ್ಳಿಯಿಂದ ಸುಮಾರು 6 ಕಿ.ಮೀ ದೂರದಲ್ಲಿದೆ.. ಮಂದಿರದ ವಾಸ್ತುಕಲೆಯು ಸುಂದರವಾಗಿದ್ದು, ಹೊಯ್ಸಳ ಶೈಲಿಯಿಂದ ನಿರ್ಮಿಸಲಾಗಿದೆ. ಈ ಮಂದಿರದಲ್ಲಿ ಶಿವನನ್ನು ಹೊರತುಪಡಿಸಿ ವಿಷ್ಣು, ಸುಬ್ರಹ್ಮಣ್ಯ, ಬ್ರಹ್ಮ ಹಾಗೂ ಗಣೇಶನ ಮೂರ್ತಿಯನ್ನೂ ಪ್ರತಿಷ್ಟಾಪಿಸಲಾಗಿದೆ.

ಇದು ದೇಶದ ಅತ್ಯಂತ ಡೇಂಜರಸ್ ರಾಜ್ಯ; ಇಲ್ಲಿ ವಿಸ್ಕೀ, ಬಿಯರ್, ರಮ್ ಮಾತ್ರ ಕುಡಿಯಬಹುದುಇದು ದೇಶದ ಅತ್ಯಂತ ಡೇಂಜರಸ್ ರಾಜ್ಯ; ಇಲ್ಲಿ ವಿಸ್ಕೀ, ಬಿಯರ್, ರಮ್ ಮಾತ್ರ ಕುಡಿಯಬಹುದು

ಬಾತಿ ಗುಡ್ಡ

ಬಾತಿ ಗುಡ್ಡ

ದಾವಣಗೆರೆಯಲ್ಲಿ ನೀವು ಬಾತಿ ಗುಡ್ಡವನ್ನೂ ಸುತ್ತಾಡಬಹುದು. ಇದು ಒಂದು ಬೆಟ್ಟವಾಗಿದ್ದು, ಹರಿಹರದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಈ ಪರ್ವತ ಪ್ರದೇಶವು ತನ್ನ ಪ್ರಕೃತಿ ಸೌಂದರ್ಯದ ಜೊತೆಗೆ ಪಕ್ಷಿ ವಿವಾರದ ಆನಂದವನ್ನು ಪಡೆಯಬಹುದು. ಹರಿಹರ ಹಾಗೂ ದಾವಣಗೆರೆಯ ಜನರು ಇಲ್ಲಿಗೆ ವಾರಾಂತ್ಯದ ಸಮಯ ಕಳೆಯಲು ಆಗಮಿಸುತ್ತಾರೆ. ಈ ಬೆಟ್ಟದ ಮೇಲೆ ಪ್ರಾಚೀನ ಹಿಂದೂ ದೇವಾಲಯ ಹಾಗೂ ಚಮನ್ ಷಾ ವಾಲಿ ದರ್ಗಾ ಕೂಡಾ ಇದೆ. ಮಂದಿರದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಇಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಬೇತೂರು

ಬೇತೂರು

PC: Dineshkannambadi

ದಾವಣಗೆರೆಯಲ್ಲಿರುವ ಬೇತೂರು ಒಂದು ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವವನ್ನು ಹೊಂದಿರುವಂತಹ ಸ್ಥಳವಾಗಿದೆ. ಇದು ದಾವಣಗೆರೆ-ಜಗಳೂರು ರಸ್ತೆಯಿಂದ 6ಕಿ.ಮೀ ದೂರದಲ್ಲಿದೆ. ಮಧ್ಯಕಾಲಿನ ಯುಗದಲ್ಲಿ ಈ ಸ್ಥಳವು ತ್ರಿಭುವನ್ ಮಲ್ಲ ಪಾಂಡ್ಯ ನ ರಾಜಧಾನಿಯಾಗಿತ್ತು. ಇತಿಹಾಸ ಪ್ರೇಮಿಗಳಿಗಂತೂ ಬೇಲೂರು ಯಾವುದೇ ಖಜಾನೆಗಿಂತಲೂ ಕಮ್ಮಿ ಇಲ್ಲ. ಇಲ್ಲಿ ನೀವು ಶಿವ ಮಂದಿರವನ್ನೂ ಕಾಣಬಹುದು. ಇದು ಚಾಲುಕ್ಯ ಶೈಲಿಯನ್ನು ಪ್ರತಿನಿಧಿಸುತ್ತದೆ.

ಬಗಲಿ

ಬಗಲಿ

PC: Dineshkannambadi

ಈ ಎಲ್ಲಾ ಸ್ಥಳಗಳನ್ನು ಹೊರತುಪಡಿಸಿ ನೀವು ಬಗಲಿಯನ್ನು ಭೇಟಿ ನೀಡಬಹುದು. ಇದು ಹರಪ್ಪನಹಳ್ಳಿಯ ಸಮೀಪದಲ್ಲಿದೆ. 9ನೇ ಶತಮಾನಕ್ಕೆ ಸಂಬಂಧಿಸಿದ ಕಾಲೇಶ್ವರ ಮಂದಿರ ಇಲ್ಲಿದೆ. ಚಾಲುಕ್ಯ ವಾಸ್ತುಕಲಾವನ್ನು ಹೊಂದಿರುವ ಈ ಮಂದಿರವು ನಾಲ್ಕು ಬದಿಯಲ್ಲೂ ಪಂಚಲಿಂಗ ಮಂದಿರದಿಂದ ಕೂಡಿದೆ. ಮಂದಿರದ ಮುಖ್ಯ ದ್ವಾರದ ಬಳಿ ಉಗ್ರನರಸಿಂಹ ನ ಮೂರ್ತಿ ಇದೆ.

ಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X