Search
  • Follow NativePlanet
Share
» »ಪರಶುರಾಮ ಕೊಡಲಿಯಿಂದ ಬಂಡೆಯನ್ನು ಕಡಿದು ನಿರ್ಮಿಸಿದ ದೇವಾಲಯ ಇದು

ಪರಶುರಾಮ ಕೊಡಲಿಯಿಂದ ಬಂಡೆಯನ್ನು ಕಡಿದು ನಿರ್ಮಿಸಿದ ದೇವಾಲಯ ಇದು

ಪರಶುರಾಮನ್ನು ವಿಷ್ಣುವಿನ ಆರನೇ ಅವತಾರ ಎನ್ನಲಾಗುತ್ತದೆ. ಪುರಾಣದ ಪ್ರಕಾರ ಶಿವ ನೀಡಿದ ಪರಶುವಿನಿಂದಾಗಿ ಪರಶುರಾಮ ಎನ್ನುವ ಹೆಸರು ಬಂದಿದೆ. ಋಷಿ ಜಮದಗ್ನಿಯ ಮನೆಯಲ್ಲಿ ರೇಣುಕಾ ದೇವಿಯ ಹೊಟ್ಟೆಯಲ್ಲಿ ಜನಿಸಿದಾತನೇ ಪರಶುರಾಮ.

ಗೋವಾದಲ್ಲಿ ಪಾರ್ಟಿ ಮಾಡೋಕೆ ಎಲ್ಲಿಗೆ ಹೋಗ್ಬೇಕು ಗೊತ್ತಿಲ್ವಾ...ಗೋವಾದಲ್ಲಿ ಪಾರ್ಟಿ ಮಾಡೋಕೆ ಎಲ್ಲಿಗೆ ಹೋಗ್ಬೇಕು ಗೊತ್ತಿಲ್ವಾ...

ಈತ ಶಸ್ತ್ರವಿದ್ಯೆಗಳಲ್ಲಿ ಬಲು ಪರಿಣಿತನು. ಪರಶುರಾಮ ಕರ್ಣ, ದ್ರೋಣ ಹಾಗೂ ಬೀಷ್ಮನಿಗೂ ಶಸ್ತ್ರವಿದ್ಯೆ ಕಲಿಸಿಕೊಟ್ಟಿದ್ದಾನೆ. ಪುರಾಣದಲ್ಲಿ ಪರಶುರಾಮನಿಗೆ ಸಂಬಂಧಿಸಿದ ಅನೇಕ ಕಥೆಗಳಿವೆ. ಇಂದು ನಾವು ಹೇಳ ಹೊರಟಿರುವ ಕಥೆ ಪರಶುರಾಮ ತನ್ನ ಕೊಡಲಿಯಿಂದ ದೊಡ್ಡ ಬಂಡೆಗಲ್ಲನ್ನು ಕಡಿದು ನಿರ್ಮಿಸಿದ ದೇವಾಲಯದ ಬಗ್ಗೆ...ಅಲ್ಲಿ ತಪಸ್ಸನ್ನು ಮಾಡಿದ್ದನು.

ಪರಶುರಾಮ ಗುಹಾ ಮಂದಿರ

ಪರಶುರಾಮ ಗುಹಾ ಮಂದಿರ

PC- Nkansara

ರಾಜಸ್ಥಾನ ಅರಾವಳಿ ಬೆಟ್ಟಗಳ ನಡುವೆ ಇರುವ ಈ ಪರಶುರಾಮ ಮಹಾದೇವ ಮಂದಿರವನ್ನು ಹಿಂದೂಗಳ ತೀರ್ಥ ಸ್ಥಳ ಎನ್ನಲಾಗುತ್ತದೆ. ಪರಶುರಾಮ ತನ್ನ ಕೊಡಲಿಯಿಂದ ದೊಡ್ಡ ಬಂಡೆಯನ್ನು ಕಡಿದು ಈ ಗುಹಾ ದೇವಾಲಯವನ್ನು ನಿರ್ಮಿಸಿದ್ದನು. ಶಿವನನ್ನು ಆಹ್ವಾನ ಮಾಡಲು ಕಠೋರ ತಪ್ಪಸ್ಸು ಮಾಡಿದ್ದು ಇಲ್ಲೇ ಎನ್ನಲಾಗುತ್ತದೆ.

500 ಮೆಟ್ಟಿಲು ಹತ್ತಬೇಕು

500 ಮೆಟ್ಟಿಲು ಹತ್ತಬೇಕು

PC- Nkansara

ಬೆಟ್ಟದ ಮೇಲಿರುವ ಈ ಗುಹಾ ಮಂದಿರವನ್ನು ತಲುಪಲು 500 ಮೆಟ್ಟಿಲುಗಳನ್ನು ಹತ್ತಬೇಕು. ಸಮುದ್ರಮಟ್ಟದಿಂದ ಸುಮಾರು 2600 ಫೀಟ್ ಎತ್ತರದಲ್ಲಿದೆ ಈ ಮಂದಿರ. ಈ ಮಂದಿರದ ಒಳಗೆ ಶಿವನು ಲಿಂಗದ ರೂಪದಲ್ಲಿ ಆಸೀನನಾಗಿದ್ದಾನೆ. ಶಿವಲಿಂಗದ ಮೇಲೆ ಗೋವಿನ ಮುಖವಿದೆ. ಅಲ್ಲಿಂದ ಪ್ರಾಕೃತಿಕ ರೂಪದಲ್ಲಿ ಶಿವಲಿಂಗದ ಮೇಲೆ ಜಲಾಭಿಷೇಕ ಆಗುತ್ತದೆ. ಇಲ್ಲಿಂದ ಕೆಲವೇ ಕಿ.ಮಿ ದೂರದಲ್ಲಿ ಮಾತೃಕುಂಡ ಹೆಸರಿನ ಒಂದು ಸ್ಥಳವಿದೆ. ಮಾತೃಹತ್ಯೆಯ ಪಾಪದಿಂದ ಪರಶುರಾಮನಿಗೆ ಮುಕ್ತಿ ಸಿಕ್ಕಿದ್ದು ಇಲ್ಲೇ ಎನ್ನಲಾಗುತ್ತದೆ.

ಗುಹಾ ಮಂದಿರಕ್ಕೆ ಸಂಬಂಧಿಸಿದ್ದು

ಗುಹಾ ಮಂದಿರಕ್ಕೆ ಸಂಬಂಧಿಸಿದ್ದು

PC- Raja Ravi Varma

ಪರಶುರಾಮನ ಈ ಗುಹಾ ಮಂದಿರಕ್ಕೆ ಸಂಬಂಧಿಸಿದಂತೆ ಹಲವು ಧಾರ್ಮೀಕ ಮಾನ್ಯತೆಗಳಿವೆ. ಈ ಶಿವಲಿಂಗದ ಕೆಳಗೆ ಒಂದು ರಂಧ್ರವಿದೆ ಅದರೊಳಗೆ ಎಷ್ಟು ಕೊಡ ನೀರು ಹಾಕಿದರೂ ಅದು ತುಂಬೊದಿಲ್ಲ. ಹಾಗೆಯೇ ಹಾಲಿನ ಅಭಿಷೇಕ ಮಾಡಿದ್ರೆ ಹಾಲು ರಂಧ್ರದ ಒಳಗೆ ಹೋಗೋದೇ ಇಲ್ಲ. ಇದೇ ಸ್ಥಳದಲ್ಲಿ ಪರಶುರಾಮ ಕರ್ಣನಿಗೆ ಶಸ್ತ್ರಾಭ್ಯಾಸ ನಡೆಸಿದ್ದ ಎನ್ನಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC- Shuklamayank330

ಪರಶುರಾಮನ ಈ ಗುಹಾ ಮಂದಿರವು ಕುಂಬಲ್‌ಗಡ್ ಕೋಟೆಯ ಸುಮಾರು ೯ ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸಮೀಪದ ಏರ್‌ಪೋರ್ಟ್ ಎಂದರೆ ಉದಯ್‌ಪುರ್ ಏರ್‌ಪೋರ್ಟ್. ರಾಣಿ ರೈಲ್ವೆ ಸ್ಟೇಶನ್‌ ಇಂದಲೂ ಇಲ್ಲಿಗೆ ತಲುಪಬಹುದು. ರಾಜಸಂಮದ ಜಿಲ್ಲೆಯಲ್ಲಿ ಈ ಮಂದಿರವಿದೆ. ಉದಯ್‌ಪುರದಿಂದ ಇಲ್ಲಿಗೆ ಬಸ್ ಅಥವಾ ಟ್ಯಾಕ್ಸಿಯಿಂದಲೂ ತಲುಪಬಹುದು.

Read more about: india travel temple rajasthan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X