Search
  • Follow NativePlanet
Share
» »ಕೋಳಿ ಮೊಟ್ಟೆಯನ್ನು ಅರ್ಪಿಸುವ ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ಕೋಳಿ ಮೊಟ್ಟೆಯನ್ನು ಅರ್ಪಿಸುವ ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

. ಶ್ರೀ ರಾಮನು ತ್ರೇಥಾ ಯುಗದಲ್ಲಿ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ವಿಗ್ರಹವನ್ನು ಪ್ರತಿಷ್ಠಾಪಿಸಿದರೆಂದು ನಂಬಲಾಗಿದೆ. ಅದಕ್ಕಿಂತ ಮುಂಚೆ ಇಲ್ಲಿ ಅಯ್ಯಪ್ಪನ ದೇವಸ್ಥಾನವಿತ್ತು.

ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನವು ಪುರಾಣ ಕಾಲಕ್ಕೆ ಸಂಬಂಧಿಸಿದ ಒಂದು ವಿಶೇಷ ದೇವಾಲಯವಾಗಿದೆ. ಇಲ್ಲಿನ ಮೆಟ್ಟಿಲು ಬಾವಿಗಳು ನಿಜಕ್ಕೂ ಸುಂದರವಾಗಿದೆ. ಈ ಮೆಟ್ಟಿಲು ಬಾವಿ ಹಾಗೂ ದೇವಸ್ಥಾನದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

 ಅಯ್ಯಪ್ಪ ಹಾಗೂ ಸುಬ್ರಹ್ಮಣ್ಯ

ಅಯ್ಯಪ್ಪ ಹಾಗೂ ಸುಬ್ರಹ್ಮಣ್ಯ

PC:Vinayaraj
ಈ ದೇವಾಲಯವು ಹಲವು ವಿಷಯಗಳಲ್ಲಿ ವಿಶೇಷವಾಗಿದೆ. ಶ್ರೀ ರಾಮನು ತ್ರೇಥಾ ಯುಗದಲ್ಲಿ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ವಿಗ್ರಹವನ್ನು ಪ್ರತಿಷ್ಠಾಪಿಸಿದರೆಂದು ನಂಬಲಾಗಿದೆ. ಅದಕ್ಕಿಂತ ಮುಂಚೆ ಇಲ್ಲಿ ಅಯ್ಯಪ್ಪನ ದೇವಸ್ಥಾನವಿತ್ತು. ಈಗ ಇಲ್ಲಿ ಒಂದೇ ವರಾಂಡದಲ್ಲಿ ಎರಡು ದೇವಸ್ಥಾನವಿದೆ. ಅಯ್ಯಪ್ಪ ಹಾಗೂ ಸುಬ್ರಹ್ಮಣ್ಯನ ದೇವಾಲಯವಿದೆ. ಇದರ ಜೊತೆಗೆ ಗಣಪತಿ, ನಾಗ, ಭಗವತಿ ಗುಡಿಯೂ ಇದೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC:Vinayaraj
ಕೇರಳ ಕಣ್ಣೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಪೆರಾಲಸ್ಸೆರಿ ಪಟ್ಟಣವು ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.

ಮೆಟ್ಟಿಲು ಬಾವಿ

ಮೆಟ್ಟಿಲು ಬಾವಿ

PC:Vinayaraj
ದೇವಾಲಯದ ಕೊಳವು ವಿಶಿಷ್ಟವಾಗಿದ್ದು ಲೆಕ್ಕವಿಲ್ಲದಷ್ಟು ಮೆಟ್ಟಿಲುಗಳನ್ನು ಹೊಂದಿದೆ. ಕೇರಳದಲ್ಲಿ ಈ ಶೈಲಿಯ ವಾಸ್ತುಶಿಲ್ಪವನ್ನು ಕೊಳಗಳಿಗೆ ಬಹಳ ಅಪರೂಪವಾಗಿ ನಿರ್ಮಾಣ ಮಾಡಲಾಗುತ್ತದೆ. ಇಂತಹ ಮೆಟ್ಟಿಲು ಬಾವಿಗಳನ್ನು ಹೆಚ್ಚಾಗಿ ಉತ್ತರ ಭಾರತದಲ್ಲಿ ಕಾಣಸಿಗುತ್ತದೆ. ಇನ್ನು ದೆಹಲಿ, ರಾಜಸ್ಥಾನ, ಗುಜರಾತ್, ಕರ್ನಾಟಕದಲ್ಲೂ ಇಂತಹ ವಾಸ್ತುಶಿಲ್ಪವನ್ನು ಕಾಣಬಹುದು.

ತುಲಾ ಸಂಕ್ರಮಣ ವಿಶೇಷ

ತುಲಾ ಸಂಕ್ರಮಣ ವಿಶೇಷ

PC:Vinayaraj
ಪೆರಾಲಸ್ಸೆರಿಯಲ್ಲಿ ಮೆಟ್ಟಿಲುಗಳನ್ನು ಕಲ್ಲಿನಿಂದ ಮಾಡಲಾಗಿದೆ. ಪ್ರತಿ 'ತುಲಾ ಸಂಕ್ರಮಣದಂದು' ಕಾವೇರಿ ನದಿ ನೀರು ಈ ಕೊಳವನ್ನು ತಲುಪುತ್ತದೆ ಎಂದು ನಂಬಲಾಗಿದೆ. ಮಲಯಾಳದ ಧನು ಮಾಸವು ಇಲ್ಲಿ ಹಬ್ಬದ ಸೀಸನ್ ಆಗಿದೆ. ಆರು ದಿನಗಳ ಉತ್ಸವವು ಧನು ಮಾಸದ ೪ ನೇ ತಾರೀಕಿಗೆ ಆರಂಭವಾಗಿ ೧೧ ನೇ ತಾರೀಕಿಗೆ ಕೊನೆಗೊಳ್ಳುತ್ತದೆ.

ಕೋಳಿ ಮೊಟ್ಟೆ

ಕೇರಳದಲ್ಲಿರುವ ನಾಗಾರಾಧನೆಗೆ ಪ್ರಸಿದ್ಧವಾಗಿರುವ ದೇವಾಲಯಗಳಲ್ಲಿ ಇದೂ ಒಂದು, ಸುಬ್ರಹ್ಮಣ್ಯ ದೇವರು ನಾಗನ ರೂಪದಲ್ಲಿ ಇಲ್ಲಿಗೆ ಬರುತ್ತಾರೆ ಎನ್ನುವುದು ಜನರ ನಂಬಿಕೆ. ಇಲ್ಲಿ ನಾಗದೇವರಿಗೆ ಕೋಳಿಯ ಮೊಟ್ಟೆಯನ್ನು ಅರ್ಪಿಸಲಾಗುತ್ತದೆ. ಇದನ್ನು ಹೆಚ್ಚಾಗಿ ಪಾಲಿಸಲಾಗುತ್ತದೆ. ಇಲ್ಲಿನ ಅಶೋಕ ಮರದ ಕೆಳಗೆ ನಾಗನ ಗುಹೆ ಇದೆ. ಜನರು ಮೊಟ್ಟೆಯನ್ನು ಈ ಗುಹೆಯೊಳಗೆ ಹಾಕುತ್ತಾರೆ, ಈ ಮೂಲಕ ನಾಗನಿಗೆ ಮೊಟ್ಟೆಯನ್ನು ಅರ್ಪಿಸುತ್ತಾರೆ. ಮೊಟ್ಟೆಯನ್ನು ನೀವು ಮನೆಯಿಂದಲೂ ತರಬಹುದು. ಇಲ್ಲವಾದಲ್ಲಿ ದೇವಸ್ಥಾನದ ಕಚೇರಿಯಲ್ಲಿ ಮೊಟ್ಟೆ ಲಭ್ಯವಿದೆ. ಮೊಟ್ಟೆ ಅರ್ಪಣೆಯೂ ಎಲ್ಲಾ ದಿನಗಳಲ್ಲಿ ನಡೆಯುತ್ತದೆ.

ಇತರ ಸೇವೆಗಳು

ಇತರ ಸೇವೆಗಳು

ಇವುಗಳನ್ನು ಹೊರತುಪಡಿಸಿ ಸರ್ಪ ಬಲಿ, ಸರ್ಪಾರಾಧನೆ, ಸರ್ಪ ಪರಿವಾರ ಪೂಜೆ ಇವುಗಳೆಲ್ಲಾ ನಾಗನಿಗೆ ನಡೆಸಲಾಗುವ ವಿಶೇಷ ಪೂಜೆಗಳಾಗಿವೆ. ಮೊಟ್ಟೆ ಮಾತ್ರವಲ್ಲದೆ ಭಕ್ತರು ನಾಗನಿಗೆ ಹಳದಿ ಅನ್ನ, ಹಾಲು, ನೀರನ್ನೂ ಅರ್ಪಿಸುತ್ತಾರೆ. ದೇವಸ್ಥಾನದ ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಶ್ರೀ ಗುಡಿ ಹಾಗೂ ಗಣೇಶನ ಗುಡಿ ಇದೆ.

 ಪುರಾಣದ ಪ್ರಕಾರ

ಪುರಾಣದ ಪ್ರಕಾರ

PC:Raja Ravi Varma
ಸೀತಾ ದೇವಿಯನ್ನು ಹುಡುಕುತ್ತಿದ್ದಾಗ, ರಾಮ, ಲಕ್ಷಣ ಹಾಗೂ ಹನುಮಂತ ಇಲ್ಲಿ ಬಂದು ತಂಗಿದ್ದರು. ಅಲ್ಲಿ ಸುಬ್ರಹ್ಮಣ್ಯನಿರುವುದನ್ನು ಗುರುತಿಸಿದ ರಾಮ, ಅಲ್ಲಿ ಸುಬ್ರಹ್ಮಣ್ಯನ ವಿಗ್ರಹ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಿದ. ಹನುಮನಿಗೆ ಸುಬ್ರಹ್ಮಣ್ಯನ ವಿಗ್ರಹ ತರುವಂತೆ ಆದೇಶಿಸಿದ ಆದರೆ ಹನುಮ ಹೇಳಿದ ಸಮಯಕ್ಕೆ ಸರಿಯಾಗಿ ವಿಗ್ರಹ ತರದೇ ಇದ್ದುದರಿಂದ ರಾಮ ತನ್ನ ಕೈಯ ಬಳೆಯನ್ನು ವಿಗ್ರಹ ಪ್ರತಿಷ್ಠಾಪಿಸಬೇಕಾದ ಸ್ಥಳದಲ್ಲಿ ಪ್ರತಿಷ್ಠಾಪಿಸಿದನು. ಹನುಮಾನ್ ಕಲ್ಲಿನ ವಿಗ್ರಹವನ್ನು ಆ ಬಳೆಯ ಮೇಲೆಯೇ ಪ್ರತಿಷ್ಠಾಪಿಸಲಾಯಿತು. ಹನುಮಾನ್ ಆ ಬಳೆಯನ್ನು ತೆಗೆಯಲು ಪ್ರಯತ್ನಿಸಿದಾಗ ಬಳೆ ಒಂಚೂರು ಕದಲದೇ ಹಾಗೆಯೇ ಇರುತ್ತದೆ. ಆಗ ಬಳೆಯ ಕೆಳಗಿನಿಂದ ಸರ್ಪ ಹೊರಬಂದು ಬಳೆಯನ್ನು ತೆಗೆಯದಂತೆ ಹನುಮನಿಗೆ ಸೂಚನೆ ನೀಡುತ್ತದೆ.

ತಲುಪುವುದು ಹೇಗೆ?

ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಕೋಜಿಕೋಡ್ ವಿಮಾನ ನಿಲ್ದಾಣ ಇದು ಸುಮಾರು 110 ಕಿ.ಮೀ ದೂರದಲ್ಲಿದೆ. ಸಮೀಪದ ರೈಲು ನಿಲ್ದಾಣ ಕಣ್ಣೂರು ರೈಲು ನಿಲ್ದಾಣವಾಗಿದ್ದು ಇದು 16 ಕಿ.ಮೀ ದೂರದಲ್ಲಿದೆ. ಕಣ್ಣೂರಿನಿಂದ ಸಾಕಷ್ಟು ಬಸ್‌ ಗಳು ಲಭ್ಯಿದೆ. ಸಾಕಷ್ಟು ಖಾಸಗಿ ಬಸ್‌ಗಳೂ ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X