Search
  • Follow NativePlanet
Share
» »ಭೇಟಿ ಮಾಡಲು ಪರವಾನಗಿ ಪಡೆಯುವ ಅಗತ್ಯವಿರುವ ಭಾರತದ 5 ಸ್ಥಳಗಳು

ಭೇಟಿ ಮಾಡಲು ಪರವಾನಗಿ ಪಡೆಯುವ ಅಗತ್ಯವಿರುವ ಭಾರತದ 5 ಸ್ಥಳಗಳು

ಭೇಟಿ ಕೊಡಲು ಪರವಾನಗಿ ಅಗತ್ಯವಿರುವ ಭಾರತದ 5 ಸ್ಥಳಗಳ ಬಗ್ಗೆ ಓದಿ ಮತ್ತಷ್ಟು ತಿಳಿಯಿರಿ.

By Manjula Balaraj Tantry

ವಿದೇಶಕ್ಕೆ ಭೇಟಿ ಕೊಡಬೇಕಾದರೆ ವೀಸಾದ ಅವಶ್ಯಕತೆ ಇರುವುದು ನಮಗೆ ತಿಳಿದಿರುವ ಸಂಗತಿಯಾಗಿದೆ. ಆದರೆ ಕೆಲವು ದೂರದ ಮತ್ತು ನಿರ್ಬಂಧಿತ ಸ್ಥಳಗಳಿಗೆ ಭೇಟಿ ನೀಡಲು ನಿಮ್ಮ ಸ್ವಂತ ದೇಶದಲ್ಲಿಯೇ ಒಳಭೇಟಿಯ (ಇನ್ನರ್ ಲೈನ್ ಪರ್ಮಿಟ್) ಪರವಾನಗಿಯ ಅಗತ್ಯವಿರುವುದು ನಿಮಗೆ ತಿಳಿದಿದೆಯೆ ? ಯಾಕೆಂದು ಅಚ್ಚರಿ ಪಡುವಿರಾ?

ಭಾರತದ ಕೆಲವು ಅಂತರಾಷ್ಟ್ರೀಯ ಗಡಿಗಳಿಗೆ ಸಮೀಪವಿರುವ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ಮಾಡಬೇಕಾದರೆ ಒಳ ಪ್ರವೇಶದ ಪರವಾನಗಿ (ಇನ್ನರ್ ಲೈನ್ ಪರ್ಮಿಟ್) ಅಗತ್ಯವಿದೆ. ಈ ಕ್ರಮವು ಅಧಿಕಾರಿಗಳಿಗೆ ಇಲ್ಲಿಯ ಜನರ ಚಲನವಲನಗಳನ್ನು ನಿಯಂತ್ರಿಸಲು ಮತ್ತು ಬುಡಕಟ್ಟು ಸಂಸ್ಕೃತಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಯಾವುದೇ ರೀತಿಯ ಅನಪೇಕ್ಷಿತ ಘಟನೆಗಳ ಸಾಧ್ಯತೆಗಳನ್ನು ಕಡಿಮೆಗೊಳಿಸುವಲ್ಲಿ ಮತ್ತು ಸುರಕ್ಷತಾ ಕ್ರಮವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ಮಿಜೋರಾಂ

ಮಿಜೋರಾಂ

PC: Dan Markeye

ಇಲ್ಲಿಯ ಭೌಗೋಳಿಕ ಹಿನ್ನೆಲೆ ಮತ್ತು ಹಿತಕರವಾದ ಹಮಾಮಾನವು ಹೆಸರುವಾಸಿಯಾಗಿದೆ. ಮಿಜೋರಾಂ ಅಂದರೆ ಬೆಟ್ಟ ಪ್ರದೇಶದ ಜನರ ಭೂಮಿ ಎಂದೇ ಅರ್ಥೈಸುತ್ತದೆ. ಈ ಪ್ರದೇಶದಲ್ಲಿ ನಾನಾ ವಿಧದ ಸ್ಥಳೀಯ ಬುಡಕಟ್ಟು ಜನಾಂಗದ ನೆಲೆಯಿದೆ. ಈ ರಾಜ್ಯವು ಬಾಂಗ್ಲಾದೇಶ ಮತ್ತು ಮಾಯನ್ಮಾರ್ ಗಳ ಅಂತರಾಷ್ಟ್ರೀಯ ಗಡಿಯನ್ನು ತನ್ನೊಂದಿಗೆ ಹಂಚಿಕೊಂಡಿದೆ.

ಕೊಲ್ಕತಾ, ಸಿಲ್ಚಾರ್, ಶಿಲ್ಲಾಂಗ್, ನವದೆಹಲಿ ಮತ್ತು ಗುವಹಾಟಿ ಈ ನಗರಗಳಲ್ಲಿ ಮಿಜೋರಾಂ ಸರಕಾರದ ಸಂಪರ್ಕ ಅಧಿಕಾರಿಗಳಿಂದ ಇನ್ನರ್ ಲೈನ್ ಪರ್ಮಿಟ್ (ಒಳ ಭೇಟಿ ಪರವಾನಗಿ) ಯನ್ನು ಸಂಗ್ರಹಿಸಬಹುದಾಗಿದೆ. ವಾಯುಮಾರ್ಗದ ಮೂಲಕ ಪ್ರವೇಶಿಸುವವರು ಐಜ್ವಾಲ್ ನ ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ ಆಗಮಿಸುತ್ತಿದ್ದಂತೆಯೇ ಭದ್ರತಾ ಅಧಿಕಾರಿಗಳಿಂದ ಪಾಸ್ ಗಳನ್ನು ಪಡೆಯಬಹುದು.

ಲಡಾಖ್

ಲಡಾಖ್

PC: Sorcerer81

ಜಮ್ಮು ಮತ್ತು ಕಾಶ್ಮೀರದಲ್ಲಿರುವ ಲಡಾಖ್ ಪ್ರದೇಶವು ಒಂದು ಅತೀ ಸೂಕ್ಷ್ಮವಾದ ಪ್ರದೇಶವಾಗಿದ್ದು ಇದು ಪಾಕಿಸ್ಥಾನ ಮತ್ತು ಚೀನಾದ ಗಡಿಗಳನ್ನು ತನ್ನಲ್ಲಿ ಹಂಚಿಕೊಂಡಿದೆ. ಆದುದರಿಂದ ಈ ಭಾಗದ ಎಲ್ಲಾ ಪ್ರದೇಶಗಳಿಗೆ ಸಾಮಾನ್ಯ ಜನರಿಗೆ ಪ್ರವೇಶವಿರುವುದಿಲ್ಲ.

ಇಂತಹ ನಿರ್ಬಂಧಿತ ಪ್ರದೇಶಗಳನ್ನು ಭೇಟಿ ಮಾಡಬೇಕಾದಲ್ಲಿ ಇನ್ನರ್ ಲೈನ್ ಪರ್ಮಿಟ್ (ಒಳ ಭೇಟಿ ಪರವಾನಗಿ) ಯನ್ನು ಪಡೆಯಬೇಕಾಗುತ್ತದೆ. ಈ ಪ್ರದೇಶಗಳು ಉದಾಹರಣೆಗೆ ಡ್ಯಾಹ್, ಪಾಂಗೊಂಗ್ ತ್ಸೊ, ನುಬ್ರಾ ವ್ಯಾಲಿ, ಖಾರ್ದಂಗ್ ಲಾ, ತ್ಸೋ ಮೊರಿರಿ, ಟ್ಯಾಂಗ್ಯಾರ್, ಹನು ಹಳ್ಳಿಗಳು ಇತ್ಯಾದಿಗಳು.

ಲೇಹ್ ಪಟ್ಟಣದಲ್ಲಿರುವ ಮೈನ್ ಬಜಾರ್ನ ಪೋಲೊ ಮೈದಾನದಲ್ಲಿ 9.00 ರಿಂದ ಬೆಳಿಗ್ಗೆ 7.00 ರವರೆಗೆ ಇರುವ ಡಿಸಿ ಕಚೇರಿಯಿಂದ ಈ ಪರವಾನಗಿಗಳನ್ನು ಪಡೆಯಬಹುದು.ಆದರೂ ಫಾರಂಗಳನ್ನು ಸಾಯಂಕಾಲ 3 ಗಂಟೆಯ ಮೊದಲು ಸಲ್ಲಿಸಬೇಕು . ಈ ಪರವಾನಗಿಗಳನ್ನು ಆನ್ ಲೈನ್ ಮೂಲಕ ಕೂಡ ಪಡೆಯಬಹುದಾಗಿದೆ ಆದರೆ ಅವುಗಳಲ್ಲಿ ಮೊಹರನ್ನು ನಮೂದಿಸುವುದು ಕಡ್ಡಾಯ. ಟ್ರಾವೆಲ್ ಏಜೆಂಟರುಗಳೂ ಕೂಡ ಸಂದರ್ಶಕರಿಗೆ ಅನುಮತಿ ಪಡೆಯಬಹುದು.

ಲಕ್ಷದ್ವೀಪ

ಲಕ್ಷದ್ವೀಪ

PC: The.chhayachitrakar

ಭಾಷಾಂತರದಲ್ಲಿ ಲಕ್ಷದ್ವೀಪವೆಂದರೆ ನೂರು ಸಾವಿರ ದ್ವೀಪಗಳು ಎಂದು ಅರ್ಥೈಸುತ್ತದೆ. ಇದು ಭಾರತದ ಒಕ್ಕೂಟ ಪ್ರದೇಶವಾಗಿದೆ. ಹಾಲ್ಮ್ ಲಕ್ಕಾದೀವ್ ಸಮುದ್ರದಲ್ಲಿದೆ ಮತ್ತು ಇದನ್ನು ಹಿಂದೆ ಲಕ್ಕಾಡಿವ್, ಮಿನಿಕೊಯ್ ಮತ್ತು ಅಮಿಂಡಿವಿ ದ್ವೀಪ ಎಂದು ಕರೆಯಲಾಗುತ್ತಿತ್ತು.

ಈ ಒಕ್ಕೂಟ ಪ್ರದೇಶಕ್ಕೆ ಹೋಗುವ ಎಲ್ಲಾ ಪ್ರಯಾಣಿಕರು ಪ್ರವೇಶಿಸಲು ಪರವಾನಿಗೆ ಪಡೆಯಬೇಕು. ಪರವಾನಗಿಗಳು ದ್ವೀಪಗಳ ಅಧಿಕೃತ ಸೈಟ್ನಲ್ಲಿ ಲಭ್ಯವಿವೆ, ಇದು ಉಚಿತವಾಗಿ ಲಭ್ಯವಿರುತ್ತದೆ ಮತ್ತು ಇವು 5 ತಿಂಗಳ ಅವಧಿಯವರೆಗೆ ಮಾನ್ಯವಾಗಿರುತ್ತದೆ.

ಸಿಕ್ಕಿಂ

ಸಿಕ್ಕಿಂ

PC: Indrajit Das

ಸಿಕ್ಕಿಂ ರಾಜ್ಯವು ದೇಶದ ಮೂರು ಗಡಿಪ್ರದೇಶಗಳನ್ನು ಹೊಂದಿದೆ. ಉತ್ತರದಲ್ಲಿ ಚೀನಾ, ಪೂರ್ವದಲ್ಲಿ ಭೂತಾನ್, ಮತ್ತು ಪಶ್ಚಿಮದಲ್ಲಿ ನೇಪಾಳವಿದೆ. ಈ ಜಾಗಗಳಲ್ಲಿ ಹಲವು ನಿರ್ಬಂಧಗಳಿವೆ ಮತ್ತು ಲಚುಂಗ್, ಟ್ಸುಮೊಗೊ ಸರೋವರ, ಯುಮ್ಥಾಂಗ್, ಝೊಂಗ್ರಿ, ಗೋಯೇಚಲ, ಗುರುದೊಂಗ್ಮಾರ್ ಸರೋವರ ಮತ್ತು ಹಲವಾರು ಇತರ ಸ್ಥಳಗಳ ಪ್ರದೇಶಗಳ ಪ್ರವೇಶಕ್ಕೆ ಇನ್ನರ್ ಲೈನ್ ಪರ್ಮಿಟ್ (ಒಳ ಭೇಟಿ ಪರವಾನಗಿ) ಯನ್ನು ಪಡೆಯಬೇಕಾಗುತ್ತದೆ.

ನಾಥು ಲಾ ಮತ್ತು ಗುರುದಂಗ್ಮಾರ್ ಸರೋವರದ ಪರವಾನಿಗೆಗಳು ಪ್ರವಾಸೋದ್ಯಮದಿಂದ ನೀಡಲ್ಪಡುತ್ತದೆ. ನಾಗರಿಕ ವಿಮಾನಯಾನ ಇಲಾಖೆ ಮತ್ತು ಬಾಗ್ಡೋಗ್ರ ವಿಮಾನ ನಿಲ್ದಾಣ ಮತ್ತು ರಾಂಗ್ಪೊ ಚೆಕ್ ಪೋಸ್ಟ್ನಲ್ಲಿ ಪರವಾನಗಿ ಸಂಗ್ರಹಿಸಬಹುದು. ಇವುಗಳನ್ನು ರಾಜ್ಯದ ಅಧಿಕೃತ ವೆಬ್ ಸೈಟ್ ನಿಂದ ಪಡೆಯಬಹುದು.

ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶ

PC: Sathis Babu

ಮುಂಜಾನೆಯ ಬೆಳಕು ಮೊದಲು ಬೀಳುವ ಪರ್ವತಗಳ ಭೂಮಿಯಾದ ಅರುಣಾಚಲ ಪ್ರದೇಶವು ಭಾರತದ ಈಶಾನ್ಯ ದಿಕ್ಕಿನಲ್ಲಿದೆ. ಇದು ಪಶ್ಚಿಮದಲ್ಲಿ ಭೂತಾನ್ ಮತ್ತು ಪೂರ್ವದಲ್ಲಿ ಮ್ಯಾನ್ಮಾರ್ ಮತ್ತು ಉತ್ತರದಲ್ಲಿ ಚೈನಾ ದೇಶಗಳ ಗಡಿಯನ್ನು ಹೊಂದಿದೆ. ಈ ಸುಂದರವಾದ ಸ್ಥಳಕ್ಕೆ ಭೇಟಿ ಕೊಡಲು ಪ್ರತಿಯೊಬ್ಬ ಪ್ರವಾಸಿಗನೂ ಕೂಡಾ ಇನ್ನರ್ ಲೈನ್ ಪರ್ಮಿಟ್ (ಒಳ ಭೇಟಿ ಪರವಾನಗಿ) ಯನ್ನು ಪಡೆಯಬೇಕಾಗುತ್ತದೆ.

ಕೊಲ್ಕತಾ, ಶಿಲ್ಲಾಂಗ್, ಗುವಾಹಟಿ ಮತ್ತು ನವ ದೆಹಲಿಯ ನಗರಗಳಲ್ಲಿ ಅರುಣಾಚಲ ಪ್ರದೇಶದ ಗೃಹ ನಿವಾಸಿ ಕಮೀಷನರ್ ನಿಂದ ಈ ಪರವಾನಗಿಗಳನ್ನು ಪಡೆಯಬಹುದು. ಇದಲ್ಲದೆ ಆನ್ಲೈನ್ನಲ್ಲಿ ಸಹ ಫಾರ್ಮ್ ಗಳನ್ನು ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X