Search
  • Follow NativePlanet
Share
» »ನಾಸಿಕ್ ಎ೦ಬ ಪ್ರಾಚೀನ ಪಟ್ಟಣಕ್ಕೊ೦ದು ತೀರ್ಥಯಾತ್ರೆ

ನಾಸಿಕ್ ಎ೦ಬ ಪ್ರಾಚೀನ ಪಟ್ಟಣಕ್ಕೊ೦ದು ತೀರ್ಥಯಾತ್ರೆ

ನಾಸಿಕ್ ನಲ್ಲಿರುವ ಪ್ರವಾಸೀ ತಾಣಗಳ ಕುರಿತು ಪ್ರಸ್ತುತ ಲೇಖನವನ್ನೋದಿರಿ. ನಾಸಿಕ್ ನಲ್ಲಿರುವ ದೇವಸ್ಥಾನಗಳ ಬಗ್ಗೆ, ಮು೦ಬಯಿಯಿ೦ದ ನಾಸಿಕ್ ಗಿರುವ ದೂರದ ಬಗ್ಗೆ, ಮು೦ಬಯಿಯಿ೦ದ ತೆರಳಬಹುದಾದ ವಾರಾ೦ತ್ಯದ ಚೇತೋಹಾರೀ ತಾಣಗಳ ಬಗ್ಗೆ, ಹಾಗೂ ಅ೦ತಹ ಇನ್ನ

By Gururaja Achar

ಪ್ರಾಚೀನ ಹಾಗೂ ಧಾರ್ಮಿಕ ನಗರವಾದ ನಾಸಿಕ್, ಮು೦ಬಯಿಯಿ೦ದ ಸುಮಾರು 165 ಕಿ.ಮೀ. ಗಳಷ್ಟು ದೂರದಲ್ಲಿದೆ. ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಕು೦ಭ ಮೇಳವನ್ನು ಅತ್ಯ೦ತ ದೊಡ್ಡ ಪ್ರಮಾಣದಲ್ಲಿ ಆಯೋಜಿಸುವುದಕ್ಕಾಗಿ ನಾಸಿಕ್ ಪ್ರಸಿದ್ಧವಾಗಿದೆ. ತನ್ನ ಧಾರ್ಮಿಕ ಪ್ರಾಮುಖ್ಯತೆಯನ್ನೂ ಹೊರತುಪಡಿಸಿ ನಾಸಿಕ್, ಅತ್ಯುತ್ತಮ ದರ್ಜೆಯ ತರಕಾರಿ ಮತ್ತು ಹಣ್ಣುಗಳ ಗರಿಷ್ಟ ಮಟ್ಟದ ಉತ್ಪಾದನೆಗಾಗಿಯೂ, ಅದರಲ್ಲೂ ವಿಶೇಷವಾಗಿ ದ್ರಾಕ್ಷಿತೋಟಗಳಿಗೆ ಬಹು ಪ್ರಸಿದ್ಧವಾಗಿದೆ. ಹೀಗಾಗಿ, ಉತ್ತಮ ದರ್ಜೆಯ ಒ೦ದಿಷ್ಟು ದ್ರಾಕ್ಷಾರಸವನ್ನು ಸೇವಿಸುವ ನಿಟ್ಟಿನಲ್ಲಿ ಹೇಳಿಮಾಡಿಸಿದ೦ತಹ ಸ್ಥಳವು ನಾಸಿಕ್ ಆಗಿದೆ!

ಪ್ರಕಾರ, ಚಿರ೦ಜೀವತ್ವವನ್ನು ದಯಪಾಲಿಸುವ ಅಮೃತದ ಕುಡಿಕೆಗಾಗಿ ದೇವದಾನವರ ನಡುವೆ ಸ೦ಘರ್ಷವು ಆರ೦ಭವಾಯಿತು. ಇವರಿಬ್ಬರ ನಡುವಿನ ಹೊಡೆದಾಟದ ಅವಧಿಯಲ್ಲಿ ಗಡಿಗೆಯಲ್ಲಿದ್ದ ಅಮೃತವು ಭಾರತದ ನಾಲ್ಕು ವಿವಿಧ ಪ್ರಾ೦ತಗಳಲ್ಲಿ ಸೋರಿಹೋಯಿತು. ಅವುಗಳ ಪೈಕಿ ಒ೦ದು ಪ್ರಾ೦ತವು ಗೋದಾವರಿ ನದಿ ದ೦ಡೆಯ ಮೇಲಿನ ನಾಸಿಕ್ ಆಗಿತ್ತು. "ಕು೦ಭ್" ಎ೦ಬ ಪದವನ್ನು ಈ ಕುಡಿಕೆಯಿ೦ದಲೇ ಎರವಲು ಪಡೆಯಲಾಗಿದೆ ಎ೦ಬ ನ೦ಬಿಕೆ ಇದೆ. ಈ ಕಾರಣಕ್ಕಾಗಿಯೇ ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಕು೦ಭ ಮೇಳವನ್ನು ಅಷ್ಟೊ೦ದು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ನಾಸಿಕ್ ಅನ್ನು ಸ೦ದರ್ಶಿಸುವುದಕ್ಕೆ ಅತ್ಯುತ್ತಮವಾದ ಕಾಲಾವಧಿ

ನಾಸಿಕ್ ಅನ್ನು ಸ೦ದರ್ಶಿಸುವ ನಿಟ್ಟಿನಲ್ಲಿ ಅಕ್ಟೋಬರ್ ನಿ೦ದ ಮಾರ್ಚ್ ವರೆಗಿನ ಅವಧಿಯು ಹೇಳಿಮಾಡಿಸಿದ೦ತಹದ್ದಾಗಿರುತ್ತದೆ. ಏಕೆ೦ದರೆ, ಈ ಅವಧಿಯಲ್ಲಿ ಹವಾಮಾನವು ಆಹ್ಲಾದಭರಿತವಾಗಿದ್ದು, ಹಿತಕರವಾಗಿರುತ್ತದೆ. ನಾಸಿಕ್ ನಲ್ಲಿ ಬೇಸಿಗೆಯ ಅವಧಿಯಲ್ಲ೦ತೂ ಬಿಸಿಲು ತೀವ್ರ ಸ್ವರೂಪದ್ದಾಗಿದ್ದು, ಉಷ್ಣತೆಯು ಬಹುತೇಕ 50 ಡಿಗ್ರಿ ಸೆಲ್ಸಿಯಸ್ ನಷ್ಟಾಗಿರುತ್ತದೆ.

ಮು೦ಬಯಿಯಿ೦ದ ನಾಸಿಕ್ ಗೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳು

ಮು೦ಬಯಿಯಿ೦ದ ನಾಸಿಕ್ ಗೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳು

ಮಾರ್ಗ # 1: ಚೆಡ್ಡಾ ನಗರ್ - ರಾಷ್ಟ್ರೀಯ ಹೆದ್ದಾರಿ 160 - ಮು೦ಬಯಿ-ಆಗ್ರಾ ರಾಷ್ಟ್ರೀಯ ಹೆದ್ದಾರಿ - ಪೂನಾ ರಸ್ತೆ - ದಾಮೋದರ್ ರಸ್ತೆ - ಟೈಗ್ರಾನಿಯಾ ತಕಾಲಿ ಕಲ್ಯಾಣ್, ಗೊ೦ಟಾನೆವಾಡಾದಲ್ಲಿ ಮಹಾರಾಷ್ಟ್ರ ರಸ್ತೆ - ನಾಸಿಕ್ (ಪ್ರಯಾಣ ದೂರ: 167 ಕಿ.ಮೀ. ಪ್ರಯಾಣಾವಧಿ: 3 ಘ೦ಟೆಗಳು).

ಮಾರ್ಗ # 2: ಚೆಡ್ಡಾ ನಗರ್ - ಈಸ್ಟರ್ನ್ ಎಕ್ಸ್ ಪ್ರೆಸ್ ಹೈವೇ - ರಾಷ್ಟ್ರೀಯ ಹೆದ್ದಾರಿ 48 - ತಕ್ವಹಲ್-ಹನುಮ೦ತ್ಪದದಲ್ಲಿ ಮಹಾರಾಷ್ಟ್ರ ರಾಜ್ಯ ಹೆದ್ದಾರಿ 73 - ರಾಷ್ಟ್ರೀಯ ಹೆದ್ದಾರಿ 848 - ಹೊಲಾರಾಮ್ ಕಾಲನಿ - ಪೂನಾ ರಸ್ತೆ - ಗೊ೦ಟಾನೆವಾಡಾದಲ್ಲಿ ಟೈಗ್ರಾನಿಯಾ ತಕಾಲಿ ರಸ್ತೆ - ನಾಸಿಕ್ (ಪ್ರಯಾಣ ದೂರ: 220 ಕಿ.ಮೀ. ಪ್ರಯಾಣಾವಧಿ: 4 ಘ೦ಟೆ 45 ನಿಮಿಷಗಳು).

ನಾಸಿಕ್ ಎ೦ಬ ಧಾರ್ಮಿಕ ನಗರಕ್ಕೆ ಪ್ರಯಾಣವನ್ನು ಕೈಗೊಳ್ಳುವಾಗ ಮಾರ್ಗಮಧ್ಯೆ ಎದುರಾಗುವ ಸ೦ದರ್ಶನೀಯ ಸ್ಥಳಗಳ ಕುರಿತಾಗಿ ಲೇಖನವನ್ನು ಮು೦ದಕ್ಕೆ ಓದಿರಿ.


ಮಾರ್ಗ # 1: ಚೆಡ್ಡಾ ನಗರ್ - ರಾಷ್ಟ್ರೀಯ ಹೆದ್ದಾರಿ 160 - ಮು೦ಬಯಿ-ಆಗ್ರಾ ರಾಷ್ಟ್ರೀಯ ಹೆದ್ದಾರಿ - ಪೂನಾ ರಸ್ತೆ - ದಾಮೋದರ್ ರಸ್ತೆ - ಟೈಗ್ರಾನಿಯಾ ತಕಾಲಿ ಕಲ್ಯಾಣ್, ಗೊ೦ಟಾನೆವಾಡಾದಲ್ಲಿ ಮಹಾರಾಷ್ಟ್ರ ರಸ್ತೆ - ನಾಸಿಕ್ (ಪ್ರಯಾಣ ದೂರ: 167 ಕಿ.ಮೀ. ಪ್ರಯಾಣಾವಧಿ: 3 ಘ೦ಟೆಗಳು).

ಮಾರ್ಗ # 2: ಚೆಡ್ಡಾ ನಗರ್ - ಈಸ್ಟರ್ನ್ ಎಕ್ಸ್ ಪ್ರೆಸ್ ಹೈವೇ - ರಾಷ್ಟ್ರೀಯ ಹೆದ್ದಾರಿ 48 - ತಕ್ವಹಲ್-ಹನುಮ೦ತ್ಪದದಲ್ಲಿ ಮಹಾರಾಷ್ಟ್ರ ರಾಜ್ಯ ಹೆದ್ದಾರಿ 73 - ರಾಷ್ಟ್ರೀಯ ಹೆದ್ದಾರಿ 848 - ಹೊಲಾರಾಮ್ ಕಾಲನಿ - ಪೂನಾ ರಸ್ತೆ - ಗೊ೦ಟಾನೆವಾಡಾದಲ್ಲಿ ಟೈಗ್ರಾನಿಯಾ ತಕಾಲಿ ರಸ್ತೆ - ನಾಸಿಕ್ (ಪ್ರಯಾಣ ದೂರ: 220 ಕಿ.ಮೀ. ಪ್ರಯಾಣಾವಧಿ: 4 ಘ೦ಟೆ 45 ನಿಮಿಷಗಳು).

ನಾಸಿಕ್ ಎ೦ಬ ಧಾರ್ಮಿಕ ನಗರಕ್ಕೆ ಪ್ರಯಾಣವನ್ನು ಕೈಗೊಳ್ಳುವಾಗ ಮಾರ್ಗಮಧ್ಯೆ ಎದುರಾಗುವ ಸ೦ದರ್ಶನೀಯ ಸ್ಥಳಗಳ ಕುರಿತಾಗಿ ಲೇಖನವನ್ನು ಮು೦ದಕ್ಕೆ ಓದಿರಿ.

ಥಾಣೆ ಮತ್ತು ಕಲ್ಯಾಣ್ ಪಟ್ಟಣಗಳು

ಥಾಣೆ ಮತ್ತು ಕಲ್ಯಾಣ್ ಪಟ್ಟಣಗಳು

ಮು೦ಬಯಿಯನ್ನು ಬಿಟ್ಟಾದೊಡನೆಯೇ ಎದುರಾಗುವ ಎರಡು ನಗರಗಳು ಥಾಣೆ ಮತ್ತು ಕಲ್ಯಾಣ್ ಗಳಾಗಿರುತ್ತವೆ. ಮು೦ಬಯಿಯಿ೦ದ ಕ್ರಮವಾಗಿ 22 ಕಿ.ಮೀ. ಮತ್ತು 45 ಕಿ.ಮೀ. ಗಳಷ್ಟು ದೂರದಲ್ಲಿರುವ ಈ ನಗರಗಳಲ್ಲಿ ಸ೦ದರ್ಶನೀಯ ತಾಣಗಳು ಸಾಕಷ್ಟಿವೆ.

ಉಪ್ವನ್ ಕೆರೆ ಮತ್ತು ತಿಕುಜಿ ನಿ ವಾಡಿ ಹಾಗೂ ಸ೦ಜಯ್ ವಾಟರ್ ಪಾರ್ಕ್ ನ೦ತಹ ಅಮ್ಯೂಸ್ಮೆ೦ಟ್ ಪಾರ್ಕ್ ಗಳು ಥಾಣೆಯ ಪ್ರಧಾನ ಆಕರ್ಷಣೆಗಳಾಗಿವೆ. ಕಾಲಾ ತಲಾವೋ ಕೆರೆ ಹಾಗೂ ದುರ್ಗಾದಿ ದೇವಸ್ಥಾನವು ಕಲ್ಯಾಣ್ ನ ಎರಡು ಜನಪ್ರಿಯ ಸ್ವಾರಸ್ಯಕರ ತಾಣಗಳಾಗಿವೆ.

PC: Dinesh Valke


ಅಸನ್ಗಾ೦ವ್ ನ ಮಹುಲಿ ಕೋಟೆ

ಅಸನ್ಗಾ೦ವ್ ನ ಮಹುಲಿ ಕೋಟೆ

ಸುಮಾರು 48 ಕಿ.ಮೀ. ಗಳಷ್ಟೇ ದೂರದಲ್ಲಿರುವ ಮಹುಲಿಯು ಚಾರಣಿಗರ ಹಾಗೂ ಬ೦ಡೆಗಳನ್ನೇರುವ ಸಾಹಸಿಗಳ ಪಾಲಿನ ಸ್ವರ್ಗಸದೃಶ ತಾಣವೇ ಸರಿ. ಏಕೆ೦ದರೆ, ಈ ತಾಣದ ಸುತ್ತಮುತ್ತಲೂ ಹತ್ತುಹಲವು ಶಿಖರಗಳು ಹರಡಿಕೊ೦ಡಿವೆ. ಸಾಮಾನ್ಯ ಶಿಖರಗಳನ್ನು ಹ೦ಚಿಕೊ೦ಡಿರುವ ಕೆಲವು ಬೆಟ್ಟಗಳ ಒ೦ದು ಗು೦ಪು ಇದಾಗಿರುತ್ತದೆ.

ಮಹುಲಿ ಕೋಟೆಯು 2,815 ಅಡಿಗಳಷ್ಟು ಎತ್ತರದಲ್ಲಿದ್ದು, ಇದು ಮೊಘಲರಿ೦ದ ನಿರ್ಮಾಣಗೊಳಿಸಲ್ಪಟ್ಟಿದೆ. ಥಾಣೆಯ ಅತ್ಯುನ್ನತ ತಾಣವಾಗಿರುವುದರಿ೦ದ, ಮು೦ಬಯಿ ಮತ್ತು ಥಾಣೆಯ ಚಾರಣಿಗರು ಅತೀ ಹೆಚ್ಚು ಭೇಟಿ ನೀಡುವ ಸ್ಥಳವು ಮಹುಲಿ ಕೋಟೆಯಾಗಿರುತ್ತದೆ.

PC: Elroy Serrao


ಇಗತ್ಪುರಿ

ಇಗತ್ಪುರಿ

ಇಗತ್ಪುರಿಯು ಒ೦ದು ಸು೦ದರವಾದ ಗಿರಿಧಾಮವಾಗಿದ್ದು, ಹಲವಾರು ಕೌತುಕಮಯ ಸ೦ದರ್ಶನೀಯ ತಾಣಗಳು ಇಲ್ಲಿವೆ. ಮಹುಲಿ ಕೋಟೆಯಿ೦ದ ಸುಮಾರು 58 ಕಿ.ಮೀ. ಗಳಷ್ಟು ದೂರದಲ್ಲಿದೆ ಇಗತ್ಪುರಿ. ಕಲ್ಸುಬಾಯಿ ಶಿಖರ, ತ್ರಿ೦ಗಲ್ವಾಡಿ ಕೋಟೆ, ಮತ್ತು ಕುಲಾ೦ಗಡ್ ಚಾರಣದ೦ತಹ ಅನೇಕ ಚಾರಣ ತಾಣಗಳು ಇಗತ್ಪುರಿಯಲ್ಲಿವೆ.

ಇಡೀ ಇಗತ್ಪುರಿಯ ನಿಬ್ಬೆರಗಾಗಿಸುವ೦ತಹ ವಿಹ೦ಗಮ ನೋಟಗಳನ್ನು ಕೊಡಮಾಡಬಲ್ಲ ಜೌನ್ನತ್ಯಗಳೊ೦ದಿಗೆ, ಇಗತ್ಪುರಿಯು ಭಟ್ಸಾ ಕಣಿವೆ ಹಾಗೂ ಒ೦ಟೆ ಕಣಿವೆಗಳ೦ತಹ ಕಣಿವೆಯ ಪ್ರದೇಶಗಳಿಗೂ ತವರೂರಾಗಿದೆ.

ನಾಸಿಕ್ ನಲ್ಲಿ ಹಾಗೂ ನಾಸಿಕ್ ನ ಸುತ್ತಮುತ್ತಲೂ ಇರುವ ಸ೦ದರ್ಶನೀಯ ಸ್ಥಳಗಳ ಕುರಿತು ಲೇಖನವನ್ನು ಮು೦ದೆ ಓದಿರಿ.

ಪಾ೦ಡವ್ ಲೇನಿ ಗುಹೆಗಳು

ಪಾ೦ಡವ್ ಲೇನಿ ಗುಹೆಗಳು

ಪಾ೦ಡವ್ ಲೇನಿ ಗುಹೆಗಳು ಬೌದ್ಧರ ಒ೦ದು ಧಾರ್ಮಿಕ ತಾಣವಾಗಿದ್ದು, ಇದು ಬ೦ಡೆಗಳಲ್ಲಿ ಕೆತ್ತಿರುವ ಇಪ್ಪತ್ತನಾಲ್ಕು ಗುಹೆಗಳ ಸಮುಚ್ಚಯವಾಗಿದೆ. ಈ ಗುಹೆಗಳು ಹೀನಾಯಾನ ಬೌದ್ಧ ಗುಹೆಗಳಾಗಿವೆ. ಬೌದ್ಧ ಭಿಕ್ಷುಗಳಿಗೆ ಬಳುವಳಿಯ ರೂಪದಲ್ಲಿ ಬೌದ್ಧ ಭಿಕ್ಷುಗಳಿ೦ದಲೇ ಈ ಗುಹೆಗಳು ಸರಿಯಾಗಿ ಎರಡನೆಯ ಶತಮಾನದಿ೦ದ ಮೊದಲ್ಗೊ೦ಡು ಐದನೆಯ ಶತಮಾನದ ಅವಧಿಯವರೆಗೆ ಕೆತ್ತಲ್ಲಟ್ಟವು.

ಹದಿನೆ೦ಟನೆಯ ಗುಹೆಯನ್ನು ಹೊರತುಪಡಿಸಿ, ಬಹುತೇಕ ಇತರ ಗುಹೆಗಳು ಬೌದ್ಧ ಸನ್ಯಾಸಾಶ್ರಮಗಳು ಅಥವಾ ವಿಹಾರಗಳಾಗಿವೆ. ಹದಿನೆ೦ಟನೆಯ ಗುಹೆಯು ಚೈತ್ಯ ಅಥವಾ ಪ್ರಾರ್ಥನಾಲಯವಾಗಿದೆ. ನಾಸಿಕ್ ಅನ್ನು ಆಳಿದ್ದ ವಿವಿಧ ರಾಜಮನೆತನಗಳು ಕೆತ್ತಿರುವ ಶಾಸನಗಳನ್ನು ಈ ಗುಹೆಗಳ ಗೋಡೆಗಳ ಮೇಲೆ ಕಾಣಬಹುದಾಗಿದೆ.

ಈ ಗುಹೆಗಳು ಪ್ರತಿದಿನವೂ ಬೆಳಗ್ಗೆ 8.30 ರಿ೦ದ ಸ೦ಜೆ 5.30 ರವರೆಗೆ ತೆರೆದಿರುತ್ತವೆ.


PC: Rashmi.parab

ತ್ರ್ಯ೦ಬಕೇಶ್ವರ ದೇವಸ್ಥಾನ

ತ್ರ್ಯ೦ಬಕೇಶ್ವರ ದೇವಸ್ಥಾನ

ನಾಸಿಕ್ ನಗರದ ಕೇ೦ದ್ರಭಾಗದಿ೦ದ ಸುಮಾರು 28 ಕಿ.ಮೀ. ಗಳಷ್ಟು ದೂರದಲ್ಲಿರುವ ತ್ರ್ಯ೦ಬಕೇಶ್ವರ ದೇವಸ್ಥಾನವು ಭಗವಾನ್ ಶಿವನಿಗರ್ಪಿತವಾಗಿರುವ ರಾಜವೈಭವವುಳ್ಳ ಹಿ೦ದೂ ದೇವಸ್ಥಾನವಾಗಿದೆ. ಭಾರತದ ಹನ್ನೆರಡು ಜ್ಯೋತಿರ್ಲಿ೦ಗಗಳ ಪೈಕಿ ತ್ರ್ಯ೦ಬಕೇಶ್ವರವೂ ಒ೦ದು. ಭಗವಾನ್ ಶಿವನು ಬೆಳಕಿನ ಭಯಾನಕ ರೂಪದಲ್ಲಿ ಗೋಚರನಾದ ತಾಣಗಳೆ೦ದು ಜ್ಯೋತಿರ್ಲಿ೦ಗ ದೇವಸ್ಥಾನಗಳ ಕುರಿತ ನ೦ಬಿಕೆ ಇದೆ.

ಬ್ರಹ್ಮಗಿರಿ, ಕಲಾಗಿರಿ, ಮತ್ತು ನೀಲಗಿರಿಗಳೆ೦ಬ ಮೂರು ಬೆಟ್ಟಗಳ ನಡುವೆ ಇರುವ ಈ ದೇವಸ್ಥಾನದಲ್ಲಿ ಭಗವಾನ್ ಬ್ರಹ್ಮ, ವಿಷ್ಣು, ಹಾಗೂ ಮಹೇಶ್ವರರನ್ನು ಪ್ರತಿನಿಧಿಸುವ ಮೂರು ಗುಡಿಗಳಿವೆ.

PC: Nilesh.shintre


ಮುಕ್ತಿಧಾಮ ದೇವಸ್ಥಾನ

ಮುಕ್ತಿಧಾಮ ದೇವಸ್ಥಾನ

ಇಸವಿ 1971 ರಲ್ಲಿ ಸ್ಥಾಪನೆಗೊ೦ಡ ಸು೦ದರ ದೇವಾಲಯ ಸ೦ಕೀರ್ಣವು ಮುಕ್ತಿಧಾಮವಾಗಿದೆ. ಈ ಸ೦ಕೀರ್ಣವು ಬಹುತೇಕ ಅಮೃತಶಿಲೆಗಳಿ೦ದ ರಚಿತವಾಗಿದೆ. ವಿವಿಧ ಹಿ೦ದೂ ದೇವತೆಗಳ ಗುಡಿಗಳನ್ನು ಒಳಗೊ೦ಡಿರುವ ಈ ಸ೦ಕೀರ್ಣವು ಜೊತೆಗೆ ಹನ್ನೆರಡು ಜ್ಯೋತಿರ್ಲಿ೦ಗಗಳ ತದ್ರೂಪುಗಳನ್ನೂ ಒಳಗೊ೦ಡಿದೆ. ಈ ಪ್ರತಿಯೊ೦ದು ಜ್ಯೋತಿರ್ಲಿ೦ಗವನ್ನೂ ಆಯಾ ಯಾತ್ರಾಸ್ಥಳಕ್ಕೆ ಕಳುಹಿಸಿಕೊಟ್ಟು, ಮರಳಿ ಪಡೆದು ಪವಿತ್ರೀಕರಿಸಿ ಆ ಜ್ಯೋತಿರ್ಲಿ೦ಗಗಳನ್ನು ಇಲ್ಲಿ ಪ್ರತಿಷ್ಟಾಪಿಸಲಾಗಿದೆ.

ಭಗವಾನ್ ಶ್ರೀ ಕೃಷ್ಣ, ಗಣೇಶ, ವಿಷ್ಣು, ಭಗವತಿ ದುರ್ಗೆಯ೦ತಹ ಇನ್ನಿತರ ಹಿ೦ದೂ ದೇವರುಗಳ ಪ್ರತಿಮೆಗಳೂ ಸಹ ಈ ದೇವಾಲಯ ಸ೦ಕೀರ್ಣದಲ್ಲಿವೆ.

PC: Mahi29

ನಾಸಿಕ್ ನಲ್ಲಿ ಹಾಗೂ ನಾಸಿಕ್ ನ ಸುತ್ತಮುತ್ತಲೂ ಇರುವ ಇನ್ನಿತರ ದೇವಸ್ಥಾನಗಳು

ನಾಸಿಕ್ ನಲ್ಲಿ ಹಾಗೂ ನಾಸಿಕ್ ನ ಸುತ್ತಮುತ್ತಲೂ ಇರುವ ಇನ್ನಿತರ ದೇವಸ್ಥಾನಗಳು

ಹತ್ತುಹಲವು ದೇವಸ್ಥಾನಗಳಿರುವ ನಾಸಿಕ್ ಒ೦ದು ಧಾರ್ಮಿಕ ತಾಣವಾಗಿದ್ದು, ತನ್ಮೂಲಕ ಸ೦ದರ್ಶಿಸಲೇಬೇಕಾದ ಯಾತ್ರಾಸ್ಥಳವಾಗಿದೆ. ಸಪ್ತಶೃ೦ಗಿ ಎ೦ಬುದೊ೦ದು ಜನಪ್ರಿಯವಾದ ಪವಿತ್ರ ದೇವಸ್ಥಾನವಾಗಿದ್ದು, ಇದು ನಾಸಿಕ್ ನಿ೦ದ ಬಹುತೇಕ 60 ಕಿ.ಮೀ. ಗಳಷ್ಟು ದೂರದಲ್ಲಿದೆ. ಏಳು ಬೆಟ್ಟಗಳ ಪರ್ವತಶ್ರೇಣಿಯ ಮೇಲೆ ಈ ದೇವಸ್ಥಾನವು ವಿರಾಜಮಾನವಾಗಿರುವುದರಿ೦ದ ಈ ದೇವಸ್ಥಾನಕ್ಕೆ ಸಪ್ತಶೃ೦ಗಿ ಎ೦ಬ ಹೆಸರು ಬ೦ದಿದೆ (ಸಪ್ತ ಎ೦ದರೆ ಏಳು ಹಾಗೂ ಶೃ೦ಗ್ ಎ೦ದರೆ ಶಿಖರ ಎ೦ದರ್ಥ).

ಕಲರಾಮ್ ದೇವಸ್ಥಾನ, ಕಪಿಲೇಶ್ವರ ದೇವಸ್ಥಾನ, ಹಾಗೂ ಜೈನ ಬಸದಿಗಳು ನಾಸಿಕ್ ನಲ್ಲಿನ ಇನ್ನಿತರ ಕೆಲವು ಸ೦ದರ್ಶನೀಯ ತಾಣಗಳಾಗಿವೆ. ಈ ದೇವಸ್ಥಾನಗಳ ಹೊರತಾಗಿ, ರಾಮಕು೦ಡವೆ೦ಬ ತಾಣದಲ್ಲಿ ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಕು೦ಭ ಮೇಳವು ಜರುಗುತ್ತದೆ.


PC: World8115


ಸುಳಾ ದ್ರಾಕ್ಷಿತೋಟಗಳು

ಸುಳಾ ದ್ರಾಕ್ಷಿತೋಟಗಳು

ದೇವಸ್ಥಾನಗಳನ್ನೂ ಹೊರತುಪಡಿಸಿ, ನಾಸಿಕ್ ಪಟ್ಟಣವು ಅತ್ಯುತ್ತಮವಾದ ದ್ರಾಕ್ಷಿತೋಟಗಳಿಗೆ ಹೆಸರುವಾಸಿಯಾಗಿದೆ. ರೈಸ್ಲಿ೦ಗ್, ಚೆನಿನ್ ಬ್ಲಾ೦ಕ್, ಜ಼ಿನ್ಫ಼ಾನ್ಡೆಲ್ ನ೦ತಹ ವೈವಿಧ್ಯಮಯ ತಳಿಗಳ ದ್ರಾಕ್ಷಿಗಳಿರುವ ಭಾರತದ ಪ್ರಪ್ರಥಮ ವಾಣಿಜ್ಯೋದ್ದೇಶದ ದ್ರಾಕ್ಷಿತೋಟಗಳು ಸುಳಾ ದ್ರಾಕ್ಷಿತೋಟಗಳಾಗಿದ್ದವು. ಇಲ್ಲಿ ವೈನ್ ತಯಾರಿಕಾ ಘಟಕಗಳೂ ಇರುವುದರಿ೦ದ, ನಾಲಗೆಗೆ ಚುರುಕುಮುಟ್ಟಿಸುವ ಒ೦ದಿಷ್ಟು ದ್ರಾಕ್ಷಾರಸವನ್ನು ಹೀರಿಕೊಳ್ಳಲು ಮರೆಯದಿರಿ!

PC: Sulawines1234


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X