Search
  • Follow NativePlanet
Share
» »ಮಳೆಗಾಲದ ನಿಜವಾದ ಮಜಾ ಪಡೆಯಬೇಕಾದ್ರೆ ಇಲ್ಲಿಗೆ ಹೋಗಿ

ಮಳೆಗಾಲದ ನಿಜವಾದ ಮಜಾ ಪಡೆಯಬೇಕಾದ್ರೆ ಇಲ್ಲಿಗೆ ಹೋಗಿ

ಮುಂಬೈ ಸಮೀಪವಿರುವ ಕರ್ಜತ್ ಮಹಾರಾಷ್ಟ್ರದ ಸುಂದರ ಮಾನ್ಸೂನ್‌ ತಾಣಗಳಲ್ಲಿ ಒಂದಾಗಿದೆ. ಇದು ಹಚ್ಚಹಸಿರುನಿಂದ ಕೂಡಿದ್ದು, ನದಿಗಳು ಹಾಗೂ ಜಲಪಾತಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿಗೆ ನೀವು ವರ್ಷದ ಯಾವುದೇ ಸೀಸನ್‌ನಲ್ಲೂ ಬರಬಹುದು. ಮುಂಬೈ-ಪುಣೆಯಿಂದ ಇದೊಂದು ಸುಂದರವಾದ ವೀಕೆಂಡ್‌ ತಾಣವೂ ಆಗಿದೆ. ಸುರಿಯುವ ಮಳೆಯ ಜೊತೆ ಇಲ್ಲಿನ ಬೆಟ್ಟಗಳು ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತದೆ. ಇಷ್ಟೇ ಅಲ್ಲದೆ ಇಲ್ಲಿ ಸುತ್ತಮುತ್ತಲೂ ಧಾರ್ಮಿಕ ಸ್ಥಳಗಳೂ ಹಾಗೂ ಮಾನವ ನಿರ್ಮಿತ ಗುಹೆಗಳೂ ಕಾಣಸಿಗುತ್ತವೆ. ಸಾಹಸದ ಆನಂದವನ್ನು ಪಡೆಯಲು ಇದೊಂದು ಸೂಕ್ತವಾದ ತಾಣವಾಗಿದೆ. ಇಲ್ಲಿ ಮೌಂಟೆನ್ ಹಾಗೂ ಹೈಕಿಂಗ್‌ನ ಅನುಭವವನ್ನೂ ಪಡೆಯಬಹುದು.

ಕೋಟಾಲಿಘಡ್ ಕೋಟೆ

ಕೋಟಾಲಿಘಡ್ ಕೋಟೆ

PC:Elroy Serrao

ಒಂದು ಉತ್ತಮ ಮಾನ್ಸೂನ್‌ ತಾಣವಾಗಿರುವ ಕರ್ಜತ್‌ನ್ನು ಸುತ್ತಾಡಬೇಕಾದರೆ ನೀವು ಇಲ್ಲಿನ ಐತಿಹಾಸಿಕ ಕೋಟಾಲಿಘಡ್ ಕೋಟೆಯಿಂದ ಪ್ರಾರಂಭಿಸಿ. ಇದು ಕರ್ಜತ್‌ ಕ್ಷೇತ್ರದ ಮುಖ್ಯವಾದ ಟ್ರೆಕ್ಕಿಂಗ್ ಪಾಯಿಂಟ್ ಆಗಿದೆ. ಇದು ತನ್ನ ಸುತ್ತನುತ್ತಲಿನ ರೋಮಾಂಚಕ ದೃಶ್ಯಗಳನ್ನು ತೋರಿಸುತ್ತದೆ. ಈ ಕೋಟೆಯು ೧೩ ನೇ ಶತಮಾನದಲ್ಲಿ ನಿರ್ಮಿಸಲಾಗಿರುವುದು ಎನ್ನುತ್ತದೆ ಇತಿಹಾಸದ ಪುಟಗಳು. ಇದು ಕೇವಲ ಕೋಟೆ ಮಾತ್ರವಲ್ಲ ಇದೊಂದು ಲೈಟ್‌ಹೌಸ್‌ ರೀತಿ ಕೆಲಸ ಮಾಡುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಒಂದು ವೇಳೆ ನೀವು ಕರ್ಜತ್‌ಗೆ ಹೋದರೆ ಇಲ್ಲಿನ ಈ ಐತಿಹಾಸಿಕ ಕೋಟೆಯನ್ನು ಸುತ್ತೋದನ್ನು ಮರೆಯಬೇಡಿ.

ಉಲ್ಲಾಸ್ ಕಣಿವೆ

ಉಲ್ಲಾಸ್ ಕಣಿವೆ

PC-Shlokmane

ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ ನಂತರ ನೀವು ಇಲ್ಲಿನ ಪ್ರಸಿದ್ಧ ತಾಣವಾದ ಉಲ್ಲಾಸ್‌ ಘಾಟಿಗೆ ಭೇಟಿ ನೀಡಬಹುದು. ಉಲ್ಲಾಸ್‌ ಘಾಟಿಯು ಕರ್ಜತ್‌ನ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ತನ್ನ ಆಕರ್ಷಕ ಜಲಪಾತಕ್ಕೆ ಹೆಸರುವಾಸಿಯಾಗಿದೆ. ಮಳೆಗಾಲದಲ್ಲಂತೂ ಇಲ್ಲಿನ ಜಲಪಾತಗಳ ನೋಟ ಬಹಳ ಸುಂದರವಾಗಿರುತ್ತದೆ. ಇದು ಟ್ರೆಕ್ಕಿಂಗ್‌ಗೂ ಫೇಮಸ್ ಆಗಿದೆ. ಪ್ರಕೃತಿ ಪ್ರೇಮಿಗಳಿಂದ ಹಿಡಿದು ಸಾಹಸೀ ಪ್ರೀಯರಿಗೆ ಇದು ಉತ್ತಮವಾದ ತಾಣವಾಗಿದೆ.

ಬೋರ್‌ ಘಾಟ್

ಬೋರ್‌ ಘಾಟ್

PC-Ramnath Bhat

ಉಲ್ಲಾಸ್‌ ಕಣಿವೆಯನ್ನು ಹೊರತುಪಡಿಸಿ ನೀವು ಬೋರ್‌ ಘಾಟ್‌ನ್ನು ಸುತ್ತಾಡಬಹುದು. ಇದು ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಪ್ರಸಿದ್ಧಿ ಹೊಂದಿದೆ. ಪ್ರಕೃತಿ ಪ್ರೇಮಿಗಳಿಗಂತೂ ಇದು ಯಾವುದೇ ಖಜಾನೆಗಿಂತ ಕಡಿಮೆ ಇಲ್ಲ. ಇದು ತನ್ನ ಐತಿಹಾಸಿಕ ಮಹತ್ವಕ್ಕೂ ಹೆಸರುವಾಸಿಯಾಗಿದೆ. ಪ್ರಾಚೀನ ಕಾಲದಲ್ಲಿ ಈ ಘಾಟ್‌ನ್ನು ವ್ಯಾಪಾರ ಮಾರ್ಗವನ್ನಾಗಿ ಬಳಸಲಾಗುತ್ತಿತ್ತು.

ಕೋಂಡಾನಾದ ಗುಹೆ

ಕೋಂಡಾನಾದ ಗುಹೆ

ಹಚ್ಚಹಸಿರಿನ ಪ್ರಾಕೃತಿಕ ಸ್ಥಳಗಳನ್ನು ಹೊರತುಪಡಿಸಿ ಇಲ್ಲಿನ ಗುಹೆಯನ್ನೂ ಸುತ್ತಾಡಬಹುದು. ಇದು ತನ್ನ ರೋಮಾಂಚನಕಾರಿ ಅನುಭವದಿಂದಾಗಿ ಪ್ರವಾಸಿಗರ ಮಧ್ಯೆ ಪ್ರಸಿದ್ಧವಾಗಿದೆ. ತನ್ನ ಆಕರ್ಷಕ ವಾಸ್ತುಕಲೆಯಿಂದಾಗಿಯೂ ಹೆಸರುವಾಸಿಯಾಗಿದೆ. ಈ ಗುಹೆಗೆ ಬೌದ್ಧ ಧರ್ಮದ ಅನುಯಾಯಿಗಳೊಂದಿಗೆ ಸಂಬಂಧವಿದೆ ಎನ್ನಲಾಗುತ್ತದೆ. ಇಂದಿಗೂ ಅಲ್ಲಿ ಸುಂದರ ಕಲಾಕೃತಿಯ ಬೌದ್ಧ ಸ್ತೂಪ ನೋಡಲು ಸಿಗುತ್ತದೆ. ಈ ಗುಹೆಯು 16 ಬೌದ್ಧ ಸ್ತೂಪಗಳ ಸಮೂಹವಾಗಿದೆ.

ಎನ್‌ಡಿ ಸ್ಟೂಡಿಯೋ

ಎನ್‌ಡಿ ಸ್ಟೂಡಿಯೋ

PC- Anonymousbananas

ಈ ಮೇಲಿನ ತಾಣಗಳನ್ನು ಹೊರತುಪಡಿಸಿ ನೀವು ಇಲ್ಲಿನ ಪ್ರಸಿದ್ಧ ಎನ್‌ಡಿ ಸ್ಟೂಡಿಯೋನ ಆನಂದವನ್ನೂ ಪಡೆಯಬಹುದು. ಕರ್ಜತ್‌ನಲ್ಲಿ ಅತೀ ಹೆಚ್ಚು ವೀಕ್ಷಿಸಲಾಗುವ ಸ್ಥಳಗಳಲ್ಲಿ ಇದೂ ಒಂದಾಗಿದೆ. ೨೦೦೫ರಲ್ಲಿ ಈ ಸ್ಟೂಡಿಯೋವನ್ನು ನಿರ್ಮಿಸಲಾಯಿತು ಎನ್ನಲಾಗುತ್ತದೆ. ಇಲ್ಲಿ ಹಲವು ಸಿನಿಮಾಗಳ ಶೂಟಿಂಗ್ ನಡೆದಿದೆ. ಈ ಸ್ಥಳದಲ್ಲಿ ಆಸ್ಕರ್ ವಿಜೇತ ಸಿನಿಮಾ ಸ್ಲಂ ಡಾಗ್ ಮಿಲಿಯನೇರ್ ಕೂಡಾ ಶೂಟಿಂಗ್ ನಡೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X