Search
  • Follow NativePlanet
Share
» »ಕಲಿಯುಗದ ಅಂತ್ಯ ಯಾವಾಗ ಅನ್ನೋದನ್ನು ತಿಳಿಸುತ್ತಂತೆ ಈ ಗುಹೆಯಲ್ಲಿರುವ ಕಲ್ಲು!

ಕಲಿಯುಗದ ಅಂತ್ಯ ಯಾವಾಗ ಅನ್ನೋದನ್ನು ತಿಳಿಸುತ್ತಂತೆ ಈ ಗುಹೆಯಲ್ಲಿರುವ ಕಲ್ಲು!

ಕಲಿಯುಗದ ಅಂತ್ಯ ಯಾವಾಗ ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ ಯುಗ ಅಂತ್ಯವಾಗಲಿದೆ ಅನ್ನೋದು ಮಾತ್ರ ಗೊತ್ತು. ಈ ಕಲಿಯುಗ ಯಾವಾಗ ಅಂತ್ಯವಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ ಉತ್ತರಖಂಡದಲ್ಲಿರುವ ಗುಹೆಯೊಂದು. ಇದರ ಜೊತೆಗೆ ಗಣೇಶನ ತಲೆಯ ರಹಸ್ಯವೂ ಅಡಗಿದೆ.

ಎಲ್ಲಿದೆ ಗಣೇಶನ ತಲೆ

ಎಲ್ಲಿದೆ ಗಣೇಶನ ತಲೆ

ಹಿಂದೂ ಧರ್ಮದಲ್ಲಿ ವಿಘ್ನನಿವಾರಕ ಗಣೇಶನಿಗೆ ಮೊದಲ ಸ್ಥಾನ ನೀಡಲಾಗುತ್ತದೆ. ಗಣೇಶನಿಗೆ ಸಂಬಂಧಿಸಿದ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಶಿವನು ಕೋಪದಲ್ಲಿ ಗಣೇಶನ ತಲೆಯನ್ನು ಬೇರ್ಪಡಿಸಿದ್ದ ಎನ್ನಲಾಗುತ್ತದೆ. ದೇವಿ ಪಾರ್ವತಿಯ ಕೋರಿಕೆಯ ಮೇರೆಗೆ ಗಣೇಶನಿಗೆ ಆನೆಯ ತಲೆಯನ್ನು ಇಡುವಂತಾಯಿತು. ಆದರೆ ಗಣೇಶನ ತಲೆಯನ್ನು ಶಿವನು ಒಂದು ಗುಹೆಯೊಳಗೆ ಇಟ್ಟಿದ್ದನಂತೆ.

ಈ ಸಿನಿಮಾಗಳೆಲ್ಲಾ ಎಲ್ಲೆಲ್ಲಿ ಶೂಟಿಂಗ್ ಆಗಿವೆ ಗೊತ್ತಾ?ಈ ಸಿನಿಮಾಗಳೆಲ್ಲಾ ಎಲ್ಲೆಲ್ಲಿ ಶೂಟಿಂಗ್ ಆಗಿವೆ ಗೊತ್ತಾ?

 ಆದಿಗಣೇಶ

ಆದಿಗಣೇಶ

ಗಣೇಶನ ತಲೆ ಇರುವ ಈ ಸ್ಥಳವನ್ನು ಪಾತಾಳ ಭುವನೇಶ್ವರ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಈ ಸ್ಥಳದಲ್ಲಿರುವ ಗಣೇಶನ ಮೂರ್ತಿಯನ್ನು ಆದಿಗಣೇಶ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

ಪಾತಾಳ ಭುವನೇಶ್ವರ ಗುಹಾ ಮಂದಿರ

ಪಾತಾಳ ಭುವನೇಶ್ವರ ಗುಹಾ ಮಂದಿರ

PC: Jaiambey

ಉತ್ತರಖಂಡದಲ್ಲಿರುವ ಪಿತೌರ್‌ಘಡ್‌ನಲ್ಲಿರುವ ಪಾತಾಳ ಭುವನೇಶ್ವರ ಗುಹಾ ಮಂದಿರವು ಭಕ್ತರ ಶ್ರದ್ಧೆಯ ಕೇಂದ್ರವಾಗಿದೆ. ಈ ಗುಹೆಯು 160ಮೀ ಉದ್ದ ಹಾಗೂ 90 ಫೀಟ್ ಎತ್ತರವಿದೆ. ಈ ಗುಹೆಯ ಅನ್ವೇಷಣೆಯನ್ನು ಆದಿಶಂಕರಾಚಾರ್ಯರು ಮಾಡಿದ್ದರು ಎನ್ನಲಾಗುತ್ತದೆ.

ಕಲ್ಲು ತಿಳಿಸುತ್ತೆ ಕಲಿಯುಗದ ಆಂತ್ಯ

ಕಲ್ಲು ತಿಳಿಸುತ್ತೆ ಕಲಿಯುಗದ ಆಂತ್ಯ

PC: Lalitgupta isgec

ಕಲಿಯುಗದ ಅಂತ್ಯ ಯಾವಾಗ ಆಗುತ್ತದೆ ಎನ್ನುವುದನ್ನು ಕಲ್ಲೊಂದು ಹೇಳುತ್ತದಂತೆ. ಈ ಗುಹೆಯಲ್ಲಿ ನಾಲ್ಕು ಯುಗಗಳ ಪ್ರತೀಕವಾಗಿರುವ ಕಲ್ಲು ಇದೆ. ಇದರಲ್ಲಿ ಒಂದು ಕಲಿಯುಗದ ಪ್ರತೀಕ ಎನ್ನಲಾಗುತ್ತತೆ. ಅದು ಕ್ರಮೇಣ ಮೇಲೇಳುತ್ತಿದೆಯಂತೆ. ಯಾವಾಗ ಈ ಕಲ್ಲು ಗೋಡೆಗೆ ಬಡಿಯುತ್ತೋ ಅಂದು ಕಲಿಯುಗದ ಅಂತ್ಯವಾಗುತ್ತದೆ ಎನ್ನಲಾಗುತ್ತದೆ.

ಈ ದೇವಾಲಯದಲ್ಲಿ ಮಂಗಳಸೂತ್ರ ಅರ್ಪಿಸಿದ್ರೆ ಕಂಕಣ ಭಾಗ್ಯ ಕೂಡಿ ಬರುತ್ತಂತೆ!ಈ ದೇವಾಲಯದಲ್ಲಿ ಮಂಗಳಸೂತ್ರ ಅರ್ಪಿಸಿದ್ರೆ ಕಂಕಣ ಭಾಗ್ಯ ಕೂಡಿ ಬರುತ್ತಂತೆ!

108 ದಳಗಳ ಬ್ರಹ್ಮಕಮಲ

108 ದಳಗಳ ಬ್ರಹ್ಮಕಮಲ

PC:T G Santosh

ಪಾತಾಳ ಭುವನೇಶ್ವರ ಗುಹೆಯಲ್ಲಿರುವ ತುಂಡಾದ ಗಣೇಶನ ಮೂರ್ತಿಯ ಮೇಲೆ 108 ದಳಗಳ ಬ್ರಹ್ಮಕಮಲವಿದೆ. ಈ ಬ್ರಹ್ಮ ಕಮಲದಿಂದ ನೀರು ಶಿಲಾ ಮೂರ್ತಿ ಗಣೇಶನ ತಲೆಗೆ ಬೀಳುತ್ತಿರುತ್ತದೆ. ಈ ಹನಿಗಳು ಗಣೇಶನ ಮುಖದ ಮೇಲೆ ಬೀಳುತ್ತಿರುವಂತೆ ಕಾಣಿಸುತ್ತದೆ. ಈ ಬ್ರಹ್ಮಕಮಲವನ್ನು ಶಿವನೇ ಸ್ಥಾಪಿಸಿರುವುದಾಗಿ ಹೇಳಲಾಗುತ್ತದೆ

ಕೇದಾರನಾಥ, ಬದ್ರಿನಾಥ ಹಾಗೂ ಅಮನಾಥ

ಕೇದಾರನಾಥ, ಬದ್ರಿನಾಥ ಹಾಗೂ ಅಮನಾಥ

PC: Lalitgupta isgec

ಇಲ್ಲಿ ಕೇದಾರನಾಥ, ಬದ್ರಿನಾಥ ಹಾಗೂ ಅಮನಾಥನ ದರ್ಶನವೂ ಆಗುತ್ತದೆ. ಬದ್ರಿನಾಥ್‌ನಲ್ಲಿ ಬದ್ರಿ ಪಂಚಾಯತ್‌ ಶಿಲಾರೂಪದ ಮೂರ್ತಿ ಇದೆ. ಇದರಲ್ಲಿ ಯಮ-ಕುಬೇರ, ವರುಣ, ಲಕ್ಷ್ಮೀ, ಗಣೇಶ ಹಾಗೂ ಗರುಡ ಕೂಡಾ ಇದ್ದಾರೆ. ತಕ್ಷಕ್ ನಾಗ ಆಕೃತಿ ಕೂಡಾ ಈ ಗುಹೆಯಲ್ಲಿರುವ ಬಂಡೆಗಳ ಮೇಲೆ ಇದೆ. ಇದರ ಮೇಲೆ ಬಾಬಾ ಅಮರನಾಥನ ಗುಹೆ ಇದೆ. ಇಲ್ಲಿ ದೊಡ್ಡ ದೊಡ್ಡ ಬಂಡೆಗಳಿವೆ ಇದೇ ಗುಹೆಯಲ್ಲಿ ಕಾಲಬೈರವನ್ ನಾಲಿಗೆಯ ದರ್ಶನವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X