Search
  • Follow NativePlanet
Share
» »ಆರ್ಯುವೇದದ ಮಸಾಜ್‍ಗಳಿಗೆ ಪ್ರಸಿದ್ಧಿ-ಪಿರ್ ಮೇಡ್

ಆರ್ಯುವೇದದ ಮಸಾಜ್‍ಗಳಿಗೆ ಪ್ರಸಿದ್ಧಿ-ಪಿರ್ ಮೇಡ್

ವಾಗಮೋನ್‍ನಿಂದ ಸುಮಾರು 27 ಕಿ.ಮೀ ದೂರದಲ್ಲಿರುವ ಪಿರ್ ಮೇಡ್ ಸುಂದರವಾದ ಪ್ರಕೃತಿ ದೃಶ್ಯಗಳಿಗೆ ಅಲ್ಲ ಆರೋಗ್ಯವನ್ನು ವರದಾನವಾಗಿ ನೀಡುವ ವಿವಿಧ ಆರ್ಯುವೇದ ವನಮೂಲಿಕೆಗಳ ನಿಲಯವಾಗಿದೆ. ಇಲ್ಲಿ ಕಾಲಿಟ್ಟರೆ ಸಾಕು.... ನಿಮ್ಮ ಮನಸ್ಸೆಲ್ಲಾ ಅಹ್ಲಾದಕರ

ವಾಗಮೋನ್‍ನಿಂದ ಸುಮಾರು 27 ಕಿ.ಮೀ ದೂರದಲ್ಲಿರುವ ಪಿರ್ ಮೇಡ್ ಸುಂದರವಾದ ಪ್ರಕೃತಿ ದೃಶ್ಯಗಳಿಗೆ ಅಲ್ಲ ಆರೋಗ್ಯವನ್ನು ವರದಾನವಾಗಿ ನೀಡುವ ವಿವಿಧ ಆರ್ಯುವೇದ ವನಮೂಲಿಕೆಗಳ ನಿಲಯವಾಗಿದೆ. ಇಲ್ಲಿ ಕಾಲಿಟ್ಟರೆ ಸಾಕು.... ನಿಮ್ಮ ಮನಸ್ಸೆಲ್ಲಾ ಅಹ್ಲಾದಕರವಾಗಿ ಒಂದು ನವೀನ ಅನುಭೂತಿಯನ್ನು ಪಡೆಯುವಿರಿ.

ಹಲವಾರು ವರ್ಷಗಳಿಂದಲೂ ವಾಸಿಯಾಗದ ರೋಗಗಳನ್ನು ಕೂಡ ಇಲ್ಲಿನ ವೈದ್ಯದಿಂದಾಗಿ ಪೂರ್ತಿಯಾಗಿ ಉಪಶಮನವಾಗುತ್ತದೆ. ಆರ್ಯುವೇದ ಮಸಾಜ್‍ಗೆ ಈ ಪ್ರದೇಶವು ಪ್ರಸಿದ್ಧಿ ಪಡೆದಿದೆ ಎಂದು ಹೇಳಬಹುದು.

ಇಲ್ಲಿನ ಆರ್ಕಷಣೆಗಳನ್ನು ಗಮನಿಸಿದರೆ ಕೇರಳದಲ್ಲಿನ ಕೊಟ್ಟಾಯಂಗೆ ಸುಮಾರು 70 ಕಿ.ಮೀ ದೂರದಲ್ಲಿ ಪಿರ್ ಮೇಡ್ ಪಟ್ಟಣವು ಒಂದು ಹಿಲ್ ಸ್ಟೇಷನ್‍ಗಳಲ್ಲಿ ಒಂದಾಗಿದೆ. ಪ್ರವಾಸಿಗರಿಗೆ ಬೇಕಾಗಿರುವ ಟ್ರೆಕ್ಕಿಂಗ್ ಮಾರ್ಗಗಳು, ಸುಂದರವಾದ ಪ್ರಕೃತಿ ದೃಶ್ಯಗಳು, ತಂಪಾದ ಶೃಂಗಾರಭರಿತ ವಾತಾವರಣ, ಸೂವಾಸನೆಯುಕ್ತ ಹೂವುಗಳು ಮತ್ತು ಆನೇಕ ತೋಟಗಳನ್ನು ಇಲ್ಲಿ ಕಾಣಬಹುದಾಗಿದೆ.

ಪಿರ್ ಮೇಡ್

ಪಿರ್ ಮೇಡ್

ಕೇರಳದ ಕುಟ್ಟಿಕಾನಂ, ಪಿರ್ ಮೇಡ್‍ನಲ್ಲಿ ಪ್ರಸಿದ್ಧಿಗಳಿಸಿರುವ ಪ್ರವಾಸಿ ತಾಣವಾಗಿದೆ. ಇದು ಒಂದು ಕಾಲದಲ್ಲಿ ಟ್ರಾವೆನ್ಕೋರ್ ರಾಜರಿಗೆ ವಾಸಸ್ಥಾನವಾಗಿದ್ದ ಪ್ರದೇಶವಾಗಿದೆ. ಪಿರ್ ಮೇಡ್ ಎಂಬ ಹೆಸರು ಟ್ರಾವೆನ್ಕೋರ್ ರಾಜನ ಕುಟುಂಬಕ್ಕೆ ಅತ್ಯಂತ ಸಮೀಪದವನಾದ ಪಿರ್ ಮಹಮ್ಮದ್ ಎಂಬುವ ಒಂದು ಸೂಫಿ ಸಂತನಿಂದ ಈ ಹೆಸರು ಈ ಸ್ಥಳಕ್ಕೆ ಬಂದಿತು.

ಪಿರ್ ಮೇಡ್

ಪಿರ್ ಮೇಡ್

ಹನಿಮೂನ್ ಜೋಡಿಗಳಿಗೆ ಕುಟ್ಟಿಕೋನಂ ಹೇಳಿ ಮಾಡಿಸಿದ ಸ್ಥಳವಾಗಿದೆ. ಹಚ್ಚ ಹಸಿರಿನಲ್ಲಿ ಕೆಲವು ಕಾಲ ನಿಮ್ಮ ಸಂಗಾತಿಯ ಜೊತೆ ಆನಂದವಾಗಿರಬಹುದು. ಇಲ್ಲಿನ ತಾಣವೇ ಅದ್ಭುತ. ಇಲ್ಲಿನ ಸಮೀಪದಲ್ಲಿ ಪಾಂಚಾಲಿ ಪ್ರದೇಶವು ಟ್ರೆಕ್ಕಿಂಗ್ ಮಾಡುವವರಿಗೆ ಸ್ವರ್ಗದಾಯಕವಾದ ಪ್ರದೇಶವೇ ಸರಿ.

ಪಿರ್ ಮೇಡ್

ಪಿರ್ ಮೇಡ್

ಕುಟ್ಟಿಕೋನಂ ಸಮುದ್ರ ಮಟ್ಟಕ್ಕೆ ನೂರಾರು ಅಡಿ ಎತ್ತರದಲ್ಲಿದಲ್ಲಿ. ಪರ್ವತ ಮೇಲೆ ಟೀ ತೋಟಗಳನ್ನು, ಜಲಪಾತಗಳನ್ನು ಪ್ರವಾಸಿಗರು ಆನಂದಿಸಬಹುದಾಗಿದೆ. ಇಲ್ಲಿ ದಟ್ಟವಾದ ಅರಣ್ಯಗಳಲ್ಲಿ ಮುಗಿಲೆತ್ತರದ ವೃಕ್ಷಗಳನ್ನು ನೀವು ಕಾಣಾಬಹುದು. ಇಲ್ಲಿ ಹಲವಾರು ಸಿನಿಮಾ ಶೂಟಿಂಗ್ ನಡೆಯುತ್ತಿರುತ್ತದೆ. ಹಾಗಾದರೆ ನೀವೇ ಊಹಿಸಿ ಈ ಸ್ಥಳ ಹೇಗೆ ಇರಬಹುದು ಎಂದು.

ಪಿರ್ ಮೇಡ್

ಪಿರ್ ಮೇಡ್

ತ್ರಿಶಂಕು ಪರ್ವತಕ್ಕೆ ಪಿರ್ ಮೇಡ್‍ನಿಂದ ಕೇವಲ 4 ಕಿ.ಮೀ ದೂರದಲ್ಲಿದೆ. ಪರ್ವತದ ಮೇಲಿನಿಂದ ನೋಡಿದರೆ ಅದ್ಭುತವಾದ ದೃಶ್ಯಗಳನ್ನು ಕಾಣಬಹುದಾಗಿದೆ. ತಂಪಾದ ಗಾಳಿಯಿಂದಾಗಿ ಪ್ರವಾಸಿಗರನ್ನು ಆರ್ಕಷಿಸುತ್ತದೆ.

ಪಿರ್ ಮೇಡ್

ಪಿರ್ ಮೇಡ್

ತ್ರಿಶಂಕು ಪರ್ವತಗಳ ನಡುವೆ ಸೂರ್ಯಾಸ್ತವು ಎಲ್ಲರಿಗೂ ಆರ್ಕಷಿಸುತ್ತದೆ. ವಿವಿಧ ಟೆಕ್ಕಿಂಗ್ ಟ್ರಿಪ್‍ಗಳಿಗೆ ತ್ರಿಶಂಕು ಹಿಲ್ಸ್ ಉತ್ತಮವಾದ ಅನುಭವವನ್ನು ನೀಡುತ್ತದೆ. ಒನ್ ಡೇ ಟ್ರೆಕ್ಕಿಂಗ್, ಬೈಕ್ ಟ್ರಿಪ್ಸ್, ಹನಿಮೂನ್ ಟ್ರಿಪ್ಸ್. ಪ್ಯಾಮಿಲಿ ಟ್ರಿಪ್ಸ್‍ಗಾಗಿ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು.

ಪಿರ್ ಮೇಡ್

ಪಿರ್ ಮೇಡ್

ಪಿರ್ ಮೇಡ್‍ಗೆ 20 ಕಿ.ಮೀ ದೂರದಲ್ಲಿ ಪೆರಿಯಾರ್ ವನ್ಯಮೃಗಗಳ ಸಂರಕ್ಷಣಾ ಕೇಂದ್ರವಿದೆ. ಈ ಅಭಯಾರಣ್ಯದಲ್ಲಿ ಹಲವಾರು ಪ್ರಾಣಿಗಳ ಸಂಕುಲವನ್ನು, ಪಕ್ಷಿಗಳನ್ನು ಕಾಣಬಹುದಾಗಿದೆ. ಪ್ರಕೃತಿ ಪೇಮಿಗಳಿಗೆ ಇದೊಂದು ಸ್ವರ್ಗವೇ ಸರಿ.

ಪಿರ್ ಮೇಡ್

ಪಿರ್ ಮೇಡ್

ಟ್ರೆಕ್ಕಿಗರು ಎತ್ತರದಲ್ಲಿರುವ ಈ ಪ್ರದೇಶವನ್ನು, ಆಳವಾದ ಪ್ರದೇಶವನ್ನು ಕೂಡ ವಿಕ್ಷೀಸಬಹುದು. ಸೈಕ್ಲಿಂಗ್, ಹಾರ್ಸ್ ರೈಡಿಂಗ್ ಎಂತಹ ಹಲವಾರು ಕ್ರೀಡೆಗಳನ್ನು ಇಲ್ಲಿ ಆನಂದಿಸಬಹುದಾಗಿದೆ. ಟ್ರೆಕ್ಕಿಂಗ್‍ಗೆ ತೆರಳುವವರು ಸುರಕ್ಷಿತವಾದ ನೀರು ಹಾಗು ಆಹಾರವನ್ನು ತಮ್ಮ ಜೋತೆ ತಪ್ಪದೇ ತೆಗೆದುಕೊಂಡು ಹೋಗಬೇಕು.

ವಾಯು ಮಾರ್ಗದ ಮೂಲಕ

ವಾಯು ಮಾರ್ಗದ ಮೂಲಕ

ಕೊಚ್ಚಿ ಅಂತರಾಷ್ಟ್ರೀಯ ವಿಮಾನನಿಲ್ದಾಣದಿಂದ ಸುಮಾರು 130 ಕಿ.ಮೀ ದೂರದಲ್ಲಿ ಪಿರ್ ಮೇಡ್ ಇದೆ. ಇಲ್ಲಿಂದ ಕ್ಯಾಬ್, ಟ್ಯಾಕ್ಸಿಯಲ್ಲಿ ಸುಲಭವಾಗಿ ಪ್ರಯಾಣಿಸಬಹುದಾಗಿದೆ.

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ಪಿರ್ ಮೇಡ್‍ಗೆ ಸಮೀಪದಲ್ಲಿ 70 ಕಿ.ಮೀ ದೂರದಲ್ಲಿ ಕೊಟ್ಟಾಯಂ ರೈಲ್ವೆ ಸ್ಟೇಷನ್ ಇದೆ. ಇದು ದೆಹಲಿ, ಬೆಂಗಳೂರು, ಕೊಚ್ಚಿ, ತಿರುವನಂತಪುರಂ, ಚೆನ್ನೈ, ಮೈಸೂರು, ಮಂಗಳೂರುದಂತಹ ಪ್ರಧಾನ ನಗರಗಳಿಂದ ರೈಲ್ವೆ ಸಂಪರ್ಕವನ್ನು ಹೊಂದಿದೆ.

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ತೆಕ್ಕಡಿ, ಕೊಟ್ಟಾಯಂ, ಕೊಚ್ಚಿ ಪ್ರದೇಶಗಳಿಂದ ಪಿರ್ ಮೇಡ್‍ಗೆ ನಿತ್ಯವು ಸರ್ಕಾರಿ ಹಾಗು ಖಾಸಗಿ ಬಸ್ಸುಗಳ ಸಂಪರ್ಕ ಕಲ್ಪಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X