Search
  • Follow NativePlanet
Share
» »ಪಾತಾಳಪುರಿಯಲ್ಲಿರುವ ಅಕ್ಷಯ ವಟದ ದರ್ಶನ ಪಡೆದಿದ್ದೀರಾ?

ಪಾತಾಳಪುರಿಯಲ್ಲಿರುವ ಅಕ್ಷಯ ವಟದ ದರ್ಶನ ಪಡೆದಿದ್ದೀರಾ?

ಈ ಬಾಲಿಗಿನಿಂದ 16ನೇ ಶತಮಾನದ ಭೂಗತದಲ್ಲಿರುವ ಸುಂದರವಾದ ಮಂದಿರಕ್ಕೆ ಹೋಗಲು ಸಾಧ್ಯವಾಗುತ್ತದೆ. ಇಲ್ಲಿ ಭಗವಾನ್ ವಿಷ್ಣು ಸೇರಿದಂತೆ ಇನ್ನೂ ಅನೇಕ ದೇವತೆಗಳ ಮೂರ್ತಿಗಳು ಇವೆ.

ಭಾರತದ ಪ್ರಾಚೀನ ಮಂದಿರಗಳಲ್ಲಿ ಪಾತಾಳಪುರಿ ಮಂದಿರವೂ ಒಂದು. ಇದರ ಇತಿಹಾಸ ವೇದಕಾಲದಿಂದಲೂ ಇದೆ. ಸುಂದರವಾದ ಕೆತ್ತನೆಯನ್ನು ಹೊಂದಿರುವ ಈ ಮಂದಿರ ಪಾತಾಳದಲ್ಲಿದೆ. ಇದು ಕೋಟೆಯ ಒಳಭಾಗದಲ್ಲಿದ್ದು, ಅಜರಾಮರವಾಗಿರುವ ಅಕ್ಷಯ ವಟ ಎನ್ನುವ ಆಲದ ಮರದ ಸಮೀಪದಲ್ಲಿದೆ. ಇಲ್ಲಿ ಕೂಡ ಎಲ್ಲ ದ್ವಾರಗಳಿಂದ ಪ್ರವೇಶ ನಿಷೇಧಿಸಲಾಗಿದೆ. ಆದರೆ ಪೂರ್ವ ದಿಕ್ಕಿನ ದ್ವಾರದಿಂದ ಪ್ರವೇಶ ಮಾಡಬಹುದು.

ಪಾತಾಳಪುರಿ ದೇವಸ್ಥಾನ

ಪಾತಾಳಪುರಿ ದೇವಸ್ಥಾನ

PC: Adam Jones
ಪಾತಾಳಪುರಿ ದೇವಸ್ಥಾನ ಅಲಹಾಬಾದ್ ಕೋಟೆಯಲ್ಲಿದೆ ಮತ್ತು ಅಲಹಾಬಾದ್‌ನ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಪಾತಾಳಪುರಿ ದೇವಸ್ಥಾನ, ಅಲಹಾಬಾದ್‌ನಲ್ಲಿ ಮಾತ್ರವಲ್ಲದೇ ಭಾರತದಲ್ಲಿಯೇ ಅತ್ಯಂತ ಪ್ರಸಿದ್ಧ ಮತ್ತು ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.

ದೇವತೆಗಳ ಮೂರ್ತಿಗಳು

ದೇವತೆಗಳ ಮೂರ್ತಿಗಳು

ಈ ಬಾಲಿಗಿನಿಂದ 16ನೇ ಶತಮಾನದ ಭೂಗತದಲ್ಲಿರುವ ಸುಂದರವಾದ ಮಂದಿರಕ್ಕೆ ಹೋಗಲು ಸಾಧ್ಯವಾಗುತ್ತದೆ. ಇಲ್ಲಿ ಭಗವಾನ್ ವಿಷ್ಣು ಸೇರಿದಂತೆ ಇನ್ನೂ ಅನೇಕ ದೇವತೆಗಳ ಮೂರ್ತಿಗಳು ಇವೆ. ಇದು ಪವಿತ್ರವಾದ ಸಂಗಮದ ಹತ್ತಿರವೇ ಉಪಸ್ಥಿತವಿದೆ.

ಹ್ಯೂಯೆನ್ ತ್ಸಾಂಗ್ಖೂ ಭೇಟಿ

ಹ್ಯೂಯೆನ್ ತ್ಸಾಂಗ್ಖೂ ಭೇಟಿ

ಚೈನೀಸ್ ಯಾತ್ರಾರ್ಥಿಯಾದ ಹ್ಯೂಯೆನ್ ತ್ಸಾಂಗ್ಖೂ ಕೂಡಾ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಪಾತಾಳಪುರಿ ದೇವಸ್ಥಾನ ಮತ್ತು ಸಾವಿಲ್ಲದ ಆಲದ ಮರವನ್ನು ಭೇಟಿ ಮಾಡಿದ ಬಗ್ಗೆ ತಾನು ಬರೆದ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ. ಅವರು ರಾಜ ಹರ್ಷನ ಕಾಲದಲ್ಲಿ 5ನೇ ಶತಮಾನದಲ್ಲಿ ಇಲ್ಲಿಗೆ ಭೇಟಿ ನೀಡಿದ್ದರು.

ಪ್ರಮುಖ ಪ್ರವಾಸಿ ಆಕರ್ಷಣೆ

ಪ್ರಮುಖ ಪ್ರವಾಸಿ ಆಕರ್ಷಣೆ

PC: Manojkhurana
'ಅಕ್ಷಯವಟ' ಎಂದು ಕರೆಯಲ್ಪಡುವ ಆಲದ ಮರವನ್ನು ಪವಿತ್ರ ಮರ ಎಂದು ಪರಿಗಣಿಸಲಾಗಿದೆ. ಸಾವಿಲ್ಲದ ಆಲದ ಮರವು ಇಡೀ ವಿಶ್ವವೇ ನಾಶವಾದರೂ ಸಹ ಈ ಆಲದ ಮರ ದೃಢವಾಗಿ ನಿಲ್ಲುತ್ತದೆ ಎಂದು ಹೇಳಲಾಗುತ್ತದೆ. ಅಲಹಾಬಾದ್‌ನಲ್ಲಿ ಪಾತಾಳಪುರಿ ದೇವಸ್ಥಾನ ಮತ್ತು ಸಾವಿಲ್ಲದ ಆಲದ ಮರವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ರಾಮ ಭೇಟಿ ನೀಡಿದ್ದ ದೇವಸ್ಥಾನ

ರಾಮ ಭೇಟಿ ನೀಡಿದ್ದ ದೇವಸ್ಥಾನ

PC:Oo91
ಅಕ್ಬರನ ಆಳ್ವಿಕೆಯಲ್ಲಿ, 1583 ರಲ್ಲಿ ಅಕ್ಬರನು ಅಲಹಾಬಾದ್ ಕೋಟೆಯನ್ನು ದೇವಾಲಯದ ಮೇಲೆ ನಿರ್ಮಿಸಿದನು. ಅಂದಿನಿಂದ ಈ ದೇವಾಲಯವು ಕೋಟೆಯ ಒಳಗೆ ಮತ್ತು ಕೋಟೆಯ ಕೆಳಗೆ ನೆಲೆಗೊಂಡಿದೆ. ಭಾರತೀಯ ಪುರಾಣಗಳ ಪ್ರಕಾರ, ರಾಮ ಮತ್ತು ಪ್ರಹಲದಾರು ಈ ಹಳೆಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆಂದು ಹೇಳಲಾಗುತ್ತದೆ.

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

PC: youtube

ಪಾತಾಳಪುರಿ ದೇವಸ್ಥಾನ ಮತ್ತು ಸಾವಿಲ್ಲದ ಆಲದ ಮರವನ್ನು ಪುರಾತನ ಗ್ರಂಥಗಳಲ್ಲಿ ಹೇಳಲಾಗಿದೆ. ಭಾರತೀಯ ಪುರಾಣಗಳ ಪ್ರಕಾರ, ಪ್ರಾಚೀನ ದಿನಗಳಲ್ಲಿ ಜನರು ಮೋಕ್ಷವನ್ನು ಸಾಧಿಸಲು ಈ ಆಲದ ಮರದಿಂದ ತಮ್ಮನ್ನು ಎಸೆಯುವುದನ್ನು ಇಚ್ಛಿಸುತ್ತಿದ್ದರಂತೆ.

 ಪರವಾನಗಿ ಪಡೆಯಬೇಕು

ಪರವಾನಗಿ ಪಡೆಯಬೇಕು

ಅಲಹಾಬಾದ್ ಪ್ರವಾಸದಲ್ಲಿರುವಾಗ ಪವಿತ್ರ ಪಾತಾಳಪುರಿ ದೇವಸ್ಥಾನ ಮತ್ತು ಅಕ್ಷಯವಟ ಆಲದ ಮರವನ್ನು ಭೇಟಿ ಮಾಡಲು, ಆರ್ಡಿನೆನ್ಸ್ ಡಿಪೋಟ್ ಅಥವಾ ಅಲಹಾಬಾದ್ ಪ್ರವಾಸೋದ್ಯಮ ಕಚೇರಿಯಿಂದ ಒಂದು ಪರವಾನಗಿಯನ್ನು ಪಡೆಯಬೇಕಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Yashsaboo99
ಅಲಹಾಬಾದ್‌ಗೆ ರಸ್ತೆಗಳು ಮತ್ತು ರೈಲು ಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದು. ಅಲಹಾಬಾದ್ ತಲುಪಲು ವಿಮಾನವನ್ನು ತೆಗೆದುಕೊಳ್ಳಲು ಯೋಜಿಸುವ ಪ್ರವಾಸಿಗರು ವಾರಣಾಸಿ ಮತ್ತು ಕಾನ್ಪುರದ ಗಮ್ಯಸ್ಥಾನವನ್ನು ಹೊಂದಿರುವ ವಿಮಾನವನ್ನು ತಲುಪಬೇಕು. ವಾರಣಾಸಿ ಮತ್ತು ಕಾನ್ಪುರದಿಂದ ಅಲಹಾಬಾದ್ ತಲುಪಲು ಸ್ಥಳೀಯ ವಿಧಾನಗಳ ಸಾರಿಗೆಯನ್ನು ಪಡೆಯಬಹುದು. ಉತ್ತರ ಪ್ರದೇಶದ ಅಲಹಾಬಾದ್ ಭಾರತದ ಅತ್ಯಂತ ಪವಿತ್ರ ನಗರವೆಂದು ಖ್ಯಾತಿ ಪಡೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X