Search
  • Follow NativePlanet
Share
» »ಇದು ಭೀಮ ನಳಪಾಕ ಮಾಡುತ್ತಿದ್ದ ಗುಹೆ!

ಇದು ಭೀಮ ನಳಪಾಕ ಮಾಡುತ್ತಿದ್ದ ಗುಹೆ!

ಪಾಂಡವರ ನಿವಾಸಕ್ಕೆ ತಲುಪಬೇಕಾದರೆ ಮೊದಲು ಆಂಧ್ರ ಪ್ರದೇಶದ ಪೆದ್ದಾಪುರಂಗೆ ಸೇರಿಕೊಳ್ಳಬೇಕು. ಈ ಪ್ರದೇಶದ ಸುತ್ತಮುತ್ತ ಇರುವ ಮತ್ತೊಂದು ಪ್ರಧಾನವಾದ ಆಕರ್ಷಣೆ ಎಂದರೆ ಅದು ಆಂಜನೇಯ ಸ್ವಾಮಿ ವಿಗ್ರಹ. ಈ ವಿಗ್ರಹವು ಏಶಿಯಾ ಖಂಡದಲ್ಲಿಯೇ ಅತ್ಯಂತ ದೊಡ

ಪಾಂಡವರ ನಿವಾಸಕ್ಕೆ ತಲುಪಬೇಕಾದರೆ ಮೊದಲು ಆಂಧ್ರ ಪ್ರದೇಶದ ಪೆದ್ದಾಪುರಂಗೆ ಸೇರಿಕೊಳ್ಳಬೇಕು. ಈ ಪ್ರದೇಶದ ಸುತ್ತಮುತ್ತ ಇರುವ ಮತ್ತೊಂದು ಪ್ರಧಾನವಾದ ಆಕರ್ಷಣೆ ಎಂದರೆ ಅದು ಆಂಜನೇಯ ಸ್ವಾಮಿ ವಿಗ್ರಹ. ಈ ವಿಗ್ರಹವು ಏಶಿಯಾ ಖಂಡದಲ್ಲಿಯೇ ಅತ್ಯಂತ ದೊಡ್ಡದಾದುದು ಎಂದು ನಂಬಲಾಗಿದೆ. ಇಲ್ಲಿ ಪಾಂಡವರು ಕಲ್ಲುಗಳಿಂದ ಗುಹೆಗಳನ್ನು ನಿರ್ಮಾಣ ಮಾಡಿಕೊಂಡು ವಾಸವಿದ್ದರು ಎಂದು ಹೇಳಲಾಗುತ್ತಿದೆ. ಇಲ್ಲಿರುವ ಗುಹೆಗಳಲ್ಲಿ ಪಾಂಡವರಲ್ಲಿ ಒಬ್ಬನಾದ ಭೀಮನು ಅಡುಗೆ ಮಾಡುವುದಕ್ಕೆ ಹಾಗು ನಿವಾಸಕ್ಕೆ ಗುಹೆಗಳನ್ನು ಮಾಡಿಕೊಂಡಿದ್ದರಂತೆ.

ಆಂಧ್ರ ಪ್ರದೇಶ ರಾಜ್ಯದಲ್ಲಿ ಪಾಂಡವರಿಗೆ ಸಂಬಂಧಿಸಿದಂತೆ ಆನೇಕವಾದ ಪ್ರದೇಶಗಳನ್ನು ಕಾಣಬಹುದಾಗಿದೆ. ಈ ಪ್ರದೇಶವು ರಾಜಮಂಡ್ರಿ ನಗರಕ್ಕೆ ಸುಮಾರು 40 ಕಿ.ಮೀ ದೂರದಲ್ಲಿದೆ. ಇಲ್ಲಿ ಪಾಂಡವರು ಅರಣ್ಯವಾಸ ಮಾಡುವ ಸಮಯದಲ್ಲಿ ಕೆಲವು ದಿನಗಳ ಕಾಲ ನಿವಾಸವಿದ್ದರು ಎಂದು ನಂಬಲಾಗಿದೆ. ಇದು ಎತ್ತರವಾದ ಪರ್ವತದ ಮೇಲೆ ಗುಹೆಗಳನ್ನು ಕಾಣಬಹುದು. ಸುತ್ತಲೂ ಪ್ರಕೃತಿಯ ಅದ್ಭುತವಾದ ಮಡಿಲಲ್ಲಿ, ಎತ್ತರವಾದ ವಾತಾವರಣದಲ್ಲಿ ಆ ಪುರಾತನವಾದ ಗುಹೆಗಳನ್ನು ಕಂಡು ಆನಂದಿಸಬಹುದು.

ಪ್ರಸ್ತುತ ಲೇಖನದಲ್ಲಿ ಪಾಂಡವರು ನಿವಾಸವಿದ್ದ ಆ ಗುಹೆಗಳ ಕುರಿತು ಕೆಲವು ಕುತೂಹಲಕಾರಿ ಸಂಗತಿಗಳ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಭೀಮನ ಪಾದ ಮುದ್ರೆ

ಭೀಮನ ಪಾದ ಮುದ್ರೆ

ಪಾಂಡವರ ಅಜ್ಞಾತವಾಸ ಸಮಯದಲ್ಲಿ ಭೀಮನು ಮೊದಲಬಾರಿಗೆ ಈ ಪ್ರದೇಶಕ್ಕೆ ಭೇಟಿ ನೀಡಿದನು ಎಂದೂ, ಪರ್ವತದ ಅಗ್ರಭಾಗದಲ್ಲಿ ಭೀಮನ ಭಾರವಾದ ಪಾದಕ್ಕೆ ಭೂಮಿಯು ಮುದ್ರೆಯನ್ನು ಹಿಡಿದಿದೆ ಎಂದು ಹೇಳಲಾಗುತ್ತದೆ. ಸುಮಾರು 15 ಇಂಚಿನ ದೊಡ್ಡದಾದ ಭೀಮನ ಕಾಲನ್ನು ಇಲ್ಲಿ ಕಾಣಬಹುದು. ಏಕೆಂದರೆ ಅತ್ಯಂತ ದೃಢಕಾಯವನ್ನು ಹೊಂದಿದ್ದ ಭೀಮನ ಕಾಲಿನ ಮುದ್ರೆಯೇ ಎಂದು ಚರಿತ್ರಕಾರರು ಹೇಳುತ್ತಾರೆ. ತನ್ನ ಗದೆಯ ಗುರುತು ಕೂಡ ಇಲ್ಲಿರುವುದನ್ನು ನಾವು ಗಮನಿಸಬಹುದಾಗಿದೆ.

Photo Courtesy: Kumar3031

ಭೀಮನ ಪಾದ ಮುದ್ರೆ

ಭೀಮನ ಪಾದ ಮುದ್ರೆ

ಪರ್ವತವು ಕಲ್ಲಿನಿಂದ ಕೂಡಿದ್ದಾಗಿದ್ದು ಭೀಮನ ಪಾದ ಮುದ್ರೆ ಸ್ಪಷ್ಟವಾಗಿ ಕಾಣಿಸುತ್ತದೆ. ಭೀಮನ ಕಾಲುಗಳನ್ನು ಕಂಡ ಪ್ರವಾಸಿಗರು ರೋಮಾಂಚನವನ್ನು ಹಾಗು ಆಶ್ಚರ್ಯವನ್ನು ಪಡುತ್ತಾರೆ. ಪಾಂಡವರ ಗುಹೆಗಳನ್ನು ಕಾಣಲು ಬರುವ ಆನೇಕ ಪ್ರವಾಸಿಗರು ಪ್ರತ್ಯೇಕವಾಗಿ ಭೀಮನ ಕಾಲುಗಳನ್ನು ಮಾತ್ರ ಕಾಣಲು ವಿಶೇಷವಾಗಿ ಭೇಟಿ ನೀಡುತ್ತಾರೆ.

Photo Courtesy: Adityamadhav83

ದ್ರೌಪತಿ ರಸಜ್ವಾಲೆಯ ಚಾಪೆ

ದ್ರೌಪತಿ ರಸಜ್ವಾಲೆಯ ಚಾಪೆ

ಚರ್ತುರ್ ಆಕಾರದಲ್ಲಿ ಚಾಪೆಯ ಕಲ್ಲಿನ ನಿರ್ಮಾಣವನ್ನು ಇಲ್ಲಿ ಕಾಣಿಸುತ್ತದೆ. ವನವಾಸದ ಸಮಯದಲ್ಲಿ ದ್ರೌಪತಿಯು ರಸಜ್ವಾಲೆ ಆದಾಗ ಈ ಪ್ರದೇಶದಲ್ಲಿಯೇ ಕುಳಿತುಕೊಳ್ಳುತ್ತಿದ್ದಳು ಎಂದು ಹೇಳುತ್ತಾರೆ. ಸಾಧಾರಣ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಸಂಭವಿಸುವ ರಸಜ್ವಾಲೆಯು ಆಗದೇ ಇದ್ದರೆ, ಅಂಥಹ ಹೆಣ್ಣು ಮಕ್ಕಳಿಗೆ ದ್ರೌಪತಿ ರಸಜ್ವಾಲೆಯ ಚಾಪೆಯ ಮೇಲೆ ಕೂತರೆ ಅವರು ಕೂಡ ರಸಜ್ವಾಲೆಯಾಗುತ್ತಾರೆ ಎಂಬ ನಂಬಿಕೆ ಇಲ್ಲಿನದು.


Photo Courtesy: Adityamadhav83

ನಿವಾಸ

ನಿವಾಸ

ಪರ್ವತದ ಮೇಲೆ ಇರುವ ಪಾಂಡವರ ಗುಹೆಗೆ ಆನೇಕ ಕಥೆಗಳು ಇಂದಿಗೂ ಪ್ರಚಾರದಲ್ಲಿದೆ. ವನವಾಸ ಸಮಯದಲ್ಲಿ ಪಾಂಡವರು ಈ ಗುಹೆಯಲ್ಲಿಯೇ ಜೀವನ ಮಾಡಿರುವುದೇ ಅಲ್ಲದೇ ಗುಹೆಯ ಮಧ್ಯಭಾಗದಲ್ಲಿ ಗಲಜಲ ಎಂಬ ಪ್ರದೇಶದಲ್ಲಿ ಸ್ನಾನವನ್ನು ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಜಲ ಪ್ರದೇಶವನ್ನು ದಾಟಿ ಕೆಲವು ಕಿ.ಮೀ ದೂರ ಪ್ರಯಾಣ ಮಾಡಿದರೆ ರಾಜಮಂಡ್ರಿಗೆ ತಲುಪಬಹುದು ಎನ್ನುತ್ತಾರೆ.

Photo Courtesy: Adityamadhav83

ನಳಭೀಮ ಪಾಕಶಾಲೆ

ನಳಭೀಮ ಪಾಕಶಾಲೆ

ಇಲ್ಲಿ ಗುಹೆಗಳನ್ನು ಅತ್ಯಂತ ಸಮೀಪದಲ್ಲಿರುವುದನ್ನು ಗಮನಿಸಬಹುದು. ಅಲ್ಲಿ ಪಾಂಡವರ ಭೋಜನಕ್ಕೆ ಈ ಗುಹೆಯನ್ನು ಬಳಸುತ್ತಿದ್ದರು ಎಂದು ಎನ್ನಲಾಗಿದೆ. ಈ ಪ್ರದೇಶಕ್ಕೆ ವಿಶೇವಾಗಿ "ನಳಭೀಮ ಪಾಕಶಾಲೆ" ಎಂದು ವರ್ಣಿಸುತ್ತಾರೆ. ಇಲ್ಲಿಯೇ ಭೀಮನು ಅತ್ಯಂತ ರುಚಿಕರವಾದ ಅಡುಗೆಗಳನ್ನು ಮಾಡಿ ಬಡಿಸುತ್ತಿದ್ದ ಎಂದು ಚರಿತ್ರೆ ಕಥೆಗಳು ಹೇಳುತ್ತವೆ.


Photo Courtesy: Adityamadhav83

ಸೂರ್ಯ ನಾರಾಯಣ ಮೂರ್ತಿ ದೇವಾಲಯ

ಸೂರ್ಯ ನಾರಾಯಣ ಮೂರ್ತಿ ದೇವಾಲಯ

ಈ ಮೆಟ್ಟಿಲುಗಳ ಮೇಲೆ ಶ್ರೀ ಸೂರ್ಯನಾರಾಯಣ ಮೂರ್ತಿ ದೇವಾಲಯವನ್ನು ಕಾಣಬಹುದು. ಈ ದೇವಾಲಯದ ಪಕ್ಕದಲ್ಲಿಯೇ ಪಂಚಮುಖಿ ಗಾಯತ್ರಿ ದೇವಾಲಯ, ಸುಬ್ರಹ್ಮಣ್ಯೇಶ್ವರಸ್ವಾಮಿ, ವಿನಾಯಕ, ವೆಂಕಟೇಶ್ವರ ಸ್ವಾಮಿ, ಚಂದ್ರ, ನವಗ್ರಹಗಳ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಉತ್ಸವಗಳ ದಿನಗಳಲ್ಲಿ ಈ ದೇವಾಲಯವು ಜನಜಂಗುಳಿಯಿಂದ ತುಂಬಿತುಳುಕುತ್ತಿರುತ್ತದೆ.

Photo Courtesy: Vinay Datta

ನಿವಾಸ

ನಿವಾಸ

ಸಕಾಲದಲ್ಲಿ ಮಳೆ ಬರುತ್ತಿದ್ದರಿಂದ ಪಟ್ಟಣ ಪ್ರದೇಶದಲ್ಲಿ ವಾಸವಿದ್ದ ಎಲ್ಲಾ ರೈತರು ಪಾಂಡವರ ಗುಹೆಯ ಮೇಲೆ ವಾಸಿಸುತ್ತಿದ್ದರಂದೆ. ಪಟ್ಟಣದಲ್ಲಿನ ರೈತರು, ವ್ಯವಸಾಯ ಕೂಲಿಕಾರರು ಅಧಿಕವಾಗಿ ನಿವಾಸವಿರುತ್ತಿದ್ದರು ಎಂದು ಹೇಳಲಾಗಿದೆ.

Photo Courtesy: Adityamadhav83

ಜೀವ ವೈವಿದ್ಯತೆ

ಜೀವ ವೈವಿದ್ಯತೆ

ಒಂದು ಕಾಲದಲ್ಲಿ ದಡ್ಡವಾದ ಅರಣ್ಯ ಪ್ರದೇಶವಾಗಿ ಮೆರೆದ ಪಾಂಡವರ ಪರ್ವತ ಪ್ರದೇಶದಲ್ಲಿ ವಿಧವಿಧವಾದ ಕೀಟಗಳು, ಪಕ್ಷಿಗಳು, ಪ್ರಾಣಿಗಳು ವಾಸವಿದ್ದವು. ಪ್ರಸ್ತುತ ಹಾವುಗಳು, ಮುಂಗುಸಿಯಂತಹಗಳನ್ನು ಮಾತ್ರ ಇಲ್ಲಿ ಕಾಣಬಹುದಾಗಿದೆ.

Photo Courtesy: Adityamadhav83

ಮರಿಡಮ್ಮ ದೇವಾಲಯ

ಮರಿಡಮ್ಮ ದೇವಾಲಯ

ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಬೇಕಾದರೆ ಒಂದು ಚಿಕ್ಕದಾದ ಟ್ರಿಪ್ ಎಂದು ತಿಳಿದು ಬರಬಹುದು. ಇಲ್ಲಿಗೆ ಭೇಟಿ ನೀಡಲು ದೊಡ್ಡ ದೊಡ್ಡ ಮೊತ್ತದ ಹಣವೇನು ಬೇಕಾಗುವುದಿಲ್ಲ. ಪೆದ್ದಾಪುರಂನಿಂದ 100-050 ರೂಪಾಯಿಗಳು ಆಗಬಹುದು. ಇಲ್ಲಿ ಸಮೀಪದಲ್ಲಿ ಒಂದು ಪುರಾತನವಾದ ದೇವಾಲಯವನ್ನು ಕೂಡ ಕಾಣಬಹುದು. ಆ ದೇವಾಲಯಗಳೇ ಮರಿಡಮ್ಮ ದೇವಾಲಯ, ಶ್ರೀ ಶಿವಾಲಯ, ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ (ಪೆದ್ದಾಂಪುರಂನಿಂದ 1 ಕಿ.ಮೀ ದೂರದಲ್ಲಿ), ಶ್ರೀ ನೂಕಾಳಮ್ಮ ದೇವಾಲಯ, ಶ್ರೀ ಶೃಂಗರ ವಲ್ಲಭ ಸ್ವಾಮಿ ದೇವಾಲಯಗಳ ದರ್ಶನ ಭಾಗ್ಯ ಪಡೆಯಬಹುದು.


Photo Courtesy: peddapuram temples

ಆಂಜನೇಯ ಸ್ವಾಮಿ ವಿಗ್ರಹ

ಆಂಜನೇಯ ಸ್ವಾಮಿ ವಿಗ್ರಹ

ಆಂಜನೇಯ ಸ್ವಾಮಿಯ ದೇವಾಲಯ ಸಾಮರ್ಲಕೋಟೆ ಮತ್ತು ಪೆದ್ದಾಂಪುರಂನ ಮಧ್ಯಭಾಗದಲ್ಲಿ ಸುಮಾರು 4 ಕಿ.ಮೀ ದೂರದಲ್ಲಿ ಇದೆ. ಇದು ಏಶಿಯಾ ಖಂಡದಲ್ಲಿಯೇ ಅತ್ಯಂತ ದೊಡ್ಡದಾದ ಆಂಜನೇಯ ವಿಗ್ರಹವಾಗಿದೆ. ಇದರ ಎತ್ತರ ಸುಮಾರು 52 ಅಡಿಗಳು. ಈ ವಿಗ್ರಹವನ್ನು ಕಂಚಿ ಶೃಂಗೇರಿ ಪೀಠಂರವರಿಂದ ಪರೀಕ್ಷೆಗೆ ಒಳಪಡಿಸಲಾಗಿದೆ.


Photo Courtesy: peddapuram temples

ಪಾಂಡವರ ಗುಹೆಗೆ ಸೇರಿಕೊಳ್ಳುವ ಬಗೆ ಹೇಗೆ?

ಪಾಂಡವರ ಗುಹೆಗೆ ಸೇರಿಕೊಳ್ಳುವ ಬಗೆ ಹೇಗೆ?

ವಿಮಾನ ಮಾರ್ಗದ ಮೂಲಕ
ಪೆದ್ದಾಂಪುರಂನಲ್ಲಿ ವಿಮಾನ ನಿಲ್ದಾಣವುವಿದೆ. ಹಾಗಾಗಿ ಸಮೀಪದಲ್ಲಿ ರಾಜಮಂಡ್ರಿಯ ದೇಶಿಯ ವಿಮಾನ ನಿಲ್ದಾಣದಲ್ಲಿ ಇಳಿದು. ಅಲ್ಲಿಂದ 37 ಕಿ.ಮೀ ದೂರದಲ್ಲಿರುವ ಪೆದ್ದಾಂಪುರಕ್ಕೆ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ. ವೈಜಾಗ್ ವಿಮಾನ ನಿಲ್ದಾಣವು ಕೂಡ ಪೆದ್ದಾಪುರಕ್ಕೆ ಸಮೀಪದಲ್ಲಿಯೇ ಇದೆ.

ಪಾಂಡವರ ಗುಹೆಗೆ ಸೇರಿಕೊಳ್ಳುವ ಬಗೆ ಹೇಗೆ?

ಪಾಂಡವರ ಗುಹೆಗೆ ಸೇರಿಕೊಳ್ಳುವ ಬಗೆ ಹೇಗೆ?

ರೈಲ್ವೆ ನಿಲ್ದಾಣ
ಪೆದ್ದಾಪುರಂಕ್ಕಿಂತ ಸಮೀಪದಲ್ಲಿ ಸಾಮರ್ಲಕೋಟೆ ಜಂಕ್ಷನ್ ಎಲ್ಲಾ ವಿಧದಿಂದಲೂ ಅನುಕೂಲಕರವಾದುದು. ಇಲ್ಲಿ ಪ್ರತಿದಿನ ದೇಶದ ಮೂಲೆ ಮೂಲೆಗಳಿಂದ ರೈಲುಗಳು ದಿನಿತ್ಯ ಭೇಟಿ ನೀಡುತ್ತಿರುತ್ತವೆ. ಸಾಮರ್ಲಕೋಟೆ ರೈಲ್ವೆ ನಿಲ್ದಾಣದಿಂದ ಪೆದ್ದಾಪುರಕ್ಕೆ ಕೇವಲ 5 ಕಿ.ಮೀ ದೂರದಲ್ಲಿದೆ.

ಪಾಂಡವರ ಗುಹೆಗೆ ಸೇರಿಕೊಳ್ಳುವ ಬಗೆ ಹೇಗೆ?

ಪಾಂಡವರ ಗುಹೆಗೆ ಸೇರಿಕೊಳ್ಳುವ ಬಗೆ ಹೇಗೆ?

ರಸ್ತೆ ಮಾರ್ಗದ ಮೂಲಕ
ಪಾಂಡವರ ಗುಹೆಗೆ ಸೇರಿಕೊಳ್ಳಬೇಕಾದರೆ ರಸ್ತೆ ಮಾರ್ಗವಾಗಿ ಕೂಡ ಸುಲಭವಾಗಿ ತಲುಪಬಹುದಾಗಿದೆ. ರಾಜಮಂಡ್ರಿ, ಕಾಕಿನಾಡಗಳಿಂದ ಹಲವಾರು ಬಸ್ಸುಗಳ ತಿರುಗುತ್ತಾ ಇರುತ್ತದೆ. ವಿಜಯವಾಡ, ವೈಜಾಗ್, ಹೈದ್ರಾಬಾದ್‍ವಂಥಹ ನಗರಗಳಿಂದ ಮೊದಲು ಸೇರಿಕೊಂಡು ಖಾಸಗಿ ಅಥವಾ ಸರ್ಕಾರಿ ಬಸ್ಸುಗಳ ಮೂಲಕ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X