Search
  • Follow NativePlanet
Share
» »ಈ ದೇವಸ್ಥಾನದ ಒಳಗೆ ನಾಯಿಗಳಿಗಿದೆ ಪ್ರವೇಶ, ಮಾಂಸಾಹಾರವೇ ನೈವೇದ್ಯ

ಈ ದೇವಸ್ಥಾನದ ಒಳಗೆ ನಾಯಿಗಳಿಗಿದೆ ಪ್ರವೇಶ, ಮಾಂಸಾಹಾರವೇ ನೈವೇದ್ಯ

ನಮ್ಮ ದೇಶದಲ್ಲಿ ಅನೇಕ ದೇವಾಲಯಗಳಿವೆ. ಒಂದೊಂದು ದೇವಸ್ಥಾನಕ್ಕೆ ಒಂದೊಂದು ವಿಶೇಷತೆಗಳಿವೆ. ಇಂದು ನಾವು ಹೇಳ ಹೊರಟಿರುವುದು ಕೇರಳದ ಒಂದು ಪ್ರಸಿದ್ಧ ಹಾಗೂ ವಿಶೇಷ ದೇವಾಲಯದ ಬಗ್ಗೆ. ಅದುವೇ ಪರಸಿನ ಕಡವು ಮುತ್ತಪ್ಪನ ದೇವಾಲಯ.

ಕೇರಳದ ಮುತ್ತಪ್ಪನ ದೇವಾಲಯ

ಕೇರಳದ ಮುತ್ತಪ್ಪನ ದೇವಾಲಯ

PC: Sreelalpp

ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ತಲಿಪರಂಪರಂಬ ಎನ್ನುವ ಪ್ರದೇಶದಿಮದ ಸುಮಾರು 10 ಕಿ.ಮೀ ದೂರದಲ್ಲಿ ಈ ಪರಸಿನ ಕಡವು ಮುತ್ತಪ್ಪನ ದೇವಾಲಯವಿದೆ.

ಮುತ್ತಪ್ಪನ ದೇವಾಲಯ

ಮುತ್ತಪ್ಪನ ದೇವಾಲಯ

PC:Dexsolutions

ದೇವಾಲಯದ ಆಚರಣೆಗಳು ಅನನ್ಯವಾಗಿದ್ದು, ಕೇರಳದ ಇತರ ಹಿಂದೂ ದೇವಸ್ಥಾನಗಳಲ್ಲಿನಂತೆ, ಇದು ಸಾತ್ವಿಕ್ ಬ್ರಾಹ್ಮಣರ ಆರಾಧನೆಯನ್ನು ಅನುಸರಿಸುವುದಿಲ್ಲ. ಮುತ್ತಪ್ಪಾನ್ ಥೆಯ್ಯಮ್ ಎನ್ನುವ ಸಾಂಪ್ರದಾಯಿಕ ನೃತ್ಯದ ಮೂಲಕ ಮುತ್ತಪ್ಪಾನ್ ನ ಎರಡೂ ಆವೃತ್ತಿಗಳ ಧಾರ್ಮಿಕ ಕಾರ್ಯವಿಧಾನವಾಗಿದೆ ಪೂಜಾದ ಮುಖ್ಯ ವಿಧಾನವಾಗಿದೆ.

ಏನಿದರ ವಿಶೇಷತೆ

ಏನಿದರ ವಿಶೇಷತೆ

ಈ ದೇವಸ್ಥಾನಕ್ಕೆ ಯಾವುದೇ ಜಾತಿ, ಧರ್ಮದವರು ಪ್ರವೇಶಿಸಿ ಪೂಜೆ ಮಾಡಬಹುದು. ಅಷ್ಟೇ ಅಲ್ಲದೆ ಈ ದೇವಾಲಯದ ಒಳಗೆ ನಾಯಿಗಳಿಗೂ ಪ್ರವೇಶವಿದೆ. ಇಲ್ಲಿ ನಾಯಿಯನ್ನು ಪವಿತ್ರ ಎಂದು ಹೇಳಲಾಗುತ್ತದೆ. ಹಾಗಾಗಿ ದೇವಾಲಯದ ಮುಂಭಾಗದ ಎರಡು ಬದಿಯಲ್ಲಿ ನಾಯಿಯ ಪ್ರತಿಮೆಗಳಿವೆ.

ವಿನಾಯಕ ಅಲ್ಲ ವಿನಾಯಕಿ, ಇಲ್ಲಿನ ಹೆಣ್ಣು ಗಣೇಶನನ್ನು ನೋಡಿದ್ದೀರಾ?ವಿನಾಯಕ ಅಲ್ಲ ವಿನಾಯಕಿ, ಇಲ್ಲಿನ ಹೆಣ್ಣು ಗಣೇಶನನ್ನು ನೋಡಿದ್ದೀರಾ?

ತಿರುವೊಪ್ಪನ ಮಹೋತ್ಸವ

ತಿರುವೊಪ್ಪನ ಮಹೋತ್ಸವ

PC:Sajith7775

ಮುತ್ತಪ್ಪನ್ ತಿರುವೊಪ್ಪನ ಮಹೋತ್ಸವಂ ದೇವಾಲಯದ ಪ್ರಮುಖ ಉತ್ಸವವಾಗಿದ್ದು, ಪ್ರತಿವರ್ಷ ಕುಂಭಮ್‌ನ ಮೂರು ದಿನಗಳ ಕಾಲ 19, 20 ಮತ್ತು 21 ರಂದು ಆಚರಿಸಲಾಗುತ್ತದೆ. . ಈ ಉತ್ಸವವನ್ನು ನೋಡಲು ಕೇರಳದಿಂದ ಮಾತ್ರವಲ್ಲ ಬೇರೆ ಬೇರೆ ಊರುಗಳಿಂದಲೂ ಭಕ್ತರು ಆಗಮಿಸುತ್ತಾರೆ.

ಮಾಂಸಾಹಾರ ನೈವೇದ್ಯ

ಮಾಂಸಾಹಾರ ನೈವೇದ್ಯ

ಇಲ್ಲಿ ದೇವರಿಗೆ ನೈವೇದ್ಯವಾಗಿ ಇತರ ದೇವಸ್ಥಾನದಲ್ಲಿ ನೀಡುವಂತಹ ಸಾತ್ವಿಕ ಆಹಾರವನನ್ನು ನೀಡೋದಿಲ್ಲ. ಬದಲಾಗಿ ಮಧ್ಯ, ಮಾಂಸ , ಮೀನಿನ ಆಹಾರವನ್ನು ನೈವೇದ್ಯವಾಗಿ ಇಡುತ್ತಾರೆ.

ಆರತಿ ಬೆಳಗುವಾಗಷ್ಟೇ ಕಣ್ತೆರೆಯುವ ಈ ದೇವರಿಗೆ 9 ರೂ. ಕಾಣಿಕೆ ನೀಡ್ತಾರೆ ಯಾಕೆ?ಆರತಿ ಬೆಳಗುವಾಗಷ್ಟೇ ಕಣ್ತೆರೆಯುವ ಈ ದೇವರಿಗೆ 9 ರೂ. ಕಾಣಿಕೆ ನೀಡ್ತಾರೆ ಯಾಕೆ?

ನದಿಯಲ್ಲಿ ಸಿಕ್ಕಿದ ಮಗು

ನದಿಯಲ್ಲಿ ಸಿಕ್ಕಿದ ಮಗು

PC: Rajesh Kakkanatt

ಶಿವಭಕ್ತೆಯಾದ ದಂಪತಿಗಳಿಬ್ಬರಿಗೆ ಮಕ್ಕಳಿರುವುದಿಲ್ಲ. ಒಂದು ದಿನ ನದಿಯಲ್ಲಿ ಬುಟ್ಟಿಯಲ್ಲಿ ಮಗುವೊಂದು ತೇಲಿಕೊಂಡು ಬರುತ್ತದೆ. ಇದನ್ನು ಶಿವನ ಪ್ರಸಾದ ಎಂದು ತಿಳಿದು ದಂಪತಿಗಳು ಆ ಮಗುವನ್ನು ತಾವೇ ಸಾಕುತ್ತಾರೆ. ಆ ಮಗುವಿಗೆ ಮುತ್ತಪ್ಪನ್ ಎನ್ನುವ ಹೆಸರನ್ನಿಡುತ್ತಾರೆ.

ಮನೆ ಬಿಟ್ಟು ಹೋದ ಮುತ್ತಪ್ಪನ್

ಮನೆ ಬಿಟ್ಟು ಹೋದ ಮುತ್ತಪ್ಪನ್

ಮಗು ಬೆಳೆಯುತ್ತಾ ಭೇಟೆಯಾಡುವುದನ್ನು ಶುರು ಹಚ್ಚಿಕೊಳ್ಳುತ್ತದೆ. ಮಾಂಸಾಹಾರವನ್ನು ತಿನ್ನಲು ಪ್ರಾರಂಭಿಸುತ್ತಾನೆ. ಹೆತ್ತವರು ಇದಕ್ಕೆ ಆಕ್ಷೇಪಿಸುತ್ತಾರೆ . ಆಗ ಮನೆ ಬಿಟ್ಟು ಹೊರಡಲು ಸಿದ್ಧನಾಗುತ್ತಾನೆ. ತಂದೆ ತಾಯಿ ಮಗನನ್ನು ಮನೆಬಿಟ್ಟು ಹೋಗದಂತೆ ಕೋರುತ್ತಾರೆ. ಆಗ ಬಾಲಕನು ತನ್ನ ನಿಜ ಸ್ವರೂಪದ ದರ್ಶನ ನೀಡುತ್ತಾನೆ. ತಾನು ದೈವಾಂಶ ಸಂಭೂತನೆಂದು ತಿಳಿಸಿ ಮನೆ ಬಿಟ್ಟು ಹೊರಡುತ್ತಾನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X