Search
  • Follow NativePlanet
Share
» »ಮಳೆಯಲೀ ಜೊತೆಯಲಿ ರೊಮ್ಯಾನ್ಸ್‌ ಮಾಡೋಕೆ ಬೆಸ್ಟ್ ತಾಣಗಳಿವು

ಮಳೆಯಲೀ ಜೊತೆಯಲಿ ರೊಮ್ಯಾನ್ಸ್‌ ಮಾಡೋಕೆ ಬೆಸ್ಟ್ ತಾಣಗಳಿವು

ಮುಂಗಾರು ಮಳೆಯ ಆಗಮನವಾಗಿದೆ. ಮಳೆಯಲ್ಲಿ ತಂಪಾದ ಸ್ಥಳಕ್ಕೆ ಪಿಕ್‌ನಿಕ್‌ಗೆ ಹೋಗೋದು ಮಜಾ ನೀಡುತ್ತದೆ. ಹೀಗಿರುವಾಗ ಮಳೆಯಲಿ ಜೊತೆಯಲಿ ಎನ್ನುವಂತೆ ನಿಮ್ಮ ಸಂಗಾತಿಯ ಜೊತೆ ಇದ್ದರೆ ಇನ್ನಷ್ಟು ಚೆನ್ನಾಗಿರುತ್ತದೆ. ಜಿಟಿ ಜಿಟಿ ಮಳೆಯಲ್ಲಿ ಒಂದೇ ಕೊಡೆಯಲ್ಲಿ ಇಬ್ಬರು ಕೈ ಕೈ ಹಿಡಿದು ಓಡಾಡುತ್ತಾ ಮಳೆಯಲ್ಲಿ ರೊಮ್ಯಾನ್ಸ್‌ ಮಾಡುವ ಆ ಅನುಭವ ಬಣ್ಣಿಸಲಾಗದು. ನಿಮಗೂ ಆ ರೀತಿ ಮಳೆಯಲ್ಲಿ ತಂಪಾದ ಸ್ಥಳದಲ್ಲಿ ರೊಮ್ಯಾನ್ಸ್‌ ಮಾಡಬೇಕೆಂದಿದ್ದರೆ ನಾವು ಹೇಳ್ತೀವಿ ಈ ಮುಂಗಾರು ಮಳೆಗೆ ಎಂತಹ ಸ್ಥಳಗಳಿಗೆ ಹೋಗೋದು ಬೆಸ್ಟ್ ಅನ್ನೋದನ್ನು.

ವಯನಾಡ್

ವಯನಾಡ್

PC: User

ಕೇರಳ ರಾಜ್ಯದ ಕಣ್ಣೂರು ಹಾಗೂ ಕೋಜಿಕೋಡ್ ಜಿಲ್ಲೆಯ ನಡುವೆ ಇರುವ ಸ್ಥಳವಾಗಿದೆ ವಯನಾಡ್. ಪಶ್ಚಿಮ ಘಟ್ಟಗಳ ಪ್ರದೇಶವಾಗಿದ್ದು, ಹಚ್ಚಹಸಿರು ಬೆಟ್ಟ ಗುಡ್ಡಗಳು, ಪರ್ವತಗಳಿಂದ ಕೂಡಿದೆ. ಇಂತಹ ರೊಮ್ಯಾಂಟಿಕ್ ಸ್ಥಳದಲ್ಲಿ ಈ ಮಳೆಗಾಲದಲ್ಲಿ ರೊಮ್ಯಾನ್ಸ್ ಮಾಡೋ ಮಜಾನೇ ಬೇರೆ.

ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋದ್ರೆ ದೋಷ ಪರಿಹಾರವಾಗುತ್ತಂತೆ!ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋದ್ರೆ ದೋಷ ಪರಿಹಾರವಾಗುತ್ತಂತೆ!

ಹೂವಿನ ಕಣಿವೆ

ಹೂವಿನ ಕಣಿವೆ

ಇದು ಯಕ್ಷಯಕ್ಷಿಣಿಯರು ಆಟದ ಮೈದಾನವೆಂದು ಜನಪ್ರಿಯವಾಗಿದೆ. ಉತ್ತರಾಖಂಡದ ಹೂವುಗಳ ಕಣಿವೆಯು ಮೋಡಿಮಾಡುವ ತಾಣವಾಗಿದ್ದು, ಜುಲೈ ಮತ್ತು ಆಗಸ್ಟ್ ನ ಮಾನ್ಸೂನ್ ತಿಂಗಳಲ್ಲಿ ಮಾತ್ರ ಸೌಂದರ್ಯವನ್ನು ಅನಾವರಣಗೊಳಿಸುತ್ತದೆ.

ಮಜುಲಿ

ಮಜುಲಿ

PC: Kalai Sukanta

ಮಾನ್ಸೂನ್‌ನಲ್ಲಿ ಹೋಗಬೇಕಾದ ಇನ್ನೊಂದು ಉತ್ತಮ ತಾಣವೆಂದರೆ ಅಸ್ಸಾಂನಲ್ಲಿರುವ ಮಜುಲಿ . ಆದಷ್ಟು ಬೇಗ ಈ ತಾಣಕ್ಕೆ ಹೋಗಿ ಬನ್ನಿ. ಯಾಕೆಂದರೆ ಕ್ರಮೇಣ ಹೆಚ್ಚಿನ ಪ್ರಮಾಣದ ಸವೆತದಿಂದಾಗಿ ಈ ನದಿ ದ್ವೀಪವು ಅಂತ್ಯಗೊಳ್ಳುವ ಸಾಧ್ಯತೆ ಇದೆ.

ಮಲ್ಚೇಜ್ ಘಾಟ್

ಮಲ್ಚೇಜ್ ಘಾಟ್

PC: Siddhanth R. Menon

ಪುಣೆಯಿಂದ ಸುಮಾರು 700 ಮೀಟರ್ ದೂರದಲ್ಲಿದೆ. ಮಲ್ಚೇಜ್ ಘಾಟ್ ಮಹಾರಾಷ್ಟ್ರದ ಹಿಲ್‌ಸ್ಟೇಶನ್‌ಗಳಲ್ಲೊಂದಾಗಿದೆ. ಜಲಪಾತಗಳಿಂದ ತುಂಬಿಹೋಗಿರುವ ಮಲ್ಚೇಜ್ ಘಾಟ್ ತನ್ನ ಕಡಿದಾದ ಬಂಡೆಗಳ ಕೆಳಗೆ ಹಾದುಹೋಗುತ್ತದೆ. ಆದರೆ ವರ್ಷಪೂರ್ತಿ ಮಲ್ಶೇಜ್ ಘಾಟ್ ಸುಂದರವಾಗಿರುತ್ತದೆ, ಆದರೆ ಮಳೆಗಾಲದ ತಿಂಗಳುಗಳಲ್ಲಿ, ನೀರು ಹಿತಕರವಾದ ಮತ್ತು ವಿಲಕ್ಷಣವಾದ ಫ್ಲೆಮಿಂಗೋಗಳು ಅದರ ಹಸಿರು ಪರಿಸರಕ್ಕೆ ವಲಸೆ ಹೋಗುತ್ತವೆ.

ಈ ಘಾಟ್‌ ಸೆಕ್ಷನ್‌ನಲ್ಲಿ ಪ್ರಯಾಣಿಸುವಾಗ ವಾಂತಿ ಬರದೇ ಇರುತ್ತಾಈ ಘಾಟ್‌ ಸೆಕ್ಷನ್‌ನಲ್ಲಿ ಪ್ರಯಾಣಿಸುವಾಗ ವಾಂತಿ ಬರದೇ ಇರುತ್ತಾ

ಮಲ್ಚೇಜ್ ಘಾಟ್

ಮಲ್ಚೇಜ್ ಘಾಟ್

PC:Rahul0n1ine

ನೀವು ಹೊರಗಿನ ಚಟುವಟಿಕೆಯನ್ನು ಹೆಚ್ಚಾಗಿ ಇಷ್ಟಪಡುವವರಾದರೆ ಇಲ್ಲಿ ನಿಮಗೆ ಬೇಕಾದಷ್ಟು ಚಟುವಟಿಕೆಗಳು ಕಾಣಸಿಗುತ್ತವೆ. ಪ್ರಶಾಂತವಾದ ಸರೋವರಗಳು, ಜಲಪಾತಗಳು, ಹಕ್ಕಿಗಳ ವಿಹಾರವನ್ನೂ ನೋಡಬಹುದು. ಅಲ್ಲದೆ ಇದು ಛತ್ರಪತಿ ಶಿವಾಜಿ ಮಹಾರಾಜ್‌ರ ಜನ್ಮಸ್ಥಳವೂ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X