Search
  • Follow NativePlanet
Share
» » ಮಳೆಗಾಲದಲ್ಲಿ ಕೇರಳದ ಪೀರ್ಮೆಡೆ ಸೌಂದರ್ಯ ನೋಡೋದೇ ಮಜಾ

ಮಳೆಗಾಲದಲ್ಲಿ ಕೇರಳದ ಪೀರ್ಮೆಡೆ ಸೌಂದರ್ಯ ನೋಡೋದೇ ಮಜಾ

ಪೆರಿಯಾರ್ ಟೈಗರ್ ರಿಸರ್ವ್ ಮತ್ತು ಜಲಪಾತಗಳು. ಪ್ರಶಾಂತ ವಾತಾವರಣ ಮತ್ತು ರುಚಿಕರ ತಿನಿಸಿನ ಊರು ಪೀರ್ಮೆಡೆಯಲ್ಲಿ ವರ್ಷವಿಡೀ ತಂಪಾದ ವಾತಾವರಣ ಇರುತ್ತದೆ.

ಕೊಟ್ಟಾಯಂ ನ ಪೂರ್ವಕ್ಕೆ 85 ಕಿ.ಮೀ ದೂರದಲ್ಲಿರುವ ಪೀರ್ಮೆಡೆಯು ಕೇರಳದ ಪರ್ವತ ಪ್ರದೇಶಗಳಲ್ಲೇ ಅತ್ಯಂತ ಆಕರ್ಷಕವಾದದ್ದು. ಈ ಪರ್ವತವು ಪ್ರವಾಸಿಗರಿಗೆ ಟ್ರೆಕ್ಕಿಂಗ್‌ನ ಖುಷಿ ಕೊಡುತ್ತದೆ ಹಾಗೂ ಪ್ರಶಾಂತ ವಾತಾವರಣದ ಮಧುರ ಅನುಭೂತಿಯನ್ನು ನೀಡುತ್ತದೆ. ಈ ಪರ್ವತಕ್ಕೆ ಹೆಸರು ಬಂದಿದ್ದು, ಟ್ರಾವಣ್ಕೋರ್ ರಾಜಕುಟುಂಬಕ್ಕೆ ನೇರ ಸಂಪರ್ಕವನ್ನು ಹೊಂದಿದ್ದ ಸೂಫಿ ಸಂತ ಪೀರ್ ಮೊಹಮ್ಮದ್ರಿಂದ.

 ಸರ್ಕಾರಿ ಅತಿಥಿಗೃಹವಾಗಿದೆ

ಸರ್ಕಾರಿ ಅತಿಥಿಗೃಹವಾಗಿದೆ

PC: Praveenp
ಪೀರ್ಮೆಡೆಯು 915 ಮೀ. ಅಕ್ಷಾಂಶದಲ್ಲಿದೆ ಮತ್ತು ಪಶ್ಚಿಮ ಘಟ್ಟಕ್ಕೆ ಸೇರಿದೆ. ಹಿಂದೊಮ್ಮೆ ಈ ಪರ್ವತವು ರಾಜ ಕುಟುಂಬದ ಪ್ರವಾಸಿ ತಾಣವಾಗಿತ್ತು. ಇಂದಿಗೂ ಈ ಹೆಗ್ಗಳಿಕೆಯನ್ನು ಇದು ಕಾಪಾಡಿಕೊಂಡಿದೆ. ರಾಜ ಕುಟುಂಬದ ಬೇಸಿಗೆ ಕಾಲದ ಅರಮನೆಯನ್ನು ಈಗ ಸರ್ಕಾರಿ ಅತಿಥಿಗೃಹವನ್ನಾಗಿಸಲಾಗಿದೆ. ಚಹಾ, ಏಲಕ್ಕಿ, ರಬ್ಬರ್ ಮತ್ತು ಕಾಫಿ ತೋಟವು ಈ ಗುಡ್ಡದ ಸುತ್ತಲೂ ಬೆಳೆದಿರುತ್ತದೆ. ಈ ಪರ್ವತಕ್ಕೆ ದೇವರೇ ಬಂದು ಹಸಿರಿನ ಶಾಲನ್ನು ಹೊದಿಸಿದಂತೆ ನಿಮಗೆ ಭಾಸವಾದರೆ ಅಚ್ಚರಿಯಿಲ್ಲ.

ಇನ್ನಿತರ ಆಕರ್ಷಣೆಗಳು

ಇನ್ನಿತರ ಆಕರ್ಷಣೆಗಳು

PC: Visakh wiki
ಇಲ್ಲಿನ ಇನ್ನಿತರ ಆಕರ್ಷಣೆಗಳೆಂದರೆ ಪೆರಿಯಾರ್ ಟೈಗರ್ ರಿಸರ್ವ್ ಮತ್ತು ಜಲಪಾತಗಳು. ಪ್ರಶಾಂತ ವಾತಾವರಣ ಮತ್ತು ರುಚಿಕರ ತಿನಿಸಿನ ಊರು ಪೀರ್ಮೆಡೆಯಲ್ಲಿ ವರ್ಷವಿಡೀ ತಂಪಾದ ವಾತಾವರಣ ಇರುತ್ತದೆ. ಅಕ್ಷಾಂಶ ಏರಿದ ಹಾಗೆ ತಾಪಮಾನವು ನಿಧಾನವಾಗಿ ಏರುತ್ತಲೇ ಹೋಗುತ್ತದೆ. ದಟ್ಟವಾದ ಕಾಡು, ವಿಶಾಲವಾದ ಹುಲ್ಲುಗಾವಲು, ಸುಂದರವಾದ ಜಲಪಾತಗಳು ಮತ್ತು ವೈವಿಧ್ಯಮಯ ಪ್ರಾಣಿಸಂಕುಲ ಇವೆಲ್ಲವೂ ನಿಸರ್ಗಪ್ರಿಯರಿಗೆ ಅತ್ಯಂತ ಆಹ್ಲಾದಕರ ವಾತಾವರಣವನ್ನು ಒದಗಿಸುತ್ತದೆ. ಪರ್ವತದಲ್ಲಿ ಮಳೆಗಾಲವು ಭೀಕರವಾಗಿರುತ್ತದೆ.

ಆಯುರ್ವೇದಿಕ್ ಮಸಾಜ್

ಆಯುರ್ವೇದಿಕ್ ಮಸಾಜ್

PC: Soman
ಆಯುರ್ವೇದಿಕ್ ಮಸಾಜ್ ಮಾಡಿಸಿಕೊಳ್ಳುವುದಕ್ಕೆ ಪೀರ್ಮೆಡೆಗೆ ಭೇಟಿ ನೀಡಬಹುದು. ಇಲ್ಲಿ ಈ ಮಸಾಜ್ ತುಂಬಾ ಪ್ರಸಿದ್ಧವಾಗಿದೆ. ಚಹಾ, ಏಲಕ್ಕಿ ಮತ್ತು ಇತರ ಸಾಂಬಾರು ಸಾಮಗ್ರಿಗಳನ್ನು ಈ ಪ್ರದೇಶದಲ್ಲಿ ಖರೀದಿಸಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Soman
ರಸ್ತೆ ಮೂಲಕ: ಪೀರ್ಮೆಡೆಗೆ ಸಮೀಪದ ನಗರಗಳಿಂದ ರಸ್ತೆ ಸಂಪರ್ಕವನ್ನು ಹೊಂದಿದೆ. ಈ ಪರ್ವತ ಪ್ರದೇಶವನ್ನು ತಲುಪುವದಕ್ಕೆ ಬಸ್​ಒಂದೇ ಅತ್ಯಂತ ಕಡಿಮೆ ವೆಚ್ಚದ ಸಾರಿಗೆ. ಕೊಚ್ಚಿ, ತೆಕ್ಕಡಿ ಮತ್ತು ಕುಮಿಲಿಯಿಂದ ನಿರಂತರ ಬಸ್​ ಸೇವೆ ಇದೆ. ರಸ್ತೆಯ ಮೂಲಕ ಬಂದರೆ ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನು ಸವಿಯುತ್ತಲೇ ಪ್ರಯಾಣ ಮಾಡಬಹುದು.

ರೈಲಿನ ಮೂಲಕ: ಪೀರ್ಮೆಡೆಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಕೊಟ್ಟಾಯಂ. ಕೇರಳ ಮತ್ತು ಭಾರತದ ಬಹುತೇಕ ಎಲ್ಲಾ ಪ್ರಮುಖ ನಗರಗಳಿಂದ ಕೊಟ್ಟಾಯಂ ಗೆ ರೈಲು ಸಂಪರ್ಕವಿದೆ. ಚೆನ್ನೈ, ಬೆಂಗಳೂರು, ಹೈದರಾಬಾದ್​, ದೆಹಲಿ ಮತ್ತು ಮುಂಬೈ ಸೇರಿದಂತೆ ಹಲವು ನಗರಗಳಿಂದ ನಿರಂತರ ರೈಲು ಸಂಪರ್ಕವಿದೆ. ರೈಲಿನಿಂದ ಬಂದವರು ಪೀರ್ಮೆಡೆಗೆ ಬಸ್​ ಅಥವಾ ಟ್ಯಾಕ್ಸಿಯ ಮೂಲಕ ಆಗಮಿಸಬಹುದು.

ವಿಮಾನದ ಮೂಲಕ: ಪೀರ್ಮೆಡೆಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿಗೆ ದೇಶವಿದೇಶದ ಪ್ರಮುಖ ನಗರಗಳಿಂದ ವಿಮಾನ ಸಂಪರ್ಕವಿದೆ. ಕೊಚ್ಚಿಯಿಂದ ಪೀರ್ಮೆಡೆಯವರೆಗೆ ನಿರಂತರ ಬಸ್​ ಸೇವೆ ಲಭ್ಯವಿದೆ. ವಿಮಾನದ ಮೂಲಕ ಆಗಮಿಸುವ ಪ್ರವಾಸಿಗರು ಪೀರ್ಮೆಡೆಗೆ ಬಸ್​ ಅಥವಾ ಟ್ಯಾಕ್ಸಿ ಸೇವೆಯನ್ನು ವಿಮಾನ ನಿಲ್ದಾಣದಿಂದ ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X