Search
  • Follow NativePlanet
Share
» »ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ದೇವಿಯ ರೂಪ. ಈಕೆ ಬೇರೆಯಾರು ಅಲ್ಲ ಆ ಪರಮಶಿವನ ಪತ್ನಿ ಪಾರ್ವತಿ ದೇವಿ. ಆದರೆ ಪಾರ್ವತಿ ದೇವಿಗೆ ಮುಡಿಪಾದ ದೇವಾಲಯಗಳು ನಮ್ಮ ಭಾರತ ದೇಶದಲ್ಲಿ ಎಷ್ಟೋ ಇವೆ. ಅದರಲ್ಲಿ ಈ ದೇವಾಲಯವು ಅತ್ಯಂತ ವಿಶೇಷ

By Sowmyabhai

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ದೇವಿಯ ರೂಪ. ಈಕೆ ಬೇರೆಯಾರು ಅಲ್ಲ ಆ ಪರಮಶಿವನ ಪತ್ನಿ ಪಾರ್ವತಿ ದೇವಿ. ಆದರೆ ಪಾರ್ವತಿ ದೇವಿಗೆ ಮುಡಿಪಾದ ದೇವಾಲಯಗಳು ನಮ್ಮ ಭಾರತ ದೇಶದಲ್ಲಿ ಎಷ್ಟೋ ಇವೆ. ಅದರಲ್ಲಿ ಈ ದೇವಾಲಯವು ಅತ್ಯಂತ ವಿಶೇಷತೆಯನ್ನು ಹೊಂದಿದೆ ಎಂದೇ ಹೇಳಬಹುದು. ಏಕೆಂದರೆ ಈ ದೇವಾಲಯದಲ್ಲಿನ ದೇವಿಯು ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳಂತೆ. ಹಾಗಾದರೆ ಈ ದೇವಾಲಯ ಎಲ್ಲಿದೆ? ದೇವಿಯ ರೂಪವು ಹಾಗೆ ಬದಲಾಗುತ್ತಾ ಇರಲು ಅಸಲು ಕಾರಣವೇನು? ಎಂಬ ವಿಷಯವನ್ನು ನಾವು ಲೇಖನದ ಮೂಲಕ ತಿಳಿದುಕೊಳ್ಳೋಣ.

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಈ ದೇವಾಲಯವು ಆಂಧ್ರ ಪ್ರದೇಶ ರಾಜ್ಯದ ವಿಜಯ ನಗರ ಜಿಲ್ಲೆ ಸಾಲ್ಲೂರು ಪ್ರದೇಶದಲ್ಲಿ ಶ್ರೀ ಪಾರಮ್ಮಕೊಂಡ ಕ್ಷೇತ್ರದಲ್ಲಿದೆ. ಒಂದು ಎತ್ತರವಾದ ಬೆಟ್ಟದ ಮೇಲೆ ಶ್ರೀ ಪಾರಮ್ಮ ದೇವಿ ನೆಲೆಸಿದ್ದಾಳೆ. ಈ ಮಹಿಮಾನ್ವಿತವಾದ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 2800 ಅಡಿ ಎತ್ತರದಲ್ಲಿದೆ. ಇಲ್ಲಿನ ಬೆಟ್ಟದ ವಿಶೇಷವೆನೆಂದರೆ ಈ ಶಿಖರವು ಶಿವಲಿಂಗದ ಆಕಾರದಲ್ಲಿರುತ್ತದೆ.

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...ಇನ್ನು ಈ ದೇವಾಲಯದಲ್ಲಿನ ದೇವಿಯ ವಿಗ್ರಹದ ಮೇಲೆ ಶಿವನು ಧ್ಯಾನ ಮಾಡುತ್ತಾ ಇರುವ ವಿಗ್ರಹ ಕಾಣಿಸುತ್ತದೆ. ಆದರೆ ಪ್ರಪಂಚದಾದ್ಯಂತ ಶಿವ-ಪಾರ್ವತಿ ಇಬ್ಬರು ಕೂಡ ಧ್ಯಾನ ಮಾಡುತ್ತಿರುವ ವಿಗ್ರಹ ಇಲ್ಲಿ ಮಾತ್ರವೇ ಇದೆ ಎಂದು ಅನೇಕ ಮಂದಿ ಹೇಳುತ್ತಿರುತ್ತಾರೆ. ಜೈನರ ಕಾಲದಲ್ಲಿ ದೇವಿಯನ್ನು ಪ್ರತಿಷ್ಟಾಪಿಸಿದರು ಎಂದು ಗುರುತಿಸಲಾಗಿದೆ. ಆದರೆ ಪೂರ್ವದಲ್ಲಿ ದೇವತೆಗಳು ಇಲ್ಲಿಯೇ ನಿತ್ಯವು ಧ್ಯಾನವನ್ನು ಮಾಡುತ್ತಿದ್ದರಂತೆ.

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಒಮ್ಮೆ ನಗುತ್ತಾ, ಒಮ್ಮೆ ಚಿಕ್ಕ ಮಗುವಿನ ರೀತಿಯಲ್ಲಿ. ಒಮ್ಮೆ ಮೌನವಾಗಿ, ಒಮ್ಮೆ ದೊಡ್ಡಮ್ಮಳಾಗಿ ಹೀಗೆ ವಿವಿಧ ರೀತಿಯಲ್ಲಿ ತಾಯಿಯು ದರ್ಶನವನ್ನು ನೀಡುತ್ತಾಳೆ. ಕೆಲವು ವಿಶೇಷವಾದ ದಿನಗಳಲ್ಲಿ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ಬೆಟ್ಟದ ಮೇಲೆ ಬೆಳಗುತ್ತಿರುವ ಜ್ಯೋತಿ ಕಾಣಿಸುತ್ತದೆ ಎಂದು ಬೆಟ್ಟದ ಕೆಳಗೆ ವಾಸಿಸುವ ಸ್ಥಳೀಯರು ಹಾಗು ಗಿರಿಜನರು ನೋಡಿದ್ದಾರಂತೆ.

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಇದಕ್ಕೆ ನಿದರ್ಶನವಾಗಿ ಪ್ರಸ್ತುತವು ಕೂಡ ದೇವತೆಗಳು, ಶಕ್ತಿಗಳು, ಜ್ಯೋತಿ ರೂಪದಲ್ಲಿ ದರ್ಶಿಸಿ ಪೂಜಿಸುತ್ತಾರೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ. ಇಲ್ಲಿನ ಬೆಟ್ಟದ ಮೇಲೆ ಒಂದು ಗುಹೆ ಇದೆ. ಅಲ್ಲಿ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಕೆಲವು ದಿನಗಳ ಕಾಲ ಇಲ್ಲಿಯೇ ಉಳಿದಿದ್ದರು ಎಂದು ಹೇಳಲಾಗುತ್ತದೆ. ಆ ಗುಹೆಗೆ ಪಾಂಡವರ ಗುಹೆ ಎಂದು ಕೂಡ ಕರೆಯುತ್ತಾರೆ.

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಆ ಗುಹೆಯಲ್ಲಿ ಅತ್ಯಂತ ಪುರಾತನವಾದ ಶಿವಲಿಂಗವಿದೆ. ಬೆಟ್ಟದ ಮೇಲೆ ಹನುಮಂತ ಎಂಬ ಕೋತಿಜಾತಿಯ ಗುಂಪು ಒಂದು ಇದೆಯಂತೆ. ಇದು ಸುಮಾರು 3 ರಿಂದ 5 ಅಡಿ ಎತ್ತರವಿರುತ್ತದೆ ಎಂತೆ. ಈ ಮಹಿಮಾನ್ವಿತವಾದ ಬೆಟ್ಟದ ಮೇಲೆ ಧ್ಯಾನ ಮಾಡುವವರಿಗೆ ತ್ವರಿತವಾಗಿ ಸಿದ್ಧಿ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಸಿದ್ಧಿಗಳನ್ನು ಪ್ರಸಾಧಿಸುವ ಸಲುವಾಗಿ ಈ ತಾಯಿಯನ್ನು ಸಿದ್ದೇಶ್ವರಿ ಎಂದು ಕೂಡ ಕರೆಯುತ್ತಾರೆ. ಈ ತಾಯಿಯ ಕೈಯಲ್ಲಿ ಚಕ್ರವನ್ನು ಹಿಡಿದಿದ್ದಾಳೆ. ಹಾಗಾಗಿ ಈ ದೇವಿಯನ್ನು ಚಕ್ರರೇಶ್ವರಿ ಎಂದು ಪಾರ್ವತಿ ದೇವಿಯನ್ನು ಕರೆಯುತ್ತಾರೆ. ಹೀಗೆ ವಿವಿಧ ರೂಪಗಳನ್ನು ಹೊಂದಿರುವ ಈ ತಾಯಿಗೆ ವಿವಿಧ ಹೆಸರುಗಳಿಂದ ಭಕ್ತರು ಆರಾಧಿಸುತ್ತಾರೆ.

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...

ಕೆಲವು ವರ್ಷಗಳ ಹಿಂದಿನಿಂದಲೂ ಕ್ರಮವಾಗಿ ತಪ್ಪದೇ ದೇವಿಯನ್ನು ಸನಾತನ ಧರ್ಮ ಪರಿಷತ್ ಭಕ್ತರು ದರ್ಶಿಸಿ ಪೂಜೆಗಳನ್ನು ಮಾಡುತ್ತಾ ಇದ್ದಾರಂತೆ. ಉಳಿದ ದಿನಗಳಲ್ಲಿ ಈ ಬೆಟ್ಟಗಳನ್ನು ಏರುವುದು ಅತ್ಯಂತ ಕಷ್ಟಕರವಾದುದು. ಒಂದು ವೇಳೆ ಹತ್ತಿ ದೇವಿಯನ್ನು ದರ್ಶಿಸಿಕೊಳ್ಳಬೇಕಾದರೆ ಸ್ಥಳೀಯರ ಅಥವಾ ಗಿರಿಜನರ ಸಹಾಯ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ. ಈ ವಿಧವಾಗಿ ಬೆಟ್ಟದ ಪ್ರದೇಶದಲ್ಲಿ ಎಷ್ಟೋ ವಿಶೇಷತೆಗಳು ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X