Search
  • Follow NativePlanet
Share
» »ಪಾರ್ವತಿಯ ಹೆಸರನ್ನಿಟ್ಟುಕೊಂಡ ಬೆಟ್ಟದ ಕಥೆ

ಪಾರ್ವತಿಯ ಹೆಸರನ್ನಿಟ್ಟುಕೊಂಡ ಬೆಟ್ಟದ ಕಥೆ

By Vijay

ಈ ಬೆಟ್ಟವು ನಿಜಕ್ಕೂ ಒಂದು ಅದ್ಭುತ ಹಾಗೂ ನಗರದ ಜನರಿಗೆ ದಣಿವಾರಿಸುವ, ವಿಶ್ರಾಂತಿ ನೀಡುವ ಅಷ್ಟೆ ಏಕೆ ನಗರದ ಹೃದಯ ಸೆಳೆವಂತಹ ಪಾಕ್ಷಿಕ ನೋಟ ಕರುಣಿಸುವ ಅದ್ಭುತ ತಾಣವಾಗಿದೆ. ಇದರ ಇನ್ನೊಂದು ವಿಶೆಷತೆಯೆಂದರೆ ಇದು ಪ್ರಸಿದ್ಧ ಹಾಗೂ ಮಹಾನಗರವೊಂದರ ಬಳಿಯೆ ಇದ್ದರೂ ಇದು ಅದರಿಂದ ಪ್ರತ್ಯೇಕವಾಗಿ ಪ್ರಶಾಂತವಾದ ಸ್ಥಳದಲ್ಲಿ ನೆಲೆಸಿರುವುದು ವಿಶೇಷ. ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಮ್ಜೆ ಸಮಯ ಇಲ್ಲಿಗೆ ಜನರು ಭೇಟಿ ನೀಡೇನೀಡುತ್ತಾರೆ. ಇಲ್ಲಿನೆ ಸೂರ್ಯೋದಯ ಹಾಗೂ ಸೂರ್ಯಾಸ್ತಗಳು ನವಚೈತನ್ಯವನ್ನುಂಟು ಮಾಡುತ್ತವೆ.

ಇವು ಪುಣೆಯ ಪ್ರವಾಸಿ ಆಕರ್ಷಣೆಗಳು, ಒಮ್ಮೆನೋಡಿ, ಹೋಗಲು ನೀವು ಈಗಲೇ ಸಿದ್ಧ!

ಸಮುದ್ರ ಮಟ್ಟದಿಂದ 2100 ಅಡಿಗಳಷ್ಟು ಎತ್ತರದಲ್ಲಿದ್ದರೆ, ನಗರ ಪ್ರದೇಶದ ಭೂಮಟ್ಟದಿಂದ 260 ಅಡಿಗಳಷ್ಟು ಎತ್ತರದಲ್ಲಿದೆ. ಏನಿಲ್ಲವೆಂದರೂ ಈ ಬೆಟ್ಟ ತಲುಪಲು ಬರೋಬ್ಬರಿ 103 ದೊಡ್ಡದಾದ ಮೆಟ್ಟಿಲುಗಳನ್ನು ಏರಬೇಕು. ಈ ದೃಷ್ಟಿಯಿಂದಲೆ ಇದು ಸಾಕಷ್ಟು ಜನಪ್ರೀಯವಾಗಿದೆ. ಏಕೆಂದರೆ ತಮ್ಮ ಶರೀರವನ್ನು ಸದೃಢ ಹಾಗೂ ಆರೋಗ್ಯದಿಂದಿಡುವ ಜನರಿಗೆ ಈ ಬೆಟ್ಟ ಏರಿ ಕೊಂಚ ನಿವಾರಿಸಿಕೊಂಡು ಮತ್ತೆ ಇಳಿಯುವುದು ಒಂದು ಉತ್ತಮ ವ್ಯಾಯಾಮವಾಗಿದೆ. ಹಾಗಾಗಿಯೆ ಸಾಕಷ್ಟು ನಗರದ ಜನರು ಬೆಳಿಗ್ಗೆ ಹಾಗೂ ಸಂಜೆಯ ವೇಳೆಗೆ ಈ ಬೆಟ್ಟಕ್ಕೆ ಭೇಟಿ ನೀಡುವ ಖಾಯಂ ಗಿರಾಕಿಗಳಾಗಿದ್ದಾರೆ.

ಪಾರ್ವತಿಯ ಹೆಸರನ್ನಿಟ್ಟುಕೊಂಡ ಬೆಟ್ಟದ ಕಥೆ

ಚಿತ್ರಕೃಪೆ: Siddhesh Nampurkar

ಅಲ್ಲದೆ ಮಾಹಿತಿ ತಂತ್ರಜ್ಞಾನದಲ್ಲೂ ಮಂಚೂಣಿಯಲ್ಲಿರುವ ಈ ಮಹಾನಗರಕ್ಕೆ ಭೆಟಿ ನೀಡುವ ಪ್ರವಾಸಿಗರು ಈ ಬೆಟ್ಟಕ್ಕೆ ಭೇಟಿ ನೀಡದೆ ಮರಳಲಾರರು. ಅಷ್ಟೊಂದು ಹೆಸರುವಾಸಿಯಾಗಿದೆ ಈ ಬೆಟ್ಟ. ಇದನ್ನು ಪಾರ್ವತಿ ಬೆಟ್ಟವೆಂದೆ ಕರೆಯುತ್ತಾರೆ. ಹಿಂದೊಮ್ಮೆ ಇಲ್ಲಿ ದೇವಿಯ ಒಂದು ಸನ್ನಿಧಿಯಿದ್ದು ಆ ದೇವಿಯ ಮಹಿಮೆಯಿಂದ ಪ್ರದೇಶದ ರಾಜಮಾತೆಗೆ ದೈಹಿಕ ಬಾಧೆಯ ನಿವಾರಣೆಯಾಗಿ, ಅವಳು ಇದನ್ನು ಪಾರ್ವತಿ ದೇವಿಯ ಮಹಿಮೆಯೆಂದೆ ಬಗೆದು ಪಾರ್ವತಿಯ ದೇವಾಲಯ ನಿರ್ಮಿಸಿ ನಂತರ ಇದು ಪಾರ್ವತಿ ಬೆಟ್ಟ ಎಂಬ ಹೆಸರನ್ನೆ ಪಡೆಯಿತು ಎನ್ನಲಾಗುತ್ತದೆ.

ಪಾರ್ವತಿಯ ಹೆಸರನ್ನಿಟ್ಟುಕೊಂಡ ಬೆಟ್ಟದ ಕಥೆ

ಚಿತ್ರಕೃಪೆ: Yohannvt

ಹೌದು, ಇದು ಪಾರ್ವತಿ ಬೆಟ್ಟ. ಈ ಬೆಟ್ಟದ ಮೇಲೆ ಪಾರ್ವತಿ ದೇವಿಗೆ ಮುಡಿಪಾದ ಸುಂದರವಾದ ದೇವಾಲಯವಿದೆ. ಕೇವಲ ಪಾರ್ವತಿಯಲ್ಲದೆ ಇತರೆ ದೇವರುಗಳಿಗೆ ಮುಡಿಪಾದ ಕೆಲವು ಸುಂದರವಾದ ಹಾಗೂ ಪ್ರಸಿದ್ಧವಾದ ದೇವಾಲಯಗಳೂ ಸಹ ನೆಲೆಸಿವೆ. ಈ ಬೆಟ್ಟವಿರುವುದು ಮಹಾರಾಷ್ಟ್ರದ ಪುಣೆ ನಗರದಲ್ಲಿ. ನಗರಕೇಂದ್ರದಿಂದ ಕೆಲವು ಕಿ.ಮೀ ದೂರದಲ್ಲಿದ್ದು ಸ್ವರ್ ಗೇಟ್ ಇದಕ್ಕೆ ಹತ್ತಿರದಲ್ಲಿರುವ ಬಸ್ಸು ನಿಲ್ದಾಣ. ಇಲ್ಲಿಂದ ನಿರಾಯಸವಾಗಿ ರಿಕ್ಷಾಗಳು ಪಾರ್ವತಿ ಬೆಟ್ಟಕ್ಕೆ ತಲುಪಲು ದೊರೆಯುತ್ತವೆ.

ಪಾರ್ವತಿಯ ಹೆಸರನ್ನಿಟ್ಟುಕೊಂಡ ಬೆಟ್ಟದ ಕಥೆ

ರಾತ್ರಿಯಲ್ಲಿ ಪುಣೆ ನಗರ ಕಾಣುವ ರೀತಿ, ಚಿತ್ರಕೃಪೆ: borkarabhijeet05

ಪಾರ್ವತಿ ಬೆಟ್ಟದ ಹಿನ್ನಿಲೆಯು ಈ ರೀತಿಯಾಗಿದೆ. ಈ ಬೆಟ್ಟವು ಶಿವಾಜಿ ಮಹಾರಾಜನ ಕಾಲದಿಂದಲೂ ಪ್ರ್ಅಚಲಿತವಾಗಿದ್ದರೂ ಪುಣೆಯ ಪೇಶ್ವೆಗಳ ಸಮಯದಲ್ಲಿ ಸಾಕಷ್ಟು ಜನಪ್ರೀಯಗೊಂಡಿತು ಎಂದು ಹೇಳಬಹುದಾಗಿದೆ. ಕೆಲವು ಐತಿಹಾಸಿಕ ದಾಖಲೆಗಳ ಪ್ರಕಾರವಾಗಿ, ಮೂರನೇಯ ಪೇಶ್ವೆಯಾದ ಶ್ರೀಮಂತ್ ನಾನಾ ಸಾಹೇಬ್ ತನ್ನ ತಾಯಿಯ ಇಚ್ಛೆಯ ಅನುಸಾರವಾಗಿ ಇಲ್ಲಿ ದೇವಾಲಯ ನಿರ್ಮಿಸಿದ ಎನ್ನಲಾಗುತ್ತದೆ.

ಪಾರ್ವತಿಯ ಹೆಸರನ್ನಿಟ್ಟುಕೊಂಡ ಬೆಟ್ಟದ ಕಥೆ

ಕಾರ್ತಿಕೇಯನ ದೇವಾಲಯ, ಚಿತ್ರಕೃಪೆ: romana klee

ನಾನಾ ಸಾಹೇಬನ ತಾಯಿಯಾಗಿದ್ದ ಕಾಶಿಬಾಯಿಗೆ ಒಂದೊಮ್ಮೆ ಕಾಲಿನ ತೀವ್ರವಾದ ಸಮಸ್ಯೆಯುಂಟಾಗಿತ್ತು. ಸಾಕಷ್ಟು ಉಪಚರಿಸಿಕೊಂಡರೂ ಯಾವ ಪ್ರಯೋಜನವೂ ಆಗಿರಲಿಲ್ಲ. ಹೀಗಿರುವಾಗ ರಾಜ ಮಾತೆಯ ಹಿತಬಯಸುವವರೊಬ್ಬರು ಪುಣೆ ನಗರದ ದಕ್ಷಿಣದ ಬೆಟ್ಟದ ಮೇಲಿರುವ ದೇವಿಯ ಉಪಸ್ಥಿತಿಯ ಕುರಿತು ಹಾಗೂ ಆ ಸ್ಥಳದ ಮಹಿಮೆಯ ಕುರಿತು ತಿಳಿಸಿದರು.

ಪಾರ್ವತಿಯ ಹೆಸರನ್ನಿಟ್ಟುಕೊಂಡ ಬೆಟ್ಟದ ಕಥೆ

ಬೆಟ್ಟದ ಮೇಲಿರುವ ವಿಠ್ಠಲ-ರುಕ್ಮಿಣಿ ದೇವಾಲಯ, ಚಿತ್ರಕೃಪೆ: Tehniyatshaikh

ತಕ್ಷಣವೆ ರಾಜಮಾತೆ, ಆ ಬೆಟ್ಟಕ್ಕೆ ಭೇಟಿ ನೀಡಿ ಆ ದೇವಿಯನ್ನು ಕುರಿತು ಸಮಸ್ಯೆಯನ್ನು ಹೋಗಲಾಡಿಸು ಎಂದೂ ಅದಕ್ಕಾಗಿ ತಾವು ದೇವಿಗೆ ಒಂದು ದೊಡ್ಡ ದೇವಾಲಯ ನಿರ್ಮಾಣ ಮಾಡುವುದಾಗಿಯೂ ಹರಕೆ ಹೊತ್ತುಕೊಂಡಳು. ಪವಾಡವೆಂಬಂತೆ ರಾಜಮಾತೆಗೆ ಗುಣಮುಖವಾಯಿತು. ಕೊಟ್ಟ ಮಾತನ್ನು ಉಳಿಸಿಕೊಂಡ ಮಾತೆ ತನ್ನ ಮಗನಿಂದ ಇಲ್ಲಿ ದೇವಾಲಯ ನಿರ್ಮಿಸಿದಳು.

ಪಾರ್ವತಿಯ ಹೆಸರನ್ನಿಟ್ಟುಕೊಂಡ ಬೆಟ್ಟದ ಕಥೆ

ಪೇಶ್ವೆ ಸಂಗ್ರಹಾಲಯ, ಚಿತ್ರಕೃಪೆ: Tehniyatshaikh

ಇನ್ನೊಂದು ಕಥೆಯಂತೆ, ಛತ್ರಪತಿ ಶಾಹು ಮಾಹಾರಾಜರಿಗೆ ಮಗನಂತೆ ಇದ್ದ ನಾನಾ ಸಾಹೇಬರು ಶಾಹು ಮಹಾರಾಜರ ನಿಧನದ ನಂತರ ಅವರ ಖಾಂಡ್ವಾ (ಕಟ್ಟಿಗೆಯ ಚಪ್ಪಲಿಗಳು) ಗಳನ್ನು ತೆಗೆದುಕೊಂಡು ಬಂದು ಇಲ್ಲಿದ್ದ ಶಿವಲಿಂಗ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಇದನ್ನು ದೇವದೇವೇಶ್ವರ ಎಂದು ಕರೆದರು. ಹೀಗಾಗಿ ಪಾರ್ವತಿ ಬೆಟ್ಟದ ಮೇಲೆ ದೇವದೇಶ್ವರನ ದೇವಾಲಯವನ್ನೂ ಸಹ ನೋಡಬಹುದಾಗಿದೆ.

ಪುಣೆಯಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳಗಳು

ಇನ್ನುಳಿದಂತೆ ಇಲ್ಲಿ ವಿಷ್ಣುವಿನ ದೇವಾಲಯ, ಕಾರ್ತಿಕೇಯನ ದೇವಾಲಯ ಹಾಗೂ ವಿಠ್ಠಲ-ರುಕ್ಮಿಣಿಯರಿಗೆ ಮುಡಿಪಾದ ದೇವಾಲಯಗಳನ್ನೂ ಸಹ ಕಾಣಬಹುದಾಗಿದೆ. ಅಲ್ಲದೆ ಪೇಶ್ವೆ ಸಂಗ್ರಹಾಲಯ ಇಲ್ಲಿನ ಮತ್ತೊಂದು ಆಕರ್ಷಣೆ. ಪೇಶ್ವೆಗಳು ಬಳಸುತ್ತಿದ್ದ ಹಲವು ಪುರಾತನ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಪಾರ್ವತಿ ಬೆಟ್ಟಕ್ಕೆ ಪ್ರವೇಶಿಸಲು ದ್ವಾರವಿದ್ದು ಇದು ವಾರದ ಎಲ್ಲ ಸಮಯ ಬೆಳಿಗ್ಗೆ 5 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ತೆರೆದಿರುತ್ತದೆ.

ಪುಣೆಗಿರುವ ರೈಲುಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X