Search
  • Follow NativePlanet
Share
» »ಪೆಂಚ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡಿ

ಪೆಂಚ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡಿ

ಸಾತ್ಪುರಾ ಬೆಟ್ಟ ಶ್ರೇಣಿಯ ದಕ್ಷಿಣದ ಕೆಳ ಸ್ತರದಲ್ಲಿ ಪೆಂಚ್ ರಾಷ್ಟ್ರೀಯ ಉದ್ಯಾನವನವಿದೆ. ಈ ರಾಷ್ಟ್ರೀಯ ಉದ್ಯಾನಕ್ಕೆ 'ಪೆಂಚ್' ಎಂಬ ಹೆಸರು ಈ ಕಾಡಿನಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿದಿರುವ ಪೆಂಚ್ ಎಂಬ ನದಿಯಿಂದಾಗಿ ಬಂದಿದೆ.

ಅಧಿಕೃತ ಹುಲಿ ಅಭಯಾರಣ್ಯ

ಅಧಿಕೃತ ಹುಲಿ ಅಭಯಾರಣ್ಯ

PC:Nconnet

ಈ ಉದ್ಯಾನವು ಮಧ್ಯಪ್ರದೇಶದ ದಕ್ಷಿಣದ ಗಡಿಯಲ್ಲಿ ನೆಲೆಸಿದ್ದು, ಮಹಾರಾಷ್ಟ್ರ ರಾಜ್ಯಕ್ಕೆ ಹತ್ತಿರದಲ್ಲಿದೆ. 1983 ರಲ್ಲಿ ಇದನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲಾಯಿತು ಮತ್ತು 1992 ರಲ್ಲಿ ಇದು ದೇಶದ 19 ನೇಯ ಅಧಿಕೃತ ಹುಲಿ ಅಭಯಾರಣ್ಯವೆಂಬ ಮನ್ನಣೆ ಪಡೆಯಿತು.

ಪ್ರವಾಸಕ್ಕೆ ಸೂಕ್ತ

ಪ್ರವಾಸಕ್ಕೆ ಸೂಕ್ತ

PC:Rutwik Nalawade

ಮಧ್ಯಪ್ರದೇಶದ ಸಿಯೋನಿ ಮತ್ತು ಚಿಂದ್ವಾರ ಜಿಲ್ಲೆಗಳಲ್ಲಿ ನೆಲೆಗೊಂಡಿರುವ ಪೆಂಚ್ ರಾಷ್ಟ್ರೀಯ ಉದ್ಯಾನವು ವನ್ಯಜೀವಿ ಪ್ರವಾಸವನ್ನು ಯೋಜಿಸಲು ಸೂಕ್ತ ಸ್ಥಳವಾಗಿದೆ. 285 ಕ್ಕೂ ಹೆಚ್ಚು ವಲಸೆ ಮತ್ತು ವಾಸಿಸುವ ಪಕ್ಷಿಗಳಿಗೆ ನೆಲೆಯಾಗಿದೆ, ಈ ಉದ್ಯಾನವನವು ವಿವಿಧ ಕಾರಣಗಳಿಗಾಗಿ ಹೆಸರುವಾಸಿಯಾಗಿದೆ.

164 ಬಗೆಯ ಪಕ್ಷಿಗಳು

164 ಬಗೆಯ ಪಕ್ಷಿಗಳು

PC: Sabyasachi1090

ಈ ಉದ್ಯಾನವು ವೈವಿಧ್ಯಮಯ ಸಸ್ಯರಾಶಿ, ಹೂಬಳ್ಳಿಗಳು, ಗಿಡಮರಗಳ ಅಗಾಧವಾದ ಸಂಪತ್ತನ್ನೆ ಹೊಂದಿದೆ. 1200 ಕ್ಕೂ ಅಧಿಕ ಬಗೆಯ ಸಸ್ಯಗಳು, 164 ಬಗೆಯ ಪಕ್ಷಿಗಳು, 10 ಬಗೆಯ ಉಭಯವಾಸಿಗಳು, 33 ಬಗೆಯ ಸಸ್ತನಿಗಳು, 30 ಬಗೆಯ ಸರಿಸೃಪಗಳು, 50 ಬಗೆಯ ಮೀನುಗಳು ಇಲ್ಲಿ ಕಂಡುಬರುತ್ತವೆ. ಅಲ್ಲದೆ ಅಗಾಧ ಪ್ರಮಾಣದ ಕ್ರಿಮಿ ಕೀಟಗಳು ಕೂಡ ಇಲ್ಲಿ ಕಾಣಸಿಗುತ್ತವೆ. ಈ ಕಾಡೋದ್ಯಾನವು ಹೆಚ್ಚಿನ ಪ್ರಮಾಣದ ಸಸ್ಯ ಹಾಗು ಪ್ರಾಣಿ ಸಂಪತ್ತನ್ನು ಹೊಂದಿದೆ. ಹುಲಿ ಮತ್ತು ಚಿರತೆಗಳಲ್ಲದೆ ಇಲ್ಲಿ ಬ್ಲ್ಯಾಕ್ ಬಕ್, ಕಪ್ಪು ಹಿಂಗತ್ತಿನ ಮೊಲಗಳು, ಹೈನಾಗಳು, ಹಾರುವ ಅಳಿಲು, ನರಿಗಳು, ಕಾಡು ಹಂದಿಗಳು, ಮುಳ್ಳು ಹಂದಿಗಳು, ಜಾಕಾಲ್‍ಗಳು, ಚೌಸಿಂಘಾ ಮತ್ತು ನಿಲ್ಗಾಯ್‍ಗಳನ್ನೂ ಸಹ ಕಾಣಬಹುದು. ಸಾಮಾನ್ಯವಾಗಿ ಇಲ್ಲಿ ಕಂಡುಬರುವ ಪಕ್ಷಿಗಳೆಂದರೆ, ಇಂಡಿಯನ್ ಪಿಟಾಸ್, ಬಿಳಿ ಕಣ್ಣಿನ ಬಜ್ಜರ್ಡ್ಸ್, ವಾಟರ್‍ಫೊವ್ಲ್ಸ್,, ಮಲಬಾರ್ ಹಾರ್ನ್‍ಬಿಲ್, ಸ್ಟಾರ್ಕ್ಸ್, ಹಸಿರು ಪಾರಿವಾಳಗಳು ಮತ್ತು ಆಸ್ಪ್ರೇಸ್.

ಸಫಾರಿ ಸಮಯ

ಸಫಾರಿ ಸಮಯ

PC:Rashityagi

ಪೆಂಚ್ ರಾಷ್ಟ್ರೀಯ ಉದ್ಯಾನವನದಲ್ಲಿ ಮಾಡಬೇಕಾದ ಅತ್ಯುತ್ತಮ ಕೆಲಸವೆಂದರೆ ಅದು ವನ್ಯಜೀವಿ ಸಫಾರಿ . ಇದು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ಚಳಿಗಾಲ ಮತ್ತು ಬೇಸಿಗೆಯಲ್ಲಿ ಸಫಾರಿ ಸಮಯಗಳು ಬದಲಾಗುತ್ತವೆ. ಆದ್ದರಿಂದ, ಪೆಂಚ್‌ಗೆ ಪ್ರವಾಸವನ್ನು ಯೋಜಿಸುವ ಮೊದಲು ಸಫಾರಿಯ ಸಮಯವನ್ನು ಪರಿಶೀಲಿಸುವುದು ಒಳ್ಳೆಯದು. ಪ್ರವೇಶ ಮತ್ತು ನಿರ್ಗಮನ ಸಮಯಗಳು ಎರಡೂ ಸೀಸನ್‌ಗಳಲ್ಲಿ ಈ ಕೆಳಗಿನಂತಿವೆ:

ಬೇಸಿಗೆಯಲ್ಲಿ ಸಫಾರಿ: ಬೆಳಗ್ಗೆ 6.30ರ ರಿಂದ 9.30 ಹಾಗೂ ಸಂಜೆ 4 ರಿಂದ ರಾತ್ರಿ 6.30ರವರೆಗೆ ಇರುತ್ತದೆ.

ಚಳಿಗಾಲದಲ್ಲಿ ಸಫಾರಿ: ಬೆಳಗ್ಗೆ 7.30 ರಿಂದ 10.30 ಹಾಗೂ ಸಂಜೆ 3 ರಿಂದ 5.30ರವರೆಗೆ ಇರುತ್ತದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Fitindia

ಉದ್ಯಾನದಲ್ಲಿ ಬೇಸಿಗೆ ಎಪ್ರಿಲ್‌ ಋತುವಿನಲ್ಲಿ ಏಪ್ರಿಲ್‌ನಿಂದ ಪ್ರಾರಂಭವಾಗಿ ಜೂನ್‌ವರೆಗೆ ಮುಂದುವರಿಯುತ್ತದೆ. ಉದ್ಯಾನವನವು ಜುಲೈನಿಂದ ಸೆಪ್ಟೆಂಬರ್ ವರೆಗೆ ಮಳೆಗಾಲವನ್ನು ಹೊಂದಿದೆ. ಚಳಿಗಾಲವು ನವೆಂಬರ್‌ನಲ್ಲಿ ತನ್ನ ಆಗಮನವನ್ನು ಸೂಚಿಸುತ್ತದೆ ಮತ್ತು ಫೆಬ್ರವರಿಯಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ, ವರ್ಷದ ಯಾವುದೇ ಸಮಯದಲ್ಲಿ ಉದ್ಯಾನವನಕ್ಕೆ ಭೇಟಿ ನೀಡಬಹುದು ಆದರೆ ಸಾಮಾನ್ಯವಾಗಿ, ಅಕ್ಟೋಬರ್‌ನಿಂದ ಏಪ್ರಿಲ್ ವರೆಗೆ ಪೆಂಚ್‌ಗೆ ಭೇಟಿ ನೀಡಲು ಉತ್ತಮ ಸಮಯ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Fitindia

ಪೆಂಚ್ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ನಾಗ್ಪುರದ ಸೋನೆಗಾಂವ್‌ನಲ್ಲಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಉದ್ಯಾನವನದಿಂದ 92 ಕಿ.ಮೀ ದೂರದಲ್ಲಿದೆ.

ರೈಲಿನ ಮೂಲಕ ಪೆಂಚ್ ರಾಷ್ಟ್ರೀಯ ಉದ್ಯಾನವನ್ನು ತಲುಪಲು ನಾಗ್ಪುರ ರೈಲು ನಿಲ್ದಾಣವು ಅತ್ಯುತ್ತಮ ಆಯ್ಕೆಯಾಗಿದೆ. ನಿಲ್ದಾಣ ಮತ್ತು ಉದ್ಯಾನವನದ ನಡುವಿನ ಅಂತರ 92 ಕಿ.ಮೀ. ಇದೆ

ಪೆಂಚ್ ನ್ಯಾಷನಲ್ ಪಾರ್ಕ್ ನಾಗ್ಪುರಕ್ಕೆ ಎನ್ಎಚ್ 7 ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ನಾಗ್ಪುರದಿಂದ ರಸ್ತೆ ಮೂಲಕ ಪೆಂಚ್ ತಲುಪಲು 2 ಗಂಟೆ 47 ನಿಮಿಷ ತೆಗೆದುಕೊಳ್ಳುತ್ತದೆ. ಇವೆರಡರ ನಡುವಿನ ಅಂತರ 130.9 ಕಿ.ಮೀ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more