Search
  • Follow NativePlanet
Share
» »ನೈಟ್‌ ಟ್ರೆಕ್ಕಿಂಗ್ ಹೋಗಿದ್ದೀರಾ...ಇವೆಲ್ಲಾ ನೈಟ್ ಟ್ರೆಕ್‌ಗೆ ಬೆಸ್ಟ್ ತಾಣಗಳು

ನೈಟ್‌ ಟ್ರೆಕ್ಕಿಂಗ್ ಹೋಗಿದ್ದೀರಾ...ಇವೆಲ್ಲಾ ನೈಟ್ ಟ್ರೆಕ್‌ಗೆ ಬೆಸ್ಟ್ ತಾಣಗಳು

ಈಗಿನ ಯುವಕರಿಗಂತೂ ಟ್ರಕ್ಕಿಂಗ್ ಹೋಗೋದು ಒಂದು ಕ್ರೇಜ್ ಆಗಿಬಿಟ್ಟಿದೆ. ಎಲ್ಲಾ ಬೆಟ್ಟಗಳನ್ನು ಹತ್ತಿ ಮಜಾ ಪಡೆಯುತ್ತಾರೆ. ಅದಕ್ಕಾಗಿ ಟ್ರೆಕ್ಕಿಂಗ್ ಪ್ರೀಯರ ಫ್ರೆಂಡ್ಸ್ ಸರ್ಕಲ್ ಕೂಡಾ ಇದೆ. ಆದರೆ ನೀವು ಯಾವತ್ತಾದರೂ ನೈಟ್ ಟ್ರೆಕ್ಕಿಂಗ್‌ಗೆ ಹೋಗಿದ್ದೀರಾ? ಇಲ್ಲ ಎಂದಾದ್ರೆ ಇಲ್ಲಿದೆ ಕೆಲವು ನೈಟ್ ಟ್ರೆಕ್ಕಿಂಗ್ ತಾಣಗಳು.

ಕಬಾಬ್ ಅಂದ್ರೆ ನಿಮಿಗಿಷ್ಟಾನಾ? ಬೆಸ್ಟ್ ಕಬಾಬ್ ತಿನ್ನಬೇಕಾದ್ರೆ ಇಲ್ಲಿಗೆ ಹೋಗಿಕಬಾಬ್ ಅಂದ್ರೆ ನಿಮಿಗಿಷ್ಟಾನಾ? ಬೆಸ್ಟ್ ಕಬಾಬ್ ತಿನ್ನಬೇಕಾದ್ರೆ ಇಲ್ಲಿಗೆ ಹೋಗಿ

ಕುಂತಿ ಬೆಟ್ಟ

ಕುಂತಿ ಬೆಟ್ಟ

ಬೆಂಗಳೂರಿನಿಂದ ಸುಮಾರು 125 ಕಿ.ಮೀ ದೂರದಲ್ಲಿರುವ ಪಾಂಡವಪುರದಲ್ಲಿ ಈ ಕುಂತಿ ಬೆಟ್ಟವಿದೆ. ಈ ಬೆಟ್ಟದಲ್ಲಿ ಕುಂತಿ ನೆಲೆಸಿದ್ದಳಂತೆ ಅದಕ್ಕಾಗಿ ಕುಂತಿ ಬೆಟ್ಟ ಎನ್ನಲಾಗುತ್ತದೆ. ಚಾರಣಕ್ಕೆ ಉತ್ತಮ ಸ್ಥಳವಾಗಿದೆ. ಇದು ರಾತ್ರಿ ಸಮಯದ ಚಾರಣಕ್ಕೆ ಉತ್ತಮವಾಗಿದೆ.

ರಾಮನಗರ

ರಾಮನಗರ

ಚಾರಣಕ್ಕೆ ಪ್ರಸಿದ್ಧವಾದ ಬೆಟ್ಟ ಇದಾಗಿದೆ. ಬೆಂಗಳೂರಿನಿಂದ ಸುಮಾರು 55 ಕಿ.ಮೀ ದೂರದಲ್ಲಿ ಇದಿದೆ. ಇಲ್ಲಿಬೆಟ್ಟ ಹತ್ತುವುದು, ಬೋಟಿಂಗ್, ಗುಹೆ ಅನ್ವೇಷಣೆಯನ್ನೂ ನಡೆಸಲಾಗುತ್ತದೆ. ಇದು ರಾತ್ರಿ ಚಾರಣಕ್ಕೆ ಸೂಕ್ತವಾಗಿದೆ.

ಬಿಳಿಕಲ್ ರಂಗನಾಥ ಸ್ವಾಮಿ ಬೆಟ್ಟ

ಬಿಳಿಕಲ್ ರಂಗನಾಥ ಸ್ವಾಮಿ ಬೆಟ್ಟ

ಬಿಳಿಕಲ್ಲು ರಂಗಸ್ವಾಮಿ ಬೆಟ್ಟ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿದೆ. ಇದು ಕನಕಪುರದಿಂದ ಸುಮಾರು 15 ಕಿಲೋಮೀಟರ ದೂರದಲ್ಲಿದೆ. ಈ ಬೆಟ್ಟದ ತುದಿಯಲ್ಲಿ ಕಾಣುವ ಬಿಳಿ ಕಲ್ಲಿನಿಂದ ಹಾಗು ಬೆಟ್ಟದ ತುದಿಯಲ್ಲಿ ಇರುವ ದೇವಸ್ಥಾನ ರಂಗಸ್ವಾಮಿಯ ಹೆಸರಿನಲ್ಲಿ ಇರುವುದರಿಂದ , ಈ ಬೆಟ್ಟಕ್ಕೆ "ಬಿಳಿಕಲ್ಲು ರಂಗನಾಥ ಸ್ವಾಮಿ ಬೆಟ್ಟ"ಎಂಬ ಹೆಸರು ಬಂದಿದೆ. ಈ ಬೆಟ್ಟ ಕೂಡಾ ಫ್ರೆಂಡ್ಸ್‌ ಜೊತೆ ರಾತ್ರಿ ಚಾರಣಕ್ಕೆ ಸೂಕ್ತವಾಗಿದೆ.

ಮಾಕಲಿದುರ್ಗ

ಮಾಕಲಿದುರ್ಗ

ಬೆಂಗಳೂರಿನಿಂದ ರಾತ್ರಿ ಟ್ರೆಕ್ಕಿಂಗ್‌ಗೆ ಹೋಗೋದಾದ್ರೆ ಮಾಕಲಿ ದುರ್ಗ ಬೆಸ್ಟ್ ಆಪ್ಷನ್ ಆಗಿದೆ. ಬೆಂಗಳೂರಿನಿಂದ 60km ಹಾಗೂ ದೊಡ್ಡ ಬಳ್ಳಾಪುರದಿಂದ 10 ಕಿ.ಮಿ ದೂರದಲ್ಲಿರುವ ಮಾಕಲಿದುರ್ಗ ಟ್ರಕ್ಕಿಂಗ್ ಮಾಡಲು ಒಂದು ಸುಂದರ ಸ್ಥಳ. ಬೆಟ್ಟದ ಮೇಲೆ ಒಂದು ಕೋಟೆ ಇದೆ.1350mts ಎತ್ತರದಲ್ಲಿರುವ ಇದನ್ನು ಹತ್ತಿ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸಬಹುದು

ಶಿವಗಂಗೆ

ಶಿವಗಂಗೆ

ಬೆಂಗಳೂರು ನಗರದಿಂದ 54 ಕಿಮೀ ದೂರದಲ್ಲಿರುವ ಕರ್ನಾಟಕದ ಪ್ರಮುಖ ಯಾತ್ರ ಸ್ಥಳಗಳಲ್ಲಿ ಒಂದು . ತುಮಕೂರಿನಿಂದ ಇಂದ 20 ಕಿಮಿ ದೂರದಲ್ಲಿದೆ . ಬೆಟ್ಟದ ಮೇಲೆ ಗಂಗಾಧರೇಶ್ವರ ಹಾಗೂ ಶಾರದಾಂಬೆ ದೇವಾಲಯವಿದೆ.1368 ಮೀ. ಎತ್ತರ ಇರುವ ಈ ಬೆಟ್ಟ ತನ್ನ ದೇಹ ಸಾಮರ್ಥ್ಯವನ್ನು ಪರೀಕ್ಷಿಸಲು ಇಚ್ಛಿಸುವವರಿಗೆ ಸೂಕ್ತವಾಗಿದೆ.

ಕನಕಪುರ

ಕನಕಪುರ

ಬೆಂಗಳೂರು ಸಿಟಿಯಿಂದ ಸುಮಾರು ೫೦ಕಿ.ಮೀ ದೂರದಲ್ಲಿದೆ. ಮಧ್ಯರಾತ್ರಿ ನೇಚರ್ ಅಡ್ವೆಂಚರ್ ಕ್ಯಾಂಪ್ ಹೋಗುವ ಮೂಲಕ ಈ ವಿಭಿನ್ನ ಅನುಭವವನ್ನು ಆಸ್ವಾದಿಸಬಹುದು.

Read more about: bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X