Search
  • Follow NativePlanet
Share
» »ನೀವು ಫ್ರೀಯಾಗಿದ್ದಾಗ ಬೆಂಗಳೂರಿನಲ್ಲಿ ತಿರುಗಾಡಬೇಕಾಗಿರುವ ಸ್ಥಳಗಳಿವು

ನೀವು ಫ್ರೀಯಾಗಿದ್ದಾಗ ಬೆಂಗಳೂರಿನಲ್ಲಿ ತಿರುಗಾಡಬೇಕಾಗಿರುವ ಸ್ಥಳಗಳಿವು

By Manjula Balaraj Tantry

ಭಾರತದ ಅತಿ ದೊಡ್ಡ ಮೆಟ್ರೋಪಾಲಿಟನ್ ನಗರಗಳಲ್ಲೊಂದಾಗಿದ್ದು ಮತ್ತು ವರ್ಷವಿಡೀ ಬ್ಯುಸಿಯಾಗಿರುವಂತಹ ನಗರವಾಗಿದೆ. ಬೆಂಗಳೂರಿನಲ್ಲಿ ನೀವು ಆಸ್ವಾದಿಸಬಹುದಾದ ಕೆಲವು ಪ್ರದೇಶಗಳು ಇವೆ. ಇಂತಹುದೇ ಒಂದು ಸ್ಥಳಗಳಿಗೆ ನೀವು ಹೋಗಲು ನೋಡುತ್ತಿದ್ದಲ್ಲಿ ನೀವು ಬೆಂಗಳೂರಿನ ಈ ಸ್ಥಳಗಳಿಗೆ ಭೇಟಿ ಕೊಡಬಹುದಾದಂತಹವುಗಳಾಗಿವೆ. ಈ ಆಹ್ಲಾದಕರವಾದ ಸ್ಥಳಗಳು ಒಂದು ಧನಾತ್ಮಕವಾದ ಪರಿಸರ ಮತ್ತು ಆಹ್ಲಾದಕರ ಸುತ್ತಮುತ್ತಲಿನ ಪ್ರದೇಶಗಳನ್ನು ಹೊಂದಿರುವ ಈ ಸ್ಥಳಗಳ ಅಡಿಯಲ್ಲಿ ಹೊದಿಕೆಯಂತೆ ಮರೆ ಮಾಡಿಕೊಳ್ಳಲು ಪರಿಪೂರ್ಣವಾಗಿದೆ. ಆದುದರಿಂದ ಈ ಸ್ಥಳಗಳ ಬಗ್ಗೆ ಇನ್ನೂ ಹೆಚ್ಚಿನದನ್ನು ಓದಿ ತಿಳಿಯಿರಿ.

ಬ್ಯೂಗಲ್ ರಾಕ್ ಗಾರ್ಡನ್

ಬ್ಯೂಗಲ್ ರಾಕ್ ಗಾರ್ಡನ್

PC:Sarvagnya

ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಲ್ಲಿ ನೀವು ಖಂಡಿತವಾಗಿಯೂ ಬ್ಯೂಗಲ್ ರಾಕ್ ಗಾರ್ಡನ್ ನ ಬಗ್ಗೆ ತಿಳಿದಿರಲೇ ಬೇಕು, ಇದೊಂದು ಪ್ರಾಚೀನ ತಾಣವಾಗಿದ್ದು ಇದು ಅತೀ ದೊಡ್ಡ ಬಂಡೆಗಳನ್ನು ಒಳಗೊಂಡಿದ್ದು ಇದು ದಶಲಕ್ಷ ವರ್ಷಗಳ ಹಿಂದೆಯೇ ಸ್ವಾಭಾವಿಕವಾಗಿ ಹೊರಹೊಮ್ಮಿದವುಗಳಾಗಿವೆ. ಐತಿಹಾಸಿಕ ದಾಖಲೆಗಳ ಪ್ರಕಾರ ಬ್ಯೂಗಲ್ ರಾಕ್ ಗಾರ್ಡನ್ ಕೆಂಪೇಗೌಡ ಬ್ಯೂಗಲ್ ರಾಕ್ ಉದ್ಯಾನವನವನ್ನು ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರ ಅಧಿಪತ್ಯದ ಸಮಯದಲ್ಲಿ ರಕ್ಷಣೆಗಾಗಿ ಬಳಸುತ್ತಿದ್ದರು, ಅಲ್ಲದೆ ಮುಸ್ಸಂಜೆಯ ಸಮಯದಲ್ಲಿ ಟಾರ್ಚ್ ಬೆಳಕು ಚೆಲ್ಲುವಂತೆ ಮಾಡಲಾಗಿದೆ.

ಬೆಂಗಳೂರಿನ ಸುತ್ತಲೂ ನಾಲ್ಕು ಗೋಪುರಗಳಲ್ಲಿ ಒಂದನ್ನು ಕೆಂಪೇಗೌಡರವರು ಅದರ ಗಡಿಯನ್ನು ಗುರುತಿಸಲು ಈ ಸ್ಥಳದಲ್ಲಿ ನಿರ್ಮಿಸಲಾಗಿದೆ. ಇಂದು ಈ ಸುಂದರವಾದ ಉದ್ಯಾನವನವು ಸ್ಥಳೀಯರು ಮತ್ತು ಕೆಲವು ಪ್ರವಾಸಿಗರಿಂದ ತುಂಬಿರುತ್ತದೆ. ಅದರಲ್ಲೂ ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಇಲ್ಲಿಗೆ ಜನರು ಇಲ್ಲಿಯ ತಾಜಾ ಗಾಳಿಯ ಸೇವನೆಗಾಗಿ ಮತ್ತು ಇಲ್ಲಿಯ ಪ್ರಕೃತಿ ಸೌಂದರ್ಯವನ್ನು ಸವಿಯುವ ಸಲುವಾಗಿ ಬರುತ್ತಾರೆ.
ಈ ಉದ್ಯಾನವನವು ಪ್ರಖ್ಯಾತ ಬಸವನಗುಡಿ ದೇವಾಲಯದ ಪಕ್ಕದಲ್ಲಿಯೇ ಇದೆ ಮತ್ತು ಸಾವಿರಾರು ಜನರಿಂದ ಪ್ರತಿ ನಿತ್ಯ ಭೇಟಿ ನೀಡಲ್ಪಡುತ್ತದೆ. ದಟ್ಟವಾದ ಸಸ್ಯವರ್ಗದಿಂದ ಆವರಿಸಲ್ಪಟ್ಟಿರುವ ಈ ಸುಂದರವಾದ ಉದ್ಯಾನವನವು ನಿಮ್ಮ ಮೈ ಮನ ತಣಿಸಲು ಒಂದು ಪರಿಪೂರ್ಣವಾದ ಸ್ಥಳವಾಗಿದೆ. ಕಲ್ಲು ಬಂಡೆಗಳ ಮೇಲೆ ಕುಳಿತು ಸೂರ್ಯೋದಯ ಮತ್ತು ಸೂರ್ಯಾಸ್ತದ ಸೌಂದರ್ಯವನ್ನು ಸವಿಯುವುದೇ ಒಂದು ಅಭೂತ ಅನುಭವ.

ತುರಾಹಳ್ಳಿ ಅರಣ್ಯ

ತುರಾಹಳ್ಳಿ ಅರಣ್ಯ

PC:Raghuraj Hegde

ದಿನವನ್ನು ಕಳೆಯಲು ಇದು ಒಂದು ಸೂಕ್ತವಾದ ಸ್ಥಳವಾಗಿದೆ ತುರಾಹಳ್ಳಿ ಅರಣ್ಯವು ಪತನಶೀಲ ಅರಣ್ಯವಾಗಿದ್ದು ಇದು ಬೆಂಗಳೂರಿನ ಹೊರವಲಯದಲ್ಲಿದೆ ಮತ್ತು ಬೆಂಗಳೂರಿನ ಒಂದು ಮಹತ್ವದ ಜಾಗವಾಗಿದೆ. ಇದು ಹಿಂದೆ ವಿಷ್ಣು ದೇವರ ದೇವಾಲಯದ ನೆಲೆಯಾಗಿತ್ತು. ಆದರೆ ಈಗ ನೀವು ಇಲ್ಲಿ ದೇವಾಲಯದ ಅವಶೇಷಗಳನ್ನಷ್ಟೇ ನೋಡಬಹುದಾಗಿದೆ. ಈ ಅರಣ್ಯ ಪ್ರದೇಶದಲ್ಲಿ ಸೈಕಲ್ ಸವಾರಿಯ ದಾರಿಗಳು, ಹತ್ತುವ ತಾಣಗಳು ಮತ್ತು ವಿಶ್ರಾಂತಿ ಪಡೆಯುವ ಸ್ಥಳಗಳು ಇವೆಲ್ಲವು ಇರುವುದರಿಂದ ಸ್ಥಳೀಯರಲ್ಲಿ ಜನಪ್ರಿಯವಾಗಿದೆ ಮತ್ತು ಇದು ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಸ್ಥಳೀಯ ಜನರಿಂದ ಭೇಟಿ ನೀಡಲ್ಪಡುತ್ತದೆ. ಇದರ ಗಡಿಗಳಲ್ಲಿ ಹೆಚ್ಚಿನದೇನೂ ಅನ್ವೇಷಣೆ ಮಾಡುವಂತಹುದು ಇಲ್ಲವಾದರೂ ಇದರ ಒಂದು ಅಭೂತಪೂರ್ವ ಪರಿಸರವು ನಿಮ್ಮನ್ನು ಆಹ್ಲಾದಗೊಳಿಸುವುದಲ್ಲದೆ ನಿಮ್ಮನ್ನು ವಿಶ್ರಾಂತಿಯ ಲೋಕಕ್ಕೆ ಕೊಂಡೊಯ್ಯುತ್ತದೆ. ಬಂಡೆಗಳ ಪರ್ವತಗಳ ಮೇಲೆ ಕುಳಿತು ಇಲ್ಲಿ ಬೀಸುವ ತಂಪಾದ ಗಾಳಿಯು ನಿಮ್ಮ ಮುಖಕ್ಕೆ ಸೋಕುವಾಗ ನಿಜವಾಗಿಯೂ ಒಂದು ವಿಭಿನ್ನವಾದ ಅನುಭವವನ್ನು ನೀಡುವುದಲ್ಲದೆ ಇದು ಅನುಭವಿಸಲು ಯೋಗ್ಯವಾದುದೂ ಆಗಿದೆ. ಅಲ್ಲದೆ ನೀವು ಇಲ್ಲಿರುವ ಸಣ್ಣ ಕೊಳದ ಬಳಿಯೂ ಕೂಡಾ ವಿಶ್ರಾಂತಿ ಪಡೆಯಬಹುದಾಗಿದೆ. ಆದುದರಿಂದ ನೀವು ತುರಾಹಳ್ಳಿ ಅರಣ್ಯದಲ್ಲಿ ನಿಮ್ಮ ಸಮಯವನ್ನು ವಾರಾಂತ್ಯದಲ್ಲಿ ಕಳೆಯ ಬಯಸುವಿರಾ?

ಅಲ್ಸೂರು ಲೇಕ್ (ಸರೋವರ)

ಅಲ್ಸೂರು ಲೇಕ್ (ಸರೋವರ)

PC: Ramesh NG

ಬೆಂಗಳೂರಿನ ಅತ್ಯಂತ ದೊಡ್ಡ ಕೊಳಗಳಲ್ಲಿ ಒಂದಾಗಿರುವ ಅಲ್ಸೂರ್ ಇದು ಸುಂದರವಾದ ತೋಟಗಳಿಂದ ಸುತ್ತುವರಿಯಲ್ಪಟ್ಟಿದೆ ಮತ್ತು ಇದರ ಸಂದರ್ಶಕರಿಗೆ ಬೋಟಿಂಗ್, ಛಾಯಾಗ್ರಹಣ ಧ್ಯಾನ ಮತ್ತು ಇಲ್ಲಿಯ ಪ್ರಶಾಂತವಾದ ನೀರಿನಲ್ಲಿ ವಿಶ್ರಾಂತಿ ಪಡೆಯುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ನೀವು ನಿಮ್ಮ ಏಕಾಂತವನ್ನು ಯಾರೂ ಅಡ್ಡಿ ಮಾಡದೇ ಇರುವಂತಹ ಇಂತಹ ಒಂದು ಸ್ಥಳಕ್ಕಾಗಿ ನೋಡುತ್ತಿರುವಿರ? ಹಾಗಿದ್ದಲ್ಲಿ, ನೀವು ಮುಸ್ಸಂಜೆಯ ಹೊತ್ತಿನಲ್ಲಿ ಅಲ್ಸೂರ್ ಲೇಕ್ ಗೆ ಭೇಟಿ ಕೊಡುವುದು ಸೂಕ್ತ. ಇದು ಜಾಗಿಂಗ್ ಮಾಡುವ ಜನರಲ್ಲಿ ಜನಪ್ರಿಯತೆಗಳಿಸಿದ್ದರೂ ಕೂಡಾ ಇಲ್ಲಿಯ ಪ್ರಕೃತಿಯು ನಿಮ್ಮನ್ನು ನೀವು ಕಳೆದು ಕೊಳ್ಳುವಂತಹ ಇನ್ನೂ ಅನೇಕ ಸ್ಥಳಗಳನ್ನು ನಿಮಗೆ ಒದಗಿಸಿಕೊಡುತ್ತದೆ. ಹಕ್ಕಿಗಳ ಚಿಲಿಪಿಲಿ, ನೀರಿನ ನಿಶ್ಯಬ್ದತೆ ಮತ್ತು ಮೆಲ್ಲನೆ ಬೀಸುವ ತಂಗಾಳಿ ಇಲ್ಲಿಯ ಪ್ರತಿಯೊಂದು ವಿಷಯವೂ ಕೂಡಾ ನಿಮ್ಮ ಮನಸ್ಸನ್ನು ಸೂರೆಗೊಳಿಸುತ್ತದೆ.

ಲುಂಬಿನಿ ಉದ್ಯಾನವನ(ಗಾರ್ಡನ್)

ಲುಂಬಿನಿ ಉದ್ಯಾನವನ(ಗಾರ್ಡನ್)

ವಾಟರ್ ಪಾರ್ಕ್, ರೋಮಾಂಚಕ ಸವಾರಿಗಳು, ಈಜುಕೊಳಗಳು ಕೃತಕ ಬೀಚುಗಳು ಮತ್ತು ದೋಣಿವಿಹಾರ ಮಾಡುವ ಪ್ರದೇಶಗಳು ಇವೆಲ್ಲವನ್ನೂ ಒಳಗೊಂಡಿರುವ ಲುಂಬಿನಿ ಗಾರ್ಡನ್ ಪ್ರತಿಯೊಬ್ಬ ಮಗುವೂ ಭೇಟಿ ಕೊಡಬೇಕೆನ್ನುವಂತಹ ಸ್ಥಳವೆನಿಸಿದೆ. ಅಲ್ಲದೆ ಈ ಸ್ಥಳವು ಎಲ್ಲಾ ವಯಸ್ಸಿನ ಜನರಿಂದಲೂ ಭೇಟಿ ಕೊಡಲ್ಪಡುವಂತಹುದಾಗಿದೆ. ಅಲ್ಲದೆ ಇದು ಇದರ ಸಂದರ್ಶಕರಿಗೆ ಕೆಲವು ಸಜೀವ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಆದರೆ ಇಲ್ಲಿಯ ಅತೀ ಮುಖ್ಯವಾದ ಹಾಗೂ ನಿಮ್ಮ ಮೈ ಮನ ಮತ್ತು ಜೀವವನ್ನು ಆಹ್ಲಾದಗೊಳಿಸುವ ಸ್ಥಳವೆಂದರೆ ಇಲ್ಲಿಯ ಸುಂದರವಾದ ಉದ್ಯಾನವನ. ನೀವು ಇಲ್ಲಿಯ ದೋಣಿ ವಿಹಾರದಲ್ಲಿ ಸವಾರಿ ಮಾಡಲು ಮತ್ತು ನೀರಿನಲ್ಲಿ ಆಟವಾಡುವ ಚಟುವಟಿಕೆಗಳಲ್ಲಿ ಇಷ್ಟವಿಲ್ಲವೆಂದಾದಲ್ಲಿ ನೀವು ಇಲ್ಲಿಯ ಉದ್ಯಾನವನದ ಬೆಂಚುಗಳಲ್ಲಿ ಕುಳಿತುಕೊಳ್ಳ ಬಹುದು ಮತ್ತು ಪ್ರಕೃತಿಯ ಸೌಂದರ್ಯತೆಯ ಅವಲೋಕನ ಮಾಡಬಹುದಾಗಿದೆ.

ಕಬ್ಬನ್ ಪಾರ್ಕ್

ಕಬ್ಬನ್ ಪಾರ್ಕ್

ಮೆಟ್ರೋ ಪಾಲಿಟನ್ ನಗರವು ಹಸಿರು ಜೀವರಾಶಿಯಿಲ್ಲದೆ ಅಭಿವೃದ್ದಿ ಹೊಂದಲು ಹೇಗೆ ಸಾಧ್ಯ? ಹೌದು ಕಬ್ಬನ್ ಪಾರ್ಕ್ ಬೆಂಗಳೂರಿನ ಹಸಿರು ಉಸಿರಾಗಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರನ್ನು ಉದ್ಯಾನಗಳ ನಗರವೆಂದು ಕರೆಯಲಾಗುತ್ತದೆ ಎಂದರೆ ಇಂತಹ ಸುಂದರವಾದ ಉದ್ಯಾನವನಗಳ ಉಪಸ್ಥಿತಿಯಿಂದಲೇ ಎಂಬುದು ನಿಮಗೆ ಗೊತ್ತಿದೆಯೇ? ಕಬ್ಬನ್ ಪಾರ್ಕ್ ಅನೇಕ ಸಸ್ಯವರ್ಗ ಮತ್ತು ಕೆಲವು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ ಮತ್ತು ಇದು ಸುಮಾರು 1.2 ಚದರ ಕಿ.ಲೋ ಮೀಟರುಗಳಷ್ಟು ಸ್ಥಳಗಳಲ್ಲಿ ಹಬ್ಬಿದೆ. ಅಲ್ಲದೆ ಇದು ಇನ್ನೂ ಅನೇಕ ಸ್ಥಳಗಳನ್ನು ಹೊಂದಿದ್ದು ಇಲ್ಲಿ ನೀವು ವಾರಾಂತ್ಯಗಳಲ್ಲಿ ವಿಶ್ರಾಂತಿಯನ್ನು ಪಡೆಯುವುದಲ್ಲದೆ ತಾಜಾಗಾಳಿಯ ಸ್ನಾನವನ್ನೂ ಕೂಡಾ ಮಾಡಬಹುದಾಗಿದೆ. ಕಬ್ಬನ್ ಪಾರ್ಕ್ ಕರ್ನಾಟಕ ರಾಜ್ಯದ ಹೈಕೋರ್ಟ್ ಮತ್ತು ಶೇಷಾದ್ರಿ ಐಯರ್ ಮೆಮೋರಿಯಲ್ ಲೈಬ್ರರಿ ಎಂಬ ದೊಡ್ಡ ಗ್ರಂಥಾಲಯಗಳಿಗೆ ನೆಲೆಯಾಗಿದೆ.

ಇಂಗ್ಲೀಷ್‌ನಲ್ಲಿ ಓದಲು:Soothing Places In Bangalore Where You Can Feel The Essence Of Equanimity

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X