Search
  • Follow NativePlanet
Share
» » ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ ಇದು

ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ ಇದು

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲೊಂದು ರೇಣುಕಾಂಬ ದೇವಸ್ಥಾನವಿದೆ. ಇದು ಚಂದ್ರಗುಟ್ಟಿ ಬೆಟ್ಟದ ಮೇಲಿದೆ. ಇದನ್ನು ಗುತ್ತಿಯಮ್ಮಾ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನವು ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಇಡೀ ದಿನ ತೆರೆದಿರುತ್ತದೆ. ಉಳಿದ ದಿನಗಳಲ್ಲಿ ಕೇವಲ ಬೆಳಗ್ಗಿನ ಸಂದರ್ಭ ಕೆಲವು ಗಂಟೆಗಳ ಕಾಲ ಮಾತ್ರ ತೆರೆದಿರುತ್ತದೆ. ಈ ದೇವಸ್ಥಾನ ಇಲ್ಲಿ ಯಾಕೆ ಇದೆ ಎನ್ನುವುದು ನಿಮಗೆ ಗೊತ್ತಾ? ಏನೀದರ ವಿಶೇಷತೆ ಎನ್ನವುದನ್ನು ತಿಳಿಯಬೇಕಾದರೆ ಮುಂದೆ ಓದಿ.

ಚಂದ್ರಗುಟ್ಟಿ ರೇಣುಕಮ್ಮ ದೇವಾಲಯ ಎಲ್ಲಿದೆ?

ಚಂದ್ರಗುಟ್ಟಿ ರೇಣುಕಮ್ಮ ದೇವಾಲಯ ಎಲ್ಲಿದೆ?

PC: youtube

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಿಂದ ಸುಮಾರು 17ಕಿ.ಮಿ ದೂರದಲ್ಲಿ ಈ ಮಂದಿರವಿದೆ. ಇದನ್ನು 14ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಚಂದ್ರಗುಟ್ಟಿ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ರೇಣುಕಾ ದೇವಿಯ ದೇವಸ್ಥಾನ ಇದಾಗಿದ್ದು, ಇದನ್ನು ಗುತ್ತಿಯಮ್ಮ ಎಂದೂ ಕರೆಯುತ್ತಾರೆ. ಇದೊಂದು ಗುಹಾ ದೇವಾಲಯವಾಗಿದೆ. ಇದು ಅರ್ಧ ಚಂದ್ರಾಕೃತಿಯಲ್ಲಿದೆ.

ಸಕಲೇಶಪುರದಲ್ಲಿರುವ ಈ ಕೋಟೆಯಲ್ಲಿ ಶ್ರೀರಂಗ ಪಟ್ಟಣ ತಲುಪುವ ಸುರಂಗವಿದೆಯಂತೆಸಕಲೇಶಪುರದಲ್ಲಿರುವ ಈ ಕೋಟೆಯಲ್ಲಿ ಶ್ರೀರಂಗ ಪಟ್ಟಣ ತಲುಪುವ ಸುರಂಗವಿದೆಯಂತೆ

ಯಾರೀ ರೇಣುಕಾಂಬ?

ಯಾರೀ ರೇಣುಕಾಂಬ?

PC: youtube
ರೇಣುಕಾಂಬ ಜಮದಗ್ನಿಯ ಪತ್ನಿ ಹಾಗೂ ಪರಶುರಾಮನ ತಾಯಿ. ಸುತ್ತಲು ಹಸಿರಿನಿಂದ ಕೂಡಿರುವ ಈ ದೇವಾಲಯದ ಮುಖ್ಯದ್ವಾರದ ಬಳಿ ಒಂದು ಸಣ್ಣ ಕೊಳವಿದೆ. ಅದನ್ನು ತೊಟ್ಟಿಲ ಬಾವಿ ಎನ್ನುತ್ತಾರೆ. ಅಲ್ಲೇ ಪಕ್ಕದಲ್ಲಿರುವ ಸಣ್ಣ ಕಲ್ಲಿನ ಮೇಲೆ ರೇಣುಕಾ ದೇವಿಯ ಪಾದದ ಗುರುತಿದೆ.

ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ

ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ

PC: youtube

ಜಮದ್ನಿಗೆ ತನ್ನ ಪತ್ನಿ ರೇಣುಕಾ ದೇವಿ ಮೇಲೆ ಸಂದೇಹ ಉಂಟಾಗಿ ಮಗ ಪರಶುರಾಮನಿಗೆ ತಾಯಿಯ ತಲೆ ಕಡಿಯುವಂತೆ ಆದೇಶಿಸುತ್ತಾನೆ. ಪರಶುರಾಮ ರೇಣುಕಾ ದೇವಿಯನ್ನು ಒಂದು ಗುಹೆಗೆ ಕರೆದುಕೊಂಡು ಹೋಗಿ ತಲೆ ಕಡಿದು ಅದನ್ನು ಜಮದಗ್ನಿಗೆ ತಲುಪಿಸುತ್ತಾನೆ. ಆಗ ಜಮದಗ್ನಿ ಒಂದು ವರವನ್ನು ಕೇಳೆನ್ನುತ್ತಾನೆ. ಪರಶುರಾಮ ವರದ ರೂಪದಲ್ಲಿ ತನ್ನ ತಾಯಿಗೆ ಮರಳಿ ಜೀವನ ನೀಡುತ್ತಾನೆ. ಈ ಘಟನೆ ನಡೆದಿದ್ದಿ ಚಂದ್ರಗುಟ್ಟಿಯಲ್ಲಿ ಎನ್ನಲಾಗುತ್ತದೆ.

ನಗ್ನರಾಗಿ ಹೋಗುತ್ತಿದ್ದರಂತೆ

ನಗ್ನರಾಗಿ ಹೋಗುತ್ತಿದ್ದರಂತೆ

PC: youtube

ಮಹಿಳೆಯರು ಹಾಗು ಪುರುಷರು ಈ ದೇವಸ್ಥಾನಕ್ಕೆ ನಗ್ನರಾಗಿ ಹೋಗಿ ದೇವಿಯನ್ನು ಆರಾಧಿಸುವುದು ಪುರಾಣಗಳ ಕಾಲದಿಂದಲೂ ನಡೆದು ಬಂದಿದೆ. ಹಾಗಾಗಿ ಯಾರು ನಗ್ನರಾಗಿ ಹೋಗಿ ಆ ದೆವಿಯನ್ನು ಆರಾಧಿಸುತ್ತಾರೋ ಅವರ ಮನೋಕಾಮನೆಗಳು ಈಡೇರುತ್ತವೆ. ಅದೇ ಯಾರು ಹಾಗೇ ಮಾಡೋದಿಲ್ಲವೊ ಅವರು ಅನೇಕ ಕಷ್ಟ ನಷ್ಟಗಳನ್ನು ಅನುಭವಿಸ ಬೇಕಾಗುತ್ತದೆ ಎನ್ನುವುದು ಅವರ ನಂಬಿಕೆ. ಹಾಗಾಗಿ ನೂರಾರು ವರ್ಷಗಳ ಹಿಂದೆ ಮಹಿಳೆಯರು ಹಾಗೂ ಪುರುಷರು ಸಂಪೂರ್ಣ ನಗ್ನರಾಗಿ ದೇವಿಯ ದರ್ಶನಕ್ಕೆ ತೆರಳಿ ದೇವಿಯನ್ನು ಆರಾಧಿಸುತ್ತಿದ್ದರಂತೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Flickr

ಈ ದೇವಸ್ಥಾನವು ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಇಡೀ ದಿನ ತೆರೆದಿರುತ್ತದೆ. ಉಳಿದ ದಿನಗಳಲ್ಲಿ ಕೇವಲ ಬೆಳಗ್ಗಿನ ಸಂದರ್ಭ ಕೆಲವು ಗಂಟೆಗಳ ಕಾಲ ಮಾತ್ರ ತೆರೆದಿರುತ್ತದೆ. ಸಾಗರದಿಂದ ಸೊರಬಕ್ಕೆ ಬೇಕಾದಷ್ಟು ಬಸ್ ಸೇವೆಗಳಿವೆ. ಅಲ್ಲಿಂದ ಚಂದ್ರಗುಟ್ಟಿಗೆ ಬಸ್‍ಗಳಿವೆ. ಸಾಗರದಿಂದ ಚಂದ್ರಗುಟ್ಟಿಗೆ ಡೈರೆಕ್ಟ್ ಬಸ್ ಬಹಳ ವಿರಳ. ಸೊರಬದಿಂದ ಬೇಕಾದಷ್ಟು ಬಸ್‍ಗಳಿವೆ. ಶಿವಮೊಗ್ಗದಿಂದ ಚಂದ್ರಗುಟ್ಟಿ 106 ಕಿ.ಮೀ ದೂರದಲ್ಲಿದೆ.

Read more about: india temple shimoga history
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X