Search
  • Follow NativePlanet
Share
» »ದಂಪತಿ ಸಮೇತರಾಗಿ ಬಂದು ಇಲ್ಲಿ ಬುಟ್ಟಿ ತುಂಬಾ ಬಾಳೆಹಣ್ಣು ಅರ್ಪಿಸ್ತಾರೆ ಯಾಕೆ?

ದಂಪತಿ ಸಮೇತರಾಗಿ ಬಂದು ಇಲ್ಲಿ ಬುಟ್ಟಿ ತುಂಬಾ ಬಾಳೆಹಣ್ಣು ಅರ್ಪಿಸ್ತಾರೆ ಯಾಕೆ?

ಉಡುಪಿಯಲ್ಲಿರುವ ಈ ದೇವಸ್ಥಾನವು ಬಹಳ ಪುರಾತನವಾದ ದೇವಾಲಯ. ಇಲ್ಲಿನ ವಿಶೇಷತೆ ಎಂದರೆ ನೀವು ಯಾವುದಾದರೂ ಇಚ್ಛೆಯನ್ನು ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡು ಅದು ನೆರವೇರಿದರೆ ಬಾಳೆಹಣ್ಣನ್ನು ಅರ್ಪಿಸುವುದಾಗಿ ಹರಕೆ ಹೇಳಬೇಕು. ಆಗ ನಿಮ್ಮ ಕೋರಿಕೆ ಈಡೇರುತ್ತದಂತೆ.

 ಎಲ್ಲಿದೆ ಈ ದೇವಸ್ಥಾನ?

ಎಲ್ಲಿದೆ ಈ ದೇವಸ್ಥಾನ?

ಶ್ರೀ ಅನಂತ ಪದ್ಮನಾಭ ಕ್ಷೇತ್ರವು ಉಡುಪಿ ಜಿಲ್ಲೆಯ ಪೆರ್ಡೂರ್ ಎಂಬ ಹಳ್ಳಿಯಲ್ಲಿದೆ. ಪೆರ್ಡೂರು ಉಡುಪಿಯಿಂದ 20 ಕಿ.ಮೀ ದೂರದಲ್ಲಿದೆ ಮತ್ತು ಹೆಬ್ರಿಯಿಂದ 32 ಕಿ.ಮೀ. ದೂರದಲ್ಲಿದೆ. ಅದರ ಪ್ರಾಚೀನ ದೇವಾಲಯ ಶ್ರೀ ಅನಂತ ಪದ್ಮನಾಭ ಸ್ವಾಮಿ. ಉಡುಪಿಯು ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾಗಿದ್ದು, ಐತಿಹಾಸಿಕ ಕೃಷ್ಣ ದೇವಸ್ಥಾನದ ಪ್ರಮುಖ ಯಾತ್ರಾ ಸ್ಥಳವಾಗಿದೆ.

ಈ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತತ್ತೆಈ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ರೆ ವಿದ್ಯೆ ಚೆನ್ನಾಗಿ ಹತ್ತತ್ತೆ

 ಪೆರ್ಡೂರು ಹೆಸರು ಬಂದಿದ್ದು ಹೇಗೆ?

ಪೆರ್ಡೂರು ಹೆಸರು ಬಂದಿದ್ದು ಹೇಗೆ?

ಗೋಪಾಲಕ ಹಸುಗಳನ್ನು ಮೇಯಿಸುತ್ತಿದ್ದಾಗ ಕಪಿಲೆ ಎನ್ನುವ ಹಸು ಕಾಣೆಯಾಗುತ್ತದೆ. ಆ ಹಸುವನ್ನು ಹುಡುಕಿಕೊಂಡು ಹೋದಾಗ ಅದು ಒಂದು ಹುತ್ತಕ್ಕೆ ಹಾಲೆರೆಯುತ್ತಿರುತ್ತದೆ. ಅದನ್ನು ಕಂಡ ಗೋಪಾಲಕ ಪೇರುಂಡು ಪೇರುಂಡು ಎಂದು ಹೇಳಿದ ಎನ್ನಲಾಗುತ್ತದೆ. ಪೇಡುಂಡು ಎಂದರೆ ತುಳು ಭಾಷೆಯಲ್ಲಿ ಹಾಲು ಇದೆ ಎಂದರ್ಥ. ಹೀಗೆ ಈ ಊರು ಪೆರ್ಡೂರು ಆಗಿದೆ ಎನ್ನಲಾಗುತ್ತದೆ.

800 ವರ್ಷಗಳ ಇತಿಹಾಸ

800 ವರ್ಷಗಳ ಇತಿಹಾಸ

ಇಲ್ಲಿನ ಈ ಅನಂತ ಪದ್ಮನಾಭ ಸ್ವಾಮಿ ದೇವಾಲಯವು ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿದೆ. ಸಂಕ್ರಮಣಕ್ಕೆ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.

ಶಬರಿಮಲೆಗೆ ಮಹಿಳೆಯರಿಗೆ ನಿಷೇಧ; ಆದ್ರೆ ಇಲ್ಲಿ ಋತುಸ್ರಾವವಾಗುವ ದೇವಿಯನ್ನೇ ಪೂಜಿಸ್ತಾರೆಶಬರಿಮಲೆಗೆ ಮಹಿಳೆಯರಿಗೆ ನಿಷೇಧ; ಆದ್ರೆ ಇಲ್ಲಿ ಋತುಸ್ರಾವವಾಗುವ ದೇವಿಯನ್ನೇ ಪೂಜಿಸ್ತಾರೆ

2 ಅಡಿ ವಿಗ್ರಹ

2 ಅಡಿ ವಿಗ್ರಹ

ದೇವಸ್ಥಾನದಲ್ಲಿ ಪವಿತ್ರವಾದ ಶ್ರೀ ಅನಂತ ಪದ್ಮನಾಭ ಸ್ವಾಮಿ ವಿಗ್ರಹವು 2 ಅಡಿ ಎತ್ತರವಾಗಿದ್ದು, ಶಂಖ ಚಕ್ರ ಮತ್ತು ಅಭಯ ಹಸ್ತವನ್ನು ಹೊಂದಿದ್ದು ಬಹಳ ಆಕರ್ಷಕವಾಗಿದೆ. ನಿಂತಿರು ಭಂಗಿಯಲ್ಲಿ ಈ ವಿಗ್ರಹವಿದೆ.

ಪದ್ಮತೀರ್ಥ

ಪದ್ಮತೀರ್ಥ

ದೇವಸ್ಥಾನದಲ್ಲಿ ಒಂದು ತೀರ್ಥವಿದೆ. ಇದನ್ನು ಪದ್ಮತೀರ್ಥ ಎನ್ನುತ್ತಾರೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಈ ನೀರಿನ್ನು ಚಿಮುಕಿನಿಸಿ ದೇವರ ದರ್ಶನಕ್ಕೆ ಹೋಗುತ್ತಾರೆ. ಈ ನೀರು ಬಹಳ ಪವಿತ್ರವಾದ ನೀರು.

ಬಾಳೆಹಣ್ಣಿನ ಹರಕೆ

ಬಾಳೆಹಣ್ಣಿನ ಹರಕೆ

ಈ ದೇವಾಲಯ ಭಕ್ತರು ಬಾಳೆಹಣ್ಣಿನ ಹರಕೆಯನ್ನು ನೀಡುತ್ತಾರೆ. ಭಕ್ತರು ಏನನ್ನಾದರೂ ಕೋರಿಕೊಂಡು ದೇವರಿಗೆ ಬಾಳೆಹಣ್ಣಿನ ಹರಕೆ ನೀಡುವುದಾಗಿ ಹೇಳಿದರೆ ಅವರ ಕೋರಿಕೆ ಈಡೇರುತ್ತಂತೆ. ಹಾಗಾಗಿ ಭಕ್ತರು ತಮ್ಮ ಹರಕೆ ಈಡೇರಿದ ಮೇಲೆ ಬುಟ್ಟಿ ತುಂಬಾ ಬಾಳೆಹಣ್ಣನ್ನು ಈ ದೇವಸ್ಥಾನಕ್ಕೆ ಅರ್ಪಿಸ್ತಾರೆ.

ಹಿಮಾಚಲ ಪ್ರದೇಶ: ಇಲ್ಲಿಗೆ ಹೋದ್ರೆ ಉಳಿಯೋದು ಎಲ್ಲಿ? ತಿನ್ನೋದು ಎಲ್ಲಿ?ಹಿಮಾಚಲ ಪ್ರದೇಶ: ಇಲ್ಲಿಗೆ ಹೋದ್ರೆ ಉಳಿಯೋದು ಎಲ್ಲಿ? ತಿನ್ನೋದು ಎಲ್ಲಿ?

ದಂಪತಿ

ದಂಪತಿ

ದಂಪತಿಗಳು ಈ ದೇವಸ್ಥಾನಕ್ಕೆ ಬಂದರೆ ಒಳ್ಳೆಯದು. ಹಾಗಾಗಿ ಇಲ್ಲಿಗೆ ಹೆಚ್ಚಾಗಿ ದಂಪತಿ ಸಮೇತರಾಗಿ ಬರುತ್ತಾರೆ.

ರುದ್ರ ದೇವಸ್ಥಾನ

ರುದ್ರ ದೇವಸ್ಥಾನ

ದೇವಸ್ಥಾನವು ರುದ್ರ ದೇವಸ್ಥಾನವನ್ನು ಒಳಗೊಂಡಿದೆ. ಒಂದು ರುದ್ರಲಿಂಗವನ್ನು ಕೂಡ ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ. ಗಣಪತಿ ವಿಗ್ರಹವಿದೆ ಮತ್ತು ಇಲ್ಲಿ ಗಣಪತಿಗೆ ಪೂಜೆಯ ನಂತರ ಮೂಲ ಮೂರ್ತಿಯನ್ನು ಪೂಜಿಸಲಾಗುವುದು. ಹಳೆಯ ಸಂಪ್ರದಾಯವನ್ನು ಇಂದಿಗೂ ನಡೆಸಿಕೊಂಡು ಹೋಗಲಾಗುತ್ತಿದೆ.

ಬೆಂಗಳೂರು-ಹಂಪಿ: ವಿಜಯನಗರ ಸಾಮ್ರಾಜ್ಯಕ್ಕೊಂದು ಅದ್ಭುತ ಪ್ರಯಾಣ ಬೆಂಗಳೂರು-ಹಂಪಿ: ವಿಜಯನಗರ ಸಾಮ್ರಾಜ್ಯಕ್ಕೊಂದು ಅದ್ಭುತ ಪ್ರಯಾಣ

ತಲುಪುವುದು ಹೇಗೆ?

ತಲುಪುವುದು ಹೇಗೆ?

ಉಡುಪಿಗೆ ಹೋಗಬೇಕಾದರೆ ಬೆಂಗಳೂರಿನಿಂದ ಸಾಕಷ್ಟು ಬಸ್‌ಗಳಿವೆ. ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆಗಳಿವೆ. ಉಡುಪಿ ತಲುಪಿ ನಂತರ ಅಲ್ಲಿಂದ ರಿಕ್ಷಾ ಮೂಲಕ ಪೆರ್ಡೂರು ತಲುಪಬಹುದು.

ರೈಲಿನಲ್ಲಿ: ಉಡುಪಿಯಲ್ಲಿ ರೈಲು ನಿಲ್ದಾಣವಿದೆ. ಅಲ್ಲಿಂದ ರಿಕ್ಷಾ ಮೂಲಕ ಪೆರ್ಡೂರಯ ತಲುಪಬಹುದು.

ವಿಮಾನದಲ್ಲಿ: ಉಡುಪಿಯಲ್ಲಿ ವಿಮಾನ ನಿಲ್ದಾಣವಿಲ್ಲ. ಹಾಗಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ನಂತರ ಅಲ್ಲಿಂದ ಉಡುಪಿಗೆ ಬಸ್ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು. ಉಡುಪಿಯು ವಿಮಾನನಿಲ್ದಾಣದಿಂದ ೫೯ ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X